‘ಪಠಾಣ್’ ಯಶಸ್ಸಿನ ಅಲೆ – ಪಾರ್ಟ್ 2ಗೆ ಓಕೆ ಎಂದ ಶಾರುಖ್ ಖಾನ್!

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾ ಈಗಾಗ್ಲೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾ ರಿಲೀಸ್ ಆದ ಆರೇ ದಿನದಲ್ಲಿ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಗೆಲುವಿನ ನಾಗಾಲೋಟ ಮುಂದುವರಿಸಿರೋ ಪಠಾಣ್ ಸಿನಿಮಾ ಬಾಲಿವುಡ್ಗೂ ಭರವಸೆಯ ಬೆಳಕಿನಂತಾಗಿದೆ. ಸದ್ಯ ಸಿನಿಮಾ ಸಕ್ಸಸ್ ಖುಷಿಯಲ್ಲಿರೋ ಶಾರುಖ್ ಖಾನ್ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ‘ಪಠಾಣ್ 2’ ಸಿನಿಮಾದಲ್ಲಿ ನಟಿಸಲು ತಾವು ಸಿದ್ಧ ಎಂದು ‘ಕಿಂಗ್ ಖಾನ್’ ಹೇಳಿದ್ದಾರೆ.
ಇದನ್ನೂ ಓದಿ : ಕಂದನಿಗೆ ರಸ್ತೆ ದಾಟಲು ಅಮ್ಮನ ಪಾಠ – ಮರಿಯಾನೆಗೆ ತಾಯಿಯೇ ಗುರು
‘ಪಠಾಣ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿರುವುದರಿಂದ ಶಾರುಖ್ ಖಾನ್ ತಮ್ಮ ತಂಡದ ಜೊತೆ ಸುದ್ದಿಗೋಷ್ಠಿ ನಡೆಸಿದ್ದರು. ದೀಪಿಕಾ ಪಡುಕೋಣೆ, ಸಿದ್ದಾರ್ಥ್ ಆನಂದ್, ಜಾನ್ ಅಬ್ರಾಹಂ ಕೂಡ ಹಾಜರಿದ್ದರು. ಈ ಸಂದರ್ಭದಲ್ಲಿ ‘ಪಠಾಣ್ 2’ ಬಗ್ಗೆ ಪ್ರಸ್ತಾಪ ಆಗಿಗ್ದು, ಶಾರುಖ್ ಖಾನ್ ಈಗಾಗಲೇ ತಮ್ಮ ನಿರ್ಧಾರ ತಿಳಿಸಿದ್ದಾರೆ.
‘ನನಗೆ ಸಿಕ್ಕ ಅವಕಾಶದಿಂದ ತುಂಬ ಖುಷಿ ಆಗಿದೆ. ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ಯಾವಾಗ ಪಠಾಣ್ ಚಿತ್ರಕ್ಕೆ ಸೀಕ್ವೆಲ್ ಮಾಡಿದರೂ ನಾನು ಅದರಲ್ಲಿ ನಟಿಸುತ್ತೇನೆ. ಸೀಕ್ವೆಲ್ ಸಲುವಾಗಿ ಇನ್ನೂ ಉದ್ದ ಕೂದಲು ಬಿಡಲು ನಾನು ಸಿದ್ಧ. ಪಠಾಣ್ 2 ಚಿತ್ರಕ್ಕಾಗಿ ನಾನು ಸಕಲ ರೀತಿಯಿಂದಲೂ ಪ್ರಯತ್ನಿಸುತ್ತೇನೆ. ಅದರಲ್ಲಿ ನಟಿಸುವುದು ನನ್ನ ಪಾಲಿನ ಹೆಮ್ಮೆ’ ಎಂದು ಶಾರುಖ್ ಖಾನ್ ಹೇಳಿದ್ದಾರೆ.
‘ಪಠಾಣ್’ ಸಿನಿಮಾಗೆ ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆ ಬಂಡವಾಳ ಹೂಡಿದ್ದು, ಸಿನಿಮಾ ಬಿಡುಗಡೆಯಾಗಿ ಒಂದು ವಾರ ಪೂರೈಸುತ್ತಿದ್ದರೂ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಜೊತೆಗೆ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ ಜಾನ್ ಅಬ್ರಾಹಂ ಹಾಗೂ ನಾಯಕಿ ದೀಪಿಕಾ ಪಡುಕೋಣೆ ಅವರ ಜನಪ್ರಿಯತೆ ಕೂಡ ಹೆಚ್ಚಾಗಿದೆ