ಪಂತ್ ಔಟ್.. ಪಾಂಡ್ಯಗೆ ಗೇಟ್ ಪಾಸ್ – 2027ಕ್ಕೆ ನಾಲ್ವರು ನಾಯಕರ ತಲೆದಂಡ
ಹೊಸ ಸಾರಥ್ಯಕ್ಕೆ ಯಾರೆಲ್ಲಾ ರೆಡಿ?

ಪಂತ್ ಔಟ್.. ಪಾಂಡ್ಯಗೆ ಗೇಟ್ ಪಾಸ್ – 2027ಕ್ಕೆ ನಾಲ್ವರು ನಾಯಕರ ತಲೆದಂಡಹೊಸ ಸಾರಥ್ಯಕ್ಕೆ ಯಾರೆಲ್ಲಾ ರೆಡಿ?

ಟಾಪ್-2ನಲ್ಲೂ ರೇಸ್.. ಟಾಪ್-4ನಲ್ಲೂ ಕ್ಲ್ಯಾಶ್.. 2026ರ ಐಪಿಎಲ್​ನ ಚಾಂಪಿಯನ್ ಪಟ್ಟಕ್ಕೇರೋಕೆ ಟಫ್ ಫೈಟ್ ನಡೀತಿದೆ. ಅವ್ರು ಗೆಲ್ತಾರೋ ಇವ್ರು ಗೆಲ್ತಾರೋ ಯಾರು ಕ್ವಾಲಿಫೈ ಆಗ್ತಾರೆ ಅನ್ನೋ ಲೆಕ್ಕಾಚಾರಗಳು ಜೋರಾಗಿವೆ. ಮತ್ತೊಂದ್ಕಡೆ ಪ್ಲೇ ಆಫ್ಸ್ ಟಿಕೆಟ್ ಮಿಸ್ ಮಾಡ್ಕೊಂಡಿರೋ ತಂಡಗಳಲ್ಲಿ ನೆಕ್ಸ್​ಟ್ ಸೀಸನ್​ಗೆ ಹೇಗೆ ಕಂ ಬ್ಯಾಕ್ ಮಾಡ್ಬೇಕು ಅನ್ನೋ ಚರ್ಚೆ ಶುರುವಾಗಿದೆ. ಌಂಡ್ ಕೆಲ ತಂಡಗಳಲ್ಲಿ ಕ್ಯಾಪ್ಟನ್​ಗಳಿಗೇ ಗೇಟ್​ಪಾಸ್ ಕೊಡೋದು ಪಕ್ಕಾ ಆಗಿದೆ.

ಇದನ್ನೂ ಓದಿ : LSG ಏಟಿಗೆ ಹಾದಿ ತಪ್ಪಿದ ಚೆನ್ನೈ – ಆಕಾಶ್ ಚೀಟಿ, ಮಾರ್ಷ್ ಏಟಿಗೆ ಪಲ್ಟಿ

ಒಂದು ವಾರ.. ಇನ್ನೊಂದೇ ವಾರ.. 19ನೇ ಸೀಸನ್ ಐಪಿಎಲ್​ನ ಲೀಗ್ ಹಂತದ ಪಂದ್ಯಗಳ ಮುಕ್ತಾಯಕ್ಕೆ ಇನ್ನೊಂದೇ ವಾರ ಬಾಕಿ. ಮೇ 24ಕ್ಕೆ ಕೊಲ್ಕತ್ತಾ ಮತ್ತು ಡೆಲ್ಲಿ ನಡುವಿನ ಪಂದ್ಯದ ಮೂಲಕ ಲೀಗ್ ಹಂತದ ಬ್ಯಾಟಲ್​ಗೆ ತೆರೆ ಬೀಳಲಿದೆ. ಆ ನಂತ್ರ ಪ್ಲೇಆಫ್ಸ್ ಸುತ್ತಿನಲ್ಲಿ 4 ಪಂದ್ಯಗಳು ಬಾಕಿ ಇದ್ದು ಮೇ 31ಕ್ಕೆ ಹೊಸ ಚಾಂಪಿಯನ್​ನ ಉದಯವಾಗಲಿದೆ. ಆದ್ರೆ ಪ್ಲೇ ಆಫ್ಸ್ ರೇಸ್​ನಲ್ಲಿ ಹೊರಬಿದ್ದು ಈ ಸೀಸನ್ ಆಸೆ ಬಿಟ್ಟಾಕಿರೋ ಕೆಲ ಫ್ರಾಂಚೈಸಿಗಳಲ್ಲಿ ತಮ್ಮ ಫೇಲ್ಯೂರ್​ಗೆ ಕಾರಣ ಏನು ಅನ್ನೋ ಬಗ್ಗೆ ಅನಲಿಸಿಸ್ ನಡೀತಿದೆ.. ಇದರ ಭಾಗವಾಗಿ ಕೆಲ ತಂಡಗಳಲ್ಲಿ ಕ್ಯಾಪ್ಟನ್ಸಿ ಸರ್ಜರಿಗೂ ಸಿದ್ಧತೆಗಳಾಗಿವೆ.

ಸದ್ದು ಮಾಡದ ನಾಯಕರಿಗೆ ಗೇಟ್ ಪಾಸ್!

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬದಲಾವಣೆ ಸಾಧ್ಯತೆ

ಟೀಂ ಹ್ಯಾಂಡಲ್ ಮಾಡುವಲ್ಲಿ ಫೇಲ್ಯೂರ್.. ವೈಯಕ್ತಿಕವಾಗಿ ಕಳಪೆ ಪ್ರದರ್ಶನ

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆಗಿಟ್ಟ ಪಟ್ಟ

ತಂಡವನ್ನ ಲೀಡ್ ಮಾಡುವಲ್ಲಿ ಫೇಲ್.. ವೈಯಕ್ತಿಕ ವರ್ಚಸ್ಸೂ ಕಡಿಮೆ

ಲಕ್ನೋ ಸೂಪರ್ ಜೇಂಟ್ಸ್ ಪಾಲಿಗೆ ಬಿಳಿಯಾನೆಯಾದ ರಿಷಭ್ ಪಂತ್

27 ಕೋಟಿ ಕೊಟ್ರೂ ಕಳಪೆ ಪ್ರದರ್ಶನ.. ತಂಡ ಮುನ್ನಡೆಸುವಲ್ಲಿಯೂ ಫ್ಲ್ಯಾಪ್

ಮುಂಬೈ ತಂಡದಲ್ಲಿಯೂ ಹಾರ್ದಿಕ್ ಪಾಂಡ್ಯಗೆ ಸಿಗದ ನಿರೀಕ್ಷಿತ ಫಲಿತಾಂಶ

ಏಕಪಕ್ಷೀಯವಾಗಿ ನಿರ್ಧಾರಗಳನ್ನ ತಗೊಳ್ತಿರೋ ಪಾಂಡ್ಯ ಕೈತಪ್ಪುತ್ತಾ ನಾಯಕತ್ವ?

ಹೀಗೆ ಈ ನಾಲ್ಕು ತಂಡಗಳಲ್ಲಿ ನಾಯಕತ್ವ ಬದಲಾವಣೆ ಕೂಗು ಜೋರಾಗಿದೆ. ಯಾಕಂದ್ರೆ ಈ ನಾಲ್ಕೂ ತಂಡಗಳು ಪ್ರಸ್ತುತ ಪ್ಲೇ ಆಫ್ಸ್ ರೇಸ್​ನಿಂದ ಹೊರಗಿದ್ದಾರೆ. ಌಂಡ್ ಎಲ್ಲಕ್ಕಿಂತ ಜಾಸ್ತಿ ಈ ನಾಲ್ವರೂ ನಾಯಕರು ಆನ್​ಫೀಲ್ಡ್​ನಲ್ಲಿ ಇಂಪ್ಯಾಕ್ಟ್ ಮಾಡಿಲ್ಲ. ತಾವೂ ಚೆನ್ನಾಗಿ ಆಡ್ತಿಲ್ಲ. ತಂಡವನ್ನೂ ಯಶಸ್ವಿಯಾಗಿ ನಿಭಾಯಿಸ್ತಾ ಇಲ್ಲ. ಹೀಗಾಗಿ ಮುಂದಿನ ಆವೃತ್ತಿಗೆ ಹೊಸ ಸಾರಥ್ಯದಲ್ಲಿ ಬರೋಕೆ ಎದುರು ನೋಡ್ತಾ ಇರ್ತಾರೆ.

Shantha Kumari