ದೇಶದ ಜನರಿಗೆ ಬಿಗ್‌ಶಾಕ್!‌ – – ಒಂದೇ ವಾರದಲ್ಲಿ 2ನೇ ಬಾರಿಗೆ ಪೆಟ್ರೋಲ್‌, ಡೀಸೆಲ್‌ ದರ ಭಾರಿ ಏರಿಕೆ!

ದೇಶದ ಜನರಿಗೆ ಬಿಗ್‌ಶಾಕ್!‌ – – ಒಂದೇ ವಾರದಲ್ಲಿ 2ನೇ ಬಾರಿಗೆ ಪೆಟ್ರೋಲ್‌, ಡೀಸೆಲ್‌ ದರ ಭಾರಿ ಏರಿಕೆ!

ಬೆಲೆ ಏರಿಕೆಯಿಂದ ಕಂಗೆಟ್ಟಿರುವ ದೇಶದ ಜನರಿಗೆ ಶಾಕ್‌ ಎದುರಾಗಿದೆ. ಒಂದೇ ವಾರದೊಳಗೆ 2ನೇ ಬಾರಿಗೆ ಪೆಟ್ರೋಲ್, ಡೀಸೆಲ್‌ ದರ ಏರಿಕೆಯಾಗಿದೆ. ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಪ್ರತಿ ಲೀ.ಗೆ ಸುಮಾರು 90 ಪೈಸೆ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ: ಮುಷ್ಕರದಿಂದ ಹಿಂದೆ ಸರಿದ KSRTC ನೌಕರರ ಸಂಘ! – ನಾಳೆ ಬಸ್‌ ಸಂಚಾರ ಎಂದಿನಂತೆ ಇರುತ್ತಾ?

ಇರಾನ್‌ – ಅಮೆರಿಕ ಯುದ್ದದ ಎಫೆಕ್ಟ್‌ ಭಾರತಕ್ಕೆ ತಟ್ಟುತ್ತಿದೆ. ಇದ್ರಿಂದಾಗಿ ತೈಲ ಕಂಪನಿಗಳು ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಹೆಚ್ಚಳ ಮಾಡುತ್ತಿವೆ. ಮೇ 15 ರ ಶುಕ್ರವಾರ ಪ್ರತಿ ಲೀ.ಗೆ ಏಕಾಏಕಿ 3 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದಾದ ಮೂರು ದಿನಗಳಲ್ಲಿ ಮತ್ತೆ ಪೆಟ್ರೋಲ್‌ ದರ ಏರಿಕೆ ಮಾಡಲಾಗಿದೆ. ಪ್ರತಿ ಲೀ.ಗೆ ಸುಮಾರು 90 ಪೈಸೆ ಹೆಚ್ಚಿಸಿವೆ.

ದೆಹಲಿಯಲ್ಲಿ ಪೆಟ್ರೋಲ್‌ ಲೀಟರ್‌ಗೆ 94.77 ರೂ. ನಿಂದ 97.77 ರೂ.ಗಳಿಗೆ ತಲುಪಿತ್ತು, ಡೀಸೆಲ್‌ ಲೀಟರ್‌ಗೆ 87.67 ರೂ. ಗಳಿಂದ 90.67 ರೂ.ಗಳಿಗೆ ಏರಿಕೆಯಾಗಿತ್ತು. ಇದೀಗ ಮತ್ತೆ ದರ ಏರಿಕೆ ಮಾಡಿದ್ದು, ಸಾರ್ವಜನಿಕರಿಗೆ ಭಾರೀ ಹೊಡೆತ ನೀಡಿದೆ.

ಮಾರುಕಟ್ಟೆ ವಿಶ್ಲೇಷಕರು ಮತ್ತು ಕೈಗಾರಿಕಾ ಮೂಲಗಳ ಪ್ರಕಾರ, ಈ ಹೆಚ್ಚಳವು ಜಾಗತಿಕವಾಗಿ ನಡೆಯುತ್ತಿರುವ ರಾಜತಾಂತ್ರಿಕ ಮತ್ತು ಮಿಲಿಟರಿ ಬಿಕ್ಕಟ್ಟಿನ ನೇರ ಪರಿಣಾಮವಾಗಿದೆ. ಯುಎಸ್ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಿದಂತೆ ಹಾರ್ಮುಜ್ ಜಲಸಂಧಿ ಮಾರ್ಗದಲ್ಲಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ಹೀಗಾಗಿ ಕಚ್ಚಾತೈಲ ಪ್ರತಿ ಬ್ಯಾರಲ್‌ಗೆ 100 ಡಾಲರ್‌ಗಿಂತಲೂ ಹೆಚ್ಚಾಗಿದೆ ಎನ್ನಲಾಗಿದೆ.

Shwetha M