ಈ ಸಲ ಕಪ್ RCBಗೆ.. ಸೆಹ್ವಾಗ್ ಭವಿಷ್ಯ – ‘ಸಿಕ್ಸರ್ ಸುಲ್ತಾನ’ ವೈಭವ್ ಸೂರ್ಯವಂಶಿ ದಾಖಲೆ

ಈ ಸಲ ಕಪ್ RCBಗೆ.. ಸೆಹ್ವಾಗ್ ಭವಿಷ್ಯ – ‘ಸಿಕ್ಸರ್ ಸುಲ್ತಾನ’ ವೈಭವ್ ಸೂರ್ಯವಂಶಿ ದಾಖಲೆ

ಚೆನ್ನೈ ಸೂಪರ್ ಕಿಂಗ್ಸ್ ತವರಿನಲ್ಲಿ ಸೋಲಿನ ಅವಮಾನ ಎದುರಿಸಿದೆ. ಜೊತೆಗೆ ನಾಯಕ ರುತುರಾಜ್ ಗಾಯಕ್ವಾಡ್ ಆಟಕ್ಕೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಈಬಾರಿಯೂ ಆರ್‌ಸಿಬಿಯೇ ಚಾಂಪಿಯನ್ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಧೋನಿ ಎದುರಲ್ಲೇ ನೆಲ ಕಚ್ಚಿದ CSK – ವಿಶಿಲ್ ಹಾಕಿ ಮನೆಗೆ ಕಳಿಸಿದ ಕಿಶನ್

ಹೈದರಾಬಾದ್ ಹಾಗೂ ಚೆನ್ನೈ ನಡುವಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ಹೆನ್ರಿಚ್ ಕ್ಲಾಸನ್ ನಡುವೆ ವಾಗ್ವಾದ ನಡೆದಿದೆ. ಸಿಎಸ್‌ಕೆ ಬೌಲರ್ ನೂರ್ ಅಹ್ಮದ್ ಅವರ ಗೂಗ್ಲಿ ಎಸೆತವನ್ನು ಸಿಕ್ಸರ್ ಬಾರಿಸಲು ಕ್ಲಾಸನ್ ಮುಂದಾದರು. ಆದರೆ ಬಾಲ್ ಬ್ಯಾಟ್‌ಗೆ ಸಿಗದೆ ವಿಕೆಟ್‌ಕೀಪರ್ ಕೈ ಸೇರಿತು. ಈ ವೇಳೆ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್, ಮಾಜಿ ನಾಯಕ ಎಂ.ಎಸ್. ಧೋನಿ ಶೈಲಿಯಲ್ಲಿ ಅತಿ ವೇಗವಾಗಿ ಸ್ಟಂಪಿಂಗ್ ಮಾಡಿದರು. ಬಳಿಕ ವಿಕೆಟ್ ತೆಗೆದ ಖುಷಿಯಲ್ಲಿ ಸಂಭ್ರಮಿಸಿದ್ದೇ ಕ್ಲಾಸನ್ ಸಿಟ್ಟಿಗೆ ಕಾರಣವಾಯ್ತು. ನಂತರ ಕ್ಲಾಸನ್ ಮತ್ತು ಸಂಜು ಸ್ಯಾಮ್ಸನ್ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಚೆನ್ನೈ ತನ್ನ ತವರಿನಲ್ಲಿ ಮತ್ತೊಂದು ಸೋಲು ಕಾಣಲು ಕಾರಣವೇ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ಎಂದು ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಗಾಯಕ್ವಾಡ್ 21 ಎಸೆತಗಳಲ್ಲಿ ಕೇವಲ 15 ರನ್​ಗಳಿಸಿ ಔಟಾದರು. ಗಾಯಕ್ವಾಡ್  ಬ್ಯಾಟಿಂಗ್ ವೈಫಲ್ಯದಿಂದಾಗಿಯೇ ಚೆನ್ನೈ ತಂಡ ಸೋತಿದೆ. ಗಾಯಕ್ವಾಡ್ ಚೆನ್ನೈ ತಂಡಕ್ಕೆ ದೊಡ್ಡ ಶಾಪ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಹೈದರಾಬಾದ್ ತಂಡ ಪ್ಲೇಆಫ್ ಗೆ ಎಂಟ್ರಿಕೊಟ್ಟಿದೆ. ಹೈದ್ರಾಬಾದ್ ಆರ್​ಸಿಬಿ ವಿರುದ್ಧ ತನ್ನ ಕೊನೇ ಪಂದ್ಯವನ್ನಾಡಲಿದೆ. ಈ ಎರಡು ತಂಡಗಳ ನಡುವೆ ಟಾಪ್ ಪ್ಲೇಸ್‌ಗಾಗಿ ಪೈಪೋಟಿ ನಡೆಯಲಿದೆ. ಇನ್ನು ಸಿಎಸ್​ಕೆ ಟೂರ್ನಿಯಿಂದ ಹೊರಬಿದ್ದಿದೆ. ಸಿಎಸ್​ಕೆ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದರೆ, ಆರ್ ಆರ್, ಕೆಕೆಆರ್ ತಂಡಗಳು ತಮ್ಮ 2 ಪಂದ್ಯಗಳನ್ನೂ ಹಾಗೂ  ಪಂಜಾಬ್ ಮತ್ತು ಡೆಲ್ಲಿ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಸೋತರೆ ಮಾತ್ರ ಸಿಎಸ್​ಕೆ ಪ್ಲೇಆಫ್​ ಪ್ರವೇಶಿಸಲಿದೆ.

ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಚೆನ್ನೈ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದು, ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಐಪಿಎಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ನಾಯಕನಾಗಿ 42 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಹಿಂದಿಕ್ಕಿದ್ದಾರೆ. ಪಾಂಡ್ಯ ನಾಯಕನಾಗಿ 40 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಐಪಿಎಲ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಶೇನ್ ವಾರ್ನ್ 57 ವಿಕೆಟ್‌ ಪಡೆದಿದ್ದು ಅಗ್ರಸ್ಥಾನದಲ್ಲಿದ್ದಾರೆ.

ರಾಜಸ್ಥಾನ್ ರಾಯಲ್ಸ್‌ನ ಬ್ಯಾಟಿಂಗ್ ಬೆನ್ನೆಲುಬಾಗಿರುವ ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಅವರ ಫೀಲ್ಡಿಂಗ್ ಕಳಪೆ ಮಟ್ಟದ್ದಾಗಿದೆ ಎಂದು  ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಉದ್ದಕ್ಕೂ ವೈಭವ್ ಒಂದೇ ಒಂದು ಕ್ಯಾಚ್ ಹಿಡಿಯಲಿಲ್ಲ ಎಂಬ  ಬಗ್ಗೆಯೂ ಕೈಫ್ ಪ್ರಶ್ನೆ ಮಾಡಿದ್ದಾರೆ. ಬ್ಯಾಟಿಂಗ್ ಓಕೆ, ಕ್ಯಾಚ್ ಹಿಡಿಯಲ್ಲ ಯಾಕೆ ಎಂದು ಪ್ರಶ್ನಿಸುವ ಮೂಲಕ ವೈಭವ್ ಫೀಲ್ಡಿಂಗ್ ಬಗ್ಗೆ ಕೈಫ್ ಕಳವಳ ವ್ಯಕ್ತಪಡಿಸಿದ್ದಾರೆ.

ವೈಭವ್ ಸೂರ್ಯವಂಶಿ ಐಪಿಎಲ್ ಆವೃತ್ತಿವೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ಭರ್ಜರಿ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಸಿಡಿಲಬ್ಬರದ ಸರದಾರ ಅಭಿಷೇಕ್ ಶರ್ಮಾ ಹೆಸರಿನಲ್ಲಿದ್ದ ದಾಖಲೆಯನ್ನು ಸೂರ್ಯವಂಶಿ ಮುರಿದಿದ್ದಾರೆ. 2024ರ ಐಪಿಎಲ್​ ಸೀಸನ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ 16 ಇನಿಂಗ್ಸ್ ಆಡಿದ್ದ ಅಭಿಷೇಕ್ ಶರ್ಮಾ 42 ಸಿಕ್ಸ್​ ಸಿಡಿಸಿದ್ದರು. ಈ ಬಾರಿಯ ಐಪಿಎಲ್​ನಲ್ಲಿ ವೈಭವ್ ಸೂರ್ಯವಂಶಿ ಕೇವಲ 12 ಇನಿಂಗ್ಸ್​ಗಳ ಮೂಲಕ 43 ಸಿಕ್ಸ್​ ಸಿಡಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಮಂಗಳವಾರ ಮಾಡು ಇಲ್ಲವೇ ಮಡಿ ಪಂದ್ಯಕ್ಕಾಗಿ ಕಣಕ್ಕಿಳಿಯಲಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಆರ್ ಆರ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಾದಾಟ ನಡೆಸಲಿದೆ. ಆರಂಭದಲ್ಲಿ ಅಬ್ಬರಿಸಿ, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿದ್ದ ರಾಜಸ್ಥಾನ ತಂಡ ಈಗ ಗೆಲುವಿಗಾಗಿ ಕಷ್ಟಪಡುತ್ತಿದೆ. ಲಕ್ನೋ ವಿರುದ್ಧ ಗೆದ್ದರೆ ಮಾತ್ರ ರಾಜಸ್ಥಾನ್ ರಾಯಲ್ಸ್  ಪ್ಲೇಆಫ್ ಕನಸು ಕಾಣಬಹುದು.

ಈ ipl ಆವೃತ್ತಿಯಲ್ಲಿ 13 ಪಂದ್ಯಗಳನ್ನಾಡಿರುವ ಆರ್‌ಸಿಬಿ ಬೌಲರ್ ಭುವನೇಶ್ವರ್ ಕುಮಾರ್ 24 ವಿಕೆಟ್‌ಗಳನ್ನು ಪಡೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಭುವನೇಶ್ವರ್ ಇದೇ ಪ್ರದರ್ಶನ ಉಳಿದ ಪಂದ್ಯಗಳಲ್ಲೂ ಮುಂದುವರೆಸಿದರೆ, ಐಪಿಎಲ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಒಂದೇ ಐಪಿಎಲ್ ಆವೃತ್ತಿಯತಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಡಲಿದ್ದಾರೆ. ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಡ್ವೇನ್ ಬ್ರಾವೋ ಅವರ ಹೆಸರಿನಲ್ಲಿದೆ.

ಆರ್‌ಸಿಬಿ ಈ ಬಾರಿಯೂ ಚಾಂಪಿಯನ್ ಆಗಲಿದೆ ಎಂದು ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ. ಆದರೆ, ಗುಜರಾತ್ ಟೈಟಾನ್ಸ್ ಆರ್‌ಸಿಬಿಗೆ ದೊಡ್ಡ ಸವಾಲಾಗಬಲ್ಲದು, ವಿಶೇಷವಾಗಿ ಅದರ ಬಲಿಷ್ಠ ಬೌಲಿಂಗ್ ಘಟಕದಿಂದ ಆರ್‌ಸಿಬಿಗೆ ಚಾಲೆಂಜ್ ನೀಡಬಹುದು. ಆದರೂ ಕೂಡಾ ಆರ್​ಸಿಬಿ ಆಡುತ್ತಿರುವ ರೀತಿಯನ್ನು ನೋಡಿದರೆ, ಈ ವರ್ಷವೂ ಅವರೇ ಟ್ರೋಫಿಯನ್ನು ಎತ್ತಿಹಿಡಿಯುತ್ತಾರೆ ಎಂದು ತೋರುತ್ತದೆ ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.

ಅಫ್ಘಾನಿಸ್ತಾನ ಸರಣಿಗಾಗಿ ಭಾರತೀಯ ಆಯ್ಕೆ ಸಮಿತಿ ಸಭೆ ಸೇರಲಿದ್ದು, ಟೀಮ್ ಇಂಡಿಯಾದ ಉಪನಾಯಕ ರಿಷಭ್ ಪಂತ್ ಅವರ ಭವಿಷ್ಯದ ಬಗ್ಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಪಂತ್ ಟೆಸ್ಟ್ ಸ್ವರೂಪದಲ್ಲಿ ಟೀಮ್ ಇಂಡಿಯಾದ ಮ್ಯಾಚ್ ವಿನ್ನರ್ ಎಂದು ಬಿಸಿಸಿಐ ಪರಿಗಣಿಸಿದ್ದು, ಅವರನ್ನು ತಂಡದಿಂದ ಕೈಬಿಡುತ್ತಿಲ್ಲ. ಆದರೆ, ಉಪನಾಯಕ ಸ್ಥಾನದಿಂದ ರಿಷಬ್ ಪಂತ್ ರನ್ನು ಕೆಳಗಿಳಿಸಬಹುದು ಎಂದು ಹೇಳಲಾಗ್ತಿದೆ. ನಾಯಕತ್ವದ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡಲು ಮತ್ತು ಬ್ಯಾಟಿಂಗ್‌ನ ಮೇಲೆ ಮಾತ್ರ ಗಮನಹರಿಸಲು ಬಿಸಿಸಿಐ ಈ ರೀತಿ ಮಾಡಬಹುದು ಎಂದು ಹೇಳಲಾಗ್ತಿದೆ.

Sulekha

Leave a Reply

Your email address will not be published. Required fields are marked *