ಭಾರೀ ಮಳೆಗೆ ರೈಲ್ವೆ ಹಳಿಗೆ ಬಿದ್ದ – ಮೈಸೂರು-ಶಿವಮೊಗ್ಗ, ಶಿವಮೊಗ್ಗ-ತಾಳಗುಪ್ಪ ರೈಲು ಸಂಚಾರದಲ್ಲಿ ವ್ಯತ್ಯಯ

ರಾಜ್ಯದ ಹಲವು ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರೀ ಮಳೆಗೆ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಶಿವಮೊಗ್ಗದಲ್ಲಿ ಭಾನುವಾರ ಸುರಿದ ಗುಡುಗು ಸಿಡಿಲು ಸಹಿತ ಭಾರೀ ಮಳೆಗೆ ಮಳೆ, ಗಾಳಿಗೆ ರೈಲ್ವೆ ಟ್ರ್ಯಾಕ್ ಮೇಲೆ ಬೃಹತ್ ಮರ ಬಿದ್ದಿದೆ.
ಇದನ್ನೂ ಓದಿ: ಸಿಕ್ಕಾಪಟ್ಟೆ ಸೆಕೆ ಇದೆ ಅಂತ ಐಸ್ಕ್ರೀಂ ತಿಂತೀರಾ? – ಅಯ್ಯಯ್ಯೋ.. ಇದನ್ನ ತಿನ್ನೋದ್ರಿಂದ ಇಷ್ಟೆಲ್ಲಾ ಸಮಸ್ಯೆ ಬರುತ್ತಾ?
ಭಾನುವಾರ ಶಿವಮೊಗ್ಗ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದಿದೆ. ಪರಿಣಾಮ ಮಳೆಗಾಳಿಗೆ ರೈಲ್ವೆ ಟ್ರ್ಯಾಕ್ ಮೇಲೆ ಬೃಹತ್ ಮರ ಬಿದ್ದಿದ್ದು, ವಿದ್ಯುತ್ ಲೇನ್ ತುಂಡಾಗಿದೆ. ಇದ್ರಿಂದಾಗಿ ಮೈಸೂರು – ಶಿವಮೊಗ್ಗ ಹಾಗೂ ಶಿವಮೊಗ್ಗ – ತಾಳಗುಪ್ಪ ಪ್ಯಾಸೆಂಜರ್ ಟ್ರೈನ್ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಗಂಟೆಗಟ್ಟಲೆ ಕಾದು-ಕಾದು ಹೈರಾಣಾಗಿದ್ದಾರೆ.
ಶಿವಮೊಗ್ಗ–ಭದ್ರಾವತಿ ನಡುವಿನ 57ನೇ ರೈಲ್ವೆ ಕಿಲೋಮೀಟರ್ ಪ್ರದೇಶದಲ್ಲಿ ಮರ ಉರುಳಿ ಬಿದ್ದ ಪರಿಣಾಮ ರೈಲ್ವೆ ವಿದ್ಯುತ್ ಲೈನ್ ತುಂಡಾಗಿದೆ. ಬೆಂಗಳೂರು-ಶಿವಮೊಗ್ಗ ಜನಶತಾಬಿ ರೈಲು ರಾತ್ರಿ 9 ಗಂಟೆಗೆ ತರೀಕೆರೆಗೆ ತಲುಪಿದರೂ, ತಾಂತ್ರಿಕ ದುರಸ್ತಿಯ ಹಿನ್ನೆಲೆಯಲ್ಲಿ ರಾತ್ರಿ 10:17ರವರೆಗೆ ಅಲ್ಲೇ ನಿಲ್ಲಿಸಲಾಯಿತು. ಮೈಸೂರು-ಶಿವಮೊಗ್ಗ ಕುವೆಂಪು ಎಕ್ಸ್ಪ್ರೆಸ್ ರೈಲು ಮಸರಹಳ್ಳಿಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ನಿಲುಗಡೆಗೊಂಡಿತ್ತು.
ಇದೇ ವೇಳೆ ಬೆಂಗಳೂರು-ಶಿವಮೊಗ್ಗ-ತಾಳಗುಪ್ಪ ಇಂಟರ್ಸಿಟಿ ರೈಲನ್ನೂ ಮಾರ್ಗ ಮಧ್ಯೆ ನಿಲ್ಲಿಸಲಾಗಿತ್ತು. ರಾತ್ರಿ 8:27ಕ್ಕೆ ಭದ್ರಾವತಿಗೆ ಆಗಮಿಸಿದ್ದ ರೈಲು ಬಳಿಕ ರಾತ್ರಿ 10:09ಕ್ಕೆ ಹೊರಟು 10:25ಕ್ಕೆ ಶಿವಮೊಗ್ಗ ತಲುಪಿತು. ಮರ ತೆರವುಗೊಳಿಸಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸಿದ ಬಳಿಕ ರೈಲು ಸಂಚಾರ ಪುನರಾರಂಭಗೊಂಡಿದೆ.

ನೋಡಿರಿ

