RCB ಎದುರಾಳಿ GT Or SRH? – ಟಾಪ್-2 MAGIC ಟಿಕೆಟ್ ಯಾರಿಗೆ?
ನೆಟ್ ರನ್ ರೇಟ್ ಅಸಲಿಯಾಟ ಶುರು!

RCB ಎದುರಾಳಿ GT Or SRH? – ಟಾಪ್-2 MAGIC ಟಿಕೆಟ್ ಯಾರಿಗೆ?ನೆಟ್ ರನ್ ರೇಟ್ ಅಸಲಿಯಾಟ ಶುರು!

ಪ್ಲೇ ಆಫ್ಸ್​ಗೆ ಸೆಲೆಕ್ಟ್ ಆಗಿರೋ ತಂಡಗಳ ಮೇನ್ ಟಾರ್ಗೆಟ್ ಟಾಪ್-2 ಟಿಕೆಟ್ಸ್.. ಈ ರೇಸ್​ನಲ್ಲಿ ಆರ್​ಸಿಬಿ 95 ಪರ್ಸೆಂಟ್ ಕ್ವಾಲಿಫೈಯರ್ 1 ಟಿಕೆಟ್ ಗಿಟ್ಟಿಸಿಕೊಳ್ಳುತ್ತೆ. ಅಟ್ ದಿ ಸೇಮ್ ಟೈಂ ಗುಜರಾತ್ ಮತ್ತು ಹೈದ್ರಾಬಾದ್​​ಗೆ ಈಕ್ವಲ್ ಚಾನ್ಸ್ ಇದೆ. ಅಷ್ಟೇ ಮಿರಾಕಲ್ ನಡೆದ್ರೆ ಆರ್​ಆರ್​ ಕೂಡ ಬರಬಹುದು.

ಇದನ್ನೂ ಓದಿ : ಕಣ್ಣಲ್ಲಿ ನೀರು.. ಮೈದಾನದಲ್ಲಿ ಹೆಜ್ಜೆ – ಸದ್ದಿಲ್ಲದೆ ಹೊರ ನಡೆದರಾ ಧೋನಿ?

ಬೆಂಗಳೂರು.. ಗುಜರಾತ್.. ಹೈದ್ರಾಬಾದ್.. 2026ರ ಐಪಿಎಲ್​ನ ಪ್ಲೇ ಆಫ್ಸ್ ಟಿಕೆಟ್ಸ್ ಗಿಟ್ಟಿಸಿಕೊಂಡು ಸೇಫ್ ಝೋನ್​ನಲ್ಲಿದ್ದಾರೆ. ರಾಜಸ್ಥಾನ ತಂಡ 4ನೇ ಟಿಕೆಟ್​ಗಾಗಿ ಫ್ರಂಟ್ ಲೈನ್​ನಲ್ಲಿದ್ದು ನೆಕ್ಸ್​ಟ್ ಮ್ಯಾಚ್ ಗೆದ್ರೆ ಡೈರೆಕ್ಟ್ ಆಗಿ ಕ್ವಾಲಿಫೈ ಆಗ್ತಾರೆ. ಉಳಿದವ್ರೆಲ್ಲಾ ಟೂರ್ನಿಗೆ ಗುಡ್ ಬೈ ಹೇಳ್ತಾರೆ. ಒಂದ್ವೇಳೆ ಆರ್​ಆರ್ ಸೋತ್ರೆ ಮತ್ತೆ ಅಂಕ, ನೆಟ್​ರನ್​ ರೇಟ್ ಲೆಕ್ಕಾಚಾರ ಇರುತ್ತೆ. ಆದ್ರೆ ಇಲ್ಲಿ ನಾಲ್ಕನೇ ಟಿಕೆಟ್ ಯಾರಿಗೆ ಅನ್ನೋದಕ್ಕಿಂತ ಟಾಪ್-2ನಲ್ಲಿ ಯಾರು ಫಿನಿಶ್ ಮಾಡ್ತಾರೆ ಅನ್ನೋದೇ ಈಗಿರೋ ಮಿಲಿಯನ್ ಡಾಲರ್ ಪ್ರಶ್ನೆ. ಈ ಲಿಸ್ಟ್​ನಲ್ಲಿ ಆರ್​ಸಿಬಿಗೆ ಹೆಚ್ಚಿನ ಅವಕಾಶ ಇದೆ. ಅಂಕಗಳ ಜೊತೆ ನೆಟ್ ರನ್ ರೇಟ್ ಕೂಡ ಟಾಪ್​ನಲ್ಲಿರೋದ್ರಿಂದ ಬೆಂಗಳೂರು ರೂಲ್ ಮಾಡ್ಬೋದು. ಅಥವಾ ಗುಜರಾತ್ & ಹೈದ್ರಾಬಾದ್ ಕೂಡ ಉಳಿದಿರೋ ಒಂದೊಂದು ಪಂದ್ಯಗಳಲ್ಲಿ ಬಿಗ್ ಮಾರ್ಜಿನ್​ನಲ್ಲಿ ಗೆದ್ರೆ ಟಾಪ್-2ಗೇರಬಹುದು.

ಟಾಪ್-3 ತಂಡಗಳಲ್ಲಿ ಫೈಟ್!

ತಂಡ                       ಅಂಕ                    ನೆಟ್ ರನ್ ರೇಟ್

ಬೆಂಗಳೂರು                 18                        +1.065

ಗುಜರಾತ್                   16                       +0.400

ಹೈದರಾಬಾದ್               16                       +0.350

ಇಲ್ಲಿ ಗುಜರಾತ್ ಹಾಗೇ ಹೈದ್ರಾಬಾದ್ ನಡುವೆ ನೆಟ್ ರನ್ ರೇಟ್ ತುಂಬಾ ದೊಡ್ಡ ವೇರಿಯೇಷನ್ ಅಂತೇನಿಲ್ಲ. ಹೀಗಾಗಿ ಮುಂದಿನ ಮ್ಯಾಚಲ್ಲಿ ಯಾರು ಎಷ್ಟು ಅಂತರದಿಂದ ಗೆಲ್ತಾರೆ ಅನ್ನೋದಷ್ಟೇ ಮುಖ್ಯವಾಗುತ್ತೆ. ಯಾಕಂದ್ರೆ ಅಂಕಗಳು ಸೇಮ್ ಇದ್ರೂ ನೆಟ್ ರನ್ ರೇಟ್ ಸ್ವಲ್ಪ ಜಾಸ್ತಿ ಇದ್ರೆ ಕ್ವಾಲಿಫೈಯರ್ 1 ಟಿಕೆಟ್ ಗಿಟ್ಟಿಸಿಕೊಳ್ಬೋದು.

ಅಂಕ & ರನ್ ರೇಟ್ ಆಟ!

ಹೈದ್ರಾಬಾದ್ ವಿರುದ್ಧ ಗೆದ್ರೆ 20 ಅಂಕ.. ಆರ್ ಸಿಬಿಗೆ ಟಾಪ್ 1 ಸ್ಥಾನ

ಹೈದ್ರಾಬಾದ್ ಗೆದ್ದರೆ ಆರ್ ​ಸಿಬಿ 18 ಅಂಕ, ಹೈದ್ರಾಬಾದ್ ಕೂಡ ಸೇಮ್

ಚೆನ್ನೈ ವಿರುದ್ಧ ಗುಜರಾತ್ ಕೊನೇ ಮ್ಯಾಚಲ್ಲಿ ಗೆದ್ದು ಬಂದ್ರೆ ಅವ್ರದ್ದೂ 18 ಅಂಕ

3 ತಂಡ.. 18 ಅಂಕ.. ಕ್ವಾಲಿಫೈಯರ್ 1 ಆಡೋಕೆ ನೆಟ್ ರನ್ ರೇಟ್ ಮುಖ್ಯ

ಆರ್ ​ಸಿಬಿ ನೆಟ್ ರನ್ ರೇಟ್ ಭರ್ಜರಿಯಾಗಿ ಇರೋದ್ರಿಂದ ನಂಬರ್ 1 ಸ್ಥಾನ

ಆದ್ರಿಲ್ಲಿ ಗುಜರಾತ್ ಮತ್ತು ಹೈದ್ರಾಬಾದ್​ಗೆ ಅಂಕ ಬಂದ್ರೂ ರನ್​ ರೇಟ್ ಮ್ಯಾಟ್ರ್ ಆಗುತ್ತೆ. ಒಂದು ವೇಳೆ ಇವ್ರು ಆರ್​ಸಿಬಿಯನ್ನ ಹಿಂದಿಕ್ಕಿ ಟಾಪ್-1 ಹಾಗೇ ಟಾಪ್-2ನಲ್ಲಿ ಕೂರಬೇಕು ಅಂದ್ರೆ ಮುಂದಿನ ಪಂದ್ಯಗಳಲ್ಲಿ ದಾಖಲೆಯ ಗೆಲುವು ಬೇಕಾಗುತ್ತೆ. ಮೊದ್ಲಿಗೆ ಗುಜರಾತ್ ತಂಡ ನೆಟ್ ರನ್​ರೇಟ್​ನಲ್ಲಿ ಆರ್​ಸಿಬಿಯನ್ನ ಹಿಂದಿಕ್ಕಬೇಕು ಅಂದ್ರೆ ಚೆನ್ನೈ ವಿರುದ್ಧದ ಮ್ಯಾಚಲ್ಲಿ ಎಷ್ಟು ರನ್ಸ್ ಅಥವಾ ಎಷ್ಟು ವಿಕೆಟ್ಸ್ ಅಂತರದಿಂದ ಗೆಲ್ಲಬೇಕು.

ಬೆಂಗಳೂರನ್ನು ಹಿಂದಿಕ್ಕುತ್ತಾ ಗುಜರಾತ್?

ಚೆನ್ನೈ ವಿರುದ್ಧ ಫಸ್ಟ್ ಬ್ಯಾಟಿಂಗ್ ಮಾಡಿದ್ರೆ 120+ ರನ್ ಅಂತರದ ಗೆಲುವು

ಚೇಸಿಂಗ್ ಮಾಡಿದ್ರೆ 85 ಅಥವಾ ಅದಕ್ಕಿಂತ ಹೆಚ್ಚಿನ ಎಸೆತ ಬಾಕಿ ಗೆಲುವು

ಸೋ ಚೆನ್ನೈ ವಿರುದ್ಧ ಗುಜರಾತ್ ಇಷ್ಟು ದೊಡ್ಡ ಅಂತರದಲ್ಲಿ ಗೆದ್ರೆ ಆರ್ ಸಿಬಿ ನೆಟ್ ರನ್ ರೇಟ್ ಹತ್ರ ಬರ್ಬೋದು. ಈ ಮ್ಯಾಜಿಕ್ ನಡೆಯೋದು ಕಷ್ಟ. ಯಾಕಂದ್ರೆ ಚೆನ್ನೈ ತಂಡ ಗುಜರಾತ್ ವಿರುದ್ಧ ಸೋತ್ರೂ ಇಷ್ಟೊಂದು ಹೀನಾಯವಾಗಿಯಂತೂ ಸೋಲಲ್ಲ. ಇದು ಗುಜರಾತ್ ಕಥೆ. ಇನ್ನು ಹೈದ್ರಾಬಾದ್ ಕಥೆ ಹೆಂಗಿದೆ. ನೆಕ್ಟ್ಸ್ ಮ್ಯಾಚಲ್ಲಿ ಆರ್​ಸಿಬಿಯನ್ನ ಸೋಲಿಸಿದ್ರೂ ನೆಟ್ ರನ್ ರೇಟ್ ಮ್ಯಾಚ್ ಮಾಡೋಕೆ ಎಷ್ಟು ಅಂತರದ ವಿಕ್ಟರಿ ಬೇಕು.

ಬೆಂಗಳೂರು ಹತ್ತಿರ ಬರುತ್ತಾ ಹೈದ್ರಾಬಾದ್?

ಕನಿಷ್ಠ 120 ಅಥವಾ ಅದಕ್ಕಿಂತ ಜಾಸ್ತಿ ರನ್ ಗಳ ಅಂತರದ ಗೆಲುವು

ಚೇಸಿಂಗ್ ಮಾಡಿದ್ರೆ 70 ಎಸೆತಗಳ ( 12 ಓವರ್) ಒಳಗೇ ಗೆಲುವು

ಹೈದ್ರಾಬಾದ್​ಗೂ ಕೂಡ ಆರ್​ಸಿಬಿ ನೆಟ್ ರನ್ ರೇಟ್ ಹತ್ತಿರಕ್ಕೆ ಬರೋದೂ ಕೂಡ ಕಷ್ಟವೇ. ಯಾಕಂದ್ರೆ ಆರ್​ಸಿಬಿಯನ್ನ ಸೋಲಿಸೋದೇ ಹೈದ್ರಾಬಾದ್ಗೆ ಇರೋ ದೊಡ್ಡ ಚಾಲೆಂಜ್. ಆಲ್ರೆಡಿ ಟೂರ್ನಿ ಓಪನಿಂಗ್ ಮ್ಯಾಚಲ್ಲೇ ಬೆಂಗಳೂರು ವಿರುದ್ಧ ಸೋತಿದ್ದಾರೆ. ಅಂತಾದ್ರಲ್ಲಿ ಇಷ್ಟು ದೊಡ್ಡ ಅಂತರದಲ್ಲಿ ಗೆಲ್ಲೋಕೆ ಚಾನ್ಸೇ ಇಲ್ಲ. ಸೋ ಅಲ್ಲಿಗೆ ಗುಜರಾತ್ ಮತ್ತು ಹೈದ್ರಾಬಾದ್ ನೆಕ್ಸ್​ಟ್ ಪಂದ್ಯಗಳನ್ನ ಗೆದ್ರೂ ಆರ್​ಸಿಬಿಯನ್ನ ಹಿಂದಿಕ್ಕೋಕೆ ಚಾನ್ಸೇ ಇಲ್ಲ. ಸೋ ಆರ್​ಸಿಬಿ ಕ್ವಾಲಿಫೈಯರ್ 1 ಆಡೋದನ್ನ ಯಾರಿಂದಲೂ ತಪ್ಪಿಸೋಕೆ ಆಗಲ್ಲ. ಆದ್ರೆ ಗುಜರಾತ್ ಮತ್ತು ಹೈದ್ರಾಬಾದ್​ಗೆ ಈಗ ಅಟ್​ಲೀಸ್ಟ್ 2ನೇ ಸ್ಥಾನನಾದ್ರೂ ಸಿಗ್ಲಿ ಅಂತಿದ್ದಾರೆ. ಯಾಕಂದ್ರೆ ರಾಜಸ್ಥಾನ ಕೂಡ ಇವ್ರಿಗೆ ಫೈಟ್ ಕೊಡೋಕೆ ರೆಡಿಯಾಗಿದ್ದಾರೆ. ಗುಜರಾತ್ ಮತ್ತು ಹೈದ್ರಾಬಾದ್ ಮುಂದಿನ ಪಂದ್ಯಗಳಲ್ಲಿ ಸೋತ್ರೆ 16 ಅಂಕಗಳಲ್ಲೇ ಉಳ್ಕೊಳ್ತಾರೆ. ಆಗ ರಾಜಸ್ಥಾನ ಮುಂದಿನ ಮ್ಯಾಚಲ್ಲಿ ಮುಂಬೈ ವಿರುದ್ಧ ಗೆದ್ರೆ ಅವ್ರೂ 16 ಅಂಕ ಪಡೀತಾರೆ. ಆಗ ಟಾಪ್-2 ಟಿಕೆಟ್​ಗಾಗಿ ಈ ಮೂವರ ನಡುವೆ ನೆಟ್ ರನ್ ರೇಟ್ ವಾರ್ ಸ್ಟಾರ್ಟ್ ಆಗುತ್ತೆ. ಹಾಗಂತ ಈ ಮೂವರ ನಡುವೆ ನೆಟ್ ರನ್ ರೇಟ್​ನಲ್ಲಿ ಅಂತಾ ದೊಡ್ಡ ಅಂತರ ಏನೂ ಇಲ್ಲ. ಜಿಟಿ ಮತ್ತು ಎಸ್​ಆರ್​ಹೆಚ್ ಅಕ್ಕಪಕ್ಕದಲ್ಲೇ ಇದ್ದಾರೆ. ರಾಜಸ್ಥಾನ ಸ್ವಲ್ಪ ದೂರ ಅನ್ಸಿದ್ರೂ ಮುಂಬೈ ವಿರುದ್ಧ ಒಂದು ಬಿಗ್ ಮಾರ್ಜಿನ್ ವಿಕ್ಟರಿ ಏನ್ ಬೇಕಾದ್ರೂ ಮಾಡ್ಬಹುದು. ಸೋ ಈಗ ಬೆಂಗಳೂರು ತಲೆಬಿಸಿ ಮಾಡಿಕೊಳ್ಳೋ ಅವಶ್ಯಕತೆನೇ ಇಲ್ಲ. ಆದ್ರೆ ಉಳಿದಿರೋ ತಂಡಗಳಿಗೆ ತಲೆಬಿಸಿಯಂತೂ ತಪ್ಪಿದ್ದಲ್ಲ.

Shantha Kumari

Leave a Reply

Your email address will not be published. Required fields are marked *