ಈ ಸಮಸ್ಯೆ ಇದ್ರೆ ಅಪ್ಪಿತಪ್ಪಿಯೂ ಐಸ್‌ಕ್ರೀಂ ತಿನ್ನಬೇಡಿ! – ಐಸ್‌ ಕ್ರೀಂ ಬದಲು ಈ ಆಹಾರ ಸೇವಿಸಿ!

ಈ ಸಮಸ್ಯೆ ಇದ್ರೆ ಅಪ್ಪಿತಪ್ಪಿಯೂ ಐಸ್‌ಕ್ರೀಂ ತಿನ್ನಬೇಡಿ! – ಐಸ್‌ ಕ್ರೀಂ ಬದಲು ಈ ಆಹಾರ ಸೇವಿಸಿ!

ಬೇಸಿಗೆಯಲ್ಲಿ ಐಸ್‌ಕ್ರೀಂ ತಿನ್ನುವುದು ಬಹುತೇಕರಿಗೆ ಇಷ್ಟವಾದರೂ, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ತಿನ್ನದಿರುವುದೇ ಉತ್ತಮ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಕಾರಣವಿಷ್ಟೇ, ಐಸ್‌ಕ್ರೀಂನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಕೊಬ್ಬು ಮತ್ತು ಕ್ಯಾಲೊರಿಗಳು ಇರುವುದರಿಂದ ಇದು ಕೆಲ ರೋಗಗಳಲ್ಲಿ ಆರೋಗ್ಯ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಸಾಮಾನ್ಯವಾಗಿ ಮಧುಮೇಹ ಇರುವವರಿಗೆ ಐಸ್‌ಕ್ರೀಂ ಕಡಿಮೆ ಪ್ರಮಾಣದಲ್ಲಿ ಮಾತ್ರ ಸೇವಿಸಲು ಸಲಹೆ ನೀಡಲಾಗುತ್ತದೆ. ಆದರೆ ಡಯಾಬಿಟಿಸ್ ಇರುವವರು ಮಾತ್ರವಲ್ಲದೆ ಇನ್ನಿತರ ಆರೋಗ್ಯ ಸಮಸ್ಯೆ ಇದ್ದಾಗಲೂ ಕೂಡ ಐಸ್‌ಕ್ರೀಂ ತಿನ್ನಬಾರದು. ಹಾಗಾದರೆ ಯಾವ ಆರೋಗ್ಯ ಸಮಸ್ಯೆ ಇದ್ದಾಗ ಐಸ್‌ಕ್ರೀಂ ತಿನ್ನುವುದು ಒಳ್ಳೆಯದಲ್ಲ.

ಇದನ್ನೂ ಓದಿ: ಪದೇ ಪದೆ ಮರೆಯುತ್ತಿದ್ದೀರಾ? – ಇದು ಸಾಮಾನ್ಯ ಅಲ್ಲ.. ಎಚ್ಚರ ತಪ್ಪಿದ್ರೆ ಅನಾಹುತ ಫಿಕ್ಸ್!‌

ಯಾವ ರೀತಿಯ ಆರೋಗ್ಯ ಸಮಸ್ಯೆ ಇದ್ದಾಗ ಐಸ್‌ಕ್ರೀಂ ತಿನ್ನಬಾರದು?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಫ್ಯಾಟಿ ಲಿವರ್, ಅತಿಯಾದ ತೂಕ, ಹೈ ಕೊಲೆಸ್ಟ್ರಾಲ್, ಲ್ಯಾಕ್ಟೋಸ್ ಇಂಟಾಲರೆನ್ಸ್ ಹಾಗೂ ಅಜೀರ್ಣ ಸಮಸ್ಯೆಗಳಿರುವವರೂ ಐಸ್‌ಕ್ರೀಂ ಸೇವನೆಯಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ. ಏಕೆಂದರೆ ಫ್ಯಾಟಿ ಲಿವರ್ ಇರುವವರಲ್ಲಿ ಹೆಚ್ಚು ಸಕ್ಕರೆ ಮತ್ತು ಕೊಬ್ಬಿನ ಆಹಾರ ಲಿವರ್ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು. ಅತಿಯಾದ ತೂಕ ಹೊಂದಿರುವವರಲ್ಲಿ ಐಸ್‌ಕ್ರೀಂನ ಹೆಚ್ಚುವರಿ ಕ್ಯಾಲೊರಿಗಳು ತೂಕವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಜೊತೆಗೆ ಹೈ ಕೊಲೆಸ್ಟ್ರಾಲ್ ಇರುವವರಿಗೆ ಹೆಚ್ಚು ಫ್ಯಾಟ್ ಇರುವ ಆಹಾರ ಹೃದಯದ ಆರೋಗ್ಯಕ್ಕೂ ಹಾನಿಕಾರಕವಾಗಬಹುದು. ಲ್ಯಾಕ್ಟೋಸ್ ಇಂಟಾಲರೆನ್ಸ್ ಇರುವವರು ಐಸ್‌ಕ್ರೀಂ ಸೇವಿಸಿದರೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್, ಜಜ್ಜು ಸಮಸ್ಯೆ ಕಾಣಿಸಬಹುದು. ಅಜೀರ್ಣ ಅಥವಾ ಆಸಿಡಿಟಿ ಸಮಸ್ಯೆ ಇರುವವರಲ್ಲಿ ತಣ್ಣನೆಯ ಮತ್ತು ಭಾರವಾದ ಆಹಾರ ಅಸ್ವಸ್ಥತೆಯನ್ನು ಹೆಚ್ಚಿಸಬಹುದು. ಐಸ್‌ಕ್ರೀಂ ಹೆಚ್ಚು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದು, ತೂಕ ಏರಿಕೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು. ಕೆಲವರಿಗೆ ಹೊಟ್ಟೆನೋವು, ಗ್ಯಾಸ್ಟ್ರಿಕ್ ಮತ್ತು ಆಸಿಡಿಟಿ ಹೆಚ್ಚಾಗುವ ಸಾಧ್ಯತೆ ಇದೆ.

ಉತ್ತಮ ಪರ್ಯಾಯಗಳು ಯಾವುವು?

ಐಸ್‌ಕ್ರೀಂ ಬದಲು ಮನೆಯಲ್ಲೇ ತಯಾರಿಸಿದ ಮೊಸರು, ಸಕ್ಕರೆ ರಹಿತ ಸ್ಮೂದಿ, ತಾಜಾ ಹಣ್ಣು ಅಥವಾ ಫ್ರೋಜನ್ ಯೋಗರ್ಟ್ ಉತ್ತಮ ಆಯ್ಕೆಯಾಗಬಹುದು. ಜೊತೆಗೆ ಎಳೆನೀರು, ಮಜ್ಜಿಗೆ ಮತ್ತು ಹಣ್ಣಿನ ತಂಪು ಪಾನೀಯಗಳು ಬೇಸಿಗೆಯಲ್ಲಿ ದೇಹಕ್ಕೆ ತಂಪು ಹಾಗೂ ಹೈಡ್ರೇಶನ್ ನೀಡಲು ಸಹಾಯಕವಾಗುತ್ತವೆ.

Shwetha M

Leave a Reply

Your email address will not be published. Required fields are marked *