ಸುಪ್ರೀಂ ನಲ್ಲಿ ಬೇಲ್ ಸಿಗದೇ ಮೌನಕ್ಕೆ ಜಾರಿದ ದರ್ಶನ್ – ವಿಜಯಲಕ್ಷ್ಮಿ ಭಾವುಕ ಪೋಸ್ಟ್!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಸೆರೆವಾಸದಲ್ಲಿರುವ ದರ್ಶನ್ ಜಾಮೀನಿಗಾಗಿ ಶತಪ್ರಯತ್ನ ಮಾಡಿ ಕೊನೆಗೆ ನಿರಾಸೆ ಅನುಭವಿಸಿದ್ದಾರೆ. ನಟ ದರ್ಶನ್ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಇದೀಗ ಒಂದು ವರ್ಷಗಳ ಕಾಲ ದರ್ಶನ್‌ಗೆ ಜೈಲೆ ಗತಿಯಾಗಿದೆ. ಬೇಲ್ ನಿರಾಕರಣೆ ಬಳಿಕ ಪತ್ನಿ ವಿಜಯಲಕ್ಷ್ಮಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಜಾಮೀನು ನಿರಾಕರಣೆಯಿಂದ ವಿಜಯಲಕ್ಷಿ ತೀವ್ರ ನೊಂದಿದ್ದಾರೆ.
ಇದನ್ನೂ ಓದಿ: ದಶಕದ ಬಳಿಕ ಕೇರಳದಲ್ಲಿ ಕಾಂಗ್ರೆಸ್ ಅಧಿಕಾರ- ದೇವರ ಹೆಸರಿನಲ್ಲಿ ನೂತನ ಸಿಎಂ ಆಗಿ ವಿ.ಡಿ ಸತೀಶನ್ ಪ್ರಮಾಣವಚನ ಸ್ವೀಕಾರ!
ಪರಪ್ಪನ ಅಗ್ರಹಾರದ ಕ್ವಾರಂಟೈನ್ ಜೈಲಿನ ಬ್ಯಾರಕ್‌ನಲ್ಲಿರುವ ಡಿ-ಬಾಸ್ ಯಾರೊಂದಿಗೂ ಮಾತನಾಡದೇ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಬ್ಯಾರಕ್‌ನ ಮೂಲೆಯೊಂದರಲ್ಲಿ ಏಕಾಂಗಿಯಾಗಿ ಕುಳಿತು ಕಾಲ ಕಳೆಯುತ್ತಿದ್ದಾರೆ.
ಇದರ ನಡುವೆ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರಿಗೆ ಜೈಲಿನ ಊಟವೂ ಒಗ್ಗುತ್ತಿಲ್ಲ. ಸರಿಯಾಗಿ ನಿದ್ದೆಯೂ ಬಾರದೇ ದೈಹಿಕವಾಗಿಯೂ ದಚ್ಚು ಕುಗ್ಗಿ ಹೋಗಿದ್ದಾರೆ ಎನ್ನಲಾಗಿದೆ. ಇತ್ತ ಪತಿ ಜೈಲಿನಲ್ಲಿ ನರಳುತ್ತಿದ್ದರೆ, ಅತ್ತ ಪತ್ನಿ ವಿಜಯಲಕ್ಷ್ಮಿ ದರ್ಶನ್ ನೆನಪಿನಲ್ಲಿ ದಿನದೂಡುತ್ತಿದ್ದಾರೆ.
ದರ್ಶನ್ ಅವರ ಪರಿಸ್ಥಿತಿ ಕಂಡು ಕರಗಿ ಹೋಗಿರುವ ವಿಜಯಲಕ್ಷ್ಮಿ, ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ದರ್ಶನ್ ಫೋಟೋ ಹಾಕಿ, ಹಾರ್ಟ್ ಬ್ರೇಕ್ ಇಮೋಜಿ ಪೋಸ್ಟ್ ಮಾಡಿ ಕಣ್ಣೀರು ಹಾಕಿದ್ದಾರೆ. ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿ ಮುಂದಿನ ದಾರಿ ಕಾಣದೆ ದರ್ಶನ್ ಕುಟುಂಬ ಕಂಗಾಲಾಗಿದೆ.

ನೋಡಿರಿ

