ಗುಜರಾತ್ ವಿರುದ್ಧ ಸೋತು ಪ್ಲೇ ಆಫ್ ರೇಸ್‌ನಿಂದ ಹೊರ ಬಿದ್ದ CSK

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಗುಜರಾತ್ ಟೈಟನ್ಸ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 89 ರನ್‌ಗಳ ಭರ್ಜರಿ ಜಯವನ್ನು ದಾಖಲಿಸಿತು. ಇದರೊಂದಿಗೆ 18 ಅಂಕಗಳನ್ನು ಕಲೆ ಹಾಕಿದ ಶುಭಮನ್ ಗಿಲ್ ನಾಯಕತ್ವದ ಜಿಟಿ, ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿತು. ಇನ್ನು ಈ ಸೋಲಿನ ಮೂಲಕ ಋತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್‌ಕೆ ತಂಡ, ಪ್ಲೇಆಫ್ಸ್ ರೇಸ್‌ನಿಂದ ಅಧಿಕೃತವಾಗಿ ಹೊರ ನಡೆಯಿತು.
ಗುರುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ನೀಡಿದ್ದ 230 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಬಹುಬೇಗ ಚೇಸ್ ಮಾಡಿ ರನ್‌ರೇಟ್ ಹೆಚ್ಚಿಸಿಕೊಳ್ಳಬೇಕೆಂಬ ಉದ್ದೇಶದಿಂದ ಮೊದಲನೇ ಎಸೆತದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಕೈಹಾಕಿತು. ಆದರೆ, ಪವರ್‌ಪ್ಲೇನಲ್ಲಿ ಮೊಹಮ್ಮದ್ ಸಿರಾಜ್ ಮಾರಕ ದಾಳಿ ನಡೆಸಿದ ಮೊಟ್ಟ ಮೊದಲ ಎಸೆತದಲ್ಲಿ ಸಂಜು ಸ್ಯಾಮ್ಸನ್ ಸೇರಿದಂತೆ ಋತುರಾಜ್ ಗಾಯಕ್ವಾಡ್ ಹಾಗೂ ಊರ್ವಿಲ್ ಪಟೇಲ್ ಅವರನ್ನು ಔಟ್ ಮಾಡಿ ಸಿಎಸ್‌ಕೆಗೆ ಪವರ್‌ಪ್ಲೇನಲ್ಲಿಯೇ ಪೆಟ್ಟು ನೀಡಿದರು.
ಇದನ್ನೂ ಓದಿ: RCB ಸಕ್ಸಸ್ ಸೀಕ್ರೆಟ್ DK – ಮೆಂಟರ್ ಪಟ್ಟದ ಹಿಂದೆ ಕೊಹ್ಲಿ ಆಟ!
14 ಎಸೆತಗಳಲ್ಲಿ 24 ರನ್ ಗಳಿಸಿ ಆಡುತ್ತಿದ್ದ ಮ್ಯಾಥ್ಯೂ ಶಾರ್ಟ್ ಅವರನ್ನು ಕಗಿಸೊ ರಬಾಡ ಔಟ್ ಮಾಡಿದರು. ಕಾರ್ತಿಕ್ ಶರ್ಮಾ ರನ್‌ಔಟ್ ಆದರು. ಮಧ್ಯಮ ಓವರ್‌ಗಳಲ್ಲಿ ಅಬ್ಬರಿಸಿದ ಶಿವಂ ದುಬೇ ಕೇವಲ 17 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 47 ರನ್ ಸಿಡಿಸಿ ಸಿಎಸ್‌ಕೆ ಭರವಸೆ ಮೂಡಿಸಿದ್ದರು, ಆದರೆ ಅವರನ್ನು ಔಟ್ ಮಾಡುವಲ್ಲಿ ರಶೀದ್ ಖಾನ್ ಯಶಸ್ವಿಯಾದರು. 8 ಎಸೆತಗಳಲ್ಲಿ 19 ರನ್ ಸಿಡಿಸಿದ ಬಳಿಕ ಅನ್ಷುಲ್ ಕಾಂಬೋಜ್ ಹಾಗೂ ಡೆವಾಲ್ ಬ್ರೆವಿಸ್ ಅವರನ್ನು ರಶೀದ್ ಖಾನ್ ಸ್ಪಿನ್ ಮೋಡಿಯಿಂದ ಔಟ್ ಮಾಡಿದರು. ಕೊನೆಯಲ್ಲಿ ಕಗಿಸೊ ರಬಾಡ ಎರಡು ವಿಕೆಟ್ ಕಿತ್ತರು. ಅಂತಿಮವಾಗಿ ಸಿಎಸ್‌ಕೆ 13.4 ಓವರ್‌ಗಳಿಗೆ 140 ರನ್‌ಗಳಿಗೆ ಆಲ್‌ಔಟ್ ಆಯಿತು.
ಜಿಟಿ ಪರ ನಿರ್ಣಾಯಕ ಮೂರು ವಿಕೆಟ್‌ಗಳನ್ನು ಕಿತ್ತ ಮೊಹಮ್ಮದ್ ಸಿರಾಜ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ರಬಾಡ ಹಾಗೂ ರಶೀದ್ ತಲಾ ಮೂರು ವಿಕೆಟ್‌ಗಳನ್ನು ಕಿತ್ತರು.

ನೋಡಿರಿ

