ಪಂತ್ ಪಡೆಗೆ ಸೂರ್ಯವಂಶಿ ಸಿಡಿಲು – 15ರ ಬಾಲಕನಿಗೆ ತಲೆ ಬಾಗಿದ ಲಕ್ನೋ
1 ಟಾಸ್ಕ್.. RRಗೆ ಪ್ಲೇ ಆಫ್ಸ್ ಟಿಕೆಟ್!

ಮಸ್ಟ್ ವಿನ್ ಮ್ಯಾಚ್ಗಾಗಿ ಫೀಲ್ಡಿಗಿಳಿದಿದ್ದ ರಾಜಸ್ಥಾನ ರಾಯಲ್ಸ್ ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ಗೆದ್ದು ಪ್ಲೇ ಆಫ್ಸ್ ರೇಸ್ನಲ್ಲಿ ಉಳ್ಕೊಂಡಿದೆ. ವೈಭವ್ ಸೂರ್ಯವಂಶಿಯವ್ರ ಅಬ್ಬರದ ಬ್ಯಾಟಿಂಗ್ಗೆ ಪಂತ್ ಪಡೆಯ ಬೌಲರ್ಗಳು ಸರೆಂಡರ್ ಆಗ್ಲೇಬೇಕಾಯ್ತು. ಪ್ರೆಶರ್ ಗೇಮ್ಗಳಲ್ಲಿ ಸೂರ್ಯವಂಶಿ ಆಡಲ್ಲ ಅಂದವರ ಬಾಯಿ ಮುಚ್ಚಿಸುವಂತೆ ಗರ್ಜಿಸಿದ ಸಿಡಿಲಮರಿ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲೇ ಚರಿತ್ರೆಯನ್ನೂ ಬರೆದ್ರು. 15 ವರ್ಷದ ಬಾಲಕ ಬೆಂಕಿ ಚೆಂಡಿನಂತೆ ಸುಡ್ತಿದ್ರೆ ಪ್ರಚಂಡ ಬೌಲರ್ಗಳೂ ನಿರುತ್ತರರಾಗಿದ್ರು.
ಇದನ್ನೂ ಓದಿ : RCB, GT & SRHಗೆ ಸಿಕ್ಕಾಯ್ತು ಕ್ವಾಲಿಫೈ ಟಿಕೆಟ್ – 4ನೇ ಸ್ಥಾನಕ್ಕಾಗಿ 5 ಟೀಂ ಫೈಟ್
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಕ್ನೋ ಫರ ಮಿಚೆಲ್ ಮಾರ್ಷ್ ಮತ್ತು ಜೋಶ್ ಇಂಗ್ಲಿಸ್ 100 ಪ್ಲಸ್ ರನ್ಗಳ ಜೊತೆಯಾಟವಾಡಿದ್ರು. ಮಿಚೆಲ್ ಮಾರ್ಷ್ 57 ಎಸೆತಗಳಲ್ಲಿ 96 ರನ್ ಗಳಿಸಿದರು. ಜೋಶ್ ಇಂಗ್ಲಿಸ್ 29 ಎಸೆತಗಳಲ್ಲಿ 60 ರನ್ ಗಳಿಸಿದರು. ರಿಷಭ್ ಪಂತ್ 23 ಎಸೆತಗಳಲ್ಲಿ 35 ರನ್ ಗಳಿಸಿದರು. ಪರಿಣಾಮ ಲಕ್ನೋ 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 220 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನವು 19.1 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 225 ರನ್ ಕಲೆಹಾಕಿ 7 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಅಷ್ಟಕ್ಕೂ ರಾಜಸ್ಥಾನದ ಗೆಲುವಿನ ಹೀರೋ ವೈಭವ್ ಸೂರ್ಯವಂಶಿ.
ಆರೆಂಜ್ ಕ್ಯಾಪ್ & ಭಾರತೀಯನ ಅತೀ ಹೆಚ್ಚು ಸಿಕ್ಸರ್ ದಾಖಲೆ!
ಯಶಸ್ವಿ ಜೈಸ್ವಾಲ್ ಒಂದ್ಕಡೆ ಸ್ಪೋಟಕ ಇನ್ನಿಂಗ್ಸ್ ಆಡ್ತಿದ್ರೆ ಸೂರ್ಯವಂಶಿ ಸ್ಲೋಆಗಿ ಇನ್ನಿಂಗ್ಸ್ ಆರಂಭಿಸಿದ್ರು. ಬಾಲ್ ಎ ರನ್ ಅನ್ನೋ ಥರ ಮೊದಲ 12 ಬಾಲ್ಗಳನ್ನ ಫೇಸ್ ಮಾಡಿದ್ರು. ಆದ್ರೆ ಯಾವಾಗ ಜೈಸ್ವಾಲ್ ವಿಕೆಟ್ ಬಿತ್ತೋ ಅಲ್ಲಿಂದ ಸೂರ್ಯವಂಶಿ ಸಿಡಿದು ನಿಂತಿದ್ರು. ಮುಂದಿನ 28 ಬಾಲಲ್ಲೇ 80+ ರನ್ಸ್. 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್ 38 ಎಸೆತಗಳಲ್ಲಿ 93 ರನ್ ಬಾರಿಸಿದ್ರು. 10 ಭರ್ಜರಿ ಸಿಕ್ಸರ್ ಹಾಗೂ 7 ಫೋರ್ಗಳು ಮೂಡಿಬಂದವು. 7 ರನ್ಗಳಿಂದ ಶತಕ ವಂಚಿತರಾದ್ರು. ಇನ್ನು ಈ ಸೀಸನ್ನಲ್ಲಿ 50+ ಸಿಕ್ಸ್ ಸಿಡಿಸಿ ಆವೃತ್ತಿಯೊಂದರಲ್ಲಿ 50+ ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಭರ್ಜರಿ ದಾಖಲೆಯೊಂದನ್ನು ವೈಭವ್ ಸೂರ್ಯವಂಶಿ ತಮ್ಮದಾಗಿಸಿಕೊಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 100 ಸಿಕ್ಸರ್ ಬಾರಿಸಿದ ಜಗತ್ತಿನ ಏಕೈಕ ಕಿರಿಯ ಆಟಗಾರ ಈತ. ಈ ಅದ್ಭುತ ಪ್ರದರ್ಶನದಿಂದಾಗಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ. ಹಾಗೇ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದಾರೆ. ಲಕ್ನೋ ವಿರುದ್ಧದ ಗೆಲುವಿನ ಮೂಲಕ ರಾಜಸ್ಥಾನ ಸದ್ಯ ಪ್ಲೇ ಆಫ್ಸ್ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಪಂದ್ಯವನ್ನ ಗೆದ್ದರೆ 16 ಅಂಕಗಳೊಂದಿಗೆ ಟಾಪ್-4ಗೆ ಸೆಲೆಕ್ಟ್ ಆಗಲಿದೆ. ಈಗ ಮುಂಬೈ ವಿರುದ್ಧವೂ ಸೂರ್ಯವಂಶಿ ಸಿಡಿದಿದ್ದೇ ಆದ್ರೆ ರಾಜಸ್ಥಾನಕ್ಕೆ ನಾಲ್ಕನೇ ಟಿಕೆಟ್ ಪಕ್ಕಾ ಆಗಲಿದೆ. ಯಾಕಂದ್ರೆ ಉಳಿಯ ಯಾವುದೇ ತಂಡಗಳಿಗೂ 15+ ಅಂಕ ಪಡೆಯೋಕೆ ಸಾಧ್ಯನೇ ಇಲ್ಲ. ಹೀಗಾಗಿ ರಾಜಸ್ಥಾನಕ್ಕೆ ಮುಂದಿನ ಪಂದ್ಯ ಗೆಲ್ಲೋದೊಂದೇ ಗುರಿ.

ನೋಡಿರಿ

