ಮಾಜಿ ಪತ್ನಿ ಮರೆತು ಹೊಸ ಗೆಳತಿ ಜೊತೆ ಬಾಳಲು ಹಾರ್ದಿಕ್‌ ರೆಡಿ! – ಮಹಿಕಾ – ಪಾಂಡ್ಯ ಮದುವೆಗೆ ಮುಹೂರ್ತ ಫಿಕ್ಸ್?‌

ಮಾಜಿ ಪತ್ನಿ ಮರೆತು ಹೊಸ ಗೆಳತಿ ಜೊತೆ ಬಾಳಲು ಹಾರ್ದಿಕ್‌ ರೆಡಿ! – ಮಹಿಕಾ – ಪಾಂಡ್ಯ ಮದುವೆಗೆ ಮುಹೂರ್ತ ಫಿಕ್ಸ್?‌

ಟೀಮ್ ಇಂಡಿಯಾದ ಸ್ಟಾರ್ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಕ್ರಿಕೆಟ್‌ ಮಾತ್ರವಲ್ಲದೇ ಹಾರ್ದಿಕ್‌ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸದ್ದು ಮಾಡ್ತಿದ್ದಾರೆ. ನತಾಶಾಗೆ ಡಿವೋರ್ಸ್‌ ಕೊಟ್ಟಿರುವ ಹಾರ್ದಿಕ್‌ ಇದೀಗ ಹೊಸ ಬಾಳು ಆರಂಭ ಮಾಡುತ್ತಿದ್ದಾರೆ. ಈಗಾಗಲೇ ಬಿಟ್ಟು ಹೋದ ಹಳೆಯ ಹೆಂಡತಿ ಮರೆತು ಹೊಸ ಹುಡುಗಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇದೀಗ ಹಾರ್ದಿಕ್‌ 2ನೇ ಮದುವೆಗೂ ಮುಹೂರ್ತ ಫಿಕ್ಸ್‌ ಆಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸಾಧುಗಳ ವೇಷದಲ್ಲಿ ಕಳ್ಳರ ಕೈಚಳಕ! – ಆಶೀರ್ವಾದ ಪಡೆಯಲು ಹೋದ್ರೆ ಮಾಯವಾಗುತ್ತೆ ಮೈಮೇಲಿದ್ದ ಚಿನ್ನ!

2026 ರ ಐಪಿಎಲ್ ಸೀಸನ್‌ ನಲ್ಲಿ ನಾಯಕ ಮತ್ತು ಆಟಗಾರನಾಗಿ ಹಾರ್ದಿಕ್ ಪಾಂಡ್ಯ ಪ್ರಯಾಣವು ಅವರ ಅಭಿಮಾನಿಗಳಲ್ಲಿ ಬೇಸರ ತರಿಸಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಪ್ಲೇ ಆಫ್ ರೇಸ್‌ ನಿಂದ ಹೊರಬಿದ್ದಿದೆ. ಇದಲ್ಲದೆ ಹಾರ್ದಿಕ್ ಪಾಂಡ್ಯ ಬೆನ್ನು ನೋವಿನಿಂದಾಗಿ ಕಳೆದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇದರ ನಡುವೆ ಹಾರ್ದಿಕ್‌ ಪಾಂಡ್ಯ ಎರಡನೇ ಮದುವೆ ಬಗ್ಗೆ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿವೆ. ಹಾರ್ದಿಕ್ ಪಾಂಡ್ಯ ಇದೇ ತಿಂಗಳ ಕೊನೆಯಲ್ಲಿ ತಮ್ಮ ಗೆಳತಿ ಮಹಿಕಾ ಶರ್ಮಾ ಅವರೊಂದಿಗೆ ಎರಡನೇ ವಿವಾಹವಾಗಲಿದ್ದಾರೆ ಎಂದು ವೈರಲ್ ಪೋಸ್ಟ್‌ಗಳು ಹೇಳುತ್ತಿವೆ. ಹಾರ್ದಿಕ್‌ ಪಾಂಡ್ಯ ಮಹಿಕಾ ಮದುವೆಗೆ ಡೇಟ್‌ ಕೂಡ ಫಿಕ್ಸ್‌ ಆಗಿದೆ ಎನ್ನಲಾಗ್ತಿದೆ.

ಹಾರ್ದಿಕ್ ಪಾಂಡ್ಯ ಗಾಯದ ಕಾರಣದಿಂದಾಗಿ 2026 ರ ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಆದರೆ ಇತ್ತ ಸೋಷಿಯಲ್‌ ಮೀಡಿಯಾದಲ್ಲಿ ಮಹಿಕಾ ಜೊತೆ ಹಾರ್ದಿಕ್‌ ಪಾಂಡ್ಯ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿರಬಹುದು ಎಂಬ ಗಾಸಿಪ್‌ ಶುರುವಾಗಿದೆ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಗಳು ಹಾರ್ದಿಕ್ ಮತ್ತು ಮಹಿಕಾ ಮೇ 22 ವಿವಾಹವಾಗಲಿದ್ದಾರೆ ಎಂದು ಹೇಳುತ್ತಿವೆ.

ಹಾರ್ದಿಕ್ ಪಾಂಡ್ಯ ಅವರ ವಿವಾಹದ ಬಗ್ಗೆ ವದಂತಿಗಳು ಮೊದಲು ಶುಕ್ರವಾರ (ಮೇ 15) ಆರಂಭವಾದವು. ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಬಳಕೆದಾರರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ, “ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ಮೇ 22 ರಂದು ಉದಯಪುರದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಲಿದ್ದಾರೆ” ಎಂದು ಬರೆದಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. 2ನೇ ಮದುವೆ ಬಗ್ಗೆ ಹಾರ್ದಿಕ್‌ ಆಗ್ಲೀ ಮಹಿಕಾ ಆಗ್ಲೀ ಎಲ್ಲೂ ಹೇಳಿಕೊಂಡಿಲ್ಲ. ಇವರಿಬ್ಬರು ಈ ಬಗ್ಗೆ ಅಪ್‌ಡೇಟ್‌ ಕೊಡುವವರೆಗೂ ಇದು ಗಾಳಿ ಸುದ್ದಿಯಷ್ಟೇ!

Shwetha M

Leave a Reply

Your email address will not be published. Required fields are marked *