RCB, GT & SRHಗೆ ಸಿಕ್ಕಾಯ್ತು ಕ್ವಾಲಿಫೈ ಟಿಕೆಟ್ – 4ನೇ ಸ್ಥಾನಕ್ಕಾಗಿ 5 ಟೀಂ ಫೈಟ್
ಯಾರಿಗೆಲ್ಲಾ ರನ್ ರೇಟ್ ವಿಘ್ನ?

RCB, GT & SRHಗೆ ಸಿಕ್ಕಾಯ್ತು ಕ್ವಾಲಿಫೈ ಟಿಕೆಟ್ – 4ನೇ ಸ್ಥಾನಕ್ಕಾಗಿ 5 ಟೀಂ ಫೈಟ್ಯಾರಿಗೆಲ್ಲಾ ರನ್ ರೇಟ್ ವಿಘ್ನ?

2026ರ ಐಪಿಎಲ್ ಪ್ಲೇ ಆಫ್ಸ್​ ರೇಸ್​ನಲ್ಲಿ ಟಾಪ್-3 ಟಿಕೆಟ್ಸ್ ಬುಕ್ ಆಯ್ತು. ನಂಬರ್ 1ನಲ್ಲಿ ರಾಯಲ್ ಆಗೇ ಲಗ್ಗೆ ಇಟ್ಟಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು.. ನಂಬರ್ 2ನಲ್ಲಿ ಗುಜರಾತ್, ಇನ್ನು ನಂಬರ್ 3ನಲ್ಲಿ ಹೈದ್ರಾಬಾದ್. ಸೋ ಅಲ್ಲಿಗೆ 3 ತಂಡಗಳಿಗೆ ಕ್ವಾಲಿಫೈ ಆಗಿದ್ದಾಯ್ತು. ಆದ್ರೆ ಅಸಲಿ ಆಟ ಈಗ ಸ್ಟಾರ್ಟ್ ಆಗಿದೆ. ನಂಬರ್ 4 ಅಂದ್ರೆ ನಾಲ್ಕನೇ ಸ್ಥಾನಕ್ಕೆ ಒಂದೇ ಒಂದು ಟಿಕೆಟ್ ಉಳ್ಕೊಂಡಿದೆ. ಈ ಟಿಕೆಟ್​ಗಾಗಿ 5 ತಂಡಗಳ ನಡುವೆ ಫೈಟ್ ನಡೀತಿದೆ. ಪಾಯಿಂಟ್ಸ್ ಅಷ್ಟೇ ನೆಟ್ ರನ್ ರೇಟ್ ಈಗ ಮ್ಯಾಟ್ರ್ ಆಗೋ ಟೈಂ ಬಂದಿದೆ.

ಇದನ್ನೂ ಓದಿ : 10 ಪ್ಲೇ ಆಫ್ಸ್.. 4 ಫೈನಲ್.. 1 ಕಪ್ – RCBಗೆ ಕ್ಲೈಮ್ಯಾಕ್ಸ್ ಪಂದ್ಯಗಳೇ ಶಾಪ

19ನೇ ಸೀಸನ್ ಐಪಿಎಲ್​ ಇನ್ನೇನು ಕ್ಲೈಮ್ಯಾಕ್ಸ್​ಗೆ ಬಂದಾಯ್ತು. ಲೀಗ್ ಹಂತದಲ್ಲಿ ಉಳಿದಿರೋದು ಬೆರಳೆಣಿಕೆಯ ಪಂದ್ಯಗಳಷ್ಟೇ. ಮೇ 24 ಅಂದ್ರೆ ಇದೇ ಭಾನುವಾರ ಕೆಕೆಆರ್ ಮತ್ತು ಡಿಸಿ ಪಂದ್ಯದೊಂದಿಗೆ ಲೀಗ್ ಹಂತ ಮುಗಿಯುತ್ತೆ. ಆ ನಂತ್ರ ಪ್ಲೇಆಫ್ಸ್ ಬ್ಯಾಟಲ್. 10 ತಂಡಗಳಿಂದ ಸ್ಟಾರ್ಟ್ ಆದ ಹೈವೋಲ್ಟೇಜ್ ಫೈಟ್​ನಲ್ಲಿ 3 ತಂಡಗಳು ಅಧಿಕೃತವಾಗಿ ಪ್ಲೇಆಫ್ಸ್​ಗೆ ಕ್ವಾಲಿಫೈ ಆಗಿದ್ರೆ ಲಕ್ನೋ ಮತ್ತು ಮುಂಬೈ ತಂಡಗಳು ಅಧಿಕೃತವಾಗಿ ಪ್ಲೇ ಆಫ್ಸ್ ಸುತ್ತಿನಿಂದ ಹೊರಬಿದ್ದಿವೆ. ಉಳಿದಂತೆ ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕಾಗಿ 5 ಟೀಮ್​ಗಳು ಜಿದ್ದಾಜಿದ್ದಿಗೆ ಬಿದ್ದಿವೆ.

ಪಂದ್ಯ ಬಾಕಿ ಇದ್ದಂತೆಯೇ 3 ತಂಡಗಳು ಪ್ಲೇಆಫ್ಸ್ ಗೆ ಲಗ್ಗೆ!

ಚೆನ್ನೈ ಸೂಪರ್ ಕಿಂಗ್ ವಿರುದ್ಧ ಹೈದ್ರಾಬಾದ್ ತಂಡ ಗೆದ್ದ ಮೇಲೆ ಪಾಯಿಂಟ್ಸ್ ಪಟ್ಟಿಯಲ್ಲಿ ಒಂದು ಕ್ಲಾರಿಟಿ ಸಿಕ್ತು. ಅದಕ್ಕೂ ಮುನ್ನ ಆರ್​ಸಿಬಿ ಮಾತ್ರವೇ 18 ಅಂಕಗಳೊಂದಿಗೆ ಕ್ವಾಲಿಫೈ ಆಗಿದ್ದು. ಚೆನ್ನೈ ವಿರುದ್ಧ ಗೆದ್ಮೇಲೆ ಹೈದ್ರಾಬಾದ್ ಜೊತೆ ಗುಜರಾತ್ ಕೂಡ ಮುಂದಿನ ಸುತ್ತಿಗೆ ಅರ್ಹತೆಯನ್ನ ಪಡ್ಕೊಳ್ತು. ಈ ಮೂರೂ ತಂಡಗಳೂ ಇನ್ನೂ ಒಂದೊಂದು ಪಂದ್ಯಗಳು ಬಾಕಿ ಇರುವಂತೆಯೇ ಕ್ವಾಲಿಫೈ ಆಗಿವೆ. ಸೋ ಅಲ್ಲಿಗೆ ಈ ಮೂರೂ ತಂಡಗಳ ನೆಕ್ಸ್​ಟ್ ಟಾರ್ಗೆಟ್ ಏನಿದ್ರೂ ಟಾಪ್-2ನಲ್ಲಿ ಭದ್ರವಾಗಿ ಕೂರೋದು. ಯಾಕಂದ್ರೆ ಕ್ವಾಲಿಫೈಯರ್ 1 ಗೆದ್ರೆ ಡೈರೆಕ್ಟ್ ಫೈನಲ್. ಈ ಗೋಲ್ಡನ್ ಆಪರ್ಚುನಿಟಿಗಾಗಿ ಪೈಪೋಟಿ ಸ್ಟಾರ್ಟ್ ಆಗಿದೆ. ಆದ್ರೆ ನಾಲ್ಕನೇ ಸ್ಥಾನ ಇದ್ಯಲ್ಲ ಆ ಸ್ಥಾನಕ್ಕಾಗಿ ಈಗ ನೂಕುನುಗ್ಗಲು ಸ್ಟಾರ್ಟ್ ಆಗಿದೆ. ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್.. ಈ ಐದೂ ತಂಡಗಳಿಗೂ ಚಾನ್ಸ್ ಇದ್ದು ಕ್ವಾಲಿಫೈ ಟಿಕೆಟ್​ಗಾಗಿ ಕ್ಯೂನಲ್ಲಿ ನಿಂತಿದ್ದಾರೆ. ಈ ತಂಡಗಳ ಪೈಕಿ ಯಾರಿಗೆ ಅತೀ ಹೆಚ್ಚು ಅವಕಾಶ ಇದೆ.

ರಾಜಸ್ಥಾನಕ್ಕಿದೆ ರಹದಾರಿ!

ಪ್ರಸ್ತುತ ಅಂಕ                 ಉಳಿದ ಪಂದ್ಯಗಳು             ಒಟ್ಟು ಅಂಕ

12                                                2                                        16

ಹೀಗೆ ರಾಜಸ್ಥಾನಕ್ಕೆ ಡೈರೆಕ್ಟ್ ಚಾನ್ಸ್ ಇರುವಂಥದ್ದು. ಮೇ 19ಕ್ಕೆ ಲಕ್ನೋ ವಿರುದ್ಧ, ಮೇ 24ಕ್ಕೆ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ರೆ ಡೈರೆಕ್ಟ್ 4ನೇ ಸ್ಥಾನದಲ್ಲಿ ಮುಂದಿನ ಸುತ್ತಿಗೆ ಅರ್ಹತೆ ಪಡ್ಕೊಳ್ತಾರೆ. ಹಾಗೇನಾದ್ರೂ ರಾಜಸ್ಥಾನ ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಸೋತ್ರೂ ಅಂದ್ರೆ ಎರಡು ತಂಡಗಳಿಗೆ ಆಪರ್ಚುನಿಟಿ ಇದೆ. ಆದ್ರೆ ಅಂಕಗಳ ಜೊತೆ ನೆಟ್​ರನ್ ರೇಟ್ ಮ್ಯಾಟ್ರ್ ಆಗುವಂಥ ತಂಡಗಳು.

ಅಂಕದ ಜೊತೆ ರನ್ ರೇಟ್ ಪರೀಕ್ಷೆ!

ತಂಡ               ಪ್ರಸ್ತುತ ಅಂಕ             ಬಾಕಿ ಪಂದ್ಯ           ಒಟ್ಟು ಅಂಕ

ಪಂಜಾಬ್             13                                 1                              15

ಕೊಲ್ಕತ್ತಾ              11                                2                               15

ಹೀಗೆ ಈ ಎರಡೂ ತಂಡಗಳು ಪ್ಲೇ ಆಫ್ಸ್ ಸುತ್ತಿನಲ್ಲಿ ಈಕ್ವಲ್ ಪಾಯಿಂಟ್ಸ್ ಪಡೆಯೋ ಚಾನ್ಸಸ್ ಇದೆ. ಪಂಜಾಬ್ ಮೇ 23ಕ್ಕೆ ಲಕ್ನೋ ವಿರುದ್ಧ ತನ್ನ ಕೊನೆಯ ಪಂದ್ಯವನ್ನ ಆಡಲಿದೆ. ನಾಳೆ ಕೊಲ್ಕತ್ತಾ ಮುಂಬೈ ವಿರುದ್ಧ 13ನೇ ಪಂದ್ಯ ಹಾಗೇ ಮೇ 24ಕ್ಕೆ ಡೆಲ್ಲಿ ವಿರುದ್ಧ ಕೊನೇ ಪಂದ್ಯವನ್ನ ಆಡಲಿದೆ. ಸೋ ಅಲ್ಲಿಗೆ ಕೊನೇ ಪಂದ್ಯದವರೆಗೂ ಪ್ಲೇ ಆಫ್ಸ್ ರೇಸ್ ಇರುತ್ತೆ ಅನ್ನೋದು ಇಲ್ಲಿ ಗೊತ್ತಾಗ್ತಿದೆ. ಇನ್ನು ಇವ್ರೂ ಅಲ್ಲದೆ ಇನ್ನೂ ಎರಡು ತಂಡಗಳಿಗೂ ಚಾನ್ಸ್ ಇದೆ.

ಅದೃಷ್ಟದ ಅಗ್ನಿಪರೀಕ್ಷೆ!

ತಂಡ                  ಪ್ರಸ್ತುತ ಅಂಕ              ಬಾಕಿ ಪಂದ್ಯ                  ಒಟ್ಟು ಅಂಕ

ಚೆನ್ನೈ                     12                                  1                                     14

ಡೆಲ್ಲಿ                      12                                  1                                      14

ಲಕ್ ಮೇಲೆ ಮುಂದಿನ ಸುತ್ತಿಗೆ ಹೋಗೋಕೆ ಇವ್ರೂ ಕೂಡ ಕಾಯ್ತಿದ್ದಾರೆ. ಆದ್ರೆ ನೆಟ್ ರನ್ ರೇಟ್ ಮೈನಸ್ ಇರೋದ್ರಿಂದ ಮುಂದಿನ ಪಂದ್ಯಗಳನ್ನ ಗೆದ್ರೂ ಕಷ್ಟಸಾಧ್ಯ ಇದೆ. ಚೆನ್ನೈ ಸೂಪರ್ ಕಿಂಗ್ಸ್ ಕೊನೇ ಮ್ಯಾಚಲ್ಲಿ ಜಿಟಿ ವಿರುದ್ಧ ಆಡಿದ್ರೆ ಡೆಲ್ಲಿ ಕೊಲ್ಕತ್ತಾ ವಿರುದ್ಧ ಕೊನೆಯ ಪಂದ್ಯವನ್ನಾಡಲಿದೆ. ಸೋ ಇಲ್ಲಿ ಪೀಕ್ ಪಾಯಿಂಟ್ಸ್ ಅಂದ್ರೆ 16, 15 ಹಾಗೇ 14 ಅಂಕ ಇದ್ದವ್ರೂ ರೇಸ್​ನಲ್ಲಿದ್ದಾರೆ. ಆದ್ರೆ ಅಂತಿಮವಾಗಿ ಯಾರು ಟಿಕೆಟ್ ಗಿಟ್ಟಿಸಿಕೊಳ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *