CSK ಗೆದ್ದರೆ RCBಗೆ ಲಾಭ..! – ವಿದಾಯ ಹೇಳದೇ Dhoni ತವರಿಗೆ ವಾಪಸ್ ಆಗಿದ್ದೇಕೆ?

CSK ಗೆದ್ದರೆ RCBಗೆ ಲಾಭ..! – ವಿದಾಯ ಹೇಳದೇ Dhoni ತವರಿಗೆ ವಾಪಸ್ ಆಗಿದ್ದೇಕೆ?

ಐಪಿಎಲ್‌ ನಲ್ಲಿ ಹತ್ತು ಹಲವು ರೋಚಕ ಕ್ಷಣಗಳು ನಡೆಯುತ್ತವೆ. ಆ ಎಲ್ಲಾ ಪ್ರಮುಖ ಸುದ್ದಿಗಳ ಹೈಲೆಟ್ಸ್ ಇಲ್ಲಿದೆ.

ಇದನ್ನೂ ಓದಿ:ಮನೀಶ್ ತಾಳ್ಮೆಗೆ ಮುಗ್ಗರಿಸಿದ ಮುಂಬೈ – KKRಗೆ ಈಗ ಪ್ಲೇ ಆಫ್ಸ್ ಅದೃಷ್ಟ ಪರೀಕ್ಷೆ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ರೋಚಕ ಜಯ ಸಾಧಿಸಲು ಕಾರಣವಾದವರು ಕನ್ನಡಿಗ ಮನೀಶ್ ಪಾಂಡೆ. ಕೆಕೆಆರ್ ಗೆಲ್ಲಿಸಿರುವ ಕನ್ನಡಿಗ ಮನೀಶ್ ಪಾಂಡೆ ಪ್ಲೇಆಫ್ ಕನಸನ್ನು ಚಿಗುರಿಸಿದ್ದಾರೆ. ಮುಂಬೈ ವಿರುದ್ಧ ಕಣಕ್ಕಿಳಿದ ಕೆಕೆಆರ್‌ಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಾಗಿತ್ತು. ಆಗ ತಂಡಕ್ಕೆ ಆಸರೆಯಾದ ಕನ್ನಡಿಗ ಮನೀಶ್ ಪಾಂಡೆ ಬ್ಯಾಟಿಂಗ್‌ನಲ್ಲಿ ಆರ್ಭಟಿಸಿದರು. 33 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 45 ರನ್ ಕಲೆ ಹಾಕಿದರು. ಜೊತೆಗೆ 6 ವರ್ಷಗಳ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡ್ರು.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮನೀಶ್ ಪಾಂಡೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸತತ 19 ಸೀಸನ್​​ಗಳಲ್ಲಿ ಬ್ಯಾಟ್ ಮಾಡಿದ ಮೂರನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಮಾತ್ರ ಈ ಸಾಧನೆ ಮಾಡಿದ್ದರು. ಮುಂಬೈ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಮನೀಶ್ ಪಾಂಡೆ ಆ ಬಳಿಕ ಬೆಂಗಳೂರು, ಪುಣೆ ವಾರಿಯರ್ಸ್, ಹೈದರಾಬಾದ್, ಲಕ್ನೋ ಪರ ಕಣಕ್ಕಿಳಿದಿದ್ದರು.

CSK ಮತ್ತು GT ತಂಡಗಳ ನಡುವಿನ ಮುಖಾಮುಖಿಗೆ ಕೌಂಟ್‌ಡೌನ್ ಶುರುವಾಗಿದೆ. ಈ ಮ್ಯಾಚ್​ನಲ್ಲಿ ಗುಜರಾತ್ ಟೈಟಾನ್ಸ್ ಗೆದ್ದರೆ 18 ಅಂಕ ಪಡೆಯಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಳ್ಳುವ ಮೂಲಕ ಮೊದಲ ಕ್ವಾಲಿಫೈಯರ್ ಆಡುವ ಅವಕಾಶವನ್ನು ಹೆಚ್ಚಿಸಿಕೊಳ್ಳಬಹುದು. ಅತ್ತ ಪ್ಲೇಆಫ್ ರೇಸ್​ನಲ್ಲಿ ಉಳಿಯಬೇಕಿದ್ದರೆ ಈ ಮ್ಯಾಚ್​ನಲ್ಲಿ ಸಿಎಸ್​ಕೆ ತಂಡ ಗೆಲ್ಲಲೇಬೇಕು. GT ವಿರುದ್ಧ ಚೆನ್ನೈ ಗೆದ್ದರೆ RCB ತಂಡ ಮೊದಲ ಕ್ವಾಲಿಫೈಯರ್ ಆಡುವುದು ಖಚಿತವಾಗಲಿದೆ.

ಇನ್ನು ಆರ್‌ಸಿಬಿ ಟೀಮ್ ಸಿಎಸ್‌ ಕೆಗೆ ಗೆಲುವಿಗಾಗಿ ಕಾಯ್ತಿದೆ. 16 ಅಂಕ ಹೊಂದಿರುವ ಗುಜರಾತ್ ಸೋತರೆ,  18 ಅಂಕ ಹೊಂದಿರುವ ಆರ್​ಸಿಬಿ ಮೊದಲ ಕ್ವಾಲಿಫೈಯರ್​ಗೆ ನೇರವಾಗಿ ಎಂಟ್ರಿಯಾಗಲಿದೆ. ಸದ್ಯಕ್ಕೆ  18 ಅಂಕ ಪಡೆಯಲು ಅವಕಾಶ ಇರುವುದು ಹೈದರಾಬಾದ್ ಹಾಗು ಗುಜರಾತ್ ತಂಡಗಳಿಗೆ ಮಾತ್ರ. ಗುಜರಾತ್ ಸೋತರೆ 16 ಅಂಕಗಳಲ್ಲೇ ಉಳಿಯಲಿದೆ. ಅತ್ತ ಆರ್​ಸಿಬಿ ತಂಡ ಕೊನೆಯ ಮ್ಯಾಚ್​ನಲ್ಲಿ ಹೈದರಾಬಾದ್ ವಿರುದ್ಧ ಸೋತರೂ 18 ಅಂಕಗಳೊಂದಿಗೆ ಟಾಪ್-2 ನಲ್ಲೇ ಕಾಣಿಸಿಕೊಳ್ಳಲಿದೆ. ಹೀಗಾಗಿ ಗುಜರಾತ್ ವಿರುದ್ಧ ಚೆನ್ನೈ ಗೆಲ್ಲುವುದು ಬೆಂಗಳೂರು ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ.

ಗುಜರಾತ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ​ ತಂಡವು ಭರ್ಜರಿ ಜಯ ಸಾಧಿಸಿದರೆ ಪ್ಲೇಆಫ್ ರೇಸ್ ಗೆ ಎಂಟ್ರಿ ಸಿಗಲಿದೆ. ಅದು ಕೂಡ ಕನಿಷ್ಠ 20 ರನ್​ಗಳ ಅಂತರದಿಂದ ಗೆಲ್ಲಲೇಬೇಕು. ಆಗ 14 ಅಂಕಗಳೊಂದಿಗೆ ಸಿಎಸ್​ಕೆ ತಂಡ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಲಿದೆ. ಇದರ ಜೊತೆಗೆ ಚೆನ್ನೈ, ಲಕ್ನೋ ತಂಡದ ಗೆಲುವನ್ನು ಎದುರು ನೋಡಬೇಕು. ಅಂದರೆ ಎಲ್​ಎಸ್​ಜಿ ವಿರುದ್ಧ ಪಂಜಾಬ್ ಸೋಲಬೇಕು. ಹಾಗೆಯೇ ಮುಂಬೈ ವಿರುದ್ಧ ರಾಜಸ್ಥಾನ್ ಸೋಲಬೇಕು. ಜೊತೆಗೆ ಕೆಕೆಆರ್ ವಿರುದ್ಧ ಡೆಲ್ಲಿ ಗೆದ್ದರೆ ಮಾತ್ರ ಚೆನ್ನೈಗೆ ಲಾಭವಿದೆ.

ಪ್ಲೇಆಫ್​ ಆಡುವುದನ್ನು ಖಚಿತಪಡಿಸಿಕೊಂಡಿರುವ ಬೆಂಗಳೂರು ಪಡೆಗೆ ಗುಡ್​ ನ್ಯೂಸ್ ಸಿಕ್ಕಿದೆ. ಪ್ಲೇಆಫ್​ ಪಂದ್ಯಕ್ಕೂ ಮುನ್ನ ಫಿಲ್ ಸಾಲ್ಟ್ ಆರ್​ಸಿಬಿ ತಂಡ ಸೇರಿಕೊಳ್ಳಲಿದ್ದಾರೆ. ಕಳೆದ ಏಪ್ರಿಲ್ 18 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಸಾಲ್ಟ್ ಅವರ ಎಡಗೈ ಬೆರಳಿಗೆ ತೀವ್ರ ಪೆಟ್ಟಾಗಿತ್ತು. ಗಾಯದ ಕಾರಣ ಇಂಗ್ಲೆಂಡ್​ಗೆ ತೆರಳಿದ್ದ ಸಾಲ್ಟ್, ಸಂಪೂರ್ಣ ಫಿಟ್ ಆಗಿದ್ದು ಆರ್‌ಸಿಬಿ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ.

RCB ತನ್ನ ಕೊನೆ ಲೀಗ್ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.  ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಆರ್​ಸಿಬಿ ಹೈದರಾಬಾದ್​ಗೆ ಆಗಮಿಸಿದೆ. ತನ್ನ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಹೈದರಾಬಾದ್​ಗೆ ಬರುತ್ತಿರುವುದಕ್ಕೆ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಜೊತೆಗೆ ಕೊಹ್ಲಿ ಅಭಿಮಾನಿಗಳು ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಕೊಹ್ಲಿಗೆ ಭವ್ಯ ಸ್ವಾಗತ ಕೋರಿದ್ದಾರೆ.

ಚೆನ್ನೈ ಸೂಪರ್‌ಕಿಂಗ್ಸ್ ಪ್ಲೇಆಫ್‌ನಿಂದ ಹೊರಬಿದ್ದಿದೆ. ಇದರೊಂದಿಗೆ ಅಭಿಮಾನಿಗಳಿಗೆ ಮತ್ತೊಂದು ಬೇಸರದ ಸುದ್ದಿಯೂ ಸಿಕ್ಕಿದೆ. ಒಂದೇ ಒಂದು ಪಂದ್ಯವನ್ನಾಡದೇ ಎಂ.ಎಸ್ ಧೋನಿ ತನ್ನ ತವರಿಗೆ ವಾಪಾಸಾಗಿದ್ದಾರೆ. ಧೋನಿ ಈ ಸೀಸನ್‌ನಲ್ಲಿ ಆಡ್ತಾರೆ ಎಂದು ಹೇಳಲಾಗಿತ್ತು. ಆದರೆ, ಒಂದೇ ಒಂದು ಪಂದ್ಯ ಆಡಿಲ್ಲ. ಅಂತಿಮ ಲೀಗ್ ಪಂದ್ಯದಲ್ಲೂ ಧೋನಿ ಆಡದೇ ರಾಂಚಿಗೆ ಮರಳಿದ್ದಾರೆ. ಧೋನಿ ಕೈಗೆ ಗ್ಲೌಸ್ ತೊಡಬೇಕು. ಬ್ಯಾಟಿಂಗ್ ಮಾಡಬೇಕು ಎಂದು ಕಾದಿರುವ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಬೌಲರ್ ಮೊಹಮ್ಮದ್ ಶಮಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಪತ್ನಿ ಹಸಿನ್ ಜಹಾನ್ ಮಾಡಿದ ಆರೋಪಗಳಿಂದ ಶಮಿ ಅವರನ್ನು ಅಲಿಪೋರ್ ನ್ಯಾಯಾಲಯ ಖುಲಾಸೆಗೊಳಿಸಿದೆ. ಮೊಹಮ್ಮದ್ ಶಮಿ ವಿರುದ್ಧ ಹಸಿನ್ ಜಹಾನ್ 1 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಂತರ, ಅಲಿಪೋರ್ ನ್ಯಾಯಾಲಯವು ಬುಧವಾರ ತೀರ್ಪು ನೀಡಿದ್ದು, ಪ್ರಕರಣದಲ್ಲಿನ ಎಲ್ಲಾ ಆರೋಪಗಳಿಂದ ಶಮಿಯನ್ನು ಖುಲಾಸೆಗೊಳಿಸಿತು.

ಅಫ್ಘಾನಿಸ್ತಾನ ವಿರುದ್ಧ ಕಣಕ್ಕೀಳಿಯುವ ಭಾರತ ತಂಡದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲೂ ಟೀಮ್ ಇಂಡಿಯಾ ಒಳಗಿನ ಮುಂಬೈ ಪ್ಲೇಯರ್ಸ್ ಪ್ರಾಬಲ್ಯಕ್ಕೆ ಅಂತ್ಯ ಹಾಡಲಾಗಿದೆ. ಟೀಮ್ ಇಂಡಿಯಾದಲ್ಲಿ ಈ ಬಾರಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದಿರುವ 7 ಆಟಗಾರರಿದ್ದಾರೆ. ಭಾರತ ತಂಡದಲ್ಲಿರುವ 11 ಆಟಗಾರರು ಗುಜರಾತ್ ಟೈಟಾನ್ಸ್‌ನವರು ಎಂದುಗುಜರಾತ್ ಫ್ರಾಂಚೈಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

Sulekha

Leave a Reply

Your email address will not be published. Required fields are marked *