GT ಈಗ ಮೋಸ್ಟ್ ಡೇಂಜರಸ್ – ALL OUT ಮಂತ್ರ ಸಕ್ಸಸ್ ಆಗ್ತಿದ್ಯಾ?
ಹೋಲ್ಡರ್ ಬಂದ್ಮೇಲೆ ಗಿಲ್ ಗೆ ಗ್ರಿಪ್!

ಐಪಿಎಲ್ಗೆ ಅಂಬೆಗಾಲಿಟ್ಟು ಬಂದ ವರ್ಷವೇ ಚಾಂಪಿಯನ್ ಪಟ್ಟಕ್ಕೇರಿದ್ದ ಗುಜರಾತ್ ಟೈಟಾನ್ಸ್ ಈ ಸೀಸನ್ನಲ್ಲಿ ಒನ್ ಆಫ್ ದಿ ಮೋಸ್ಟ್ ಡೇಂಜರಸ್ ಟೀಂ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲದ್ರಲ್ಲೂ ಆರ್ಭಟ ಮಾಡ್ತಾ ಪ್ಲೇಆಫ್ಸ್ಗೂ ಕ್ವಾಲಿಫೈ ಆಗಿ ಈಗ ಕ್ವಾಲಿಫೈಯರ್ 1 ಆಡೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಕಪ್ ಗೆಲ್ಲೋಕೆ ನಾವ್ ರೆಡಿ ಅನ್ನೋ ಥರ ನುಗ್ಗಿರೋ ಗುಜರಾತ್ ಟೈಟಾನ್ಸ್ ಈ ಸೀಸನ್ ಡಿಫ್ರೆಂಟ್ ಆಗಿ ಕಾಣ್ತಿದೆ.
ಇದನ್ನೂ ಓದಿ : ಗುಜರಾತ್ ವಿರುದ್ಧ ಸೋತು ಪ್ಲೇ ಆಫ್ ರೇಸ್‌ನಿಂದ ಹೊರ ಬಿದ್ದ CSK
ಪ್ರಸ್ತುತ ಸೀಸನ್ನಲ್ಲಿ ಲೀಗ್ ಹಂತದ 14 ಪಂದ್ಯಗಳನ್ನ ಮುಗಿಸಿ ಅದ್ರಲ್ಲಿ 9ರಲ್ಲಿ ಗೆದ್ದು 5ರಲ್ಲಿ ಸೋತಿರೋ ಗುರಾತ್ 18 ಅಂಕ ಗಳಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಸೆಕೆಂಡ್ ಪ್ಲೇಸ್ನಲ್ಲಿದೆ. ಇಡೀ ಟೀಂ ಬ್ಯಾಲೆನ್ಸ್ಡ್ ಆಗಿದ್ದು ಸೆಕೆಂಡ್ ಆಫ್ಸ್ನಲ್ಲಿ ಕಂಪ್ಲೀಟ್ ಕಂಟ್ರೋಲ್ನಲ್ಲಿ ಆಡಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಅವ್ರ ಕಾನ್ಫಿಡೆನ್ಸ್ ಲೆವೆಲ್ ಪೀಕ್ಗೆ ಹೋಗಿದೆ. ಅದ್ರಲ್ಲೂ ಈಗ ಚೆನ್ನೈ ವಿರುದ್ಧ ಬಿಗ್ ಮಾರ್ಜಿನ್ನಲ್ಲಿ ಗೆದ್ದು ಫಿನಿಶ್ ಮಾಡಿರೋದ್ರಿಂದ ಪ್ಲೇಆಫ್ಸ್ನಲ್ಲೂ ಡಾಮಿನೇಟ್ ಮಾಡೋ ಮೈಂಡ್ಸೆಟ್ನಲ್ಲೇ ಇರ್ತಾರೆ. ಬ್ಯಾಟಿಂಗ್, ಬೌಲಿಂಗ್ನಲ್ಲೂ ಗುಜರಾತ್ ಪ್ಲೇಯರ್ಸ್ ಎಕ್ಸ್ಟ್ರಾರ್ಡಿನಲ್ಲಿ ಪರ್ಫಾಮೆನ್ಸ್ ನೀಡ್ತಿದ್ದಾರೆ.
ಆರೆಂಜ್ ಕ್ಯಾಪ್ ರೇಸ್ ನಲ್ಲಿ ಗಿಲ್ & ಸುದರ್ಶನ್ ಮ್ಯಾಜಿಕ್!
ಗುಜರಾತ್ ತಂಡದ ಬ್ಯಾಟಿಂಗ್ ಸಕ್ಸಸ್ ಸೀಕ್ರೇಟೇ ನಾಯು ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಓಪನಿಂಗ್ ಪೇರ್. ಲಾಸ್ಟ್ ಸೀಸಲ್ನಲ್ಲೂ ಇವ್ರ ಜೋಡಿ ಮೋಡಿ ಮಾಡಿತ್ತು. ಈ ಆವೃತ್ತಿಯಲ್ಲೂ ಇಬ್ರೂ ಕೂಡ ಅತ್ಯದ್ಭುತ ಫಾರ್ಮ್ನಲ್ಲಿದ್ದಾರೆ. ಅದ್ರಲ್ಲೂ ಸಾಯಿ ಸುದರ್ಶನ್ ಜಿಟಿ ಪರ ಕಳೆದ ಐದು ಪಂದ್ಯಗಳಲ್ಲಿ 50+ ರನ್ಸ್ ಕಲೆ ಹಾಕಿದ್ದಾರೆ. ಸಿಎಸ್‌ಕೆ ವಿರುದ್ಧ 84 ರನ್ ಸಿಡಿಸಿದ್ದ ಸುದರ್ಶನ್ ಈ ಸೀಸನ್ನಲ್ಲಿ ಒಟ್ಟು 638 ರನ್ ಗಳಿಸಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಲಾಸ್ಟ್ ಸೀಸನ್ ಕೂಡ ಹೈಯೆಸ್ಟ್ ರನ್ ಸ್ಕೋರರ್ ಆಗಿ ಆರೆಂಜ್ ಕ್ಯಾಪ್ ಗೆದ್ದು ಬೀಗಿದ್ರು. ಹಾಗೇ ನಾಯಕ ಗಿಲ್, ಸಿಎಸ್‌ಕೆ ವಿರುದ್ಧ 64 ರನ್ ಬಾರಿಸಿದ್ರು. ಒಟ್ಟು 616 ರನ್ ಕಲೆಹಾಕಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಸೋ ಅಲ್ಲಿಗೆ ಇಬ್ರೂ ಕೂಡ ಒಬ್ರೊನ್ನೊಬ್ರು ಮ್ಯಾಚ್ ಮಾಡಿಕೊಂಡೇ ರನ್ ಸ್ಕೋರ್ ಮಾಡ್ತಾ ಬಂದಿದ್ದಾರೆ. ಇವ್ರಿಬ್ಬರ ಪಾರ್ಟ್ನರ್ಶಿಪ್ಪೇ ಗುಜರಾತ್ಗೆ ಆನೆಬಲವಾಗಿದೆ. ಹಾಗೇ ನಂತರದಲ್ಲಿ ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್ ಕೂಡ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿ ಸಪೋರ್ಟ್ ನೀಡ್ತಿದ್ದಾರೆ. ಈ ಸೀಸನ್ನಲ್ಲೇ 6 ಬಾರಿ 200+ ಸ್ಕೋರ್ಗಳನ್ನೂ ಮಾಡಿ ತಮ್ಮ ಬ್ಯಾಟಿಂಗ್ ಯುನಿಟ್ ಎಷ್ಟು ಸ್ಟ್ರಾಂಗ್ ಅನ್ನೋದನ್ನೂ ತೋರಿಸಿದ್ದಾರೆ.
ಬೌಲಿಂಗ್ ನಲ್ಲಿ ರಬಾಡ, ಸಿರಾಜ್ ಸಿಡಿಲು.. ಹೋಲ್ಡರ್, ರಶೀದ್ ಗುಡುಗು!
ಌಕ್ಚುಲಿ ಗುಜರಾತ್ ತಂಡದಲ್ಲಿ ಬ್ಯಾಟಿಂಗ್ಗಿಂತ ಬೌಲಿಂಗ್ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿದೆ. ವರ್ಲ್ಡ್ ಕ್ಲಾಸ್ ಬೌಲರ್ಗಳ ದಂಡೇ ಇದೆ. ಮೊಹಮ್ಮದ್ ಸಿರಾಜ್, ಕಗಿಸೋ ರಬಾಡಾ, ಜೇಸನ್ ಹೋಲ್ಡರ್ ಹಾಗೇ ರಶೀದ್ ಖಾನ್ ಮೋಸ್ಟ್ ಡೇಂಜರಸ್ ಕಾಂಬಿನೇಷನ್. ಗುಜರಾತ್ ತಂಡಕ್ಕೆ ಮೇನ್ ವಿಕೆಟ್ ಟೇಕರ್ ಆಗಿರೋ ಕಗಿಸೋ ರಬಾಡ ಈ ಸೀಸನ್ನಲ್ಲಿ 24 ವಿಕೆಟ್‌ಗಳನ್ನು ಪಡೆದು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ಜೊತೆ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಮೊಹಮ್ಮದ್ ಸಿರಾಜ್ 17 ವಿಕೆಟ್‌ಗಳನ್ನು ಪಡೆದು ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ. ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಕೇವಲ 26 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನೂ ಪಡೆದ್ರು. ವೆಸ್ಟ್ ಇಂಡೀಸ್‌ನ ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್ ಮಧ್ಯದ ಹಾಗೂ ಡೆತ್ ಓವರ್‌ಗಳಲ್ಲಿ ತುಂಬಾ ಎಕಾನಮಿಕಲ್ ಆಗಿ ಬೌಲಿಂಗ್ ಮಾಡಿರುವಂತದ್ದು. ನಿಜ ಹೇಳ್ಬೇಕಂದ್ರೆ ಹೋಲ್ಡರ್ ಜಿಟಿ ಪ್ಲೇಯಿಂಗ್ 11 ಸೇರಿದ್ಮೇಲೆ ಅಲ್ಲಿ ಹೊಸ ಖದರ್ ಸ್ಟಾರ್ಟ್ ಆಗಿದ್ದು.
ಹೋಲ್ಡರ್ ಬಂದ್ಮೇಲೆ ಗಿಲ್ ಗೆ ಸಿಕ್ಕಿತು ಗ್ರಿಪ್!
ಜೇಸನ್ ಹೋಲ್ಡರ್ ಈ ಸೀಸನ್ನಲ್ಲಿ ಗುಜರಾತ್ ಪರ ಆರಂಭದ ಪಂದ್ಯಗಳನ್ನ ಆಡಿರಲಿಲ್ಲ. ಫಸ್ಟ್ ಆಫ್ ಮುಗಿಯೋ ಹೊತ್ತಿಗೆ ಟೀಂ ಸೇರಿಕೊಂಡ ಹೋಲ್ಡರ್ ಜಿಟಿ ಪರ ಈ ಸೀಸನ್ನಲ್ಲಿ 8 ಪಂದ್ಯಗಳನ್ನ ಆಡಿದ್ದಾರೆ. ಕೇವಲ 28 ಓವರ್‌ಗಳನ್ನು ಬೌಲಿಂಗ್ ಮಾಡಿರುವ ಹೋಲ್ಡರ್ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದೂ ಕೂಡ 7.34 ಎಕಾನಮಿಯಲ್ಲಿ ರನ್ಸ್ ಕೊಟ್ಟಿದ್ದಾರೆ. ಅವರು ಪ್ಲೇಯಿಂಗ್ XI ಗೆ ಬಂದ ನಂತರ ಗುಜರಾತ್ ಟೈಟನ್ಸ್ ತಂಡವು ಆಡಿದ 6 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಲು ಪ್ರಮುಖ ಕಾರಣರಾಗಿದ್ದಾರೆ. ಜೊತೆಗೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಕೊಡುಗೆಯನ್ನೂ ನೀಡಿದ್ದಾರೆ. 58 ರನ್ಸ್ ಬಂದಿದೆ ಅವ್ರ ಬ್ಯಾಟಿಂಗ್ನಲ್ಲಿದೆ. ಹಾಗೇ ಫೀಲ್ಡಿಂಗ್ನಲ್ಲಿ ಒನ್ ಆಫ್ ದಿ ಸೇಫೆಸ್ಟ್ ಹ್ಯಾಂಡ್. ಪಂಜಾಬ್ ವಿರುದ್ಧ 24 ರನ್ ಕೊಟ್ಟು 4 ವಿಕೆಟ್ ಪಡೆದಿದ್ದು ಬೆಸ್ಟ್ ಸ್ಪೆಲ್ ಆಗಿದೆ. ಹಾಗೇ ಆರ್ಸಿಬಿ ವಿರುದ್ಧ 29 ರನ್ ನೀಡಿ 2 ವಿಕೆಟ್ಸ್ ತಗೊಂಡಿದ್ರು. ಈ ಪಂದ್ಯದಲ್ಲಿ 3 ಅದ್ಭುತ ಕ್ಯಾಚ್‌ಗಳನ್ನು ಹಿಡಿದಿದ್ರು. ಆಲ್ರೆಡಿ 2 ಬಾರಿ ಪಂದ್ಯ ಶ್ರೇಷ್ಟ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಸೋ ಇಲ್ಲಿ ಬೌಲರ್ಗಳ ನಂಬರ್ಸ್ ನೋಡಿದಾಗ್ಲೇ ಗೊತ್ತಾಗುತ್ತೆ ಎಷ್ಟು ಡೇಂಜರಸ್ ಆಗಿದ್ದಾರೆ ಅನ್ನೋದು. ಌಂಡ್ ಇಲ್ಲಿ ಇನ್ನೊಂದು ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ ಈ ಸೀಸನ್ನಲ್ಲಿ 5 ಬಾರಿ ಎದುರಾಳಿ ತಂಡವನ್ನ ಆಲೌಟ್ ಮಾಡಿದ್ದಾರೆ. ಈ ಲಿಸ್ಟ್ನಲ್ಲಿ ಆರ್ಸಿಬಿಯೂ ಇದೆ.
ಆಲೌಟ್ ಮಂತ್ರ ಸಕ್ಸಸ್!
ದಿನಾಂಕ ಎದುರಾಳಿ ಆಲೌಟ್ ಮೊತ್ತ
ಏಪ್ರಿಲ್ 27 ಕೊಲ್ಕತ್ತಾ 180(20)
ಏಪ್ರಿಲ್ 30 ಬೆಂಗಳೂರು 155(19.2)
ಮೇ 9 ರಾಜಸ್ಥಾನ 152(16.3)
ಮೇ 12 ಹೈದರಾಬಾದ್ 86(14.5)
ಮೇ 21 ಚೆನ್ನೈ 140(12.4)
ಹೀಗೆ ಐದು ಬಾರಿ ಆಪೋಸಿಟ್ ಟೀಮ್ನ ಗುಜರಾತ್ ಆಲೌಟ್ ಮಾಡಿದೆ. ಌಂಡ್ ಈ ಐದು ಪಂದ್ಯಗಳನ್ನೂ ಗುಜರಾಥ್ ತಂಡವೇ ಗೆದ್ದು ಬೀಗಿದೆ. ಸೋ ಇಲ್ಲೇ ಗೊತ್ತಾಗುತ್ತೆ ಇವ್ರ ಬೌಲಿಂಗ್ ಲೈನಪ್ ಎಷ್ಟು ಸ್ಟ್ರಾಂಗ್ ಇದೆ ಅನ್ನೋದು. ಇನ್ನು ವಿಶ್ವದ ಶ್ರೇಷ್ಠ ಸ್ಪಿನ್ನರ್ ರಶೀದ್ ಖಾನ್ ಮಧ್ಯದ ಓವರ್‌ಗಳಲ್ಲಿ ರನ್ ವೇಗಕ್ಕೆ ಬ್ರೇಕ್ ಹಾಕುವುದಲ್ಲದೆ, ಪ್ರಮುಖ ವಿಕೆಟ್‌ಗಳನ್ನು ತೆಗೆದು ಬ್ರೇಕ್ ಥ್ರೂ ತಂದುಕೊಡ್ತಾರೆ. ಇನ್ನು ಕೋಚಿಂಗ್ ಸ್ಟ್ರಾಫ್ಸ್ ಅಂತಾ ಬಂದಾಗ ಆಶಿಶ್ ನೆಹ್ರಾ ಅವರ ಅನುಭವ ಕೂಡ ತಂಡಕ್ಕೆ ಪ್ಲಸ್ ಆಗ್ತಿದೆ. ಐಪಿಎಲ್ ಇತಿಹಾಸದಲ್ಲಿ ಆಡಿದ ಒಟ್ಟು 74 ಪಂದ್ಯಗಳಲ್ಲಿ 46 ಪಂದ್ಯಗಳನ್ನು ಗೆದ್ದು ಶೇ. 62.16 ರಷ್ಟು ಭರ್ಜರಿ ಗೆಲುವಿನ ಅನುಪಾತ ಹೊಂದಿರುವ ಗುಜರಾತ್ ಕಳೆದ ತಮ್ಮ 5 ಸೀಸನ್ಗಳ ಐಪಿಎಲ್ ಜರ್ನಿಯಲ್ಲಿ 4 ಬಾರಿ ಪ್ಲೇ ಆಫ್ಸ್ಗೆ ಕ್ವಾಲಿಫೈ ಆಗಿದ್ದಾರೆ. ಐಪಿಎಲ್ ಅಖಾಡಕ್ಕೆ ಕಾಲಿಟ್ಟ ಮೊದಲ ವರ್ಷ ಅಂದ್ರೆ 2022 ರಲ್ಲಿ ಚಾಂಪಿಯನ್ಸ್ ಆಗ್ತಾರೆ. ಹಾಗೇ 2023 ರಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮಿದ ಜಿಟಿ ಈ ಸೀಸನ್ನಲ್ಲೂ ಟಾಪ್-4ನಲ್ಲಿ ಕ್ವಾಲಿಫೈ ಆಗಿದ್ದಾರೆ. ಒಟ್ನಲ್ಲಿ ಈ ಸೀಸನ್ನಲ್ಲೇ ಪ್ಲೇ ಆಫ್ಸ್ಗೆ ಕ್ವಾಲಿಫೈ ಆಗಿರೋ ತಂಡಗಳಿಗೆ ಜಿಟಿ ಟಫ್ ಫೈಟ್ ಕೊಡೋದಂತೂ ಪಕ್ಕಾ.

ನೋಡಿರಿ

