CSKಗೆ ಇಂದು ಮಾಡು ಇಲ್ಲವೇ ಮಡಿ – ಚೆನ್ನೈ ಗೆಲುವಿಗಾಗಿ ಕಾದು ಕುಳಿತ RCB

ಇಂದು CSK VS GT ಮುಖಾಮುಖಿಯಾಗಲಿವೆ. ಈ ಮ್ಯಾಚ್ನಲ್ಲಿ ಗೆದ್ದರೆ ಗುಜರಾತ್ ಟೈಟಾನ್ಸ್ 18 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಳ್ಳುವ ಮೂಲಕ ಮೊದಲ ಕ್ವಾಲಿಫೈಯರ್ ಆಡುವ ಅವಕಾಶವನ್ನು ಹೆಚ್ಚಿಸಿಕೊಳ್ಳಬಹುದು. ಅತ್ತ ಪ್ಲೇಆಫ್ ರೇಸ್ನಲ್ಲಿ ಉಳಿಯಬೇಕಿದ್ದರೆ ಈ ಮ್ಯಾಚ್ನಲ್ಲಿ ಸಿಎಸ್ಕೆ ತಂಡ ಗೆಲ್ಲಲೇಬೇಕು. GT ವಿರುದ್ಧ ಚೆನ್ನೈ ಗೆದ್ದರೆ RCB ತಂಡವು ಮೊದಲ ಕ್ವಾಲಿಫೈಯರ್ ಆಡುವುದು ಖಚಿತವಾಗಲಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದರೆ ಆರ್ಸಿಬಿ ತಂಡವು ಮೊದಲ ಕ್ವಾಲಿಫೈಯರ್ ಆಡುವುದು ಖಚಿತವಾಗಲಿದೆ. ಏಕೆಂದರೆ ಇಂದಿನ ಪಂದ್ಯದಲ್ಲಿ 16 ಅಂಕಗಳನ್ನು ಹೊಂದಿರುವ ಗುಜರಾತ್ ಟೈಟಾನ್ಸ್ ಸೋತರೆ, 18 ಅಂಕಗಳನ್ನು ಹೊಂದಿರುವ ಆರ್ಸಿಬಿ ಮೊದಲ ಕ್ವಾಲಿಫೈಯರ್ಗೆ ನೇರ ಅರ್ಹತೆ ಪಡೆಯಲಿದೆ.
ಇದನ್ನೂ ಓದಿ: ಕೆಕೆಆರ್ ಪ್ಲೇಆಫ್ ಕನಸು ಚಿಗುರಿಸಿದ ಕನ್ನಡಿಗ – ಮುಂಬೈ ಇಂಡಿಯನ್ಸ್‌ಗೆ ಮತ್ತೆ ಸೋಲಿನ ಮುಖಭಂಗ

ನೋಡಿರಿ

