RCBಗೆ 2ನೇ ಟ್ರೋಫಿ ಫ್ಯಾನ್ಸ್ ಟ್ರೆಂಡ್ – SRH ತ್ರಿಮೂರ್ತಿಗಳ ಮಾಡಿರುವ ದಾಖಲೆ ಯಾವುದು ಗೊತ್ತಾ?

ಐಪಿಎಲ್ ಅಂಗಳದಲ್ಲಿ ನಡೆದ ರೋಚಕ ಘಟನೆಗಳ ಹೈಲೆಟ್ಸ್ ಇಲ್ಲಿದೆ.
ಇದನ್ನೂ ಓದಿ:ಧೋನಿ ಪ್ರಾಕ್ಟೀಸ್ ಫೋಟೋ ಹಾಕಿ ನಂಬಿಕೆ ಹುಟ್ಟಿಸಿದ್ರು– ಧೋನಿ ಹೆಸರಲ್ಲಿ CSK ಮ್ಯಾನೇಜ್ ಮೆಂಟ್ ಮೋಸ ?
SRH ವಿರುದ್ಧದ ಪಂದ್ಯದಲ್ಲಿ RCB ಸೋತಿದ್ದಲದೇ ಅತ್ಯಂತ ಹೀನಾಯ ದಾಖಲೆ ಬರೆದಿದೆ. ಹೈದರಾಬಾದ್ ತಂಡ 20 ಓವರ್ಗಳಲ್ಲಿ 255 ರನ್ ಕಲೆಹಾಕಿತ್ತು. ಈ ಬೃಹತ್ ಮೊತ್ತದೊಂದಿಗೆ ಹೈದರಾಬಾದ್ ಒಂದೇ ತಂಡದ ವಿರುದ್ಧ 2 ಬಾರಿ 250+ ಸ್ಕೋರ್ಗಳಿಸಿದ ವಿಶೇಷ ದಾಖಲೆ ಬರೆಯಿತು. ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡ ಒಂದೇ ತಂಡದ ವಿರುದ್ಧ 2 ಬಾರಿ 250+ ಸ್ಕೋರ್ ನೀಡಿರಲಿಲ್ಲ. ಆದರೆ ಆರ್ಸಿಬಿ ಬೌಲರ್ಗಳು ಎಸ್ಆರ್ಹೆಚ್ ವಿರುದ್ಧ ದಂಡಿಸಿಕೊಳ್ಳುವ ಮೂಲಕ ಹೀನಾಯ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಸೇಮ್ ಟ್ರೆಂಡ್ ಮುಂದುವರಿಕೆಯಾಗಿದ್ದು, ಈ ಬಾರಿ ಕೂಡಾ ಅದೇ ಕಂಟಿನ್ಯೂ ಆಗಲಿದೆ ಎಂದು ಫ್ಯಾನ್ಸ್ ನಂಬಿದ್ದಾರೆ. ಒಂದು ಋತುವಿನಲ್ಲಿ ಟೇಬಲ್-ಟಾಪರ್ ಪ್ರಶಸ್ತಿಯನ್ನು ಗೆದ್ದಾಗಲೆಲ್ಲಾ, ಮುಂದಿನ ಋತುವಿನಲ್ಲಿ 2ನೇ ಸ್ಥಾನದಲ್ಲಿರುವ ತಂಡ ಕಪ್ ಗೆಲ್ಲುತ್ತದೆ. ಕಳೆದ ವರ್ಷದ 2ನೇ ಸ್ಥಾನದಲ್ಲಿದ್ದ ಆರ್ಸಿಬಿ ಚಾಂಪಿಯನ್ ಆಗಿತ್ತು. ಐದು ವರ್ಷಗಳ ಟ್ರೆಂಡ್ ಪ್ರಕಾರ ಈ ಬಾರಿ ಪ್ರಶಸ್ತಿ ಟೇಬಲ್-ಟಾಪರ್ಗೆ ಸೇರಲಿದೆ ಎಂದು ಅಭಿಮಾನಿಗಳು ಟ್ರೆಂಡ್ ಮಾಡ್ತಿದ್ದಾರೆ. ಈ ಟ್ರೆಂಡ್ ರಿಪೀಟ್ ಆದರೆ ಆರ್ಸಿಬಿ 2ನೇ ಟ್ರೋಫಿ ಗೆಲ್ಲಲಿದೆ.
ಹೈದರಾಬಾದ್ ತಂಡದ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಹೆನ್ರಿಕ್ ಕ್ಲಾಸೆನ್ ಈ ಸೀಸನ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಮೂವರು ತಲಾ 500+ ರನ್ ಗಳಿಸುವ ಮೂಲಕ IPL ಇತಿಹಾಸದಲ್ಲಿ ಒಂದೇ ತಂಡದ ಮೂವರು ಆಟಗಾರರು ಈ ಸಾಧನೆ ಮಾಡಿದ ದಾಖಲೆ ಬರೆದಿದ್ದಾರೆ. ಅಂದರೆ ಈ ಮೂವರು ಆಟಗಾರರು ಪ್ರಸಕ್ತ ಆವೃತ್ತಿಯಲ್ಲಿ 1500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಗೆ ಕೌಂಟ್ಟೌನ್ ಶುರುವಾಗಿದೆ. ಆರಂಭದಲ್ಲಿ ಸತತ ಗೆಲುವುಗಳಲ್ಲಿ ಪಾಯಿಂಟ್ಸ್ ಟೇಬಲ್ನ ಕಿಂಗ್ ಆಗಿದ್ದ ಪಂಜಾಬ್ ತಂಡ ಈಗ ಬರೀ ಸೋಲುಗಳಿಂದ ಕಂಗಾಲಾಗಿದೆ. ಸುಲಭವಾಗಿ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಹೊಂದಿದ್ದ ಪಂಜಾಬ್ ಈಗ ಬೇರೆ ತಂಡಗಳ ಫಲಿತಾಂಶದ ಮೇಲೆ ಚಿತ್ತ ನೆಟ್ಟಿದೆ. ಇನ್ನು ಲಕ್ನೋ ಈಗಾಗಲೇ ಲೀಗ್ ಹಂತದಿಂದ ಹೊರಗುಳಿದಿದ್ದು, ಪಂಜಾಬ್ ವಿರುದ್ದ ಗೆದ್ದು ಮನೆಗೆ ಹೋಗುವ ಉತ್ಸಾಹದಲ್ಲಿದೆ. playoff-hopes-alive
ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಆಸೆ ಇನ್ನೂ ಸಹ ಜೀವಂತವಾಗಿದೆ. ಎಲ್ಎಸ್ಜಿ ವಿರುದ್ಧ ಜಯ ಸಾಧಿಸಿದರೆ, 15 ಅಂಕಗಳು ಸಿಗುತ್ತದೆ. ಪಂಜಾಬ್ ಕಿಂಗ್ಸ್ ತಂಡದ ಆರಂಭಿಕರಾದ ಪ್ರಭ್ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ ಇಂದಿನ ಪಂದ್ಯದಲ್ಲಿ ಅಬ್ಬರಿಸಿದರೆ, ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಕೂಪರ್ ಕಾನೋಲಿ, ನಾಯಕ ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ಮಾಡಿದರೆ ಪಂಜಾಬ್ ಕಿಂಗ್ ಒಂದು ಅವಕಾಶವನ್ನು ಎದುರು ನೋಡಬಹುದು.
ಸಿಎಸ್ಕೆ ವೇಗಿ ಅನ್ಶುಲ್ ಕಾಂಬೋಜ್ ಕಳಪೆ ದಾಖಲೆಯನ್ನ ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಈ ಸೀಸನ್ನಲ್ಲಿ 530 ರನ್ ಹಾಗೂ 34 ಸಿಕ್ಸರ್ಗಳನ್ನು ನೀಡಿ, ಅತಿ ಹೆಚ್ಚು ರನ್ ಮತ್ತು ಸಿಕ್ಸರ್ ಬಿಟ್ಟುಕೊಟ್ಟ ಅನಗತ್ಯ ದಾಖಲೆ ನಿರ್ಮಿಸಿದ್ದಾರೆ. ಕಾಂಬೋಜ್ ಒಂದು ಸೀಸನ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡಿಸಿಕೊಂಡ ವೇಗಿ ಎನಿಸಿಕೊಂಡಿದ್ದಾರೆ. ಕಾಂಬೋಜ್ಗೂ ಮೊದಲು ಕಳೆದ ಆವೃತ್ತಿಯಲ್ಲಿ ರಶೀದ್ ಖಾನ್ 33 ಸಿಕ್ಸರ್ಗಳನ್ನು ಹೊಡಿಸಿಕೊಂಡು ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು.
ಕೆಕೆಆರ್ ಮೇ 24 ರಂದು DC ವಿರುದ್ಧ ಲೀಗ್ ಹಂತದ ಕೊನೆ ಪಂದ್ಯವನ್ನಾಡಲಿದೆ. ಇದಕ್ಕೂ ಮೊದಲು ತಂಡಕ್ಕೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅಂಗ್ಕ್ರಿಶ್ ರಘುವಂಶಿ ಪಂದ್ಯದಿಂದ ಹೊರಗುಳಿದಿದ್ದಾರೆ. ಮೇ 20 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಘುವಂಶಿ ಎಡಗೈ ಬೆರಳಿಗೆ ಗಾಯವಾಗಿತ್ತು. ಈ ಗಾಯದಿಂದಾಗಿ ರಘುವಂಶಿ ತಂಡದಿಂದ ಹೊರಗುಳಿದಿದ್ದಾರೆ ಎಂದು ಕೆಕೆಆರ್ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಿದೆ.
ಎಂಎಸ್ ಧೋನಿ ಐಪಿಎಲ್ ಟೂರ್ನಿ ಪ್ರಾರಂಭವಾಗುವ ಮೊದಲೇ ಗಾಯಗೊಂಡಿದ್ದರು. ಆದರೆ, ಸಿಎಸ್ಕೆ ಮ್ಯಾನೇಜ್ಮೆಂಟ್ ಧೋನಿ ಹೆಸರನ್ನು ಅಭಿಮಾನಿಗಳಿಗೆ ಮೋಸ ಮಾಡಲು ಬಳಸಿಕೊಂಡರು ಎಂದು ಮಾಜಿ ಕ್ರಿಕೆಟರ್ ಕೃಷ್ಣಾಮಾಚಾರಿ ಶ್ರೀಕಾಂತ್ ಆರೋಪಿಸಿದ್ದಾರೆ. ಧೋನಿ ತಂಡಕ್ಕೆ ಮರಳುವ ಬಗ್ಗೆ ನಿರಂತರವಾಗಿ ಪ್ರಚಾರ ಮಾಡಲಾಗ್ತಿತ್ತು. ಪ್ರಾಕ್ಟೀಸ್ ಫೋಟೋ ಶೇರ್ ಮಾಡಲಾಗ್ತಿತ್ತು. ಆದರೆ ಧೋನಿ ಪಂದ್ಯ ಆಡಲು ಫಿಟ್ ಆಗಿರಲಿಲ್ಲ, ಇದು ಗೊತ್ತಿದ್ದೇ ಸಿಎಸ್ಕೆ ಮ್ಯಾನೇಜ್ಮೆಂಟ್ ಧೋನಿ ಹೆಸರು ಬಳಸಿಕೊಂಡ್ರು ಎಂದು ಕೃಷ್ಣಮಾಚಾರಿ ಶ್ರೀಕಾಂತ್ ಕಿಡಿಕಾರಿದ್ದಾರೆ.
7ನೇ ಸ್ಥಾನ ಪಡೆದಿರುವ ಸಿಎಸ್ಕೆಗೆ ಮೇಜರ್ ಸರ್ಜರಿ ಮಾಡಲು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಸಿಎಸ್ಕೆ ತಂಡದ ಕೋಚ್ ಕೂಡ ಬದಲಾಗಲಿದ್ದಾರೆ. ಅಂದರೆ ಪ್ರಸ್ತುತ ಕೋಚ್ ಸ್ಟೀಫನ್ ಫ್ಲೆಮಿಂಗ್ ಬದಲಿಗೆ ಹೊಸ ತರಬೇತುದಾರರನ್ನು ಆಯ್ಕೆ ಮಾಡಲು ಸಿಎಸ್ಕೆ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಆದರೆ, ತಂಡದಲ್ಲಿ ಧೋನಿ ಪ್ರಭಾವ ಜಾಸ್ತಿಯಿರುವುದರಿಂದ ಕ್ರಿಕೆಟ್ ದಿಗ್ಗಜರು ಕೋಚ್ ಹುದ್ದೆಗೇರಲು ನಿರಾಕರಿಸುತ್ತಿದ್ದಾರೆ ಎಂದು ವರದಿಯಾಗಿದೆ.
3D Player ಎಂದೇ ಫೇಮಸ್ ಆಗಿದ್ದ ಭಾರತ ತಂಡದ ಆಲ್ರೌಂಡರ್ ವಿಜಯ್ ಶಂಕರ್ ನಿವೃತ್ತಿ ಘೋಷಿಸಿದ್ದಾರೆ. ಶಂಕರ್ ತಮ್ಮ ನಿವೃತ್ತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. “ಕ್ರಿಕೆಟ್ ನನ್ನ ಜೀವನ, ನಾನು 10 ವರ್ಷ ವಯಸ್ಸಿನಿಂದಲೂ ಅದನ್ನು ಆಡುತ್ತಿದ್ದೇನೆ. 25 ವರ್ಷಗಳ ನಂತರ, ಎಲ್ಲರೂ ಕನಸು ಕಾಣುವ ಮಟ್ಟದಲ್ಲಿ ಆಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ನಾನು ಅಂದುಕೊಂಡಿದ್ದೇನೆ. ದೇಶೀಯ ಮತ್ತು ಐಪಿಎಲ್ ಕ್ರಿಕೆಟ್ ಎರಡರಿಂದಲೂ ನಿವೃತ್ತಿ ಹೊಂದಲು ನಾನು ನಿರ್ಧರಿಸಿದ್ದೇನೆ ಎಂದು ಬರೆದಿದ್ದಾರೆ.

ನೋಡಿರಿ

