RCB ಸಕ್ಸಸ್ ಸೀಕ್ರೆಟ್ DK – ಮೆಂಟರ್ ಪಟ್ಟದ ಹಿಂದೆ ಕೊಹ್ಲಿ ಆಟ!
ದಿನೇಶ್ ಕಾರ್ತಿಕ್ ಟ್ರೋಫಿ ಟಾರ್ಗೆಟ್ ಹೇಗಿತ್ತು?

19ನೇ ಸೀಸನ್ನ ಟೇಬಲ್ ಟಾಪರ್ ಆಗಿರೋ ಆರ್ಸಿಬಿಯ ಸಕ್ಸಸ್ ಕ್ರೆಡಿಟ್ನ ಪ್ಲೇಯರ್ಗಳಿಗೆ ಕೊಡ್ಲೇಬೇಕು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲದ್ರಲ್ಲೂ ಎಫರ್ಟ್ ಇದ್ದದ್ದಕ್ಕೇ ಇವತ್ತು ನಂಬರ್ 1 ಪೊಸಿಷನ್ನಲ್ಲಿ ಇರೋದು. ಅಟ್ದಿ ಸೇಮ್ ಟೈಮ್ ಈ ಸಕ್ಸಸ್ ಹಿಂದೆ ಸ್ಟ್ರೆಂಥ್ ಆಗಿ ನಿಂತಿರೋದು ಕೋಚಿಂಗ್ ಸ್ಟಾಫ್ಸ್.. ಎಸ್ಪೆಷಲಿ ಡಿಕೆ ಅಲಿಯಾಸ್ ದಿನೇಶ್ ಕಾರ್ತಿಕ್. ಬ್ಯಾಟಿಂಗ್ನಲ್ಲಿ ಆರ್ಸಿಬಿ ಪಾಲಿಗೆ ಆಪತ್ಬಾಂಧವನಾಗಿದ್ದ ಡಿಕೆ ಮೆಂಟರ್ ಆದ್ಮೇಲೆ ರೆಡ್ ಆರ್ಮಿ ಕ್ಯಾಂಪ್ನ ಮೈಂಡ್ ಸೆಟ್ಟೇ ಬದ್ಲಾಗಿದೆ. ಇಂಟ್ರೆಸ್ಟಿಂಗ್ ಅಂದ್ರೆ ದಿನೇಶ್ ಕಾರ್ತಿಕ್ ಮೆಂಟರ್ ಌಂಡ್ ಬ್ಯಾಟಿಂಗ್ ಕೋಚ್ ಆಗಿದ್ದರ ಹಿಂದಿನ ಸೂತ್ರದಾರ ಕಿಂಗ್ ವಿರಾಟ್ ಕೊಹ್ಲಿ.
ಇದನ್ನೂ ಓದಿ : 14ನೇ ಪಂದ್ಯಕ್ಕೆ RCBಗೆ ಹೊಸ ಬೌಲರ್ ಎಂಟ್ರಿ – ಪ್ಲೇಯಿಂಗ್ 11ನಲ್ಲಿ ಸಿಗುತ್ತಾ ಚಾನ್ಸ್?
ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಈ ಸೀಸನ್ನ ಡಿಫೆಂಡಿಂಗ್ ಚಾಂಪಿಯನ್ಸ್ ಌಂಡ್ ಟ್ರೋಫಿ ಗೆಲ್ಲೋ ಫೇವರೆಟ್ ಟೀಂ. ಆಲ್ರೆಡಿ ಟೇಬಲ್ ಟಾಪರ್ ಆಗಿರೋ ಆರ್ಸಿಬಿ ಈ ಸಲನೂ ಕಪ್ ನಮ್ದು ಅಂತಾ ಹೇಳೋಕೆ ಸ್ವಲ್ಪವೇ ದೂರದಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೆಂಗಳೂರು ನಡೆದಿದ್ದೇ ದಾರಿ. ಆದ್ರೆ ಅದಕ್ಕೂ ಹಿಂದಿನ ಪರಿಸ್ಥಿತಿ ಹೀಗಿರಲಿಲ್ಲ. ವರ್ಲ್ಡ್ ಕ್ಲಾಸ್ ಪ್ಲೇಯರ್ಗಳೇ ಆಡಿದ್ರೂ ಅನುಭವಿಸಿದ್ದು ಮಾತ್ರ ಹೆಜ್ಜೆ ಹೆಜ್ಜೆಗೂ ಅವಮಾನ. ಆ ಟೀಕೆ, ಟ್ರೋಲ್, ಗೇಲಿ, ವ್ಯಂಗ್ಯ ಹೀಗೆ ಎಲ್ಲವನ್ನೂ ಮೆಟ್ಟಿ ನಿಂತ ಬೆಂಗಳೂರು 18ನೇ ಸೀಸನ್ನಲ್ಲಿ ಕಪ್ ಗೆದ್ದು ಬೀಗಿತ್ತು. ಈ ಗೆಲುವಿನ ಹಿಂದಿನ ಮಾಸ್ಟರ್ ಮೈಂಡ್ ದಿನೇಶ್ ಕಾರ್ತಿಕ್. ಅಷ್ಟಕ್ಕೂ ಡಿಕೆ ಐಪಿಎಲ್ಗೆ ನಿವೃತ್ತಿ ಘೋಷಣೆ ಮಾಡಿ ವಾಟ್ ನೆಕ್ಸ್ಟ್ ಎನ್ನುವಾಗ ಕೊಹ್ಲಿ ಹೇಳಿದ್ದ ಮಾತುಗಳೇ ಇವತ್ತು ಅವ್ರನ್ನ ಆರ್ಸಿಬಿ ಮ್ಯಾನೇಜ್ಮೆಂಟ್ ಶಕ್ತಿಯನ್ನಾಗಿ ಮಾಡಿದೆ.
ಕೊಹ್ಲಿ ಮಾತಿನಿಂದಲೇ ಹೊಸ ಜವಾಬ್ದಾರಿ ಒಪ್ಪಿಕೊಂಡಿದ್ದ ಡಿಕೆ!
ಇತ್ತೀಚೆಗೆ ಆರ್ಸಿಬಿಯ ಪಾಡ್ಕಾಸ್ಟ್ನಲ್ಲಿ ಮಾತನಾಡಿದ್ದ ಡಿಕೆ ತಾನು ಆರ್ಸಿಬಿಯ ಬ್ಯಾಟಿಂಗ್ ಕೋಚ್ ಹಾಗೇ ಮೆಂಟರ್ ಆಗಿದ್ದರ ಹಿಂದಿನ ಸ್ಟೋರಿಯನ್ನ ಹೇಳಿದ್ರು. 2024ರಲ್ಲಿ ನನ್ನ ಕ್ರಿಕೆಟ್ ವೃತ್ತಿಜೀವನವನ್ನು ಮುಗಿಸಿದೆ. ಈ ವೇಳೆ ಆರ್ಸಿಬಿ ಮ್ಯಾನೇಜ್ಮೆಂಟ್ ನಿರ್ದೇಶಕರಾಗಿರೋ ಮೊ ಬೊಬಾಟ್ ಕೋಚಿಂಗ್ ಸ್ಟಾಫ್ ಸೇರಲು ಇಂಟ್ರೆಸ್ಟ್ ಇದ್ಯಾ ಅಂದಿದ್ರು. ಟೂರ್ನಮೆಂಟ್ ಮಿಡಲ್ ಸ್ಟೇಜ್ನಲ್ಲಿದ್ದ ಕಾರಣ ನಾನು ಏನೂ ಹೇಳಿರಲಿಲ್ಲ. ಹಾಗಂತ ಅವ್ರೇನು ನನ್ನ ಒತ್ತಾಯ ಮಾಡಿರಲಿಲ್ಲ. ನನ್ನ ಪಾತ್ರದ ಬಗ್ಗೆ ಸ್ಪಷ್ಟವಾಗಿ ಹೇಳಿದ್ರು. ಮುಂದೆ ಏನ್ ಮಾಡಬೇಕು ಎಂಬ ಗೊಂದಲದಲ್ಲಿ ಇದ್ದಾಗ ವಿರಾಟ್ ಕೊಹ್ಲಿ ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುವಂತೆ ನನ್ನನ್ನ ಕೇಳಿಕೊಂಡರು. ತಂಡಕ್ಕೂ ಕೂಡ ಇದು ಒಳ್ಳೆಯದು, ನಿಮಗೂ ಕೂಡ ಒಳ್ಳೆಯದಾಗಲಿದೆ ಎಂದ್ರು. ಕೊಹ್ಲಿಯಂಥ ವ್ಯಕ್ತಿ ನನ್ನ ಮೇಲೆ ಇಷ್ಟು ಗೌರವ ಇಟ್ಟಿದ್ದಾರೆ ಎಂದಾಗ ನಾನು ಅದನ್ನ ನಿರಾಕರಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಈ ಮೂಲಕ ಆರ್ಸಿಬಿ ಕೋಚಿಂಗ್ ಸ್ಟಾಫ್ ಗ್ರೂಪ್ ಸೇರಿದ ದಿನೇಶ್ ಕಾರ್ತಿಕ್ ಆ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ರು. ಸತತ 17 ವರ್ಷ ಕಪ್ನೇ ಗೆಲ್ಲದ ಆರ್ಸಿಬಿ ಡಿಕೆ ಬಂದ ಮರುವರ್ಷವೇ ಕಪ್ ಗೆದ್ದಿದ್ದರ ಹಿಂದೆ ಅವ್ರ ಪರಿಶ್ರಮ ತುಂಬಾ ದೊಡ್ಡದಿದೆ. ಹೆಜ್ಜೆಗೆಜ್ಜೆಗೂ ಸವಾಲುಗಳನ್ನ ಮೆಟ್ಟಿ ತಂಡವನ್ನ ಮುನ್ನಡೆಸಿದ್ದಾರೆ.
ಡಿಕೆ ಮುಂದಿದ್ದ ಸವಾಲುಗಳು!
ಡಿಕೆ ಮೆಂಟರ್ ಆದ ವರ್ಷವೇ 2025ರ ಐಪಿಎಲ್ ಮೆಗಾ ಹರಾಜು
ಮೆಗಾ ಹರಾಜಿನಲ್ಲಿ ಆಟಗಾರರ ಶಾರ್ಟ್ ಲಿಸ್ಟ್ & ಗ್ರೌಂಡ್ ವರ್ಕ್
ಸ್ಟಾರ್ಸ್ ಹಿಂದೆ ಬೀಳದೆ ಸ್ಲಾಟ್ ಗಳ ಲೆಕ್ಕಾಚಾರದಲ್ಲಿ ಆಟಗಾರರ ಖರೀದಿ
ಭುವನೇಶ್ವರ್ ಕುಮಾರ್ ರಂಥ ಅನುಭವಿ ಬೌಲರ್ ಖರೀದಿ ಮಾಡಿದ್ದು
ನಂಬರ್ 1 ಟು 11 ವರೆಗೆ ಹೇಗಿರಬೇಕು, ಹಾಗೇ ಬ್ಯಾಕಪ್ ಪ್ಲೇಯರ್ಸ್
ಪಂದ್ಯಗಳಿಗೂ ಮುನ್ನ ಆಟಗಾರರ ಜವಾಬ್ದಾರಿಗಳನ್ನ ಸ್ಪಷ್ಟವಾಗಿ ತಿಳಿಸಿದ್ದು
ಬ್ಯಾಟಿಂಗ್ ಕ್ರಮಾಂಕ, ಆಟಗಾರರ ಮಾನಸಿಕ ಸ್ಥಿತಿ ತಿಳಿದು ಕಾನ್ಫಿಡೆನ್ಸ್
ಆರ್ ಸಿಬಿಯಲ್ಲಿ ಆಡಿದ ಅನುಭವ ಇರೋದ್ರಿಂದ ಗೈಡೆನ್ಸ್ ಕೂಡ ಸುಲಭ
ಆರ್ಸಿಬಿಯಲ್ಲಿ ಬೆರೆತು ಹೋಗಿದ್ದ ಡಿಕೆ ತಮ್ಮ ನಿವೃತ್ತಿಯ ನಂತರದ ದಿನಗಳನ್ನ ಸಂಪೂರ್ಣವಾಗಿ ಆರ್ಸಿಬಿ ಕೋಚಿಂಗ್ ಸ್ಟಾಫ್ಸ್ ಜೊತೆ ತೊಡಗಿಸಿಕೊಂಡ್ರು. ಟ್ರೋಫಿ ಗೆಲುವೊಂದೇ ನಮ್ಮ ಟಾರ್ಗೆಟ್ ಅನ್ನೋ ಹಾಗೇ ಎಲ್ಲರನ್ನೂ ಪ್ರಿಪೇರ್ ಮಾಡಿದ್ರು. ಕೊಹ್ಲಿ ಒಬ್ರೇ ಆಡಿದ್ರೆ ಕಪ್ ಗೆಲ್ಲಲ್ಲ ತಂಡದಲ್ಲಿರೋ ಎಲ್ಲರೋ ಒಗ್ಗಟ್ಟಿನಿಂದ ಹೋರಾಡಿದ್ರೆ ಮಾತ್ರವೇ ಗೆಲ್ಲೋಕೆ ಸಾಧ್ಯ ಅನ್ನೋದನ್ನ ತಿಳಿಸಿದ್ರು. ಅದ್ರ ಪರಿಣಾಮವೇ ಆರ್ಸಿಬಿ ಕಳೆದ ಸೀಸನ್ನಲ್ಲಿ ಕಪ್ ಗೆದ್ದು ಬೀಗಿತ್ತು. ಈ ಆವೃತ್ತಿಯಲ್ಲೂ ಕಪ್ ಗೆಲ್ಲೋ ಫೇವರೆಟ್ ಟೀಂ ಆಗಿ ಮುನ್ನುಗ್ತಿದೆ.

ನೋಡಿರಿ

