ಇಂದು RCB VS SRH ಬಿಗ್ ಫೈಟ್ – ಮಳೆ ಬಂದ್ರೆ ಯಾರಿಗೆ ಲಾಭ?

ಇಂದು ಲೀಗ್ ಹಂತದಲ್ಲಿ ಕೊನೆ ಪಂದ್ಯವನ್ನ ಆರ್ಸಿಬಿ ಇಂದು ಆಡಲಿದೆ. ಸನ್ರೈಸರ್ಸ್ ಹೈದರಾಬಾದ್ನನ್ನ ಮಣಿಸೋಕೆ ಚಾಲೆಂಜರ್ಸ್ ಬೆಂಗಳೂರು ತಂಡ ರಣ ಹದ್ದಿನಂತೆ ಕಾಯುತ್ತಿದೆ. ಟೆಬಲ್ ಟಾಪ್ನಲ್ಲಿರೋ ಆರ್ಸಿಬಿ ಇದ್ದು, ಆ ಸ್ಥಾನ ಉಳಿಸಿಕೊಳ್ಳಬೇಕಾದ್ರೆ ಇಂದಿನ ಪಂದ್ಯ ಗೆಲ್ಲುವುದು ಅನಿವಾರ್ಯ. ಎರಡೂ ತಂಡಗಳು ಈಗಾಗಲೇ ಪ್ಲೇಆಫ್ಗೆ ತಲುಪಿವೆ ಆದರೆ ಕ್ವಾಲಿಫೈಯರ್ 1 ರಲ್ಲಿ ಸ್ಥಾನ ಪಡೆಯುವ ನಿಟ್ಟಿನಲ್ಲಿ ಇತ್ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಆದರೆ ಪಂದ್ಯಕ್ಕೆ ಭಾರೀ ಮಳೆ ಮುನ್ಸೂಚನೆ ಇದೆ.
ಪಂದ್ಯದ ಸಮಯದಲ್ಲಿ ಶೇ.45 ರಷ್ಟು ಮಳೆಯ ಭೀತಿ ಎದುರಾಗಿದೆ. ದಕ್ಷಿಣ ಭಾರತದ ಕೇರಳ, ಕರ್ನಾಟಕದಲ್ಲಿ ಈಗಾಗಲೇ ಮಳೆ ಆರಂಭಗೊಂಡಿದೆ. ಈ ಬಾರಿ ಮುಂಗಾರು ಮೇ 26ರ ಸುಮಾರಿಗೆ ಕೇರಳವನ್ನು ಪ್ರವೇಶಿಸಲಿದೆ. ಇದಕ್ಕೂ ಮುನ್ನವೇ ಮಳೆ ಆರಂಭಗೊಂಡಿದೆ. ಹೈದರಾಬಾದ್ನ ಕೆಲ ಜಿಲ್ಲೆಗಳಲ್ಲಿ ಗುರುವಾರ ರಾತ್ರಿ ಮಳೆಯಾಗಿದೆ.
ಮಳೆ ಬಂದರೆ ಆರ್ಸಿಬಿಗೆ ಲಾಭ
ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೂ ಆರ್ಸಿಬಗೆ ಯಾವುದೇ ನಷ್ಟ ಸಂಭವಿಸುವುದಿಲ್ಲ. ಕಾರಣ ತಂಡ 18 ಅಂಕದೊಂದಿಗೆ ಅಗ್ರಸ್ಥಾನಿಯಾಗಿದೆ. ಪಂದ್ಯ ರದ್ದಾದರೆ ಸಿಗುವ ಒಂದು ಅಂಕ ಸೇರಿದರೆ ಆರ್ಸಿಬಿ ಅಗ್ರಸ್ಥಾನದಲ್ಲೇ ಉಳಿಯಲಿದೆ. ಜತೆಗೆ ಕ್ವಾಲಿಫೈಯರ್ 1 ರಲ್ಲಿ ಸ್ಥಾನ ಪಡೆಯಲಿದೆ. ಆದರೆ ಕ್ವಾಲಿಫೈಯರ್ 1ಕ್ಕೆ ಪ್ರವೇಶ ಪಡೆಯಬೇಕಿದ್ದರೆ, ಸನ್ರೈಸರ್ಸ್ಗೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಅದು ಕೂಡ ದೊಡ್ಡ ಅಂತರದ ಗೆಲುವು.
ಈ ಋತುವಿನಲ್ಲಿ, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣವು ಹಲವಾರು ಹೈ-ಸ್ಕೋರಿಂಗ್ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಆಡಿದ ಕೊನೆಯ ಪಂದ್ಯದಲ್ಲಿ, ಹೈದರಾಬಾದ್ ತಂಡ 235/4 ಬಾರಿಸಿತ್ತು. ಹೀಗಾಗಿ ಈ ಪಿಚ್ ಮತ್ತೊಮ್ಮೆ ಸಾಕಷ್ಟು ರನ್ಗಳನ್ನು ನೀಡುವ ನಿರೀಕ್ಷೆಯಿದೆ.

ನೋಡಿರಿ

