ಪದೇ ಪದೇ ಹೇರ್‌ ಸ್ಪಾ ಮಾಡಿಸುತ್ತೀರಾ? – ಅಂದ ಹೆಚ್ಚುತ್ತೆ ಅಂತ ಮೈ ಮರೆತ್ರೆ ನಿಮ್ಮ ಆರೋಗ್ಯಕ್ಕೆ ಕುತ್ತು!

ಪದೇ ಪದೇ ಹೇರ್‌ ಸ್ಪಾ ಮಾಡಿಸುತ್ತೀರಾ? – ಅಂದ ಹೆಚ್ಚುತ್ತೆ ಅಂತ ಮೈ ಮರೆತ್ರೆ ನಿಮ್ಮ ಆರೋಗ್ಯಕ್ಕೆ ಕುತ್ತು!

ಬ್ಯೂಟಿ ಪಾರ್ಲರ್ ಹಾಗೂ ಹೇರ್ ಸಲೂನ್ ಗೆ ಹೋಗಿ ಅನೇಕರು, ಹೇರ್ ಸ್ಪಾ.. ಹೇರ್ ಕಟ್, ಹೇರ್ ವಾಶ್, ಹೆಡ್ ಮಸಾಜ್ ಮಾಡಿಸಿಕೊಳ್ತಾರೆ. ಚರ್ಮ ಹಾಗೂ ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳುವ ಜೊತೆಗೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಬ್ಯೂಟಿ ಸಲೂನ್ ಗೆ ಹೋಗ್ತಾರೆ. ಬ್ಯೂಟಿ ಸಲೂನ್ ಸೌಂದರ್ಯ ಕಾಪಾಡಲು ನೆರವಾಗುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.  ಆದ್ರೆ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಮಾರಣಾಂತಿಕ, ಗಂಭೀರ ಖಾಯಿಲೆಗಳಿಗೂ  ಕಾರಣವಾಗಬಹುದು. ಯಾಕಂದ್ರೆ ಹೇರ್ ವಾಶ್ ಮಾಡಿಸ್ತಾ, ವಿಶ್ರಾಂತಿ ಪಡಿತಾ ಇರೋವಾಗ್ಲೇ ಕೆಲವರಿಗೆ ಅಸ್ವಸ್ಥತೆ ಎದುರಾಗಬಹುದು. ಇದು ಸ್ಟ್ರೋಕ್ ಗೂ ಕಾರಣವಾಗಬಹುದು ಅನ್ನೋ ಬೆಚ್ಚಿಬೀಳಿಸುವ ಸಂಗತಿಯೊಂದನ್ನ ಸಂಶೋಧನೆಯೊಂದು ಹೊರಹಾಕಿದೆ. ಇದಕ್ಕೆ ಕಾರಣ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್. ಈ  ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ಏನು ಅನ್ನೋದನ್ನ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸೇಫ್ ಸಿಟಿ ಯೋಜನೆಯ CCTV ಕ್ಯಾಮೆರಾಗಳಿಗೇ ಸೇಫ್ಟಿ ಇಲ್ಲ! –ಅತ್ಯಾಧುನಿಕ ಕ್ಯಾಮೆರಾಗಳೆಲ್ಲಾ ಏನಾಯ್ತು?

ಬ್ಯೂಟಿ ಪಾರ್ಲರ್ ಅಥವಾ ಸಲೂನ್ ಸ್ಟ್ರೋಕ್ ಎನ್ನುವುದು ಅಪರೂಪದ ಆರೋಗ್ಯ ಸಮಸ್ಯೆ. ಅದು ಸೌಂದರ್ಯ ಚಿಕಿತ್ಸೆಗಳ ಸಮಯದಲ್ಲಿ ಅಥವಾ ನಂತರ ಸಂಭವಿಸುವಂತದ್ದು. ಕುತ್ತಿಗೆ ಮಸಾಜ್  ಸಮಯದಲ್ಲಿ ಇದ್ದಕ್ಕಿದ್ದಂತೆ ಸಂಭವಿಸಬಹುದು. ಕೆಲವೊಮ್ಮೆ ಈ ಮಸಾಜ್ ಗಳು ಮೆದುಳಿಗೆ ರಕ್ತ ಪೂರೈಕೆಯನ್ನು ಕಡಿಮೆ ಮಾಡುತ್ತವೆ. ಇದ್ರಿಂದ ಮೆದುಳಿನ ಕೆಲವು ಪ್ರದೇಶಗಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಮೊದಲಿಗೆ 1993ರಲ್ಲಿ ಈ ಸಮಸ್ಯೆ ತಿಳಿದು ಬಂದಿತ್ತು. ಒಬ್ಬ ಮಹಿಳೆ ಪಾರ್ಲರ್ನಲ್ಲಿ ಹೇರ್ ಸ್ಪಾ ಮಾಡಿಕೊಂಡ ತರ ಅವರಲ್ಲಿ ಸಮಸ್ಯೆ ಕಂಡು ಬಂದಿದ್ದಾಗಿ ದಿ ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಷಿಯೇಷನ್ ಹೇಳಿದೆ.  ಇದಾದ ನಂತರ ಸಲೂನ್ ನಲ್ಲಿ ತಲೆ ವಾಶ್ ಮಾಡಿಕೊಂಡು ಸ್ಟ್ರೋಕ್ ಗೆ ಒಳಗಾದ ಕೆಲ ಮಹಿಳೆಯರ ಮೇಲೆ ಅಧ್ಯಯನ ಮಾಡಲಾಗಿದೆ. ಈ ಅಧ್ಯಯನದ ವರದಿ ಆಧರಿಸಿ ಅದ್ರ ಲಕ್ಷಣಗಳನ್ನು ನೋಡೋದಾದ್ರೆ ,ಮುಖ, ಕಾಲು ಅಥವಾ ತೋಳುಗಳ ಭಾಗದಲ್ಲಿ ಮರಗಟ್ಟುವಿಕೆ, ತಲೆತಿರುಗುವಿಕೆ, ಅಸ್ಪಷ್ಟ ಮಾತು ಅಥವಾ ಮಾತನಾಡಲು ತೊಂದರೆ, ಪದಗಳನ್ನು ಗ್ರಹಿಸುವಲ್ಲಿ ತೊಂದರೆ, ತೀವ್ರ ಮತ್ತು ನಿರಂತರ ತಲೆನೋವು ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಇನ್ನು ಸಲೂನ್ ನಲ್ಲಿ ಕೂದಲು ವಾಶ್ ಮಾಡಿಸಿಕೊಳ್ಳುವ ಭಂಗಿ ಭಿನ್ನವಾಗಿರುತ್ತದೆ. ಮನೆಯಲ್ಲಿ ತಲೆ ಸ್ನಾನ ಮಾಡಿದಂತೆ ಸಲೂನ್ ನಲ್ಲಿ ಮಾಡೋದಿಲ್ಲ. ಕತ್ತು ಹಿಂದಕ್ಕೆ ಭಾಗಿರುತ್ತದೆ. ಇದು ಸ್ಟ್ರೋಕ್ ಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದರ ಜೊತೆಗೆ ಕುತ್ತಿಗೆಯ ಮೇಲೆ ಬೀಳುವ ತಣ್ಣೀರು ಅಥವಾ ದೋಷಯುಕ್ತ ಮಸಾಜ್ ತಂತ್ರಗಳು ಇದಕ್ಕೆ ಕಾರಣವಾಗುತ್ತವೆ.

ಸಲೂನ್ ಸ್ಟ್ರೋಕ್ ಈಗಾಗಲೇ ಅನಾರೋಗ್ಯಕ್ಕೆ ಒಳಗಾಗಿರುವ ಅಥವಾ ಕೆಲ ಖಾಯಿಲೆಯಿಂದ ಬಳಲುತ್ತಿರುವ ಜನರನ್ನು ಹೆಚ್ಚು ಕಾಡುತ್ತದೆ. ಮಧುಮೇಹಿಗಳು. ತೀವ್ರ ರಕ್ತದೊತ್ತಡದಿಂದ ಬಳಲುವ ಜನ, ಹಿಂದೆ ಮೆದುಳಿನ ಸ್ಟ್ರೋಕ್ ಗೆ ಒಳಗಾಗಿದ್ದವರು, ಹೃದಯ ರೋಗದಿಂದ ಬಳಲುತ್ತಿರುವವರು ಹಾಗೂ ಬೊಜ್ಜಿರುವ ವ್ಯಕ್ತಿಗಳಲ್ಲದೆ, ಅತಿ ಹೆಚ್ಚು ಧೂಮಪಾನ ಮಾಡುವ ವ್ಯಕ್ತಿಗಳಲ್ಲಿ ಈ ಅಪಾಯ ಹೆಚ್ಚಿರುತ್ತದೆ.

ಸಲೂನ್ ಸ್ಟ್ರೋಕ್ ಅಪಾಯದಿಂದ ಪಾರಾಗುವ ದೃಷ್ಟಿಯಿಂದ ತಲೆ ತೊಳೆಯುವಾಗ ಕುತ್ತಿಗೆಯನ್ನು ಹಠಾತ್ ಬಾಗಿಸುವ ಪ್ರಯತ್ನಕ್ಕೆ ಹೋಗಬಾರದು. ಸಲೂನ್ನಲ್ಲಿ ಅತಿಯಾಗಿ ಪ್ರೆಶರ್ ಹಾಕಿ ಮಸಾಜ್  ಮಾಡಿಸಿಕೊಳ್ಳಬೇಡಿ.  ಕೂದಲನ್ನು ತೊಳೆಯಲು ಯಾವಾಗಲೂ ಉಗುರು ಬೆಚ್ಚಗಿನ ನೀರನ್ನು ಮಾತ್ರ ಬಳಸಿ. ಯಾವುದೇ ಗಂಭೀರ ಖಾಯಿಲೆ ಇದ್ದಲ್ಲಿ ಸಲೂನ್ ವಾಶ್ ಒಳ್ಳೆಯದಲ್ಲ.

Shwetha M

Leave a Reply

Your email address will not be published. Required fields are marked *