KKR ಗೆದ್ದರೆ RCBಗೆ ಹೇಗೆ ಲಾಭವಾಗುತ್ತೆ? – ತಿಲಕ್ ವರ್ಮ ಬಣ್ಣದ ಬಗ್ಗೆ ಅರ್ಷದೀಪ್ ನಿಂದನೆ ಸರಿನಾ?

ಲಕ್ನೋ ವಿರುದ್ಧ ಚೆನ್ನೈ ತಂಡ ಸೋತಿದೆ. ಇದರ ಜೊತೆಗೆ ಚೆನ್ನೈನ ಪ್ರಮುಖ ಬೌಲಿಂಗ್ ಅಸ್ತ್ರವಾದ ಕಾಂಬೋಜ್ ಕಳಪೆ ದಾಖಲೆ ಮಾಡಿದ್ದಾರೆ. ಮತ್ತೊಂದೆಡೆ ತಿಲಕ್ ವರ್ಮಾ ಮೈಬಣ್ಣದ ಬಗ್ಗೆ ಅರ್ಷ್‌ದೀಪ್ ನಿಂದನೆ ಮಾಡಿದ್ದಾರೆ.
ಇದನ್ನೂ ಓದಿ:RCBಗೆ ಟಿಕೆಟ್.. PBKS ಔಟ್? – ಬೆಂಗಳೂರೇ ಟಾರ್ಗೆಟ್ ಎಂದ ಶ್ರೇಯಸ್!
ಚೆನ್ನೈ ತಂಡದ ಪರ ಆರಂಭಿಕ ಪಂದ್ಯಗಲಲ್ಲಿ ಬೌಲಿಂಗ್ ಪ್ರಮುಖ ಅಸ್ತ್ರವಾಗಿದ್ದ ಅನ್ಶುಲ್ ಕಂಬೋಜ್, ಕೊನೇ ಹಂತಕ್ಕೆ ಬಂದಾಗ ಅತ್ಯಂತ ದುಬಾರಿ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕನಿಷ್ಠ 2 ಓವರ್‌ಗಳಿಗಿಂತ ಹೆಚ್ಚು ಬೌಲಿಂಗ್ ಮಾಡಿದ ಬೌಲರ್‌ಗಳ ಪೈಕಿ ಅತ್ಯಧಿಕ ಎಕಾನಮಿ ರೇಟ್ ನೀಡಿದ ಬೌಲರ್ ಎಂಬ ಮುಜುಗರದ ದಾಖಲೆ ಕಾಂಬೋಜ್ ಪಾಲಾಗಿದೆ. ಇದಕ್ಕೂ ಮುನ್ನ ಕಳಪೆ ಎಕಾನಮಿ ರೇಟ್ ಹೊಂದಿದ್ದ ದಾಖಲೆ ವಾಷಿಂಗ್ಟನ್ ಸುಂದರ್ ಹೆಸರಲ್ಲಿತ್ತು. ಕಾಂಬೋಜ್ ಲಕ್ನೋ ವಿರುದ್ಧ 16 ಎಸೆತಗಳಲ್ಲಿ 63 ರನ್ ಬಿಟ್ಟುಕೊಟ್ಟಿದ್ದಾರೆ.
ಮುಂಬೈ ಬ್ಯಾಟರ್ ತಿಲಕ್ ವರ್ಮಾ ಅವರ ಮೈಬಣ್ಣವನ್ನು ಹೀಯಾಳಿಸಿ ಪಂಜಾಬ್ ಕಿಂಗ್ಸ್ ವೇಗಿ ಅರ್ಷದೀಪ್ ಸಿಂಗ್ ಆಡಿರುವ ಮಾತು ಭಾರಿ ವಿವಾದ ಸೃಷ್ಟಿಸಿದೆ. ಸ್ನ್ಯಾಪ್‌ಚಾಟ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋದಲ್ಲಿ ತಿಲಕ್ ವರ್ಮಾ ಅವರನ್ನು ಉದ್ದೇಶಿಸಿ,ಓಯ್ ಅಂಧೇರೇ, ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೀಯಾ? ಎಂದು ಕೇಳಿದ್ದಾರೆ. ಅರ್ಷದೀಪ್ ಸಿಂಗ್ ಪಂಜಾಬಿ ಭಾಷೆಯಲ್ಲಿ ಅಂಧೇರೇ ಅಂದಿರುವುದು ಕರಿಯ ಎಂಬಾರ್ಥದಲ್ಲಿ. ಅರ್ಷದೀಪ್ ಮಾತಿನಿಂದ ತಿಲಕ್ ವರ್ಮಾ ಮುಜುಗರಕ್ಕೊಳಗಾದರು. ಮತ್ತು ನಾನು ಸನ್‌ಸ್ಕ್ರೀನ್ ಹಚ್ಚಿಕೊಂಡಿದ್ದೇನೆ, ನಾಳಿನ ಪಂದ್ಯದ ಕಡೆ ಗಮನ ಕೊಡೋಣ ಎಂದು ಹೇಳಿ ಬೇಸರದಿಂದ ತೆರಳಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಸೆಣಸಾಟ ನಡೆಯಲಿದೆ. ಈ ಪಂದ್ಯ ಗುಜರಾತ್ ಪಾಲಿಗೆ ಮಹತ್ವದ್ದಾಗಿದೆ. ಜಿಟಿ ಗೆದ್ದರೆ ಅಧಿಕೃತವಾಗಿ ಪ್ಲೇಆಫ್ಗೆ ಎಂಟ್ರಿಕೊಡಲಿದೆ. ಕೆಕೆಆರ್ ತಂಡ ತನ್ನ ಪ್ಲೇಆಫ್ ಆಸೆಗೆ ಈ ಗೆಲುವು ನಿರ್ಣಾಯಕವಾಗಿದೆ. ಜಿಟಿ ಗೆದ್ದರೆ ಆರ್‌ಸಿಬಿಯ ನಂಬರ್ ಒನ್ ಸ್ಥಾನ ಹೋಗಲಿದೆ. ಹೀಗಾಗಿ ಜಿಟಿ ಸೋಲಲಿ ಅಂತಿದ್ದಾರೆ ಆರ್‌ಸಿಬಿ ಫ್ಯಾನ್ಸ್.
ಐಪಿಎಲ್ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುತ್ತಿದ್ದಂತೆ, ಪ್ಲೇಆಫ್ ರೇಸ್ ತೀವ್ರ ಕುತೂಹಲ ಕೆರಳಿಸಿದೆ. ಲಕ್ನೋ ವಿರುದ್ಧ ಸೋತ ಚೆನ್ನೈ ತಂಡಕ್ಕೆ ಪ್ಲೇಆಫ್ ರೇಸ್‌ನಿಂದ ಹೊರಬೀಳುವುದು ಖಚಿತವಾಗಿದೆ. CSK ತಂಡ 12 ಪಂದ್ಯಗಳಲ್ಲಿ 6 ಗೆಲುವು ಮತ್ತು 6 ಸೋಲುಗಳೊಂದಿಗೆ ಒಟ್ಟು 12 ಅಂಕಗಳನ್ನು ಪಡೆದಿದೆ. ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಚೆನ್ನೈ ಗೆ ಇನ್ನು ಕೇವಲ ಎರಡು ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಪ್ಲೇಆಫ್ ತಲುಪಲು ಈ ಎರಡು ಪಂದ್ಯಗಳು ನಿರ್ಣಾಯಕ.
ಲಕ್ನೋ ಸೂಪರ್ ಜೈಂಟ್ಸ್ ವೇಗಿ ಆಕಾಶ್ ಸಿಂಗ್ ಮೊದಲ ಪಂದ್ಯದಲ್ಲೇ 3 ವಿಕೆಟ್ ಪಡೆದಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆಕಾಶ್ ಸಿಂಗ್ ತಮ್ಮ ಎರಡನೇ ಓವರ್‌ನಲ್ಲಿ, ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಔಟ್ ಮಾಡಿದರು. ವಿಕೆಟ್ ಪಡೆದ ನಂತರ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ ಆಕಾಶ್ ಜೇಬಿನಿಂದ ಒಂದು ಚೀಟಿ ಹೊರತೆಗೆದರು. ಅದರಲ್ಲಿ “ಅಕ್ಕಿ ಆನ್ ಫೈಯರ್! ಟಿ20 ಪಂದ್ಯಗಳಲ್ಲಿ ವಿಕೆಟ್ ಪಡೆಯುವುದು ಹೇಗೆ ಎಂಬುದು ಆಕಾಶ್ಗೆ ಗೊತ್ತು ಎಂದು ಬರೆಯಲಾಗಿತ್ತು. ನಂತರ, ಸಂಜು ಸ್ಯಾಮ್ಸನ್, ಉರ್ವಿಲ್ ಪಟೇಲ್ ವಿಕೆಟ್ ಪಡೆದಾಗಲೂ ಆಕಾಶ್ ಸಿಂಗ್ ಚೀಟಿ ತೋರಿಸಿ ಸಂಭ್ರಮಿಸಿದ್ರು.
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಟೀಮ್ ಇಂಡಿಯಾ ದ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಇದರ ನಡುವೆ ಇಶಾನ್ ಕಿಶನ್ ಅವರನ್ನು ಬಿಹಾರ ಸರ್ಕಾರ ಸನ್ಮಾನಿಸಿದೆ. ವಿಶ್ವಕಪ್ ನಲ್ಲಿ ಭಾರತ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಇಶಾನ್ ಅವರಿಗೆ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ 1 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಸಿಎಂ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಇಶಾನ್ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು.
ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ಸಿಎಸ್‌ಕೆ ಮತ್ತು ಲಕ್ನೋ ತಂಡಗಳು ಮುಖಾಮುಖಿಯಾಗಿದ್ದವು. ಈ ಸಂದರ್ಭದಲ್ಲಿ ಎರಡೂ ತಂಡಗಳ ಆಟಗಾರರು ಕೂಡಾ ಕಪ್ಪುಪಟ್ಟಿ ತೋಳಿಗೆ ಧರಿಸಿ ಕಣಕ್ಕಿಳಿದಿದ್ರು. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಬಿರುಗಾಳಿ ಮಳೆಗೆ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸುವ ಸಂಕೇತವಾಗಿ ಆಟಗಾರರು ತೋಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿ ಕಣಕ್ಕಿಳಿದಿದ್ದರು.
ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ ಈ ಸೀಸನ್ನಲ್ಲಿ ಆರ್‌ಸಿಬಿ ಪರ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ಇಲ್ಲಿಯವರೆಗೆ 12 ಲೀಗ್ ಪಂದ್ಯಗಳನ್ನು ಆಡಿರುವ ಆರ್‌ಸಿಬಿ, 38 ವರ್ಷದ ಇಂಗ್ಲಿಷ್ ವೇಗದ ಬೌಲರ್ ರಿಚರ್ಡ್ ಗ್ಲೀಸನ್ ಅವರನ್ನು 1.6 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದೆ. ಗ್ಲೀಸನ್, ಈ ಹಿಂದೆ ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್ ಪರ ಮೂರು ಪಂದ್ಯಗಳನ್ನು ಆಡಿದ್ದು, ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ.
ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಕೋಚ್ ಕೀರನ್ ಪೊಲಾರ್ಡ್ ಗೆ ದಂಡ ವಿಧಿಸಲಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಕ್ಕಾಗಿ ಪೋಲಾರ್ಡ್‌ಗೆ ಪಂದ್ಯ ಶುಲ್ಕದ ಶೇ. 15ರಷ್ಟು ದಂಡ ಮತ್ತು 1 ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಸಿಸಿಐ ಈ ಕ್ರಮ ಕೈಗೊಂಡಿದೆ. ಪೊಲಾರ್ಡ್ ನಾಲ್ಕನೇ ಅಂಪೈರ್ ಜೊತೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದ ಬಳಕೆ ಮಾಡಿದ್ದಾಗಿ ಈ ಪನಿಷ್‌ಮೆಂಟ್ ಎಂದು ಹೇಳಲಾಗಿದೆ.
ಮೇ 31 ರಂದು ಐಪಿಎಲ್ 2ಹೈ-ವೋಲ್ಟೇಜ್ ಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯದಲ್ಲಿ ಹಾಜರಾಗುವಂತೆ ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಗೆ ಆಮಂತ್ರಣ ನೀಡಲಾಗಿದೆ ಎಂದು ಹೇಳಲಾಗಿದೆ. ಮೊಹ್ಸಿನ್ ನಖ್ವಿ ಅವರು ಕೇವಲ ಪಿಸಿಬಿ ಅಧ್ಯಕ್ಷರಷ್ಟೇ ಅಲ್ಲದೆ, ಪಾಕಿಸ್ತಾನದ ಹಾಲಿ ಗೃಹ ಸಚಿವರೂ ಆಗಿರುವುದರಿಂದ ಅವರ ಭಾರತ ಪ್ರವಾಸ ರಾಜತಾಂತ್ರಿಕವಾಗಿ ಅತ್ಯಂತ ಸೂಕ್ಷ್ಮವಾಗಿದೆ. ಈ ಆಹ್ವಾನವು ಉಭಯ ದೇಶಗಳ ನಡುವಿನ ಕ್ರೀಡಾ ಸಂಬಂಧಗಳ ದೃಷ್ಟಿಯಿಂದ ಸಣ್ಣ ಆಶಾಕಿರಣವಾಗಬಹುದು ಎಂದು ಹೇಳಲಾಗ್ತಿದೆ.

ನೋಡಿರಿ

