ಟಾಪ್-1ಗಾಗಿ ಟಾರ್ಗೆಟ್ ಬಿಟ್ಟ RCB – SMART ಅಲ್ಲ ಸೋಲಿನ SHAME
ಪ್ಲೇ ಆಫ್ಸ್ ಹೊಸ್ತಿಲಲ್ಲೇ FLAP!

ಟಾಪ್-1ಗಾಗಿ ಟಾರ್ಗೆಟ್ ಬಿಟ್ಟ RCB – SMART ಅಲ್ಲ ಸೋಲಿನ SHAMEಪ್ಲೇ ಆಫ್ಸ್ ಹೊಸ್ತಿಲಲ್ಲೇ FLAP!

ಸ್ಕೋರ್ ಬೋರ್ಡ್ ಮೇಲೆ ಒಂದು ಟಾರ್ಗೆಟ್. ಹೈದ್ರಾಬಾದ್ ತಲೆಯಲ್ಲಿ ಇನ್ನೊಂದು ಟಾರ್ಗೆಟ್.. ಆರ್​ಸಿಬಿ ತಲೆಯಲ್ಲಿ ಮತ್ತೊಂದು ಟಾರ್ಗೆಟ್. ಸೋ ಟೋಟಲ್ಲಿ ನಿನ್ನೆ ಮ್ಯಾಚಲ್ಲಿ 3 ಟಾರ್ಗೆಟ್ ಫಿಕ್ಸ್ ಆಗಿತ್ತು. ಅದ್ರಲ್ಲಿ ಹೈದ್ರಾಬಾದ್ ಟೀಂನವ್ರು ಸೋತ್ರು ಕೂಡ ಫಸ್ಟ್ ಕ್ಲಾಸ್​ನಲ್ಲೇ ಪಾಸ್ ಆದ್ರು. ಆದ್ರೆ ಆರ್​ಸಿಬಿ ಗೆದ್ರೂ ಫೇಲ್ ಆಗಿದೆ. ಡಿಫೆಂಡಿಂಗ್ ಚಾಂಪಿಯನ್ಸ್ ಅನ್ನೋದನ್ನ ಮರೆತು ಪರ್ಫಾಮ್ ಮಾಡಿದ್ದಾರೆ. ಪ್ಲೇ ಆಫ್ಸ್ ಹೊಸ್ತಿಲಲ್ಲಿ ಆದ ಈ ಸೋಲು ಬರೀ ಸೋಲಾಗಿಲ್ಲ. ಶೇಮ್ ಶೇಮ್ ಎನ್ನುವಂತಾಗಿದೆ.

ಇದನ್ನೂ ಓದಿ : RCB VS SRH ಪಂದ್ಯದಲ್ಲಿ ಹೆಡ್ ಜೊತೆ ವಿರಾಟ್ ಕಿರಿಕ್ – ತಪ್ಪು ಮಾಡಿದ್ರಾ ಕಿಂಗ್?

ಹೈದ್ರಾಬಾದ್ ಮತ್ತು ಬೆಂಗಳೂರು ನಡುವಿನ ಕಾಳಗದಲ್ಲಿ ಇಬ್ರೂ ಕೂಡ ನಂಬರ್ 1 ಸ್ಥಾನಕ್ಕಾಗಿ ಅಖಾಡಕ್ಕಿಳಿದಿದ್ರು. ಯಾಕಂದ್ರೆ ನೆಟ್​ರನ್ ರೇಟ್, ಬಿಗ್ ಮಾರ್ಜಿನ್ ಹೀಗೆ ಒಂದಷ್ಟು ಮ್ಯಾಜಿಕ್ ನಂಬರ್ ಕೊಟ್ಟಾಗಿತ್ತು. ಹೈದ್ರಾಬಾದ್ ಯಾವ ಮಾರ್ಜಿನ್​ನಲ್ಲಿ ಗೆದ್ರೆ ಫಸ್ಟ್ ಪ್ಳೇಸ್​ಗೆ ಹೋಗ್ತಾರೆ ಬೆಂಗಳೂರು ಎಷ್ಟು ಅಂತರದಲ್ಲಿ ಸೋತ್ರೆ 3ನೇ ಸ್ಥಾನಕ್ಕೆ ಬರ್ತಾರೆ ಅಂತಾ. ಅತ್ತ ನಂಬರ್ 1 ಪಟ್ಟಕ್ಕಾಗಿ ಪಣತೊಟ್ಟಿದ್ದ ಹೈದ್ರಾಬಾದ್ ಟಾಸ್ ಗೆದ್ರೂ ಬ್ಯಾಟಿಂಗ್ ಚೂಸ್ ಮಾಡಿಕೊಂಡ್ರು. ಅದ್ರಂತೆ ಬೆಂಕಿ ಪರ್ಫಾಮೆನ್ಸ್ ಕೂಡ ಬಂತು. ಅಭಿಷೇಕ್, ಕ್ಲಾಸೆನ್, ಕಿಶನ್ ಆರ್ಭಟದಿಂದ 20 ಓವರ್​ಗಳಲ್ಲೇ 4 ವಿಕೆಟ್ ಕಳ್ಕೊಂಡು 255 ರನ್ಸ್ ಕಲೆ ಹಾಕಿದ್ರು. ಇದು ಬಿಗ್ ಟಾರ್ಗೆಟ್. ಇದನ್ನ ಚೇಸ್ ಮಾಡೋಕೆ ಬೆಂಗಳೂರು ಇತಿಹಾಸವನ್ನೇ ಬರೀಬೇಕಿತ್ತು. ಚೇಸಿಂಗ್​ಗೆ ಇಳಿದ ಆರ್​ಸಿಬಿಗೆ ಒಳ್ಳೆ ಓಪನಿಂಗ್ ಕೂಡ ಸಿಕ್ತು. ವೆಂಕಟೇಶ್ ಅಯ್ಯರ್ ಬೆಂಕಿಜ್ವಾಲೆಯಂತೆ ಸಿಡಿದ್ರು. 19 ಬಾಲಲ್ಲೇ 44 ಸಿಡಿಸಿ ಔಟಾದ್ರು. ಪವರ್ ಪ್ಲೇ ಪೂರ್ತಿ ಬೆಂಗಳೂರು ಕಡೆಯೇ ವಾಲಿತ್ತು. ವೆಂಕಿ ಔಟ್ ಆದ್ಮೇಲೆ ಪಡಿಕ್ಕಲ್ ಕೂಡ ಫಸ್ಟ್ 2 ಬಾಲಲ್ಲೇ ಬೌಂಡರಿ ಗೆರೆ ದಾಟಿಸಿ ಅವ್ರೂ ಅಗ್ರೆಸ್ಸಿವ್ ಆಗೇ ಸ್ಟಾರ್ಟ್ ಮಾಡಿದ್ರು. ಆದ್ರೆ ಕೊಹ್ಲಿ 15 ರನ್​ಗೆ ಔಟಾಗಿದ್ದೇ ತಡ ಆರ್​ಸಿಬಿ ನಮ್ಮ ಟಾರ್ಗೆಟ್ 256 ರನ್ಸ ಅನ್ನೋದನ್ನೇ ಮರೆತಾಗಿತ್ತು. ಫಸ್ಟ್ ಪ್ಲೇಸ್​ನಲ್ಲೇ ಉಳಿಯೋಕೆ ಆರ್​ಸಿಬಿ ಕನಿಷ್ಠ 166 ರನ್ ಗಳಿಸಲೇಬೇಕಿತ್ತು. ಒಂದು ವೇಳೆ RCB 165ಕ್ಕಿಂತ ಕಡಿಮೆ ರನ್ ಗಳಿಸಿ, 90 ಕ್ಕೂ ಹೆಚ್ಚು ರನ್‌ಗಳ ಅಂತರದಿಂದ ಸೋತಿದ್ದರೆ, SRH ತನ್ನ ನೆಟ್ ರನ್ ರೇಟ್  ಹೆಚ್ಚಿಸಿಕೊಂಡು ಅಂಕಪಟ್ಟಿಯಲ್ಲಿ 1ನೇ ಸ್ಥಾನಕ್ಕೇರುತ್ತಿತ್ತು. ಹೀಗಾಗಿ ಆರ್​ಸಿಬಿ ಓನ್ಲಿ 166 ರನ್ಸ್ ಅಷ್ಟೇ ನಮ್ಮ ಟಾರ್ಗೆಟ್ ಅಂತಾ ಮೆಂಟಲಿ ಫಿಕ್ಸ್ ಆಗಿದ್ರು. ಪಡಿಕ್ಕಲ್ ಔಟ್ ಆದ್ಮೇಲೆ ಕೃನಾಲ್ ಪಾಂಡ್ಯ ಬಂದ್ರು. ಸೋ ಬಾಲ್ ಎ ರನ್ ಅನ್ನೋ ಮೈಂಡ್​ಸೆಟ್​ನಲ್ಲೇ ಆಡಿದ್ರು. ಕೊನೆಗೆ 166ರ ಗಡಿ ದಾಟಿದ್ಮೇಲೆ ಬ್ಯಾಟ್ ಬಿಚ್ಚೋಕೆ ಸ್ಟಾರ್ಟ್ ಮಾಡಿದ್ರು. ಅಷ್ಟ್ರಲ್ಲಾಗ್ಲೇ ರಿಕ್ವೈರ್ಡ್ ರನ್ ರೇಟ್ 20 ದಾಟಿ ಆಗಿತ್ತು. ಕೊನೆಗೆ 20 ಓವರ್​ಗಳಲ್ಲಿ 200 ರನ್ ಗಳಿಸಿ 55 ರನ್​ಗಳ ಬಿಗ್ ಮಾರ್ಜಿನ್​ನಿಂದ ಸೋತ್ರು. ಆದ್ರೆ ಈ ಸೋಲು ಬರೀ ಸೋಲಾಗಿಲ್ಲ. ಆರ್​ಸಿಬಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಸ್ಮಾರ್ಟ್​ ಅಲ್ಲ ಶೇಮ್!

ಲೀಗ್ ಹಂತದ ಕೊನೇ ಮ್ಯಾಚಲ್ಲಿ ಬೌಲಿಂಗ್ ತೀರಾ ಕಳಪೆ

ಫೀಲ್ಡಿಂಗ್ ನಲ್ಲಿ ಮತ್ತದೇ ಫೇಲ್ಯೂರ್.. ಕ್ಯಾಚ್ ಗಳು ಡ್ರಾಪ್

ಟಾಪ್ 3 ಬ್ಯಾಟಿಂಗ್ ರನ್ಸ್ ಬಂದ್ರೆ ಮಾತ್ರವೇ ಕಂಟಿನ್ಯೂ

ವಿರಾಟ್ ಕೊಹ್ಲಿ ಔಟ್ ಆದ್ರೆ ಮುಂದಿನ ಬ್ಯಾಟರ್ಸ್ ಕಳಪೆ

55 ರನ್ ಗಳ ಅಂತರದಲ್ಲಿ ಸೋತಿರೋದು ಪ್ಲೇ ಆಫ್ಸ್ ಗೆ ಹೊಡೆತ

ಎದುರಾಳಿ ತಂಡಕ್ಕೆ ಆರ್ ಸಿಬಿ ಸೋಲಿಸಬಹುದು ಅನ್ನೋ ಮೈಂಡ್ ಸೆಟ್

ಮೊಮೆಂಟಮ್ ಕಳ್ಕೊಂಡಿರೋದ್ರಿಂದ ಮುಂದಿನ ಪಂದ್ಯದಲ್ಲಿ ಒತ್ತಡ

ಸ್ಲೋವರ್ ಬಾಲ್ ಗಳನ್ನು ಎದುರಿಸುವುದು ಆರ್ ಸಿಬಿ ಕಷ್ಟವಾಯ್ತಾ?

ಮ್ಯಾಜಿಕ್ ನಂಬರ್ ದಾಟೋಕೋಸ್ಕರ ಹಾಗೇ ನಂಬರ್ 1ಪಟ್ಟದಲ್ಲಿ ಉಳಿಯೋಸ್ಕರ ಚೇಸಿಂಗ್ ರಿಸ್ಕ್ ತಗೊಂಡಿಲ್ಲ ಅಂತಾ ಸಮಜಾಯಿಶಿ ಕೊಟ್ರೋ ಕೂಡ ಆರ್​ಸಿಬಿಯಂಥ ತಂಡಕ್ಕೆ ಇದು ಶೋಭೆಯಲ್ಲ. ರಜತ್ ಪಾಟಿದಾರ್ ಒಂದು ಮಾತು ಹೇಳಿದ್ರು. ನಾವು ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ ಹಾಕ್ಕೊಂಡು ಗೆಲ್ಲಲ್ಲ ಆ ಪಂದ್ಯ ಗೆಲ್ಲುತ್ತೇವೆ ಅನ್ನೋ ಮೈಂಡ್​ಸೆಟ್​ನಲ್ಲಿ ಆಡ್ತೇವೆ ಅಂತಾ. ಬಟ್ ನಿನ್ನೆ ಮ್ಯಾಚಲ್ಲಿ ಅದು ಕಾಣಲೇಇಲ್ಲ. ಹಾಗೇ ನೆಕ್ಸ್​ಟ್ ಜಿತೇಶ್ ಶರ್ಮಾ ಹಾಗೂ ಶೆಫರ್ಡ್ ಮೇಲೆ ಬ್ಯಾಟಿಂಗ್ ಮೇಲೆ ನಂಬಿಕೆ ಇಲ್ಲ ಅನ್ನೋ ಇಂಟೆಂಟ್ ಕ್ಲಿಯರ್ ಆಗೇ ಗೊತ್ತಾಗಿತ್ತು. ಅಂತೂ ಆರ್​ಸಿಬಿ ಸೋತ್ರು ಫಸ್ಟ್ ಪ್ಲೇಸ್​ನಲ್ಲಿ ಇದ್ದಾರೆ ಒಪ್ಕೊಳ್ಳೋಣ. ಇದು ಸ್ಮಾರ್ಟ್ ಮೂವ್ ಅನ್ಬೋದು. ಬಟ್ ಈಗ ಕ್ವಾಲಿಫೈಯರ್ 1ನಲ್ಲಿ ಹೇ ಸೋತ್ರೂ ಇನ್ನೊಂದು ಚಾನ್ಸ್ ಇರುತ್ತೆ ಬಿಡು ಅಂತಾ ಈಸಿಯಾಗಿ ತಗೊಳ್ಳೋ ಹಾಗೇ ಇಲ್ಲ. ಗೆಲ್ಲಲೇಬೇಕು. ಗೆದ್ದು ಫೈನಲ್ ಟಿಕೆಟ್ ಗಿಟ್ಟಿಸಿಕೊಳ್ಳಬೇಕು. ಌಂಡ್ ಒನ್ ಮೋರ್ ಥಿಂಗ್.. ಆರ್ಸಿಬಿ ಆಪೋಸಿಟ್ ಆಡ್ತಾ ಇರೋದು ಗುಜರಾತ್. ಇದೇ ಗುಜರಾತ್ ಲಾಸ್ಟ್​ ಮ್ಯಾಚಲ್ಲಿ ಆರ್​ಸಿಬಿಯನ್ನ ಕೇವಲ 155 ರನ್​ಗಳಿಗೆ ಆಲೌಟ್ ಮಾಡಿತ್ತು. ಸೋ ಚಾಲೆಂಜ್​ನ ಹೇಗೆ ಗೆಲ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *