ಬಾಂಬ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 80ಕ್ಕೇರಿಕೆ – ತಾನೇ ತೋಡಿದ ಗುಂಡಿಗೆ ಬಿತ್ತಾ ಪಾಕಿಸ್ತಾನ?
ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತ್ತಲ್ಲೋ ಎಂಬಂತೆ ಪಾಕಿಸ್ತಾನಿಗಳು ಬೇರೆ ಕಡೆ ಬಾಂಬ್ ಇಟ್ಟು ಕ್ರೂರತ್ವ ಮೆರೀತಿದ್ರು. ಈಗ ಪಾಕಿಸ್ತಾನಕ್ಕೂ ಅಂಥಾ ದಿನ ಬಂದುಬಿಟ್ಟಿದೆ. ಭಯೋತ್ಪಾದನೆಗೆ ಬೆಂಬಲ ಕೊಟ್ಟು ಇರೋ ಬರೋ ದುಡ್ಡು ಅದಕ್ಕೇನೇ ಸುರಿದು ದಿವಾಳಿಯತ್ತ ಸಾಗುತ್ತಿದ್ದ ಪಾಕಿಸ್ತಾನದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 80ಕ್ಕೇರಿದೆ.
ಇದನ್ನೂ ಓದಿ: ಕೆನಡಾದ ಹಿಂದೂ ದೇಗುಲದ ಮೇಲೆ ವಿಧ್ವಂಸಕ ಬರಹ – ದುಷ್ಕೃತ್ಯದ ಹಿಂದೆ ಯಾರ ಕೈವಾಡ..?
150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸಾವು ನೋವು ಸಂಖ್ಯೆ ಏರಿಕೆಯಾಗುತ್ತಿದೆ. ಪೇಶಾವರದಲ್ಲಿ ಸೋಮವಾರ ನಡೆದ ಈ ದಾಳಿ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡೇ ನಡೆದಿತ್ತು. ನಾಲ್ಕು ಹಂತದ ಭದ್ರತಾ ವ್ಯವಸ್ಥೆಯನ್ನು ದಾಟಿಕೊಂಡು ಬಂದಿದ್ದ ಆತ್ಮಹತ್ಯಾ ಬಾಂಬರ್, ಮಸೀದಿಯಲ್ಲಿ ಪ್ರಾರ್ಥನೆ ವೇಳೆಯೇ ಸ್ಫೋಟಿಸಿಕೊಂಡಿದ್ದ. ಈ ಸಂದರ್ಭದಲ್ಲಿ ಸುಮಾರು 400ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು. ಅಫ್ಘಾನಿಸ್ತಾನದಲ್ಲಿ ಕಳೆದ ಆಗಸ್ಟ್ ನಲ್ಲಿ ನಡೆದ ದಾಳಿ ವೇಳೆ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಕಮಾಂಡರ್ ಉಮರ್ ಖಾಲಿದ್ ಖುರಸಾನಿ ಮೃತಪಟ್ಟಿದ್ದು, ಅದಕ್ಕೆ ಪ್ರತೀಕಾರವಾಗಿ ಈ ಆತ್ಮಾಹುತಿ ದಾಳಿ ನಡೆಸಲಾಗಿದೆ ಎನ್ನಲಾಗ್ತಿದೆ.