ಧೋನಿ ಎದುರಲ್ಲೇ ನೆಲ ಕಚ್ಚಿದ CSK – ವಿಶಿಲ್ ಹಾಕಿ ಮನೆಗೆ ಕಳಿಸಿದ ಕಿಶನ್
ಪ್ಲೇ ಆಫ್ಸ್ ಪಟ್ಟಕ್ಕೇರಿದ ಹೈದ್ರಾಬಾದ್

ಧೋನಿ ಎದುರಲ್ಲೇ ನೆಲ ಕಚ್ಚಿದ CSK – ವಿಶಿಲ್ ಹಾಕಿ ಮನೆಗೆ ಕಳಿಸಿದ ಕಿಶನ್ಪ್ಲೇ ಆಫ್ಸ್ ಪಟ್ಟಕ್ಕೇರಿದ ಹೈದ್ರಾಬಾದ್

ಪ್ಲೇ ಆಫ್ಸ್ ರೇಸ್​ನಲ್ಲಿ  ಮಸ್ಟ್ ವಿನ್ ಮ್ಯಾಚ್​ಗಾಗಿ ಕಣಕ್ಕಿಳಿದಿದ್ದ ಹೈದ್ರಾಬಾದ್ ಮತ್ತು ಚೆನ್ನೈ ನಡುವಿನ ರಣರೋಚಕ ಪಂದ್ಯದಲ್ಲಿ ಹೈದ್ರಾಬಾದ್ ಗೆದ್ದು ಬೀಗಿದೆ. ಈ ಮೂಲಕ ತಾನು ಪ್ಲೇ ಆಫ್ಸ್​ಗೆ ಕ್ವಾಲಿಫೈ ಆಗೋದ್ರ ಜೊತೆಗೆ ಗುಜರಾತ್ ತಂಡಕ್ಕೂ ಅಧಿಕೃತವಾಗಿ ಪ್ಲೇ ಆಫ್ಸ್ ಟಿಕೆಟ್ ಸಿಕ್ಕಿದೆ.

ಇದನ್ನೂ ಓದಿ : ಮುಷ್ಕರದಿಂದ ಹಿಂದೆ ಸರಿದ KSRTC ನೌಕರರ ಸಂಘ! – ನಾಳೆ ಬಸ್‌ ಸಂಚಾರ ಎಂದಿನಂತೆ ಇರುತ್ತಾ?

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೈದ್ರಾಬಾದ್ ಗೆಲ್ಲೋ ಮೂಲಕ ಪ್ಲೇ ಆಫ್ಸ್ ರೇಸ್​ನಲ್ಲಿ ಮೂರು ತಂಡಗಳಿಗೆ ಟಿಕೆಟ್ ಸಿಕ್ಕಂತಾಗಿದೆ. ಆಲ್ರೆಡಿ ಆರ್​ಸಿಬಿ ನಂಬರ್ 1 ಪ್ಲೇಸ್​ನಲ್ಲಿದ್ದು ಗುಜರಾತ್ ಕೂಡ ಟಾಪ್-3ನಲ್ಲಿದೆ. ಸೋಮವಾರ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು. 181 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಹೈದ್ರಾಬಾದ್ ಪರ ಇಶಾನ್ ಕಿಶನ್ ಅವರ 70 ರನ್‌ಗಳ ಅದ್ಭುತ ಇನ್ನಿಂಗ್ಸ್‌ನಿಂದಾಗಿ 19 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 181 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಗೆಲ್ಲಲೇಬೇಕಾಗಿದ್ದ ಈ ಮ್ಯಾಚಲ್ಲಿ ಚೆನ್ನೈ ತಂಡ ತನ್ನದೇ ತಪ್ಪಿನಿಂದ ಪಂದ್ಯವನ್ನ ಸೋಲಬೇಕಾಯ್ತು.

ಚೆನ್ನೈ ಸೋಲಿಗೆ ಕಾರಣಗಳು!

ಟಾಸ್ ಗೆದ್ರೂ ಬ್ಯಾಟಿಂಗ್ ಮಾಡ್ತೀವಿ ಅಂದವ್ರು ಬಿಗ್ ಸ್ಕೋರ್ ಬರಲಿಲ್ಲ

ಡೆವಾಲ್ಡ್ ಬ್ರೆವಿಸ್ 44 ರನ್ ಗಳಿಸಿದ್ದೇ ಚೆನ್ನೈ ಪರ ಹೈ ಸ್ಕೋರ್

ಹೈದ್ರಾಬಾದ್ ಪರ ರೆಡ್ಡಿ, ಹಿಂಗೆ ಬಿಟ್ಟು ಉಳಿದೆಲ್ಲಾ ಬೌಲರ್ಸ್ ಸೂಪರ್

ಟಾರ್ಗೆಟ್ ಬೆನ್ನತ್ತಿದ ಹೈದ್ರಾಬಾದ್ ಪರ ಇಶಾನ್ ಕಿಶನ್ 70(47) ರನ್ಸ್

ಬಿಗ್ ಟಾರ್ಗೆಟ್ ಅಲ್ಲದೇ ಇದ್ದಿದ್ರಿಂದ 19ನೇ ಓವರ್ ನಲ್ಲೇ ಗೆಲುವು

ಹೀಗೆ ಬ್ಯಾಟಿಂಗ್ ಹಾಗೇ ಬೌಲಿಂಗ್ ಎಲ್ಲಿಯೂ ಕೂಡ ಚೆನ್ನೈ ಕಡೆಯಿಂದ ದಿ ಬೆಸ್ಟ್ ಅನ್ನೋ ಥರ ಪರ್ಫಾಮೆನ್ಸ್ ಇರ್ಲಿಲ್ಲ. ಆದ್ರೆ ಈ ಪಂದ್ಯದ ಸೋಲು ಚೆನ್ನೈ ಅಭಿಮಾನಿಗಳಿಗೆ ದೊಡ್ಡ ಬೇಸರ ಉಂಟು ಮಾಡಿದೆ. ಯಾಕಂದ್ರೆ ಧೋನಿ ಎದುರಲ್ಲೇ ತಂಡ ಸೋಲು ಕಂಡಿದೆ. ಇಡೀ ಸೀಸನ್​ನಲ್ಲಿ ತಂಡದ ಜೊತೆ ಕಾಣಿಸಿಕೊಳ್ಳದ ಧೋನಿ ತವರಿನ ಕೊನೇ ಪಂದ್ಯದ ವೇಳೆ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡರು. ಸೆಲ್ಫಿ ತಗೊಂಡ್ರು. ಮೈದಾನದಲ್ಲಿ ಒಂದು ಸುತ್ತು ಬಂದ್ರು. ಇದು ಧೋನಿಗೆ ವಿದಾಯದ ಪಂದ್ಯ ಎಂದೇ ಹೇಳಲಾಗುತ್ತಿದೆ. ಹೀಗಿದ್ರೂ ಅವ್ರ ಕಣ್ಣೆದುರೇ ಹೋಂ ಗ್ರೌಂಡ್​ನಲ್ಲಿ ಮ್ಯಾಚ್ ಸೋತಿದ್ದು ಅಭಿಮಾನಿಗಳ ಬೇಸರಕ್ಕೂ ಕಾರಣವಾಯ್ತು.

Shantha Kumari

Leave a Reply

Your email address will not be published. Required fields are marked *