ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳು – ಸರ್ಕಾರದಿಂದ ಸಮಿತಿ ರಚನೆ

ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳು – ಸರ್ಕಾರದಿಂದ ಸಮಿತಿ ರಚನೆ

ತುಳುಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಕರ್ನಾಟಕ ಸರ್ಕಾರವು ಮಹತ್ವದ ಕ್ರಮ ತೆಗೆದುಕೊಂಡಿದ್ದು, ಡಾ ಮೋಹನ್ ಆಳ್ವ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ. ಎರಡು ವಾರಗಳೊಳಗೆ ಈ ಸಂಬಂಧ ವರದಿ ನೀಡುವಂತೆ ಸೂಚಿಸಲಾಗಿದೆ. ಈ ವಿಚಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರಿಸಬೇಕೆಂದು ಕರಾವಳಿ ಕರ್ನಾಟಕ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು.

ಇದನ್ನೂ ಓದಿ:  ಯುವಕನಿಗೆ ಸಾನ್ಯಾ ಐಯ್ಯರ್ ಕಪಾಳ ಮೋಕ್ಷ – ಪುತ್ತೂರಿನಲ್ಲಿ ನಡೆದಿದ್ದೇನು?

ತುಳು ಭಾಷೆಯು ಪಂಚದ್ರಾವಿಡ ಭಾಷೆಗಳಲ್ಲಿ ಒಂದು ಎಂದು ಭಾಷಾಶಾಸ್ತ್ರಜ್ಞರು ಹಲವು ವರ್ಷಗಳಿಂದ ವಾದಿಸುತ್ತಿದ್ದರು. ‘ಪಂಚದ್ರಾವಿಡ ಭಾಷೆಗಳಲ್ಲಿ ಒಂದಾ ಗಿರುವ ತುಳು ಭಾಷೆಗೆ 2,600 ವರ್ಷ ಗಳ ದೀರ್ಘ ಇತಿಹಾಸವಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಿ ಭಾಷೆ ಗಳು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿವೆ. ಆದರೆ, ತುಳು ಭಾಷೆಗೆ ಮಾತ್ರ ಇನ್ನೂ ಕೇಂದ್ರ ಸರ್ಕಾರದಿಂದ ಮಾನ್ಯತೆಯು ದೊರೆತಿಲ್ಲ. ತುಳು ಭಾಷೆಗೆ ತೋರಿರುವ ತಾತ್ಸಾರ ಮನೋಭಾವದಿಂದ ಭಾಷೆಯ ಬೆಳವಣಿಗೆಗೆ ತೊಡಕಾಗಿದೆ’ ಎಂದು ಹಲವರು ಒತ್ತಾಯಿಸಿದ್ದರು.

suddiyaana