ಧಕ್ ಧಕ್ ಬೆಡಗಿ ಕನಸಲ್ಲಿ ಕಾಡುತ್ತಿದ್ದ ಕ್ರಿಕೆಟರ್ – ಮಾಧುರಿ ದೀಕ್ಷಿತ್‌ಗೆ ಸುನಿಲ್ ಗವಾಸ್ಕರ್ ಮೇಲೆ ಕ್ರಷ್

ಬಾಲಿವುಡ್‌ನ ಧಕ್ ಧಕ್ ಬೆಡಗಿಗೆ ಕ್ರಿಕೆಟರ್ ಮೇಲೆ ಕ್ರಷ್ ಆಗಿತ್ತಂತೆ. ಅದು ಕೂಡಾ ಬಾಲಿವುಡ್‌ನ ಒಂದು ಕಾಲದ ಟಾಪ್ ನಟಿ ಮಾಧುರಿ ದೀಕ್ಷಿತ್‌ಗೆ ಸುನಿಲ್ ಗವಾಸ್ಕರ್ ಮೇಲೆ ಕ್ರಷ್ ಇತ್ತಂತೆ. ಇದನ್ನ ಸ್ವತಃ ಮಾಧುರಿಯೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಕೇಡಿ ಜೈದೇವ್ ಈಗ ದಿಯಾ ಕೈಗೊಂಬೆ – ಅವಮಾನ, ಹೀಯಾಳಿಸಿದರೂ ಬೇಬಿನೇ ಬೇಕಂತೆ..!
ಬಾಲಿವುಡ್‌ನ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಅವರು ತನ್ನ ಕ್ರಷ್ ಬಗ್ಗೆ ಹೇಳಿಕೊಂಡಿದ್ದಾರೆ. ದಶಕಗಳ ಕಾಲ ತಮ್ಮ ನಟನೆ ಮತ್ತು ನೃತ್ಯದ ಮೂಲಕ ಭಾರತೀಯ ಚಿತ್ರರಂಗವನ್ನು ಆಳಿದ ಮಾಧುರಿ ತನ್ನ ಸೌಂದರ್ಯದಿಂದಲೇ ಅದೆಷ್ಟೋ ಯುವಕರ ಹೃದಯಕ್ಕೆ ಕನ್ನ ಹಾಕಿದ್ದರು. ಆದರೆ, ಇದೇ ಮಾಧುರಿ ಹೃದಯ ಕ್ರಿಕೆಟರ್ ಒಬ್ಬರಿಗೆ ಮನಸೋತಿದೆಯಂತೆ. ಅದು ಜಸ್ಟ್ ಕ್ರಷ್ ಅಷ್ಟೇ. ಹೌದು. ಮಾಧುರಿ ಅವರ ಜನ್ಮದಿನದ ಈ ಸಂದರ್ಭದಲ್ಲಿ ಅವರ ಹಳೆಯ ಸಂದರ್ಶನವೊಂದು ಸಖತ್ ಸುದ್ದಿಯಾಗುತ್ತಿದೆ. ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಮಾಧುರಿ ಅವರು ತಮಗೆ ಭಾರತೀಯ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಮೇಲೆ ಕ್ರಶ್ ಇತ್ತು ಎಂಬ ವಿಷಯವನ್ನು ಬಹಿರಂಗಪಡಿಸಿದ್ದರು.
ಮಾಧುರಿ ದೀಕ್ಷಿತ್ ಅವರಿಗಿಂತ ಸುನಿಲ್ ಗವಾಸ್ಕರ್ ಸುಮಾರು 17 ವರ್ಷ ದೊಡ್ಡವರು. ಮಾಧುರಿಗೆ ಸುನಿಲ್ ಗವಾಸ್ಕರ್ ಅವರ ಆಟ ಮತ್ತು ವ್ಯಕ್ತಿತ್ವ ತುಂಬಾ ಇಷ್ಟವಾಗಿತ್ತಂತೆ. ‘ನಾನು ಸುನಿಲ್ ಗವಾಸ್ಕರ್ ಅವರ ಮೇಲೆ ಕ್ರೇಜ್ -ಇದೆ. ಅವರು ತುಂಬಾ ಸುಂದರವಾಗಿದ್ದಾರೆ, ಅವರ ಹಿಂದೆ ಓಡಬೇಕು ಎನಿಸುತ್ತದೆ. ಅವರು ನನ್ನ ಕನಸಿನಲ್ಲೂ ಬರುತ್ತಾರೆ’ಎಂದು ನಟಿ ಅಂದು ಮುಕ್ತವಾಗಿ ಹೇಳಿಕೊಂಡಿದ್ದರು.

ನೋಡಿರಿ

