ಹೇಮಾವತಿ ಸಿಗದ ಸಿಟ್ಟಿಗೆ ರೊಚ್ಚಿಗೆದ್ದ ಕಂಜನ್ – ಹೆಣ್ಣಾನೆಗಾಗಿ ಮಾರ್ತಾಂಡನ ಜೀವ ತೆಗೆದ ಕಂಜನ್

ಹೇಮಾವತಿ ಸಿಗದ ಸಿಟ್ಟಿಗೆ ರೊಚ್ಚಿಗೆದ್ದ ಕಂಜನ್ – ಹೆಣ್ಣಾನೆಗಾಗಿ ಮಾರ್ತಾಂಡನ ಜೀವ ತೆಗೆದ ಕಂಜನ್

ದುಬಾರೆ ಸಾಕಾನೆ ಶಿಬಿರದಲ್ಲಿ ದಸರಾ ಕಂಜನ್ ಮತ್ತು ಮಕ್ನಾ ಮಾರ್ತಾಂಡ  ಆನೆ ನಡುವಿನ ಕಾದಾಟಕ್ಕೆ ಕಾರಣ ಏನು? ಈ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಇದೀಗ ಸೌಮ್ಯ ಸ್ವಭಾವದ ಕಂಜನ್ ಆನೆ ತನ್ನ ಜೊತೆಗಾರನ ಮೇಲೆ ರೊಚ್ಚಿಗೆದ್ದಿದ್ದು ಯಾಕೆ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ:ಕಂಜನ್ ಜೊತೆ ಕಾದಾಟದಲ್ಲಿ ಗಾಯಗೊಂಡ ಮಾರ್ತಾಂಡ ಸಾವು – ದುಬಾರೆ ಆನೆ ಶಿಬಿರದಲ್ಲಿ ಶೋಕ

ಕೊಡಗಿನ ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ದುರಂತ ನಿಜಕ್ಕೂ ಘೋರ. ಗಂಡನ ಎದುರೇ ಪ್ರಾಣಬಿಟ್ಟ ಹೆಂಡತಿ. ಪುಟ್ಟ ಕಂದ.. ಗಂಡನ ನೋವು ನಿಜಕ್ಕೂ ಮನಕಲಕುವಂತಿತ್ತು. ತನ್ನದಲ್ಲದ ತಪ್ಪಿಗೆ ತನ್ನೆದುರೇ ಪ್ರಾಣಬಿಟ್ಟ ಪತ್ನಿಯನ್ನು ಕಂಡು ಗಂಡನ ಆಕ್ರಂದನ ಮುಗಿಲುಮುಟ್ಟಿತ್ತು. ಇದೀಗ ಕಂಜನ್ ಮತ್ತು ಮಾರ್ತಾಂಡನ ಕಾದಾಟದ ಬಳಿಕ ತೀವ್ರ ಗಾಯಗೊಂಡ ಮಾರ್ತಾಂಡ ಕೂಡಾ ಸಾವನ್ನಪ್ಪಿದೆ. ಸೌಮ್ಯ ಸ್ವಭಾವ ಹೊಂದಿದ್ದ ಕಂಜನ್ ಆನೆ ಮಾರ್ತಾಂಡ ಆನೆ ಮೇಲೆ ದಾಳಿ ಮಾಡಿದ್ದಲ್ಲದೇ ಮಾರ್ತಾಂಡನ ಸಾವಿಗೂ ಕಾರಣವಾಗಿದೆ. ಈಗ ದುಬಾರೆ ಆನೆ ಶಿಬಿರದಲ್ಲಿ ಶೋಕ ಮಡುಗಟ್ಟಿದೆ. ಕಂಜನ್ ರೊಚ್ಚಿಗೇಳಲು ಕಾರಣವೇನು?, ಶಾಂತ ಸ್ವಭಾವದ ಕಂಜನ್ ಆರ್ಭಟ ಶುರುವಾಗಿದ್ದು ಯಾಕೆ ಎಂಬ ವಿಚಾರ ಬಯಲಾಗಿದೆ.

ದುಬಾರೆ ಶಿಬಿರದಲ್ಲಿ ಕಳೆದ ನಾಲ್ಕು ದಿನಗಳಿಂದ ಕಂಜನ್ ಆನೆ ಶಿಬಿರದಲ್ಲಿದ್ದ ಹೇಮಾವತಿ ಆನೆಯನ್ನು ಮೇಟಿಂಗ್ ಮಾಡಲು ಯತ್ನಿಸಿತ್ತಂತೆ. ಆದರೆ ಅದರ ಮಾವುತ ಕಂಜನ್ ಆನೆಗೆ ಅವಕಾಶ ನೀಡಿರಲಿಲ್ಲವಂತೆ. ಸೋಮವಾರ ಕೂಡಾ ಹೇಮಾವತಿ ಆನೆ ನೋಡಿ ಕಂಜನ್ ಆನೆ ಹತ್ತಿರ ಹೋಗಿತ್ತಂತೆ. ಈ ವೇಳೆ ಕಂಜನ್ ಆನೆಯನ್ನು ಮಾವುತ ಕಿರಣ್ ತಡೆದಿದ್ದರಂತೆ. ಹೇಮಾವತಿ ಆನೆಗೆ ಚಿಕ್ಕವಯಸ್ಸು. ಹೀಗಾಗಿ ಸಮಸ್ಯೆ ಆಗಬಹುದು ಎಂದು ಎಚ್ಚರಿಕೆ ವಹಿಸಿ ಕಂಜನ್​​ನನ್ನು ಹಿಮ್ಮೆಟ್ಟಿಸಿ ವಾಪಸ್ ಕರೆತರಲಾಗಿತ್ತಂತೆ. ಆದರೆ,  ಕಂಜನ್ ಹೇಮಾವತಿ ಆನೆ ಸಿಗದ ಕಾರಣ ರೊಚ್ಚಿಗೆದ್ದಿದ್ದನಂತೆ. ಇದಕ್ಕೆ ಸರಿಯಾಗಿ ಎದುರಿಗೆ ಸಿಕ್ಕ ಮಾರ್ತಾಂಡ ಆನೆ ಜೊತೆ ಕಂಜನ್ ಕಾದಾಟಕ್ಕೆ ಇಳಿದಿದ್ದಾನೆ.

ಇನ್ನು ವೈಲ್ಡ್ ಲೈಫ್ ಆ್ಯಕ್ಟಿವಿಸ್ಟ್ ವಲ್ಲೆಶ್ ಅವರು ನೀಡಿರುವ ಮಾಹಿತಿಯಂತೆ, ಆನೆ ಜಗಳ ಆಡಬೇಕು ಅಂತ ಜಗಳ ಆಡೋದಿಲ್ಲ. ಮೊದಲು ಆನೆಗಳ ಜೊತೆ ಜಗಳ ಆಗಿದ್ದರೆ, ಕೋಪ ತುಂಬಾ ಬಂದಿದ್ದರೆ ಯಾವ ಆನೆ ಮೇಲೆ ಕೋಪ ಇದೆ ಅದನ್ನು ತುಂಬಾ ನೆನಪು ಇಟ್ಟು ಕೊಂಡಿರುತ್ತದೆ. ಗಂಡಾನೆ ದಂತ ಇಲ್ಲದೇ ಇರೋದನ್ನು ಮಕ್ನಾ ಆನೆ ಅಂತ ಕರೆಯುತ್ತಾರೆ. ನಿನ್ನೆ ಕಂಜನ್ ಆನೆ ಬಹುಶಃ ಮಸ್ತ್ ಅಲ್ಲಿ ಇದ್ದ ಹಾಗೇ ಕಾಣಿಸುತ್ತೆ. ಆನೆಗಳಲ್ಲಿ 3-4 ತಿಂಗಳು ಸಹಜವಾಗಿ ಮಸ್ತ್ ಅಲ್ಲಿ ಇರುತ್ತೆ. ಆಗ ಕ್ಯಾಂಪ್ ಆನೆಯಿಂದ ದೂರ ಇದ್ದು ಪ್ರತ್ಯೇಕ ಆಗಿರುತ್ತದೆ. ಅವುಗಳಿಗೆ ಆಹಾರ ಆರೈಕೆ ಪ್ರತಿಯೊಂದು ಪ್ರತ್ಯೇಕವಾಗಿ ಮಾಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ಮಾವುತರ ಜೊತೆ ಇರುವ ಕಾವಡಿ ಕೂಡ ಆನೆ ಹತ್ತಿರ ಹೋಗಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ, ಸಾಮಾನ್ಯವಾಗಿ ಹೆಣ್ಣಾನೆ ಹತ್ತಿರಾನೆ ಆನೆ ಇರೋದಕ್ಕೆ ಬಯಸುತ್ತಾ ಇರುತ್ತೆ. ಈ ಹೊತ್ತಲ್ಲೇ ಇನ್ನೊಂದು ಆನೆ ಕಾಂಟ್ಯಾಕ್ಟ್ ಬಂದಾಗ ಅಗ್ರೆಸ್ಸಿವ್ ಆಗಿದೆ. ಹಳೆ ದ್ವೇಷ ಕೂಡ ಕಾರಣ ಆಗಿರಬಹುದು ಎಂದು ಹೇಳಿದ್ದಾರೆ.

ದುಬಾರೆ ಆನೆ ಶಿಬಿರದಲ್ಲಿ ಮಾರ್ತಾಂಡ ಮೃತಪಟ್ಟಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅನಿರೀಕ್ಷಿತವಾದ ಮತ್ತು ಊಹಿಸಲೂ ಆಗದ ದುರ್ಘಟನೆಯಲ್ಲಿ ಒಬ್ಬ ಪ್ರವಾಸಿ ಮಹಿಳೆ ಮತ್ತು ಒಂದು ಆನೆ ಮೃತಪಟ್ಟಿರುವುದು ಅತ್ಯಂತ ದುಃಖದ ಸಂಗತಿ ಎಂದು ತಿಳಿಸಿರುವ ಅವರು ಸಂತಾಪ ಸೂಚಿಸಿದ್ದಾರೆ.

Sulekha