RCB ಓಪನರ್ಸ್ ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ್? – ಲಕ್ನೋ ನಾಯಕ ರಿಷಭ್ ಪಂತ್ ಮಾತಿಗೆ ಆಕ್ರೋಶ

RCB ಓಪನರ್ಸ್ ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ್? – ಲಕ್ನೋ ನಾಯಕ ರಿಷಭ್ ಪಂತ್ ಮಾತಿಗೆ ಆಕ್ರೋಶ

ಆರ್‌ಸಿಬಿ ಈ ಬಾರಿ ಕೂಡಾ ಚಾಂಪಿಯನ್ ಆಗಲು ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಮತ್ತೊಂದೆಡೆ ಮಾತಿನ ಮೇಲೆ ಕಂಟ್ರೋಲ್ ತಪ್ಪಿದ ರಿಷಭ್ ಪಂತ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ:ಸೋಲಿನ ನೋವಲ್ಲಿ ನಾಲಗೆ ಹರಿಬಿಟ್ಟ ರಿಷಭ್ ಪಂತ್ – ಲಕ್ನೋ ಫ….ಗ್.. ತಂಡ ಎಂದು ಲೈವ್‌ನಲ್ಲೇ ಅಶ್ಲೀಲ ಪದ ಬಳಕೆ

RR ತಂಡದ ವಿರುದ್ಧ ಸೋತ ಬೇಸರದಲ್ಲಿದ್ದ ಲಕ್ನೋ ನಾಯಕ ರಿಷಭ್ ಪಂತ್ ತಮ್ಮ ಮಾತಿನಲ್ಲೂ ಕಂಟ್ರೋಲ್ ತಪ್ಪಿದ್ದಾರೆ. ಪಂತ್ ಲೈವ್‌ನಲ್ಲೇ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಪ್ರಸಿದ್ಧ ನಿರೂಪಕ ಇಯಾನ್ ಬಿಷಪ್ ಅವರು ತಂಡದ ಕಳಪೆ ಪ್ರದರ್ಶನದ ಕುರಿತು ಪಂತ್ ಜೊತೆ ಮಾತನಾಡಿದಾಗ ತೀವ್ರ ಭಾವುಕರಾದ ಪಂತ್, ನಾವು ಕೆಟ್ಟ ತಂಡವಾಗುವುದಿಲ್ಲ. ನಾವು ನಿಜಕ್ಕೂ ಉತ್ತಮ ಫ…ಗ್ ತಂಡ ಎಂದಿದ್ದಾರೆ. ನೇರ ಪ್ರಸಾರದಲ್ಲೇ ರಿಷಭ್ ಪಂತ್ ಅಸಭ್ಯ ಪದ ಬಳಸಿದ್ದನ್ನು ಕೇಳಿ ನಿರೂಪಕ ಇಯಾನ್ ಬಿಷಪ್ ಶಾಕ್ ಆದರು. ತಕ್ಷಣವೇ ಅವರು ಸಂದರ್ಶನವನ್ನು ಕೊನೆಗೊಳಿಸಿದ್ರು.

ರಿಷಭ್ ಪಂತ್ ಅಶ್ಲೀಲ ಪದಬಳಕೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಮೆಗಾ ಹರಾಜಿನಲ್ಲಿ ಬರೋಬ್ಬರಿ ₹27 ಕೋಟಿ ನೀಡಿ ಲಕ್ನೋ ಸೂಪರ್ ಜೈಂಟ್ಸ್​ ಫ್ರಾಂಚೈಸಿ ಪಂತ್ ಅವರನ್ನು ಖರೀದಿಸಿತ್ತು. ಆದರೆ ನಾಯಕನಾಗಿ ಮತ್ತು ಬ್ಯಾಟರ್ ಆಗಿ ಅವರು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಸರಣಿ ಸೋಲುಗಳಿಂದ ಇಡೀ ತಂಡದ ಮೇಲೆ ಮಾಧ್ಯಮಗಳು ಮತ್ತು ಅಭಿಮಾನಿಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಈ ಒತ್ತಡ ತಾಳಲಾರದೆ ಪಂತ್ ಲೈವ್ ನಲ್ಲೇ ಅಸಭ್ಯ ಪದ ಬಳಸಿದ್ದು ಕ್ರೀಡಾ ಜಗತ್ತಿನಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ ನೀಡಿದ್ದ 221 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟುವಾಗ ರಾಜಸ್ಥಾನ್ ರಾಯಲ್ಸ್ ಒತ್ತಡಕ್ಕೆ ಸಿಲುಕಬಹುದು ಎಂಬ ಲೆಕ್ಕಾಚಾರ ಹಾಕಲಾಗಿದ್ದು, ಆದರೆ, ಇದನ್ನೆಲ್ಲಾ ಉಲ್ಟಾ ಮಾಡಿ ತೋರಿಸಿದ್ದು ಬಾಸ್ ಬೇಬಿ. 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಮೆಗಾ ಸಿಕ್ಸರ್‌ಗಳನ್ನ ಸಿಡಿಸಿದ ವೈಭವ್,  93 ರನ್ ಬಾರಿಸಿದ್ರು. ಈ ಸೀಸನ್‌ನಲ್ಲಿ 13 ಇನ್ನಿಂಗ್ಸ್‌ಗಳಿಂದ ಒಟ್ಟು 579 ರನ್ ಗಳಿಸುವ ಮೂಲಕ ವೈಭವ್ ಸೂರ್ಯವಂಶಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಜೊತೆಗೆ ಆರೆಂಜ್ ಕ್ಯಾಪ್ ವೈಭವ್ ಪಾಲಾಗಿದೆ.

ಲಕ್ನೋ ಬೌಲರ್‌ಗಳನ್ನು ದಂಡಿಸಿದ ವೈಭವ್ ಸೂರ್ಯವಂಶಿ ಅರ್ಧಶತಕ ಸಿಡಿಸಿದ ಮೇಲೆ ಸ್ಪೆಷಲ್ ಸೆಲೆಬ್ರೇಷನ್ ಮಾಡಿದರು. ಇನ್ನು ಅರ್ಧಶತಕದ ಬಳಿಕ ಅವರು ಮಾಡಿದ ವಿಶಿಷ್ಟ ಕೈ ಸನ್ನೆಯ ಆಚರಣೆಯ ಬಗ್ಗೆ ಕೇಳಿದಾಗ, “ಅದಕ್ಕೆ ಯಾವುದೇ ವಿಶೇಷ ಅರ್ಥವಿಲ್ಲ. ನಾನು ಪ್ರತಿ ಪಂದ್ಯದಲ್ಲೂ ಹೊಸದನ್ನು ಪ್ರಯತ್ನಿಸುತ್ತೇನೆ, ಅಷ್ಟೇ,” ಎಂದು ನಗುತ್ತಾ ಉತ್ತರಿಸಿದ್ದರು. ಆ ಬಳಿಕ ಡ್ರೆಸ್ಸಿಂಗ್ ರೂಮ್​ನಲ್ಲಿ ಅದು ತಾಯಿಯ ಹೆಸರಿನ ಮೊದಲಾಕ್ಷರ. A ಫಾರ್  ಆರತಿ ಎಂದು ತೋರಿಸಿದ್ದೆ ಎಂದು ತಿಳಿಸಿದ್ದಾರೆ.

ಒಂದೇ ಸೀಸನ್‌ನಲ್ಲಿ 50 ಸಿಕ್ಸ್ ಸಿಡಿಸಿದ ಮೊದಲ ಭಾರತೀಯ ಹಾಗೂ ಅತಿ ಕಿರಿಯ ಬ್ಯಾಟರ್ ಎಂಬ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗಿದೆ. ಐಪಿಎಲ್​ವೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕ್ರಿಸ್ ಗೇಲ್. ವೆಸ್ಟ್ ಇಂಡೀಸ್ ದಾಂಡಿಗ 2012 ರಲ್ಲಿ ಬರೋಬ್ಬರಿ 59 ಸಿಕ್ಸ್ ಸಿಡಿಸಿ ಈ ದಾಖಲೆ ನಿರ್ಮಿಸಿದ್ದರು

ಪ್ಲೇ ಆಫ್​ ಗೆ ಈಗಾಗಲೇ RCB, GT, ಮತ್ತು SRH ತಂಡಗಳು ಎಂಟ್ರಿ ಪಡೆದಿವೆ. ಉಳಿದಿರುವುದು ಕೇವಲ ಒಂದೇ ಒಂದು ಸ್ಥಾನ, ಆದರೆ ಈ ಸ್ಥಾನಕ್ಕಾಗಿ 5 ತಂಡಗಳು ರೇಸ್‌ನಲ್ಲಿವೆ. ರಾಜಸ್ಥಾನ್​ ರಾಯಲ್ಸ್ ಟೂರ್ನಿಯಲ್ಲಿ 7ನೇ ಗೆಲುವು ಸಾಧಿಸಿತು. 13 ಪಂದ್ಯಗಳನ್ನಾಡಿರುವ ರಾಯಲ್ಸ್ 6 ರಲ್ಲಿ ಸೋಲು ಕಂಡು, 14 ಅಂಕಗಳಿಸಿದೆ. ತನ್ನ ಕೊನೆಯ ಪಂದ್ಯವನ್ನ ಭಾನುವಾರ  ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದ್ದು, ಆ ಪಂದ್ಯವನ್ನ ಗೆದ್ದರೆ ರಾಜಸ್ಥಾನ್ ರಾಯಲ್ಸ್ ನೇರವಾಗಿ, ಯಾವುದೇ ತಂಡದ ಫಲಿತಾಂಶ ಲೆಕ್ಕಿಸದೇ ಪ್ಲೇ ಆಫ್​ ಪ್ರವೇಶಿಸಲಿದೆ.

RCB ತಂಡ ಈ ಬಾರಿ ಕೂಡಾ ಚಾಂಪಿಯನ್ ಆಗಲು ಮಾಸ್ಟರ್ ಪ್ಲಾನ್ ಮಾಡಿಕೊಳ್ತಿದೆ. ಬೆಥೆಲ್ ಅವರನ್ನು ಆರ್​​​ಸಿಬಿ ಆಡುವ ಹನ್ನೊಂದರ ಬಳಗದಿಂದ ಕೈಬಿಡಲು ಯೋಜನೆ ಹಾಕಿಕೊಂಡಿದೆ. ಬೆಥಲ್ ಬದಲಿಗೆ ವೆಂಕಟೇಶ್ ಅಯ್ಯರ್ ಅಥವಾ ದೇವದತ್ ಪಡಿಕ್ಕಲ್ ಅವರನ್ನು ಆರಂಭಿಕರಾಗಿ ಕಣಕ್ಕೀಳಿಸುವ ಸಾಧ್ಯತೆಯಿದೆ. ಅಯ್ಯರ್ ಎಡಗೈ ಬ್ಯಾಟರ್ ಆಗಿದ್ದು, ಅವರಿಗೆ ಐಪಿಎಲ್‌ನಲ್ಲಿ ಅಪಾರ ಅನುಭವವಿದೆ. ಸ್ಪೋಟಕ ಬ್ಯಾಟಿಂಗ್ ಮತ್ತು ಇನ್ನಿಂಗ್ಸ್‌ ಎರಡರಲ್ಲೂ ಆಡಬಲ್ಲರು. ಹೀಗಾಗಿ ಕೊಹ್ಲಿ ಜೊತೆ ವೆಂಕಿ ಓಪನರ್ ಆಗಿ ಕಣಕ್ಕಿಳಿದರೂ ಅಚ್ಚರಿಯಿಲ್ಲ.

ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ಇನ್ನು ಎರಡು ಪಂದ್ಯಗಳನ್ನ ಆಡಲಿದೆ. ಆದರೆ, ಇದೀಗ ತಂಡದಿಂದ ಮತ್ತಿಬ್ಬರು ಆಟಗಾರರು ಇಂಜುರಿಯಿಂದ ಹೊರಗುಳಿದಿದ್ದಾರೆ. ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಮತ್ತು ಆಲ್‌ರೌಂಡರ್ ರಾಜ್ ಅಂಗದ್ ಇಂಜುರಿಗೊಳಗಾಗಿದ್ದಾರೆ. ಈ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ಎರಡು ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಮುಂಬೈ ಮ್ಯಾನೇಜ್‌ಮೆಂಟ್ ತಿಳಿಸಿದೆ. ಮುಂಬೈ ತಂಡ ಬುಧವಾರ ಕೆಕೆಆರ್ ವಿರುದ್ಧ ಮತ್ತು ಮೇ 24 ರಂದು ರಾಜಸ್ಥಾನ ವಿರುದ್ಧ ಕಣಕ್ಕಿಳಿಯಲಿದೆ.

ಸಿಎಸ್‌ಕೆ ಪರ ಈ ಸೀಸನ್‌ಲ್ಲಿ ಎಂ.ಎಸ್ ಧೋನಿ ಕಣಕ್ಕಿಳಿದಿಲ್ಲ. ಆದರೆ, ಈ ಬಗ್ಗೆ ಸುರೇಶ್ ರೈನಾ ಒಂದು ಅಪ್‌ಡೇಟ್ ಕೊಟ್ಟಿದ್ದಾರೆ. “ನೀನು 2026ರ ಐಪಿಎಲ್‌ಗೆ ಮಿಸ್ಡ್ ಕಾಲ್ ಕೊಟ್ಟಿದ್ದೀಯಾ, ಅದು ಲೆಕ್ಕಕ್ಕೆ ಬರುವುದಿಲ್ಲ. ಮುಂದಿನ ವರ್ಷ ನೀನು ಮರಳಿ ಬರಲೇಬೇಕು ಎಂದು ನಾನು ಧೋನಿಗೆ ಹೇಳಿದ್ದೀನಿ” ಎಂದು ರೈನಾ ತಿಳಿಸಿದ್ದಾರೆ. ನನ್ನ ಈ ಮಾತಿಗೆ ಧೋನಿ ಪ್ರತಿಕ್ರಿಯೆ ಕೂಡಾ ನೀಡಿದ್ದಾರೆ. ದೇಹ ಸ್ವಲ್ಪ ದಣಿದಿದೆ, ಆದರೆ ನಾನು ಇದನ್ನು ಒಪ್ಪಿಲ್ಲ ಎಂದು ಧೋನಿ ಹೇಳಿದ್ದಾರೆ ಎಂದು ಸುರೇಶ್ ರೈನಾ ತಿಳಿಸಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನದ ತಂಡದಲ್ಲಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಹೆಸರಿದೆ. ಈ ಇಬ್ಬರಿಗೂ ಬಿಸಿಸಿಐ ಪ್ಲೇಯಿಂಗ್ ಇಲೆವೆನ್​​ನಲ್ಲಿ ಆಡಲು ಷರತ್ತು ವಿಧಿಸಿದೆ. ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಸರಣಿಯ ಆರಂಭದ ಮೊದಲು ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಿದೆ. ಈ ಪರೀಕ್ಷೆಯ ನಂತರವೇ ಅವರ ಭಾಗವಹಿಸುವಿಕೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.

Sulekha

Leave a Reply

Your email address will not be published. Required fields are marked *