ವೆಂಕಿ & ಡಫಿ ಫಾರ್ಮುಲಾ ಸಕ್ಸಸ್ – ಪಂಜಾಬ್ ವಿರುದ್ಧವೂ ಆಡಲ್ಲ ಶೆಫರ್ಡ್?
PBKS ಬೇಟೆಗೆ ಹೀಗಿದೆ ಪ್ಲೇಯಿಂಗ್ 11

ಆರ್ಸಿಬಿಗೆ ಪ್ಲೇ ಆಫ್ಸ್ ಟಿಕೆಟ್ ಟಾರ್ಗೆಟ್.. ಅತ್ತ ಪಂಜಾಬ್ಗೆ ಪ್ಲೇ ಆಫ್ ರೇಸ್ನಲ್ಲಿ ಉಳಿಯೋ ಪ್ರೆಶರ್. ಸೂಪರ್ ಸಂಡೇಯ ಮಧ್ಯಾಹ್ನದ ಮ್ಯಾಚ್ ಎರಡು ತಂಡಗಳಿಗೂ ಮಸ್ಟ್ ವಿನ್ ಗೇಮ್. ಸತತ 5 ಪಂದ್ಯಗಳನ್ನ ಸೋತು ಗೆಲ್ಲಲೇಬೇಕು ಅನ್ನೋ ಟೆನ್ಷನ್ನಲ್ಲಿರೋ ಪಂಜಾಬ್ ಬೇಟೆಗೆ ಆರ್ಸಿಬಿ ಪ್ಲೇಯಿಂಗ್ 11 ರೆಡಿಯಾಗಿದೆ.
ಇದನ್ನೂ ಓದಿ : ಚೆನ್ನೈಗೆ ಮಾಡು ಇಲ್ಲವೇ ಮಡಿ ಪಂದ್ಯ – ಲಕ್ನೋ ವಿರುದ್ಧ ಆಡಲ್ಲ ಜೇಮೀ ಓವರ್ಟನ್
ಲಾಸ್ಟ್ ಸೀಸನ್ನಲ್ಲಿ ಫೈನಲಿಸ್ಟ್ಗಳಾಗಿದ್ದ ಪಂಜಾಬ್ ಮತ್ತು ಬೆಂಗಳೂರು ತಂಡಗಳು ಈ ಸೀಸನ್ನಲ್ಲಿ ಟಾಪ್-4 ರೇಸ್ನಲ್ಲಿದ್ದಾರೆ. ಬೆಂಗಳೂರು ತಂಡದ ಪ್ಲೇ ಆಫ್ಸ್ ಟಿಕೆಟ್ಸ್ ಚಾನ್ಸ್ 99.4 ಪರ್ಸೆಂಟ್ ಇದೆ. ಯಾಕಂದ್ರೆ ಪಸ್ತುತ 16 ಅಂಕಗಳಿದ್ರೆ ನೆಟ್ ರನ್ ರೇಟ್ +1.053 ಇದೆ. ನೆಟ್ ರನ್ರೇಟ್ನಲ್ಲಿ ಉಳಿದ ಯಾವುದೇ ತಂಡಕ್ಕೂ ಬೆಂಗಳೂರು ಹತ್ತಿರಕ್ಕೂ ಬರೋಕೆ ಆಗಿಲ್ಲ. ಇನ್ನು ಪಂಜಾಬ್ ಪ್ಲೇ ಆಫ್ಸ್ ಚಾನ್ಸಸ್ 50.3 ಪರ್ಸೆಂಟ್ಗೆ ಕುಸಿತಗೊಂಡಿದೆ. ಮುಂದಿನ ಎರಡಕ್ಕೆ ಎರಡೂ ಪಂದ್ಯಗಳನ್ನ ಗೆಲ್ಲಲೇಬೇಕಾದ ಒತ್ತಡ ಇದೆ. ಅದ್ರಲ್ಲೂ ಸಂಡೇ ಮ್ಯಾಚ್ ಡು ಆರ್ ಆರ್ ಡೈ ಆಗುತ್ತೆ. ಧರ್ಮಶಾಲಾದಲ್ಲಿ ಭಾನುವಾರ ಮಧ್ಯಾಹ್ನ ನಡೆಯಲಿರೋ ಪಂದ್ಯ ಪ್ಲೇ ಆಫ್ಸ್ ರೇಸ್ನ ದಿಕ್ಕನ್ನೇ ಬದಲಿಸಲಿದೆ.
ಬೆಂಗಳೂರಿಗೆ ಟಾಪ್-2 ಆಸೆ.. ಪಂಜಾಬ್ ಗೆ ಪ್ಲೇ ಆಫ್ಸ್ ಪ್ರಶ್ನೆ!
ಪ್ಲೇ ಆಫ್ಸ್ ಹೊಸ್ತಿಲಲ್ಲೇ ಇರೋ ಬೆಂಗಳೂರಿಗೆ ಟಾಪ್ 4 ಅನ್ನೋದಕ್ಕಿಂತ ಟಾಪ್-2 ಟಾರ್ಗೆಟ್ ಇದೆ. ನಂಬರ್ 1 ಅಥವಾ 2ನಲ್ಲಿ ಲೀಗ್ ಹಂತವನ್ನ ಫಿನಿಶ್ ಮಾಡಿದ್ರೆ ಕ್ವಾಲಿಫೈಯರ್ 1 ಆಡ್ಬೋದು. ಅಲ್ಲಿ ಗೆದ್ರೆ ಡೈರೆಕ್ಟ್ ಫೈನಲ್. ಇಲ್ಲ ಅವತ್ತೇನೋ ಬ್ಯಾಡ್ಡೇ ಮ್ಯಾಚ್ ಮಿಸ್ ಆಯ್ತು ಅಂದ್ರೆ ಇನ್ನೊಂದು ಚಾನ್ಸ್ ಅಂತೂ ಸಿಕ್ಕೇ ಸಿಗುತ್ತೆ. ಹೀಗಾಗಿ ಟಾಪ್-2 ಟಿಕೆಟ್ಗಾಗಿ ಗುರಿ ಇಟ್ಟಿದೆ. ಆದ್ರೆ ಪಂಜಾಬ್ ಸ್ಥಿತಿ ಬೇರೆಯೇ ಇದೆ. ಮೊದಲ ಹಂತದಲ್ಲಿ ಔಟ್ ಆಫ್ ಔಟ್ ಅಂಕ ತಗೊಂಡಿದ್ದ ಪಂಜಾಬ್ ಸೆಕೆಂಡ್ ಆಫ್ನಲ್ಲಿ ಖಾತೆಯನ್ನೂ ತೆರೆದಿಲ್ಲ. 5ಕ್ಕೆ ಐದೂ ಪಂದ್ಯಗಳಲ್ಲಿ ಸೋಲು. ಈಗ ಪ್ಲೇ ಆಫ್ಸ್ಗೆ ಹೋಗ್ತಾರಾ ಅನ್ನೋದೇ ಡೌಟ್ ಆಗೋಗಿದೆ. ಆರ್ಸಿಬಿ ವಿರುದ್ಧ ಗೆದ್ರೆ ಮಾತ್ರವೇ ಪ್ಲೇ ಆಫ್ಸ್ ರೇಸ್ನಲ್ಲಿ ಇರ್ತಾರೆ. ಇಲ್ದಿದ್ರೆ ಈ ಸೀಸನ್ ಆಸೆ ಬಿಡ್ಬೇಕಾಗುತ್ತೆ. ಹೀಗಾಗಿ ಶತಾಯ ಗತಾಯ ಗೆಲ್ಲಲೇಬೇಕು ಅಂತಾ ಬರೋ ಪಂಜಾಬ್ ಪಡೆಯನ್ನ ಬೇಟೆಯಾಡೋಕೆ ರೆಡ್ ಆರ್ಮಿ ಕಡೆಯಿಂದ ಬಲಿಷ್ಠ ಪಡೆಯೇ ಅಖಾಡಕ್ಕೆ ಇಳೀಬೇಕಿದೆ.
ಡಫಿ ಮತ್ತು ವೆಂಕಿ ಫಾರ್ಮುಲಾ ಕಂಟಿನ್ಯೂ ಆಗುತ್ತಾ?
ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನ ಮಾಡಿತ್ತು. ಸತತ 11 ಪಂದ್ಯಗಳಲ್ಲಿ ಬ್ಯಾಟಿಂಗ್ ಹಾಗೇ ಬೌಲಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡ್ತಿದ್ದ ರೊಮ್ಯಾರಿಯೋ ಶೆಫರ್ಡ್ರನ್ನ ಪ್ಲೇಯಿಂಗ್ 11ನಿಂದ ಕೈಬಿಟ್ಟಿದ್ರು. ಹಾಗೇ ಮಿಡಲ್ ಓವರ್ಸ್ ನಲ್ಲಿ ಅಷ್ಟೇನು ಮ್ಯಾಜಿಕ್ ಮಾಡದ ಸುಯಾಶ್ ಶರ್ಮಾರನ್ನೂ ಹೊರಗಿಡಲಾಗಿದೆ. ಇವ್ರಬ್ಬರ ಬದಲಿಗೆ ಜೇಕಬ್ ಡಫಿ ಮತ್ತು ವೆಂಕಟೇಶ್ ಅಯ್ಯರ್ ಮೈದಾನಕ್ಕಿಳಿದಿದ್ರು. ಈ ಫಾರ್ಮುಲಾ ವರ್ಕೌಟ್ ಕೂಡ ಆಗಿತ್ತು. ಹೀಗಾಗಿ ಪಂಜಾಬ್ ಬೇಟೆಗೂ ಇದೇ ಟೀಂ ಕಂಟಿನ್ಯೂ ಆಗಬಹುದು. ಹಾಗಾದ್ರೆ ಸಂಡೇ ಫೈಟ್ಗೆ ಹೇಗಿರುತ್ತೆ ಪ್ಲೇಯಿಂಗ್ 11 ಅನ್ನೋದನ್ನ ನೋಡ್ತಾ ಹೋಗೋಣ.
ಪಂಜಾಬ್ ಬೇಟೆಗೆ ಪ್ಲೇಯಿಂಗ್ 11
ಜೇಕಬ್ ಬೆಥೆಲ್
ವಿರಾಟ್ ಕೊಹ್ಲಿ
ದೇವದತ್ ಪಡಿಕ್ಕಲ್
ರಜತ್ ಪಾಟಿದಾರ್
ಜಿತೇಶ್ ಶರ್ಮಾ
ಟಿಮ್ ಡೇವಿಡ್
ವೆಂಕಟೇಶ್ ಅಯ್ಯರ್
ಕೃನಾಲ್ ಪಾಂಡ್ಯ
ರಸಿಕ್ ಸಲಾಂ ದಾರ್
ಭುವನೇಶ್ವರ್ ಕುಮಾರ್
ಜೋಶ್ ಹೇಜಲ್ ವುಡ್
ಜೇಕಬ್ ಡಫಿ
ಆರ್ಸಿಬಿ ಈ ಸೀಸನ್ನಲ್ಲಿ ಪ್ಲೇಯಿಂಗ್ 11 ಅಂತಾ ಬಂದಾಗ ದೊಡ್ಡ ಬದಲಾವಣೆಗಳನ್ನೇನೂ ಮಾಡಿಲ್ಲ. ಬಟ್ ಸಾಕಷ್ಟು ಸಲ ಅವಕಾಶ ಕೊಟ್ರೂ ಸದ್ದು ಮಾಡದವ್ರಿಗೆ ರೆಸ್ಟ್ ನೀಡಿ ಆಡ್ತೀವಿ ಅನ್ನೋದನ್ನ ಆಡಿಸ್ತಿದ್ದಾರೆ. ಸೋ ಶೆಫರ್ಡ್ಗೆ ಈ ಸೀಸನ್ ಚೆನ್ನಾಗಿ ಆಗಿಲ್ಲ. ಬಟ್ ಬ್ಯಾಕಪ್ ಪ್ಲೇಯರ್ಸ್ ಇರೋದ್ರಿಂದ ತಲೆ ಕೆಡಿಸಿಕೊಳ್ಳೋ ನೆಸೆಸಿಟಿನೂ ಇಲ್ಲ. ಇನ್ನು ಆರ್ಸಿಬಿ ವರ್ಸಸ್ ಪಿಬಿಕೆಎಸ್ ಬ್ಯಾಟಲ್ ಅಂತಾ ಬಂದಾಗ ಉಭಯ ತಂಡಗಳು ಒಟ್ಟಾರೆಯಾಗಿ 37 ಬಾರಿ ಮುಖಾಮುಖಿಯಾಗಿದ್ದಾರೆ. ಬೆಂಗಳೂರು 19 ಬಾರಿ ಪಂದ್ಯಗಳನ್ನ ಗೆದ್ರೆ ಪಂಜಾಬ್ 18 ಬಾರಿ ವಿನ್ ಆಗಿದೆ. ಸೋ ಅಲ್ಲಿಗೆ ಈಕ್ವಲ್ ಫೈಟ್ ಅಂತೂ ಕೊಟ್ಟಿದ್ದಾರೆ. ಬಟ್ ಲಾಸ್ಟ್ ಸೀಸನ್ನಲ್ಲಿ ಬೆಂಗಳೂರು 4 ಮ್ಯಾಚ್ಗಳಲ್ಲಿ 3 ಪಂದ್ಯಗಳನ್ನ ಗೆದ್ದಿದೆ. ಌಂಡ್ ಈ ಸೀಸನ್ನಲ್ಲೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಬರ್ತಿದೆ. 12 ಪಂದ್ಯಗಳ ಪೈಕಿ 4ರಲ್ಲಿ ಸೋತು 8ರಲ್ಲಿ ಗೆದ್ದು ಟಾಪ್-2 ಟಿಕೆಟ್ಗೆ ಹತ್ತಿರದಲ್ಲಿದ್ದಾರೆ. ಆದ್ರೆ ಪಂಜಾಬ್ ಸತತ 5 ಮ್ಯಾಚ್ ಸೋತು ಪ್ಲೇ ಆಫ್ಸ್ ಹಾದಿಯನ್ನೇ ಕಠಿಣ ಮಾಡ್ಕೊಂಡಿದ್ದಾರೆ. ಮುಂದಿನ ಎರಡಕ್ಕೆ ಎರಡೂ ಪಂದ್ಯಗಳನ್ನ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ಹೀಗೆ ಕ್ರಿಟಿಕಲ್ ಕಂಡೀಷನ್ನಲ್ಲಿರೋ ಪಂಜಾಬ್ ಸೋಲಿಸಿದ್ರೆ ಆರ್ಸಿಬಿ ನೆಕ್ಸ್ಟ್ ಜರ್ನಿ ಈಸಿಯಾಗುತ್ತೆ.

ನೋಡಿರಿ

