ಕೊನೆಗೂ ಗೆದ್ದ ಕರ್ಣ ನಿಧಿ ಪ್ರೀತಿ – ಮದುವೆಯಾದ ಪ್ರೇಮಿಗಳು, ರಮೇಶ್ ಪ್ಲಾನ್ ಠುಸ್

ಕೊನೆಗೂ ಗೆದ್ದ ಕರ್ಣ ನಿಧಿ ಪ್ರೀತಿ – ಮದುವೆಯಾದ ಪ್ರೇಮಿಗಳು, ರಮೇಶ್ ಪ್ಲಾನ್ ಠುಸ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕರ್ಣ ಧಾರಾವಾಹಿ ರೋಚಕ ತಿರುವು ಕಂಡಿದೆ. ನಿಧಿ-ಕರ್ಣ ವಿವಾಹ ಯಶಸ್ವಿಯಾಗಿ ನೆರವೇರಿದೆ. ವೀಕ್ಷಕರು ಕಾಯುತ್ತಿದ್ದ ಸಮಯ ಬಂದಿದೆಯಾದರು, ಹೊಸ ಜೋಡಿಗಳ ವಿರುದ್ಧ ರಮೇಶ್ ಕುತಂತ್ರ ಹೇಗಿರುತ್ತೆ ಎಂಬ ಕುತೂಹಲವೂ ಗರಿಗೆದರಿದೆ.

ಇದನ್ನೂ ಓದಿ:ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ನಟ ದರ್ಶನ್? – ಆತಂಕದಲ್ಲಿ ಫ್ಯಾನ್ಸ್.. DGP ಹೇಳಿದ್ದೇನು?

ಕರ್ಣ ಧಾರಾವಾಹಿಯಲ್ಲಿ ಕೊನೆಗೂ ಪ್ರೇಮಿಗಳು ಒಂದಾಗಿದ್ದಾರೆ. ಕಥೆಯ ನಾಯಕ ಕರ್ಣ ಹಾಗೂ ನಿಧಿ ವಿವಾಹ ನೆರವೇರಿದೆ. ಅಂದುಕೊಂಡಂತೆ ನಿಧಿ ಕೊರಳಿಗೆ ತಾಳಿ ಕಟ್ಟಿದ್ದಾನೆ ಕರ್ಣ. ಅದು ಕೂಡಾ ಹಿರಿಯರ ಸಮ್ಮುಖದಲ್ಲಿ. ಕರ್ಣ, ನಿಧಿ ಒಂದಾಗುತ್ತಾರಾ, ನಿಜವಾದ ಪ್ರೀತಿ ಕರ್ಣನಿಗೆ ಸಿಗುತ್ತಾ ಅನ್ನೋ ವೀಕ್ಷಕರ ಗೊಂದಲಕ್ಕೆ ಈ ಮೂಲಕ ತೆರೆಬಿದ್ದಿದೆ. ನಿತ್ಯಾ ಸಮ್ಮುಖದಲ್ಲೇ ಕರ್ಣ ಮತ್ತು ನಿಧಿ ಇಬ್ಬರೂ ಹಸೆಮಣೆ ಏರಿದ್ದಾರೆ. ಕರ್ಣ-ನಿಧಿ ಕಲ್ಯಾಣದ ಈ ವಿಶೇಷ ಸಂಚಿಕೆ ಪ್ರಸಾರವಾಗುತ್ತಿದೆ.

ಕರ್ಣ ಧಾರಾವಾಹಿಯಲ್ಲಿ ಕರ್ಣನ ತಂದೆ ರಮೇಶ್ ಮೋಸದಿಂದ ಕರ್ಣ ಹಾಗೂ ನಿತ್ಯಾಳ ಮದುವೆ ಮಾಡಿಸುತ್ತಾನೆ. ಈ ಮದುವೆಗೂ ಮೊದಲು ಕರ್ಣ ನಿಧಿಯನ್ನು ಪ್ರೀತಿ ಮಾಡುತ್ತಿರುತ್ತಾನೆ. ಈ ವಿಷಯ ಗೊತ್ತಾಗಿಯೇ ನಿತ್ಯಾ ಹಾಗೂ ಕರ್ಣನ ಮದುವೆ ಮಾಡಿಸುತ್ತಾನೆ ರಮೇಶ್. ಈ ಮೂಲಕ ಮಗನ ಮೇಲೆ ದ್ವೇಷ ಸಾಧಿಸುತ್ತಾನೆ. ಆದರೆ, ಕರ್ಣ ತನ್ನ ಸ್ವಂತ ಮಗ ಅನ್ನೋ ಸತ್ಯ ಇನ್ನೂ ರಮೇಶ್‌ಗೆ ಗೊತ್ತಾಗಿಲ್ಲ. ಮತ್ತೊಂದೆಡೆ ನಿತ್ಯಾ ಕೂಡಾ ಕರ್ಣ ಮತ್ತು ತನ್ನ ಮದುವೆ ರಹಸ್ಯ ಎಲ್ಲರೆದುರು ಹೇಳಿದ್ದಾಳೆ. ನಿತ್ಯಾಳ ಕಥೆ ಮುಂದೇನಾಗುತ್ತೆ?, ರಮೇಶ್ ಗೆ ಸತ್ಯ ಗೊತ್ತಾಗುತ್ತಾ?, ಪ್ರೀತಿ ಗೆದ್ದ ಕರ್ಣ ರಮೇಶ್ ಮನಸು ಗೆಲ್ತಾನಾ ಅನ್ನೋ ಕುತೂಹಲ ಪ್ರೇಕ್ಷಕರದ್ದು.

Sulekha

Leave a Reply

Your email address will not be published. Required fields are marked *