ಅಪ್ಪ- ಅಮ್ಮ Sorry.. ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ! – ತಾಯಿ ಬೈದಿದ್ದಕ್ಕೆ ಮಕ್ಕಳ ದುಡುಕಿನ ನಿರ್ಧಾರ!

ಮಕ್ಕಳು ತಪ್ಪು ಮಾಡಿದ್ರೆ ಅಪ್ಪ, ಅಮ್ಮ ಬೈಯ್ದು ಬುದ್ದಿ ಹೇಳೋದು ಕಾಮನ್. ತಂದೆ, ತಾಯಿ ಬೈದಾಗ ಮಕ್ಕಳಿಗೂ ಬೇಜಾರು ಆಗೋದು ಸಹಜವೇ. ಆದ್ರೀಗ ಇಲ್ಲೊಂದು ಕಡೆ ಅಮ್ಮ ಬೈದಿದ್ದಕ್ಕೆ ಮಕ್ಕಳು ಪತ್ರ ಬರೆದು ಮನೆ ಬಿಟ್ಟು ಹೋಗಿದ್ದಾರೆ.
ಇದನ್ನೂ ಓದಿ: ಬದುಕಿದ್ದಾಗ ಚಿತ್ರಹಿಂಸೆ ನೀಡಿದ.. ಸತ್ತ ಮೇಲೆ ಶವಕ್ಕೆ ತಾಳಿ ಕಟ್ಟಿದ! – ಯುವಕನ ಅಟ್ಟಹಾಸಕ್ಕೆ ಯುವತಿ ಬಲಿ!
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರಾಮಚಂದ್ರ ಮಕ್ಕಳಾದ ಸುಜಾತಾ(16), ರುಕ್ಮಿಣಿ(14) ಮನೆಬಿಟ್ಟು ಹೋಗಿರುವ ಸಹೋದರಿಯರು.
ಸುಜಾತ ಹಾಗೂ ರುಕ್ಮಿಣಿಗೆ ಯಾವುದೋ ಕಾರಣಕ್ಕೆ ತಾಯಿ ಬೈದಿದ್ದಾರೆ. ಇದರಿಂದ ಮನನೊಂದು ಸಹೋದರಿಯರು, ಮನೆಬಿಟ್ಟು ಹೋಗಿದ್ದಾರೆ.ಹೋಗುವ ಮುನ್ನ ಭಾವುಕ ಪತ್ರವೊಂದು ಬರೆದಿಟ್ಟಿದ್ದಾರೆ. ಅಮ್ಮ-ಅಪ್ಪ ಸ್ವಾರಿ. ನಿಮ್ಮ ಕಣ್ಣು ಮುಂದೆ ಸಾಯುವುದಕ್ಕೆ ಆಗಲ್ಲ. ಹೀಗಾಗಿ ನಾವು ದೂರ ಹೋಗಿ ಸತ್ತಿದ್ದೇವೆ ಎಂದು ಆಘಾತಕಾರಿ ಪತ್ರ ಬರೆದಿಟ್ಟು ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಗ್ರಾಮದ ರಾಮಚಂದ್ರ ಎಂಬುವರ ಮಕ್ಕಳಾದ ಸುಜಾತ ಮತ್ತು ರುಕ್ಮಿಣಿ ಮನೆ ಬಿಟ್ಟು ಹೋಗಿದ್ದು, ಮನೆಯಿಂದ ಹೋಗುವ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ಅಪ್ಪ-ಅಮ್ಮ sorry ನಿಮ್ಮ ಕಣ್ಮುಂದೆ ಸಾಯೋಕೆ ಆಗಲ್ಲ ಅಂತಾ ನಾವು ದೂರ ಹೋಗಿ ಸತ್ತಿದ್ದೇವೆ sorry ಎಂದು ಪತ್ರದಲ್ಲಿ ಬರೆದಿದ್ದು, ಈ ಪತ್ರ ಪೋಷಕರು ಹಾಗೂ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಈ ಪತ್ರ ಓದಿದ ಕೂಡಲೇ ಆತಂಕಗೊಂಡ ಪೋಷಕರು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಮಕ್ಕಳನ್ನ ಹುಡುಕಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ. ಕೂಡಲೇ ಪೊಲೀಸರು ದೂರು ದಾಖಲಿಸಿಕೊಂಡು ಮಕ್ಕಳ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ. ಮಕ್ಕಳು ಏನಾದರೂ ಪ್ರಾಣಕ್ಕೆ ಅಪಾಯ ಮಾಡಿಕೊಂಡಿರಬಹುದೇ ಎಂದು ಕುಟುಂಬಸ್ಥರು ಆತಂಕಗೊಂಡು ಕಣ್ಣೀರು ಹಾಕುತ್ತಿದ್ದಾರೆ.

ನೋಡಿರಿ

