ಪ್ರೀತಿಸಿದ ಯುವತಿ ಮದುವೆಗೆ ಒಪ್ಪಿಲ್ಲ ಎಂದು ಹೈಟೆನ್ಷನ್ ಕಂಬ ಏರಿ ಕುಳಿತ ಭೂಪ! – ಪಾಗಲ್‌ ಪ್ರೇಮಿ ಕತೆ ಏನಾಯ್ತು?

ಪ್ರೀತಿಸಿದ ಯುವತಿ ಮದುವೆಗೆ ಒಪ್ಪಿಲ್ಲ ಎಂದು ಹೈಟೆನ್ಷನ್ ಕಂಬ ಏರಿ ಕುಳಿತ ಭೂಪ! – ಪಾಗಲ್‌ ಪ್ರೇಮಿ ಕತೆ ಏನಾಯ್ತು?

ಪ್ರೀತಿ ಕುರುಡು.. ಪ್ರೀತಿಗೆ ಕಣ್ಣಿಲ್ಲ ಅಂತಾರೆ.. ಪ್ರೀತಿಸಿದವರು ಬಿಟ್ಟು ಹೋದ್ರೆ ಆಗೋ ನೋವು ಅಷ್ಟಿಷ್ಟಲ್ಲ.. ಬ್ರೇಕ್‌ಅಪ್‌ ಬಳಿಕ ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ. ಇದೀಗ ಇಲ್ಲೊಂದು ಕಡೆ, ಪ್ರೀತಿಸಿದ ಹುಡುಗಿ ಕೈಕೊಟ್ಟು ಹೋಗಿದ್ದಕ್ಕೆ ಪಾಗಲ್‌ ಪ್ರೇಮಿಯೊಬ್ಬ ಹೈಟೆನ್ಷನ್ ಕಂಬ ಏರಿದ್ದಾನೆ.

ಇದನ್ನೂ ಓದಿ: ಇಟಲಿಯಲ್ಲೂ ಪ್ರಧಾನಿ ಮೋದಿ ಹವಾ! – ವೆಲ್‌ಕಮ್ ಟು ರೋಮ್ ಮೈ ಫ್ರೆಂಡ್ ಎಂದು ಸ್ವಾಗತ ಕೋರಿದ ಜಾರ್ಜಿಯಾ ಮೆಲೋನಿ!

ಈ ಘಟನೆ ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ. ಸೋಮಶೇಖರ್ ಹೈಟೆನ್ಷನ್ ಕಂಬ ಹತ್ತಿದ ಪಾಗಲ್‌ ಪ್ರೇಮಿ. ಚಿನ್ನಯ್ಯನಪಾಳ್ಯ ನಿವಾಸಿಯಾದ ಸೋಮಶೇಖರ್ ಕಳೆದ ಮೂರು ವರ್ಷಗಳಿಂದ ಯುವತಿಯನ್ನ ಪ್ರೀತಿಸುತ್ತಿದ್ದ. ಇತ್ತೀಚಿಗೆ ಯುವತಿ ಮದುವೆಗೆ ನಿರಾಕರಿಸಿದ್ದಾಳೆ. ಲವ್ ಬ್ರೇಕಪ್ ಮಾಡಿಕೊಳ್ಳಲು ಯುವತಿ ಮುಂದಾದ ಹಿನ್ನೆಲೆ ಸೋಮಶೇಖರ್ ಮನೆಯ ಶೀಟ್ ಹೊಡೆದು ದಾಂಧಲೆ ಮಾಡಿದ್ದಾನೆ. ಬಳಿಕ ಮನೆ ಸಮೀಪದ ಹೈಟೆನ್ಷನ್ ಕಂಬ ಹತ್ತಿ ಹುಡುಗಿ ಬರೋವರೆಗೆ ಕೆಳಗೆ ಇಳಿಯುವುದಿಲ್ಲ ಎಂದಿದ್ದಾನೆ.

ಸೋಮಶೇಖರ್‌ ಹೈಟೆನ್ಷನ್ ಕಂಬ ಏರಿ ಕುಳಿತಿರುವುದನ್ನ ನೋಡಿದ ಸ್ಥಳೀಯರು ಆನೇಕಲ್‌ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪೊಲೀಸರು ಮನವೊಲಿಸಿದರೂ ಪಾಗಲ್ ಪ್ರೇಮಿ ಕೆಳಗಿಳಿಯಲಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ತಂಡ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಗ್ರಾಮಾಸ್ಥರು ಜಮಾಯಿಸಿದ್ದು, ಯುವಕನನ್ನ ಕೆಳಗಿಳಿಸಿದ್ದಾರೆ.

Shwetha M