ಬೆಂಗಳೂರು To ಮುಂಬೈ, ಮೈಸೂರು To ದೆಹಲಿ ಹೊಸ ರೈಲು! – ಎಲ್ಲೆಲ್ಲಿ ನಿಲ್ದಾಣಗಳು ಇರಲಿದೆ? ಟಿಕೆಟ್‌ ದರ ಎಷ್ಟು?

ಬೆಂಗಳೂರು To ಮುಂಬೈ, ಮೈಸೂರು To ದೆಹಲಿ ಹೊಸ ರೈಲು! – ಎಲ್ಲೆಲ್ಲಿ ನಿಲ್ದಾಣಗಳು ಇರಲಿದೆ? ಟಿಕೆಟ್‌ ದರ ಎಷ್ಟು?

ಬೆಂಗಳೂರು ಟು ಮುಂಬೈ ನಡುವಿನ ಎಕ್ಸ್‌ಪ್ರೆಸ್‌ ರೈಲು ಸಂಚಾರ ರಾಜ್ಯದ ಜನತೆಯ ಬಹುದಿನಗಳ ಕನಸಾಗಿತ್ತು. ಇದೀಗ ಕಡೆಗೂ  ಬೆಂಗಳೂರು ಟು ಮುಂಬೈ ನಡುವಿನ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಹಸಿರು ನಿಶಾನೆ ಬಿದ್ದಿದೆ. ಹೌದು, ಬೆಂಗಳೂರು- ಮುಂಬೈ ನಡುವೆ ಹೊಸ ಎಕ್ಸ್ಪ್ರೆಸ್ ರೈಲಿಗೆ ಬೈಯ್ಯಪ್ಪನಹಳ್ಳಿ ಬಳಿಯ SMVT ರೈಲ್ವೇ ನಿಲ್ದಾಣದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಈ ರೈಲು ವಾರಕ್ಕೆ ಎರಡು ಬಾರಿ ಸಂಚಾರ ಇರಲಿದೆ. ಇದರ ನಡುವೆ ಮೈಸೂರಿನಿಂದ ದೆಹಲಿಗೆ ಸಹ ಹೊಸ ರೈಲು ಸೇವೆ ಸಹ ಆರಂಭವಾಗಲಿದೆ.

ಇದನ್ನೂ ಓದಿ: ದುಬಾರೆ ದುರಂತಕ್ಕೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ! – 2019ರಲ್ಲೇ ಎಚ್ಚರಿಕೆ ನೀಡಿದ್ದ ತಜ್ಞರ ಸಮಿತಿ!

ಬೆಂಗಳೂರು ಟು ಮುಂಬೈಗೆ ಸಂಚರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಭಾರತೀಯ ರೈಲ್ವೆ ಇಲಾಖೆ ಈ ಹೊಸ ರೈಲನ್ನು ಆರಂಭಿಸಿದೆ. ಹೊಸ ಬೆಂಗಳೂರು To ಮುಂಬೈ ಎಕ್ಸ್‌ಪ್ರೆಸ್‌ ರೈಲು ಸರ್‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮುಂಬೈನ ಲೋಕಮಾನ್ಯ ತಿಲಕ್‌ ಟರ್ಮಿನಲ್‌ಗೆ ವಾರಕ್ಕೆರಡು ಬಾರಿ ಸಂಚರಿಸಲಿದೆ. ಶನಿವಾರ ಮತ್ತು ಮಂಗಳವಾರದಂದು ಬೆಂಗಳೂರಿನಿಂದ ಮುಂಬೈಗೆ, ಭಾನುವಾರ ಮತ್ತು ಬುಧವಾರ ಮುಂಬೈನಿಂದ ಬೆಂಗಳೂರಿಗೆ ಸಂಚಾರ ನಡೆಸಲಿದೆ

ಎಲ್ಲೆಲ್ಲಿ ನಿಲ್ದಾಣಗಳು ಇರಲಿದೆ?

ಈ ರೈಲು ಬೆಂಗಳೂರಿನ ಎಸ್‌ಎಂವಿಟಿ, ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಮಹಾರಾಷ್ಟ್ರದ ಪುಣೆಯಲ್ಲಿ ನಿಲುಗಡೆ ಇರಲದೆ. ಈ ಹೊಸ ಎಕ್ಸ್‌ಪ್ರೆಸ್‌ ರೈಲು ಸದ್ಯ 22 ಗಂಟೆ ಪ್ರಯಾಣ ಅವಧಿಯನ್ನು ಇನ್ನಷ್ಟು ಕಡಿಮೆ ಮಾಡಲಿದೆ. ಇನ್ನು, ರೈಲು 17 ಕೋಚ್ಗಳನ್ನು ಹೊಂದಿದ್ದು, ಒಂದು ಎಸಿ 2-ಟೈರ್, ನಾಲ್ಕು ಎಸಿ 3-ಟೈರ್, 6 ಸ್ಲೀಪರ್ ಮತ್ತು 4 ಸಾಮಾನ್ಯ ದರ್ಜೆಯ ಬೋಗಿಗಳನ್ನು ಒಳಗೊಂಡಿದೆ.

ಬೆಂಗಳೂರು – ಮುಂಬೈ ರೈಲಿನ ಟಿಕೆಟ್‌ ದರ

ಇನ್ನು, ಹೊಸದಾಗಿ ಆರಂಭವಾಗಿರುವ ಈ ಬೆಂಗಳೂರು ಟು ಮುಂಬೈ ಎಕ್ಸ್‌ಪ್ರೆಸ್‌ ರೈಲು ಟಿಕೆಟ್‌ ದರ ನೋಡುವುದಾದರೆ,ಸ್ಲೀಪರ್ – 580 ರೂ., 3 ಎಸಿ – 1510 ರೂ., 2 ಎಸಿ – 2155 ರೂ. ಇರಲಿದೆ.

ಬೆಂಗಳೂರು To ಮುಂಬೈ ವೇಳಾಪಟ್ಟಿ

ಇನ್ನು, ರೈಲು ಎಸ್‌ಎಂವಿಟಿ ಬೆಂಗಳೂರಿಂದ ರಾತ್ರಿ 8.35ಕ್ಕೆ ಹೊರಟು ಲೋಕಮಾನ್ಯ ತಿಲಕ್ ಟರ್ಮಿನಲ್‌ – ರಾತ್ರಿ 8:40ಕ್ಕೆ ತಲುಪಲಿದೆ. ಅದೇ ರೀತಿ ಮುಂಬೈಯಿಂದ ಬೆಂಗಳೂರಿಗೆ ಹಿಂದಿರುಗುವ ರೈಲು ರಾತ್ರಿ 11.15ಕ್ಕೆ ಹೊರಟು ಮರುದಿನ ರಾತ್ರಿ 10:30ಕ್ಕೆ ಬೆಂಗಳೂರಿನ ಎಸ್‌ಎಂವಿಟಿ ಬೆಂಗಳೂರು ರೈಲು ನಿಲ್ದಾಣವನ್ನು ತಲುಪಲಿದೆ.

ಮುರ್ಡೇಶ್ವರ- ಬೆಂಗಳೂರು ರೈಲು

ಮುಂದಿನ ಜುಲೈ 31ರಿಂದ ಆಗಸ್ಟ್ 2ರ ವರೆಗೆ (3ದಿನ) ಸಂಚರಿಸುವ ಮುರ್ಡೇಶ್ವರ- ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಹಾಸನ ಜಂಕ್ಷನ್, ನೆಲಮಂಗಲ, ಚಿಕ್ಕ ಬಾಣಾವರ, ಯಶವಂತಪುರ ಎ ಕಬಿನ್, ಲೊಟ್ಟೆಗೊಳ್ಳನಹಳ್ಳಿ, ಬಾಣಸವಾಡಿ, ವಿಶ್ವೇಶ್ವರಯ್ಯ ಟರ್ಮಿನಲ್ ಮೂಲಕ ಸಂಚರಿಸಲಿದೆ. ಈ ಮೂಲಕ ಹೊಳೆನರಸಿಪುರ, ಕೃಷ್ಣರಾಜನಗರ, ಮೈಸೂರು ಜಂಕ್ಷನ್, ಮಂಡ್ಯ, ರಾಮನಗರಂ, ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್ ಹಾಗೂ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಿಲುಗಡೆ ಇರುವುದಿಲ್ಲ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಮೈಸೂರು ಟು ದೆಹಲಿ ರೈಲು ಸಂಚಾರ

ಮೈಸೂರು ಮತ್ತು ಹಜರತ್ ನಿಜಾಮುದ್ದೀನ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲು ನಿರ್ಧರಿಸಲಾಗಿದ್ದು, ಇದು ಮೈಸೂರು ಜನತೆಗೆ ಸಂಸತದ ಸುದ್ದಿಯಾಗಿದೆ. ರೈಲು ಸಂಖ್ಯೆ 06261 ಮೈಸೂರಿನಿಂದ ಮೇ 21ರ ಗುರುವಾರ ಬೆಳಿಗ್ಗೆ 4 ಗಂಟೆಗೆ ತನ್ನ ಪಯಣ ಆರಂಭಿಸಲಿದೆ. ಬಳಿಕ ಮೇ 23ರ ಶನಿವಾರ ಬೆಳಿಗ್ಗೆ 5:45ಕ್ಕೆ ದೆಹಲಿಯ ಹಜರತ್ ನಿಜಾಮುದ್ದೀನ್ ತಲುಪಲಿದೆ. ಅದೇ ರೀತಿ, ಮರು ಪ್ರಯಾಣಕ್ಕೆ ರೈಲು ಸಂಖ್ಯೆ 06262 ಮೇ 24ರ ಭಾನುವಾರ ರಾತ್ರಿ 9 ಗಂಟೆಗೆ ಹೊರಡಲಿದ್ದು, ಮೇ 26ರ ಮಂಗಳವಾರ ರಾತ್ರಿ ಮೈಸೂರಿಗೆ ವಾಪಸ್ ಬರಲಿದೆ.

Shwetha M

Leave a Reply

Your email address will not be published. Required fields are marked *