SRH ವಿರುದ್ಧ ಅಖಾಡಕ್ಕೆ ಇಳಿಯುತ್ತಾರಾ ತಲಾ – ಚೆನ್ನೈನಲ್ಲಿಂದು ಎಂ.ಎಸ್ ಧೋನಿಗೆ ವಿದಾಯ ಪಂದ್ಯ?

SRH ವಿರುದ್ಧ ಅಖಾಡಕ್ಕೆ ಇಳಿಯುತ್ತಾರಾ ತಲಾ – ಚೆನ್ನೈನಲ್ಲಿಂದು ಎಂ.ಎಸ್ ಧೋನಿಗೆ ವಿದಾಯ ಪಂದ್ಯ?

2026ರ ಐಪಿಎಲ್ ನ ಪ್ಲೇ ಆಫ್ಸ್ ರೇಸ್ ನಲ್ಲಿರೋ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯ ಉಭಯ ತಂಡಗಳ ಪಾಲಿಗೂ ಡು ಆರ್ ಡೈ ಮ್ಯಾಚ್ ಆಗಿದೆ. ಅಂಕಪಟ್ಟಿಯಲ್ಲಿ 14 ಅಂಕಗಳೊಂದಿಗೆ ಹೈದ್ರಾಬಾದ್ ಮೂರನೇ ಸ್ಥಾನದಲ್ಲಿದ್ರೆ 12 ಅಂಕಗಳೊಂದಿಗೆ ಚೆನ್ನೈ ತಂಡ 5ನೇ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದರೆ ಎರಡೂ ತಂಡಗಳು ಪ್ಲೇ ಆಫ್ಸ್ ಸುತ್ತಿಗೆ ಹತ್ತಿರವಾಗುತ್ತವೆ. ಅದೆಲ್ಲಕ್ಕಿಂತ ಮುಖ್ಯವಾಗಿ ಇವತ್ತಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಕಣಕ್ಕಿಳಿಯೋ ನಿರೀಕ್ಷೆಗಳಿದ್ದು ಬಾರೀ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : RCB ಗೆದ್ದ ಮೇಲೆ ಅಂಕಪಟ್ಟಿ ಲೆಕ್ಕಾಚಾರ ಉಲ್ಟಾ –  3 ಸ್ಥಾನಗಳಿಗೆ 7 ತಂಡಗಳ ಜಿದ್ದಾಜಿದ್ದಿ!

19ನೇ ಸೀಸನ್ ಐಪಿಎಲ್ ನಲ್ಲಿ ಇನ್ನೇನು ಲೀಗ್ ಹಂತದ ಕೊನೆಯ ಪಂದ್ಯಗಳೂ ನಡೀತಾ ಇದ್ರೂ ಮಹೇಂದ್ರ ಸಿಂಗ್ ಧೋನಿ ಇದುವರೆಗೆ ಮೈದಾನಕ್ಕೆ ಕಾಲಿಟ್ಟಿಲ್ಲ. ಇದೀಗ ಟೂರ್ನಿಯಲ್ಲಿ ಸಿಎಸ್‌ಕೆ ತವರಿನಲ್ಲಿ ಕೊನೆಯ ಲೀಗ್ ಪಂದ್ಯ ಆಡುತ್ತಿದೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಇಂಜುರಿ ಕಾರಣದಿಂದ ಹೊರಗುಳಿದ ಧೋನಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಪಂದ್ಯಕ್ಕಾಗಿ ಚೆನ್ನೈನಲ್ಲಿ ತಂಡ ಸೇರಿಕೊಂಡಿದ್ದಾರೆ. ಅಭ್ಯಾಸವನ್ನು ನಡೆಸಿದ್ದಾರೆ. ಇದರ ನಡುವೆ ಧೋನಿ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದ್ದು ಹಾಗೇ ಇದು ವಿದಾಯದ ಪಂದ್ಯ ಅನ್ನೋ ಮಾತುಗಳು ಕೇಳಿಬರುತ್ತಿದೆ. ತವರಿನಲ್ಲಿ ಸಿಎಸ್‌ಕೆ ಕೊನೆಯ ಪಂದ್ಯ ಆಡುತ್ತಿದೆ. ಅಂತಿಮ ಎರಡು ಪಂದ್ಯ ಗೆದ್ದರೆ ಸಿಎಸ್‌ಕೆಗೆ ಪ್ಲೇಆಫ್ ಅವಕಾಶ ತೆರೆಯಲಿದೆ. ಇತ್ತ ಧೋನಿ ಇಂದಿನ ಪಂದ್ಯ ಆಡಿ ಐಪಿಎಲ್ ಟೂರ್ನಿಯಿಂದಲೂ ವಿದಾಯ ಹೇಳುವ ಸಾಧ್ಯತೆಗಳಿವೆ.

ಚೆನ್ನೈ ತಂಡದ ಜೀವಾಳವೇ ಆಗಿರುವ ಎಂಎಸ್ ಧೋನಿ ಹಿಂದೊಮ್ಮೆ ತಮ್ಮ ನಿವೃತ್ತಿ ಬಗ್ಗೆ ಹೇಳಿದ್ದ ಮಾತುಗಳೇ ಇಂಥಾ ನಿರೀಕ್ಷೆಗಳಿಗೆ ಕಾರಣವಾಗಿದೆ. 2021ರಲ್ಲಿ ಐಪಿಎಲ್ ಟ್ರೋಫಿ ಗೆದ್ದ ಧೋನಿ ವಿದಾಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು. ನನ್ನ ಕ್ರಿಕೆಟ್ ಕುರಿತು ನನಗೆ ಯಾವತ್ತೂ ಪ್ಲಾನ್ ಇರುತ್ತೆ. ತವರಿನಲ್ಲಿ ನಾನು ಕೊನೆಯ ಏಕದಿನ ಪಂದ್ಯವನ್ನು ಹುಟ್ಟೂರು ರಾಂಚಿಯಲ್ಲಿ ಆಡಿದ್ದೆ. ಟಿ20 ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡುತ್ತೇನೆ. ಅದು ಮುಂದಿನ ಬಾರಿ ಅಥವಾ ಮುಂದಿನ 5 ವರ್ಷದಲ್ಲಿ, ಯಾವತ್ತು ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದರು. ಧೋನಿ ಹೇಳಿದಂತೆ ಈಗ 5 ವರ್ಷವಾಗಿದೆ. ಧೋನಿ ಆಸೆಯಂತೆ ಚೆನ್ನೈನಲ್ಲಿ ಸಿಎಸ್‌ಕೆ ತಂಡದ ಕೊನೆಯ ಲೀಗ್ ಪಂದ್ಯ ಇದಾಗಿದೆ. ಇಷ್ಟೇ ಅಲ್ಲ ಇಂಜುರಿಯಿಂದ ಒಂದು ಪಂದ್ಯ ಆಡದ ಧೋನಿ ಇದೀಗ ಚೇತರಿಸಿಕೊಂಡು ಅಭ್ಯಾಸ ಕೂಡ ಮಾಡಿದ್ದಾರೆ. ಮುಂದಿನ ವರ್ಷ ಫಿಟ್ನೆಸ್, ಇಂಜುರಿ ಕಾರಣಗಳಿಂದ ಧೋನಿ ಐಪಿಎಲ್ ಆಡುವ ಸಾಧ್ಯತೆ ಕಡಿಮೆ. ಅದೂ ಅಲ್ದೇ ಈ ಆವೃತ್ತಿಯಲ್ಲೇ ಧೋನಿ ಒಂದು ಐಪಿಎಲ್ ಪಂದ್ಯ ಆಡಿಲ್ಲ. ಕೊನೆಯ ಐಪಿಎಲ್ ಪಂದ್ಯ ಆಢಿದ್ದು 2025ರ ಆವೃತ್ತಿಯಲ್ಲಿ. ಗುಜರಾತ್ ಟೈಟಾನ್ಸ್ ವಿರುದ್ಧ ಧೋನಿ ಆಡಿದ್ದರು. ಈ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡಿಲ್ಲ, ಕೀಪಿಂಗ್ ವೇಳೆ ಒಂದು ಕ್ಯಾಚ್ ಹಿಡಿದಿದ್ದಾರೆ. ಈ ಆವೃತ್ತಿಯ ಆರಂಭದಲ್ಲಿ ಇಂಜುರಿ ಎಂದು ತಂಡದಿಂದ ಹೊರಗುಳಿದ ಧೋನಿ ಯಾವುದೇ ಪಂದ್ಯ ಆಡಿಲ್ಲ. ಹಾಗೂ ಪಂದ್ಯದ ವೇಳೆ ತಂಡದ ಜೊತೆಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಇವತ್ತಿನ ತವರಿನ ಪಂದ್ಯದ ಮೂಲಕ ಐಪಿಎಲ್ ಗೂ ಗುಡ್ ಬೈ ಹೇಳ್ತಾರಾ ಅನ್ನೋ ಕುತೂಹಲ ಮೂಡಿದೆ.

Shantha Kumari

Leave a Reply

Your email address will not be published. Required fields are marked *