ಕಂಜನ್ ಜೊತೆ ಕಾದಾಟದಲ್ಲಿ ಗಾಯಗೊಂಡ ಮಾರ್ತಾಂಡ ಸಾವು – ದುಬಾರೆ ಆನೆ ಶಿಬಿರದಲ್ಲಿ ಶೋಕ

ಕಂಜನ್ ಜೊತೆ ಕಾದಾಟದಲ್ಲಿ ಗಾಯಗೊಂಡ ಮಾರ್ತಾಂಡ ಸಾವು – ದುಬಾರೆ ಆನೆ ಶಿಬಿರದಲ್ಲಿ ಶೋಕ

ದುಬಾರೆ ಆನೆ ಶಿಬಿರದಲ್ಲಿ ಹಿಂದೆಂದಿಗೂ ಹೀಗೆ ಆಗಿರಲಿಲ್ಲ. ಆನೆಗಳು ಯಾವತ್ತೂ ಹೀಗೆ ಕಾದಾಡಿಕೊಂಡಿರಲಿಲ್ಲ. ಆದರೆ, ಅದೇನ್ ಆಗಿತ್ತೋ.. ಆನೆಗಳ ನಡುವಿನ ಕಾದಾಟದಲ್ಲಿ ಒಬ್ಬರು ಪ್ರವಾಸಿ ಮಹಿಳೆ ಬಲಿಯಾಗಿದ್ದರೆ, ಇದೀಗ ಆನೆ ಮಾರ್ತಾಂಡನ ಜೀವ ಕೂಡಾ ಉಳಿಯಲಿಲ್ಲ.

ಇದನ್ನೂ ಓದಿ:ದುಬಾರೆಯಲ್ಲಿ ಕಂಜನ್ & ಮಾರ್ತಾಂಡ ಆನೆಗಳ ಕಾದಾಟ – ಸಾಕಾನೆಗಳ ಕಾಳಗಕ್ಕೆ ಸಿಲುಕಿ ಪ್ರವಾಸಿ ಮಹಿಳೆ ಸಾವು!

ಕಂಜನ್‌ ಆನೆಯ ಅಟ್ಟಹಾಸಕ್ಕೆ ಮಾರ್ತಾಂಡ ಆನೆ ಕೊನೆಗೂ ಜೀವ ಬಿಟ್ಟಿದೆ. ಸೋಮವಾರ ಮಧ್ಯಾಹ್ನದ ವರೆಗೂ ಕಂಜನ್ ಮತ್ತು ಮಾರ್ತಾಂಡ ಎರಡು ಆನೆಗಳು ಚೆನ್ನಾಗಿಯೇ ಇದ್ದವು. ದುಬಾರೆಗೆ ಬಂದ ಪ್ರವಾಸಿಗರು ಕೂಡಾ ಆನೆಗಳನ್ನು ನೋಡುತ್ತಾ ಸಂಭ್ರಮಿಸುತ್ತಿದ್ದರು. ಸಾಕಾನೆಗಳಿಗೆ ಪ್ರವಾಸಿಗರೆಲ್ಲಾ ಸ್ನಾನ ಮಾಡಿಸ್ತಿದ್ದರು. ಕಂಜನ್‌ ಆನೆ ಹಾಗೂ ಮಾರ್ತಾಂಡ ಆನೆಗಳೆರೆಡೂ ಅಕ್ಕಪಕ್ಕದಲ್ಲೇ ಇದ್ದವು. ಹೀಗಾಗಿ ಎರಡು ಆನೆಗಳಿಗೂ ನೀರು ಹಾಕ್ತಿದ್ದರು. ಈ ವೇಳೆ ಕಂಜನ್‌ ಆನೆ ಸಡನ್ ಆಗಿ ಕೆರಳಿತು. ಒಮ್ಮೆಲೆ ಮಾರ್ತಾಂಡ ಆನೆ ಮೇಲೆ ದಾಳಿ ಮಾಡಿದೆ. ಕಂಜನ್ ಆನೆಯ ದಾಳಿಗೆ ಮಾರ್ತಾಂಡ ಆನೆ ಗಂಭೀರಾವಗಿ ಗಾಯಗೊಂಡಿತ್ತು. ಮಂಗಳವಾರ ಮಾರ್ತಾಂಡ ಆನೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

ಕಂಜನ್ ಮೂಲತಃ ಸಾಧು ಆನೆಯಾಗಿದೆ. 2023 ರಲ್ಲಿ ದಕ್ಷಿಣ ಕನ್ನಡದ ಕಡಬ ಭಾಗದಲ್ಲಿ ಕಾಡಾನೆಗಳು ಇಬ್ಬರನ್ನು ಬಲಿಪಡೆದಾಗ, ಆ ಪುಂಡಾನೆಗಳನ್ನು ಸೆರೆಹಿಡಿಯುವ ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆಯಲ್ಲಿ ಅಭಿಮನ್ಯು ತಂಡದ ಜೊತೆ ಕಂಜನ್ ಪ್ರಮುಖ ಪಾತ್ರ ವಹಿಸಿದ್ದನು.

Sulekha

Leave a Reply

Your email address will not be published. Required fields are marked *