ದೃಶ್ಯಂ 3 ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್- ಮೋಹನ್‌ಲಾಲ್ ಅಭಿನಯಕ್ಕೆ ಫ್ಯಾನ್ಸ್ ಫಿದಾ

ದೃಶ್ಯಂ 3 ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್- ಮೋಹನ್‌ಲಾಲ್ ಅಭಿನಯಕ್ಕೆ ಫ್ಯಾನ್ಸ್ ಫಿದಾ

ದೃಶ್ಯಂ 3 ಸಿನಿಮಾ ರಿಲೀಸ್ ಆಗಿದೆ. ಮಲಯಾಳಂ ಸೂಪರ್ ಸ್ಟಾರ್  ಮೋಹನ್​ಲಾಲ್ ಅಭಿನಯದ ಪ್ರೇಕ್ಷಕರ ಮೆಚ್ಚುಗೆ ಸಿಕ್ಕಿದೆ. ಜೊತೆಗೆ ಈ ಸಿನಿಮಾ ಬ್ಲಾಕ್‌ಬಸ್ಟರ್ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಹಳ್ಳಿ ಹೈದನ ಗೆಟಪ್‌ನಲ್ಲಿ ಗಿಲ್ಲಿ ನಟ – ಸರ್ವೇ ನಂಬರ್ 45 ಸಿನಿಮಾದಲ್ಲಿ ಗಿಲ್ಲಿ ಹೀರೋ

ದೃಶ್ಯಂ 3  ಸಿನಿಮಾ ಶುಕ್ರವಾರ (ಮೇ 21ರಂದು) ತೆರೆಕಂಡಿದೆ. ದೃಶ್ಯಂ ಸಿನಿಮಾದ 3ನೇ ಪಾರ್ಟ್ ನೋಡಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಚಿತ್ರದ ಮೊದಲಾರ್ಧ, ಭಾವನಾತ್ಮಕ ಕ್ಷಣಗಳು ಮತ್ತು ಮೋಹನ್ ಲಾಲ್ ಅವರ ಸ್ಕ್ರೀನ್ ಪ್ರಸೆನ್ಸ್​ ಬಗ್ಗೆ ವೀಕ್ಷಕರು ಹಾಡಿ ಹೊಗಳಿದ್ದಾರೆ. ಎಕ್ಸ್‌ನಲ್ಲಿ ಸಿನಿಮಾದ ಅಭಿಮಾನಿಗಳು ಇಂಟರ್​ವೆಲ್​ ತನಕ ಸಿನಿಮಾ ನೋಡಿಯೇ ಸಂಪೂರ್ಣ ಸಿನಿಮಾ ಎಂದು ಬಣ್ಣಿಸಿದ್ದಾರೆ. ಅದರಲ್ಲೂ ಮೋಹನ್​ಲಾಲ್ ಎಂಟ್ರಿ ದೃಶ್ಯ ಪಕ್ಕಾ ವಿಸಿಲ್ ಮೊಮೆಂಟ್ ಎಂದು ಬಣ್ಣಿಸಿದ್ದಾರೆ.

ದೃಶ್ಯಂ3 ಮೊದಲಾರ್ಧ ತುಂಬಾ ಚೆನ್ನಾಗಿದೆ. ಮಧ್ಯಂತರ ಬ್ಲಾಕ್ ತುಂಬಾ ಅದ್ಭುತವಾಗಿದೆ. ಮೋಹನ್ ಲಾಲ್ ಎಂದಿನಂತೆ ಅಲ್ಟಿಮೇಟ್. ಇಂಟರ್​​ವೆಲ್ ದ್ವಿತೀಯಾರ್ಧಕ್ಕೆ ಹೆಚ್ಚಿನ ಕುತೂಹಲವನ್ನು ಸೃಷ್ಟಿಸುತ್ತದೆ. ದೃಶ್ಯಂ ಮತ್ತು ದೃಶ್ಯಂ2 ಗೆ ಸೆಕೆಂಡ್ ಹಾಫ್ ಅದ್ಭುತವಾಗಿದೆ. ಇದು ಹಾಗೆಯೇ ಎಂದಿದ್ದಾರೆ ವೀಕ್ಷಕರು. ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಮೋಹನ್ ಲಾಲ್ ಅವರ ಅಭಿನಯ ಸೂಪರ್ ಅಂದಿದ್ದಾರೆ ಪ್ರೇಕ್ಷಕರು.

ಜೀತು ಜೋಸೆಫ್ ನಿರ್ದೇಶಿಸಿದ ದೃಶ್ಯಂ 3, ದೃಶ್ಯಂ 2 ರ ಘಟನೆಗಳ ನಂತರ ಜಾರ್ಜ್‌ಕುಟ್ಟಿ ಮತ್ತು ಅವರ ಕುಟುಂಬದ ಕಥೆಯನ್ನು ಮುಂದುವರಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಯಶಸ್ವಿ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 2013 ರಲ್ಲಿ ಮೊದಲ ಚಿತ್ರದ ಬಿಡುಗಡೆಯೊಂದಿಗೆ ಪ್ರಾರಂಭವಾಗಿ 2021 ರಲ್ಲಿ ಸೀಕ್ವೆಲ್ ಬಂದಿತ್ತು. ಮಲಯಾಳಂ ಮೂಲದ ಈ ಸಿನಿಮಾ ಎಲ್ಲಾ ಭಾಷೆಗಳಲ್ಲಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆ ಪಡೆದಿದೆ. ಮೋಹನ್ ಲಾಲ್ ಜೊತೆಗೆ, ಈ ಚಿತ್ರದಲ್ಲಿ ಮೀನಾ, ಎಸ್ತರ್ ಅನಿಲ್ ಮತ್ತು ಅನ್ಸಿಬಾ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Sulekha

Leave a Reply

Your email address will not be published. Required fields are marked *