ಇಶಾನ್ ಕಿಶನ್‌ಗೆ ಬಂಪರ್ ಬಹುಮಾನ – 1 ಕೋಟಿ ರೂಪಾಯಿ ನೀಡಿದ ಬಿಹಾರ ಮುಖ್ಯಮಂತ್ರಿ

ಟೀಮ್ ಇಂಡಿಯಾ ಬ್ಯಾಟರ್, ಸನ್‌ರೈಸರ್ಸ್ ಹೈದ್ರಾಬಾದ್ ತಂಡದಲ್ಲಿ ಮಿಂಚುತ್ತಿರುವ ಆಟಗಾರ ಇಶಾನ್ ಕಿಶನ್‌ಗೆ ಜಾಕ್‌ಪಾಟ್ ಸಿಕ್ಕಿದೆ. ಬಿಹಾರ ಸರ್ಕಾರ ಇಶಾನ್ ಕಿಶನ್ ಗೆ ಭರ್ಜರಿ ಬಹುಮಾನ ನೀಡಿ, ಗೌರವಿಸಿದೆ.
ಇದನ್ನೂ ಓದಿ:ಅಕ್ಕಿ ಆನ್ ಫೈಯರ್- 3 ವಿಕೆಟ್ ಉರುಳಿಸಿ ಚೀಟಿ ತೋರಿಸಿದ ಲಕ್ನೋ ವೇಗಿ ಆಕಾಶ್ ಸಿಂಗ್
ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಟೀಮ್ ಇಂಡಿಯಾ ದ ಸ್ಟಾರ್ ಬ್ಯಾಟರ್ ಇಶಾನ್ ಕಿಶನ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. 2026 ರ ಟಿ20 ವಿಶ್ವಕಪ್ ನಲ್ಲಿ ಭಾರತ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಇಶಾನ್ ಅವರಿಗೆ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಸಿಎಂ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಇಶಾನ್ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು. ಮೊದಲು ಬಿಹಾರ ಸಿಎಂ ಬಿಹಾರ್ ಪುತ್ತರ್‌ಗೆ ಶಾಲು ಹೊದಿಸಿ ಸನ್ಮಾನಿಸಿದರು. ನಂತರ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂಭ್ರಮದ ಕ್ಷಣವನ್ನು ಸಾಮ್ರಾಟ್ ಚೌಧರಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಮೂಲಕ ಹಂಚಿಕೊಂಡಿದ್ದಾರೆ. ಈ ಹಿಂದೆ ಬಿಹಾರ ಸರ್ಕಾರ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು ಸನ್ಮಾನಿಸಿತ್ತು. ಪ್ರಸ್ತುತ ಐಪಿಎಲ್ 2026 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಇಶಾನ್, 12 ಪಂದ್ಯಗಳಲ್ಲಿ 420 ರನ್ ಗಳಿಸಿ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ನೋಡಿರಿ

