ಸ್ಟಾರ್ಕ್ ಬೌಲಿಂಗ್ ಗೆ ರಾಜಸ್ಥಾನ ಬ್ಯಾಟರ್ಸ್ ಪಲ್ಟಿ – ಆರ್ ಆರ್ ಪ್ಲೇ ಆಫ್ಸ್ ಜರ್ನಿಗೆ ವಿಘ್ನವಾದ ಡೆಲ್ಲಿ ಕ್ಯಾಪಿಟಲ್ಸ್!

ಪ್ಲೇ ಆಫ್ಸ್ ರೇಸ್ ಕ್ಷಣ ಕ್ಷಣಕ್ಕೂ ರೋಚಕವಾಗುತ್ತಿದ್ದು ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಧಿಕೃತವಾಗಿ ಕ್ವಾಲಿಫೈ ಆಗಿದೆ. ಮತ್ತೊಂದೆಡೆ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲ್ಲೋ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಆಸೆ ಕೂಡ ಜೀವಂತವಾಗಿರಿಸಿಕೊಂಡಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಮ್ಯಾಚಲ್ಲಿ ಡೆಲ್ಲಿ ಗೆಲ್ಲೋ ಮೂಲಕ ರಾಜಸ್ಥಾನಕ್ಕೆ ಶಾಕ್ ಕೊಟ್ಟಿದೆ.
ಇದನ್ನೂ ಓದಿ : Whats Is Your Name? – ಕರುವಿನ ಜೊತೆ ಮುದ್ದು ಕಂದನ ಸಂಭಾಷಣೆ!
ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ ಪರ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 46 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 12 ರನ್ ಕಲೆಹಾಕಿದರು. ನಾಯಕ ರಿಯಾನ್ ಪರಾಗ್ 23 ಎಸೆತಗಳಲ್ಲಿ ಅರ್ಧಶತಕ ಗಳಿಸಿ 51 ರನ್ ಬಾರಿಸಿದರು. ರವಿ ಸಿಂಗ್ 4 ರನ್ ಗಳಿಸಿ ಔಟಾದರು, ಡೊನೊವನ್ ಫೆರೇರಾ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಶುಭಂ ದುಬೆ ಕೇವಲ 5 ರನ್ ಗಳಿಸಿದರೆ, ದಾಸುನ್ ಶನಕ 10 ರನ್ ಗಳಿಸಿದರು. ಧ್ರುವ್ ಜುರೆಲ್ 36 ಎಸೆತಗಳಲ್ಲಿ 53 ರನ್ ಕಲೆಹಾಕಿ ನಿರ್ಗಮಿಸಿದರು. ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದರೆ, ಲುಂಗಿ ಎನ್‌ಗಿಡಿ ಮತ್ತು ಮಾಧವ್ ತಿವಾರಿ ತಲಾ 2 ವಿಕೆಟ್ ಕಿತ್ತರು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್ ಗಳಿಸಿತು, ಡೆಲ್ಲಿಗೆ 194 ರನ್‌ಗಳ ಗುರಿಯನ್ನು ನೀಡಿತು.
ಟಾರ್ಗೆಟ್ ಬೆನ್ನತ್ತಿದ ಡೆಲ್ಲಿ ಪರ ಅಭಿಷೇಕ್ ಪೊರೆಲ್-ಕೆಎಲ್ ರಾಹುಲ್ ಅರ್ಧಶತಕ ಸಿಡಿಸಿದರು. ಆರಂಭಿಕ ಆಟಗಾರ ಅಭಿಷೇಕ್ ಪೊರೆಲ್ 29 ಎಸೆತಗಳಲ್ಲಿ 51 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ 34 ಎಸೆತಗಳಲ್ಲಿ 56 ರನ್ ಗಳಿಸಿದರು. ಉಳಿದಂತೆ ಸಾಹಿಲ್ ಪರಾಖ್ 9 ರನ್, ಟ್ರಿಸ್ಟಾನ್ ಸ್ಟಬ್ಸ್ 4 ರನ್ , ಡೇವಿಡ್ ಮಿಲ್ಲರ್ 5 ರನ್ , ಅಕ್ಷರ್ ಪಟೇಲ್ 34 ರನ್ ಗಳಿಸಿ ಅಜೇಯರಾಗಿ ಉಳಿದರೆ, ಅಶುತೋಷ್ ಶರ್ಮಾ 18 ರನ್ ಕೊಡುಗೆ ನೀಡಿದರು. ರಾಜಸ್ಥಾನ ಪರ ಜೋಫ್ರಾ ಆರ್ಚರ್ ಮತ್ತು ಬ್ರಿಜೇಶ್ ಶರ್ಮಾ ತಲಾ 2 ವಿಕೆಟ್ ಪಡೆದರು. ಡೆಲ್ಲಿ 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ 197 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಮಿಚೆಲ್ ಸ್ಟಾರ್ಕ್ ಅವರ ಅದ್ಭುತ ಬೌಲಿಂಗ್‌ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ನೋಡಿರಿ

