ಯಾರಿಗೆ ಬಂಪರ್.. ಯಾರಿಗೆ ಶಾಕ್ – ಕೇಂದ್ರ ಬಜೆಟ್​ ಸುತ್ತ ಅದೆಷ್ಟು ‘ಲೆಕ್ಕಾಚಾರ’!?

ಯಾರಿಗೆ ಬಂಪರ್.. ಯಾರಿಗೆ ಶಾಕ್ – ಕೇಂದ್ರ ಬಜೆಟ್​ ಸುತ್ತ ಅದೆಷ್ಟು ‘ಲೆಕ್ಕಾಚಾರ’!?

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಬಜೆಟ್ ಆರಂಭವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಂಪು ಬಣ್ಣದ ಸೀರೆಯುಟ್ಟು ಈ ವರ್ಷ ಐದನೇ ಬಜೆಟ್ ಮಂಡಿಸುತ್ತಿದ್ದಾರೆ. ಇದು ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ : ಅದಾನಿ ಸಮೂಹದ ತೆಕ್ಕೆಗೆ ಹೈಫಾ ಪೋರ್ಟ್- ಮೈಲಿಗಲ್ಲು ಎಂದ ಇಸ್ರೇಲ್ ಪ್ರಧಾನಿ

ಮೊದಲಿಗೆ ಹಣಕಾಸು ಸಚಿವಾಲಯಕ್ಕೆ ಬಂದ ನಿರ್ಮಲಾ ಸೀತಾರಾಮನ್, ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಜೊತೆ ರಾಜ್ಯಖಾತೆ ಸಚಿವರಾದ ಪಂಕಜ್ ಚೌಧರಿ ಮತ್ತು ಭಗವತ್ ಕರಾಡ್ ಹಾಗೂ ಹಣಕಾಸು ಇಲಾಖೆ ಕಾರ್ಯದರ್ಶಿಗಳು ರಾಷ್ಟ್ರಪತಿಗಳ ಭೇಟಿ ವೇಳೆ ಇದ್ದರು.

ಇಂದು ಕೇಂದ್ರ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್ (Union Budget 2023) ಮಂಡನೆಯಾಗುತ್ತಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವುದರಿಂದ ಇದು ಕೇಂದ್ರ ಸರ್ಕಾರಕ್ಕೆ ಕೊನೆಯ ಪೂರ್ಣಪ್ರಮಾಣದ ಬಜೆಟ್ ಆಗಿದೆ. ಹೀಗಾಗಿ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ. ಆದಾಯ ತೆರಿಗೆಯ ಸ್ಲಾಬ್​ಗಳಲ್ಲಿ ಸರ್ಕಾರ ಬದಲಾವಣೆ ತರುವ ಸಾಧ್ಯತೆ ಇದೆ.

ಕೃಷಿ ವಲಯಕ್ಕೆ ಈ ಸಲದ ಬಜೆಟ್​ನಲ್ಲಿ ಯಾವೆಲ್ಲಾ ಸೌಲಭ್ಯಗಳು ಸಿಗಬಹುದು? ಎಲೆಕ್ಟ್ರಾನಿಕ್ಸ್, ವಿಮಾನಯಾನ, ರೈಲ್ವೆ, ಶಿಕ್ಷಣ, ನೀರಾವರಿ ಸೇರಿದಂತೆ ಯಾವ್ಯಾವ ವಲಯಕ್ಕೆ ಏನೆಲ್ಲಾ ಗಿಫ್ಟ್ ಸಿಗುತ್ತೆ ಅನ್ನೂ ಕುತೂಹಲ ಮೂಡಿದೆ. ಹೀಗಾಗಿ ಇವತ್ತಿನ ಬಜೆಟ್​​ನತ್ತ ಎಲ್ಲರ ಚಿತ್ತ ನೆಟ್ಟಿದೆ.

suddiyaana