ಇಟಲಿಯಲ್ಲೂ ಪ್ರಧಾನಿ ಮೋದಿ ಹವಾ! – ವೆಲ್‌ಕಮ್ ಟು ರೋಮ್ ಮೈ ಫ್ರೆಂಡ್ ಎಂದು ಸ್ವಾಗತ ಕೋರಿದ ಜಾರ್ಜಿಯಾ ಮೆಲೋನಿ!

ಇಟಲಿಯಲ್ಲೂ ಪ್ರಧಾನಿ ಮೋದಿ ಹವಾ! – ವೆಲ್‌ಕಮ್ ಟು ರೋಮ್ ಮೈ ಫ್ರೆಂಡ್ ಎಂದು ಸ್ವಾಗತ ಕೋರಿದ ಜಾರ್ಜಿಯಾ ಮೆಲೋನಿ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಟಲಿಯ ರಾಜಧಾನಿ ರೋಮ್‌ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ರೋಮ್‌ಗೆ ತಲುಪಿದ ಬೆನ್ನಲ್ಲೇ ಇಟಲಿ ಪ್ರಧಾನಿ ಆತ್ಮೀಯ ಸ್ವಾಗತ ಕೋರಿದ್ದಾರೆ. ತನ್ನ ಸ್ನೇಹಿತ ಪ್ರಧಾನಿ ಮೋದಿ ಜೊತೆಗಿನ ಸೆಲ್ಫಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಪ್ರಧಾನಿ ಮೆಲೋನಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸೇಫ್ ಸಿಟಿ ಯೋಜನೆಯ CCTV ಕ್ಯಾಮೆರಾಗಳಿಗೇ ಸೇಫ್ಟಿ ಇಲ್ಲ! –ಅತ್ಯಾಧುನಿಕ ಕ್ಯಾಮೆರಾಗಳೆಲ್ಲಾ ಏನಾಯ್ತು?

ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಮೋದಿಗೆ ಆತ್ಮೀಯ ಸ್ವಾಗತ ಕೋರಿರುವ ಇಟಲಿ ಪ್ರಧಾನಿ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರೋಮ್‌ಗೆ ಬಂದಿಳಿದರು. ‘ರೋಮ್‌ಗೆ ಸ್ವಾಗತ, ನನ್ನ ಸ್ನೇಹಿತ’ ಎಂದು ಬರೆದುಕೊಂಡಿದ್ದಾರೆ.

ಇಟಲಿಯ ರೋಮ್‌ನ ಐತಿಹಾಸಿಕ ಕೇಂದ್ರದಲ್ಲಿರುವ ಕೊಲೊಸಿಯಮ್ ಎಂಬ ಪ್ರಾಚೀನ ಆಂಫಿಥಿಯೇಟರ್‌ನಲ್ಲಿ ಮೋದಿ ಜೊತೆಗಿನ ಫೋಟೊವನ್ನು ಮೆಲೋನಿ ಹಂಚಿಕೊಂಡಿದ್ದಾರೆ. ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ಪ್ರಾಚೀನ ಆಂಫಿಥಿಯೇಟರ್ ಆಗಿದೆ. ಫ್ಲೇವಿಯನ್ ರಾಜವಂಶಸ್ಥರಿಂದ 80 AD ಯಲ್ಲಿ ಪೂರ್ಣಗೊಂಡ ಈ ಸಾಂಪ್ರದಾಯಿಕ ಕಲ್ಲು ಮತ್ತು ಕಾಂಕ್ರೀಟ್ ಅಂಡಾಕಾರದ ರಚನೆಯು ಗ್ಲಾಡಿಯೇಟೋರಿಯಲ್ ಸ್ಪರ್ಧೆಗಳು ಮತ್ತು ಸಾರ್ವಜನಿಕ ಪ್ರದರ್ಶನಗಳನ್ನು ವೀಕ್ಷಿಸಲು ಒಟ್ಟುಗೂಡಿದ 80,000 ಪ್ರೇಕ್ಷಕರಿಗೆ ಸ್ಥಳಾವಕಾಶ ಕಲ್ಪಿಸಿತ್ತು.

ವೈರಲ್ ಆಗಿರುವ ಈ ಫೋಟೋಗೆ 10 ಲಕ್ಷಕ್ಕಿಂತಲೂ ಹೆಚ್ಚು ವೀವ್ಸ್‌, ಸುಮಾರು 60,000 ಲೈಕ್‌ಗಳು ಮತ್ತು 2,000 ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಪ್ರಧಾನಿ ಮೋದಿ ಅವರು ಐದು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ. ಇಟಲಿಗೂ ಮೊದಲು ನಾರ್ವೆ, ಯುಎಇ, ನೆದರ್ಲ್ಯಾಂಡ್ಸ್ ಮತ್ತು ಸ್ವೀಡನ್‌ಗೆ ಭೇಟಿ ನೀಡಿದ್ದರು.

ಈ ನಡುವೆ ಪ್ರಧಾನಿ ಮೋದಿಯವರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದು, ರೋಮ್‌ಗೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೆಲೋನಿ ಜೊತೆ ಭೋಜನ ಕೂಟದಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಬಳಿಕ ಐತಿಹಾಸಿಕ ಕೊಲೊಸಿಯಂಗೆ ಭೇಟಿ ನೀಡಿದೆವು. ವಿವಿಧ ಮಹತ್ವದ ವಿಷಯಗಳ ಕುರಿತು ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಂಡೆವು. ಇಂದು ನಡೆಯಲಿರುವ ಮಾತುಕತೆಗಾಗಿ ಎದುರು ನೋಡುತ್ತಿದ್ದೇನೆ. ಭಾರತ–ಇಟಲಿ ಸ್ನೇಹವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಚರ್ಚೆಯನ್ನು ಮುಂದುವರಿಸಲಿದ್ದೇವೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ರೋಮ್‌ಗೆ ತಲುಪುತ್ತಿದ್ದಂತೆಯೇ ಅನಿವಾಸಿ ಭಾರತೀಯರು ಭರ್ಜರಿ ಸ್ವಾಗತ ಕೋರಿದ್ದಾರೆ. ಭಾರತೀಯ ಧ್ವಜಗಳನ್ನು ಹಿಡಿದು ಮೋದಿ ಮೋದಿ ಘೋಷಣೆ ಕೂಗಿದ ಅನಿವಾಸಿ ಭಾರತೀಯರು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ಇಟಲಿಯಲ್ಲಿ, ಪ್ರಧಾನಿ ಮೋದಿ ಅವರು ಬುಧವಾರ ಭಾರತಕ್ಕೆ ತೆರಳುವ ಮೊದಲು ಅಧ್ಯಕ್ಷ ಸೆರ್ಗಿಯೊ ಮ್ಯಾಟರೆಲ್ಲಾ ಅವರನ್ನು ಭೇಟಿ ಮಾಡಲಿದ್ದಾರೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇತರೆ ರಾಜತಾಂತ್ರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಅವರು 2024 ಜೂನ್‌ನಲ್ಲಿ ಇಟಲಿಯಲ್ಲಿ ನಡೆದಿದ್ದ ಜಿ 7 ಶೃಂಗಸಭೆಯಲ್ಲಿ ಕೊನೆ ಬಾರಿ ಪಾಲ್ಗೊಂಡಿದ್ದರು.

Shwetha M

Leave a Reply

Your email address will not be published. Required fields are marked *