14ನೇ ಪಂದ್ಯಕ್ಕೆ RCBಗೆ ಹೊಸ ಬೌಲರ್ ಎಂಟ್ರಿ – ಪ್ಲೇಯಿಂಗ್ 11ನಲ್ಲಿ ಸಿಗುತ್ತಾ ಚಾನ್ಸ್?

ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಸುತ್ತಿನ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 13 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಳೂರು ತಂಡಕ್ಕೆ ಇನ್ನುಳಿದಿರುವುದು ಒಂದು ಲೀಗ್ ಮ್ಯಾಚ್ ಮಾತ್ರ. ಈ ಪಂದ್ಯಕ್ಕೂ ಮುನ್ನ ಆರ್ಸಿಬಿ ಪಡೆಗೆ ಇಂಗ್ಲೆಂಡ್ ವೇಗಿ ಎಂಟ್ರಿ ಕೊಟ್ಟಿದ್ದಾರೆ. ಇಂಗ್ಲೆಂಡ್ ತಂಡದ 38 ವರ್ಷದ ಅನುಭವಿ ವೇಗಿ ರಿಚರ್ಡ್ ಗ್ಲೀಸನ್ ಅವರನ್ನು ಇತ್ತೀಚೆಗೆ ಆರ್ಸಿಬಿ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆರ್ಸಿಬಿ ತಂಡದಲ್ಲಿದ್ದ ಶ್ರೀಲಂಕಾ ವೇಗಿ ನುವಾನ್ ತುಷಾರ ಗಾಯದ ಕಾರಣ ಹೊರಗುಳಿದಿದ್ದು, ಅವರ ಬದಲಿಗೆ ಗ್ಲೀಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ಅದರಂತೆ ಇದೀಗ ರಿಚರ್ಡ್ ಗ್ಲೀಸನ್ ಆರ್ಸಿಬಿ ತಂಡವನ್ನು ಕೂಡಿಕೊಂಡಿದ್ದಾರೆ. ಅಲ್ಲದೆ ಜೇಕಬ್ ಡಫಿ ಜೊತೆಗೂಡಿ ಬೌಲಿಂಗ್ ಅಭ್ಯಾಸದಲ್ಲೂ ನಿರತರಾಗಿದ್ದಾರೆ. ಇದಾಗ್ಯೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗ್ಲೀಸನ್ಗೆ ಚಾನ್ಸ್ ಸಿಗುವ ಸಾಧ್ಯತೆಯಿಲ್ಲ. ಏಕೆಂದರೆ ಜೇಕಬ್ ಬೆಥೆಲ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಹಾಗೂ ಜೋಶ್ ಹೇಝಲ್ವುಡ್ ಕಣಕ್ಕಿಳಿಯುತ್ತಿರುವ ಕಾರಣ ಕಿವೀಸ್ ವೇಗಿ ಜೇಕಬ್ ಡಫಿ ಬೆಂಚ್ ಕಾಯುತ್ತಿದ್ದಾರೆ. ಒಂದು ವೇಳೆ ಆಡುವ ಬಳಗದಲ್ಲಿ ಬದಲಾವಣೆ ಮಾಡಿದರೆ, ಡಫಿಗೆ ಚಾನ್ಸ್ ಸಿಗುವ ಸಾಧ್ಯತೆ ಹೆಚ್ಚು.
ಇದನ್ನೂ ಓದಿ: ಅತ್ತೆ ಅಂತ್ಯಕ್ರಿಯೆಗೆ ಹೋದವನ ಬದುಕು ಅಂತ್ಯ – ಸರಯು ನದಿಯಲ್ಲಿ ಸ್ನಾನಕ್ಕೆ ಇಳಿದಾಗ ಮೊಸಳೆ ಅಟ್ಯಾಕ್
ಇದಾಗ್ಯೂ ಕೆಲವೇ ಪಂದ್ಯಗಳು ಮಾತ್ರ ಬಾಕಿ ಇರುವಾಗ ಗ್ಲೀಸನ್ ಅವರನ್ನು ಆಯ್ಕೆ ಮಾಡಿಕೊಂಡಿರುವುದು ಯಾಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಉತ್ತರ ಬ್ಯಾಕಪ್ ಪ್ಲೇಯರ್. ಅಂದರೆ ಜೋಶ್ ಹೇಝಲ್ವುಡ್ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅತ್ತ ಡಫಿ ಕೂಡ ಸಂಪೂರ್ಣ ಫಿಟ್ ಆಗಿಲ್ಲ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ
ಒಂದು ವೇಳೆ ಈ ಇಬ್ಬರು ಪ್ರಮುಖ ವೇಗಿಗಳು ಗಾಯಗೊಂಡರೆ ಕಣಕ್ಕಿಳಿಸಲು ಬ್ಯಾಕಪ್ ಆಗಿ ರಿಚರ್ಡ್ ಗ್ಲೀಸನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿ ಗ್ಲೀಸನ್ ಅವರನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಎಂಬ ಪ್ರಶ್ನೆಗೆ ಅವರು ಇತ್ತೀಚಿನ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ನೀಡಿದ ಅದ್ಭುತ ಪ್ರದರ್ಶನ ಎಂಬ ಉತ್ತರ ಸಿಗುತ್ತಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಪಿಎಸ್ಎಲ್ (PSL 2026) ಟೂರ್ನಿಯಲ್ಲಿ ಇಸ್ಲಾಮಾಬಾದ್ ಯುನೈಟೆಡ್ ಪರ ಆಡಿದ್ದ ಗ್ಲೀಸನ್ ಕೇವಲ 7.14 ಎಕಾನಮಿ ರೇಟ್ನಲ್ಲಿ ಮಾತ್ರ ರನ್ ಬಿಟ್ಟು ಕೊಟ್ಟಿದ್ದರು. ಅಲ್ಲದೆ ಆರ್ಸಿಬಿ ತಂಡದ ಹೆಡ್ ಕೋಚ್ ಆ್ಯಂಡಿ ಫ್ಲವರ್ ಅವರಿಗೆ ರಿಚರ್ಡ್ ಗ್ಲೀಸನ್ ಅವರ ಬೌಲಿಂಗ್ ಶೈಲಿಯ ಬಗ್ಗೆ ಚೆನ್ನಾಗಿ ತಿಳಿದಿದೆ. 38ರ ಹರೆಯದಲ್ಲೂ ಗ್ಲೀಸನ್ 140+ ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು

ನೋಡಿರಿ

