ನಾಲೆ ಬಳಿ ಸೆಲ್ಫಿ ತೆಗೆಯುವಾಗ ಕಾಲು ಜಾರಿ ಬಿದ್ದ ತಂದೆ – ಅಪ್ಪನ ಹುಚ್ಚಾಟಕ್ಕೆ 4 ವರ್ಷದ ಬಾಲಕ ಬಲಿ!

ಜನರ ಸೆಲ್ಫಿ ಹುಚ್ಚಿಗೆ ಮಿತಿಯೇ ಇಲ್ಲ ಅನ್ನಿಸುತ್ತೆ. ಪ್ರಾಣ ಪಣಕ್ಕಿಟ್ಟು ಫೋಟೋಗಳನ್ನ ತೆಗೆದುಕೊಳ್ಳಲು ಹೋಗಿ ಪ್ರಾಣವನ್ನೇ ಬಿಡುತ್ತಿದ್ದಾರೆ. ಈಗ ಮತ್ತೊಂದು ಅಂಥದ್ದೇ ಘಟನೆ ನಡೆದಿದೆ. ಅದೂ ಕೂಡ ಅಪ್ಪನ ಸೆಲ್ಫಿ ಹುಚ್ಚಿಗೆ 4 ವರ್ಷದ ಮಗ ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ : ದುಬಾರೆಯಲ್ಲಿ ಕಂಜನ್ & ಮಾರ್ತಾಂಡ ಆನೆಗಳ ಕಾದಾಟ – ಸಾಕಾನೆಗಳ ಕಾಳಗಕ್ಕೆ ಸಿಲುಕಿ ಪ್ರವಾಸಿ ಮಹಿಳೆ ಸಾವು!
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬೇಸಿಗೆ ಅಂತ ಜನರು ನಾಲೆ ಹಾಗೂ ಫಾಲ್ಸ್ಗಳ ನೀರಿನಲ್ಲಿ ಈಜಾಡು ತೆರಳೋದು ಸಾಮಾನ್ಯ. ಆದ್ರೆ ಅಪಾಯದ ಜಾಗದಲ್ಲಿ ಹುಚ್ಚಾಟ ಮಾಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಿರಿಯೂರು ತಾಲೂಕಿನ ವಿವಿ ಸಾಗರದ ನಾಲೆ (The Sagara Canal) ಬಳಿ ಅಪ್ಪನ ಸೆಲ್ಫಿ ಕ್ರೇಜಿಗೆ ಮಗ ಬಲಿಯಾಗಿದ್ದಾನೆ. ಆದಿವಾಲ ಗ್ರಾಮದ ಜಾಫರ್ ಸಾಧಿಕ್ ಎಂಬಾತ ವಿವಿ ಸಾಗರದ ನಾಲೆ ನೀರಿಗೆ ಇಳಿದಿದ್ದ. ಇದೇ ವೇಳೆ ಮಗನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ನಾಲೆಗೆ ಬಿದ್ದಿದ್ದಾನೆ. ತಂದೆ ಸೆಲ್ಫಿ ಹುಚ್ಚಾಟಕ್ಕೆ ಮಗು ಬಲಿಯಾಗಿದೆ. ಬಳಿಕ ಆತನು ಕೊಚ್ಚಿ ಹೋಗ್ತಿದ್ದ ಈ ವೇಳೆ ಸ್ಥಳೀಯರು ಸಹಾಯ ಮಾಡಿ ಕಾಪಾಡಿದ್ದಾರೆ.
4 ವರ್ಷದ ಮಗನ ಜೊತೆ ವಿವಿ ಸಾಗರ ನಾಲೆ ಬಳಿ ಸೆಲ್ಪಿ ತೆಗೆದುಕೊಳ್ಳೋದ್ದಕ್ಕೆ ಹೋಗಿದ್ದ ವೇಳೆ ಜಾಫರ್ ಸಾಧಿಕ್ ಕೈಯಿಂದ ಮಗು ಜಾರಿ ಬಿದ್ದಿದ್ದು, ಸಮರ್ (04) ನೀರು ಪಾಲಾಗಿದ್ದಾನೆ. ಆದ್ರೆ ಸಾರ್ವಜನಿಕರ ಸಹಾಯದಿಂದ ತಂದೆ ಜಾಫರ್ ಸಾಧಿಕ್ ಬಚಾವ್ ಆಗಿದ್ದಾನೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಮಗುವಿನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆದಿದೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನೋಡಿರಿ

