ಕನ್ನಿಕಾ ಒಳ್ಳೆತನಕ್ಕೆ ಭಾಗ್ಯ ಬಲಿ? – ಹನಿಮೂನ್‌ನಲ್ಲೇ ಆದಿ, ಭಾಗ್ಯ ದೂರ? : ಕುಸುಮಾ ಮನೆಗೆ ವಿಲನ್‌ ಶ್ರೇಷ್ಠಾ ಎಂಟ್ರಿ!

ಕನ್ನಿಕಾ ಒಳ್ಳೆತನಕ್ಕೆ ಭಾಗ್ಯ ಬಲಿ? – ಹನಿಮೂನ್‌ನಲ್ಲೇ ಆದಿ, ಭಾಗ್ಯ ದೂರ? : ಕುಸುಮಾ ಮನೆಗೆ ವಿಲನ್‌ ಶ್ರೇಷ್ಠಾ ಎಂಟ್ರಿ!

ಭಾಗ್ಯ ಜೀವನದಲ್ಲಿ ಒಳ್ಳೆಯದು ಯಾವತ್ತೂ ನಡೆಯಲ್ಲ ಅಂತ ಕಾಣುತ್ತೆ. ಏನಾದ್ರೂ ಸಮಸ್ಯೆ ಎದುರಾಗುತ್ತಲೇ ಇದೆ. ಆದಿಯನ್ನ ಮದುವೆಯಾಗಿ ಖುಷಿಯಾಗಿರ್ಬೋದು ಅಂತ ಭಾಗ್ಯ ಅಂದ್ಕೊಂಡಿದ್ಲು. ಆದ್ರೆ ಕಾಮತ್‌ ಮನೆಯಲ್ಲೂ ಭಾಗ್ಯ ಜೀವನದಲ್ಲಿ ಆಟವಾಡಲು ಕುತಂತ್ರಿ ಒಟ್ಟಾಗಿದ್ದಾರೆ. ಆದ್ರೀಗ ಇಷ್ಟು ದಿನ ಕೆಟ್ಟವಳಾಗಿದ್ದ ಕನ್ನಿಕಾ ಭಾಗ್ಯ ಒಳ್ಳೆತನದ ಮುಖವಾಡ ಹಾಕಿ ಭಾಗ್ಯ ವಿರುದ್ಧ ದೊಡ್ಡ ಷಡ್ಯಂತರ ಮಾಡಿದ್ದಾಳೆ. ಆದಿ ಭಾಗ್ಯರನ್ನ ಬಿಸಿನೆಸ್‌ ಟ್ರಿಪ್‌ ಅಂತ ನೆಪ ಹೇಳಿ ಹನಿಮೂನ್‌ಗೆ ಕಳುಹಿಸಿದ್ದಾಳೆ. ಮತ್ತೊಂದ್ಕಡೆ ಶ್ರೇಷ್ಠಾ ಮನೆಗಾಗಿ ಕುಸುಮಾ ಮನೆಗೆ ಬಂದಿದ್ದಾಳೆ ಒಳ್ಳೆಯವಳ ಹಾಗೇ ಡ್ರಾಮಾ ಮಾಡ್ತಿದ್ದಾಳೆ.

ಇದನ್ನೂ ಓದಿ: ಗುಂಡಮ್ಮಗೆ ಮಾದಪ್ಪನ ರಕ್ಷೆ.. ಆಪರೇಷನ್‌ ಪಿಂಕಿ ಸಕ್ಸಸ್? – ಶಿವು ಖೆಡ್ಡಾದಲ್ಲಿ ಅಮ್ಮ – ಮಗ!

ಭಾಗ್ಯಲಕ್ಷ್ಮೀ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಭಾಗ್ಯ ಆದಿಯನ್ನ ಮದುವೆಯಾಗಿ ಕಾಮತ್‌ ಮನೆಗೆ ಬಂದಿದ್ದಾಳೆ. ಆದ್ರೆ ಆ ಮನೆಗೆ ಬಂದ್ಮೇಲೆ ಭಾಗ್ಯ ಒಂದು ದಿನಾನೂ ಖುಷಿಯಾಗಿ ಇರೋಕೆ ಸಾಧ್ಯ ಆಗಿಲ್ಲ. ಯಾಕಂದ್ರೆ ಕನ್ನಿಕಾ ಭಾಗ್ಯ ವಿರುದ್ದ ಸೇಡು ತೀರಿಸಿಕೊಳ್ಳಲು ಹೊರಟಿದ್ದಾಳೆ. ಮೀನಾಕ್ಷಿಗೆ ಈಗ ಕನ್ನಿಕಾ ಇನ್ನೊಂದು ಮುಖವಾಡ ಗೊತ್ತಾಗಿದ್ದು, ಆಕೆ ಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ. ಮತ್ತೊಂದ್ಕಡೆ ಕನ್ನಿಕಾ ಕ್ರೈಮ್‌ ಪಾರ್ಟ್ನರ್‌ ಆಗಿ ಅಕ್ಷತಾ ಸೇರಿಕೊಂಡಿದ್ದಾಳೆ. ಇದೀಗ ಇವರಿಬ್ಬರು ದೊಡ್ಡಮಟ್ಟದಲ್ಲೇ ಪ್ಲ್ಯಾನ್‌ ಮಾಡಿದ್ದಾರೆ. ಅದಕ್ಕಾಗೇ ಕನ್ನಿಕಾ ಒಳ್ಳೆತನದ ಮುಖವಾಡ ಧರಿಸಿದ್ದಾಳೆ. ಇದೀಗ ಭಾಗ್ಯ ಹಾಗೇ ಆದಿಯನ್ನ ಬ್ಯುಸಿನೆಸ್‌ ಟ್ರಿಪ್‌ ಅಂತ ಹೇಳಿ ಹನಿಮೂನ್‌ಗೆ ಕಳುಹಿಸಿದ್ದಾಳೆ. ಇದೀಗ ಆದಿ ಭಾಗ್ಯಗೆ ಕೆಟ್ಟ ಟೈಮ್‌ ಸ್ಟಾರ್ಟ್‌ ಆಯ್ತಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ.

ಹೌದು.. ಕನ್ನಿಕಾ ಮನೆಯವರ ಮುಂದೆ ಒಳ್ಳೆತನದ ಮುಖವಾಡ ಧರಿಸಿದ್ದಾಳೆ. ಹೀಗಾಗೇ ಭಾಗ್ಯ ಜೊತೆ ಫುಲ್‌ ಕ್ಲೋಸ್‌ ಆಗಿದ್ದಾಳೆ. ಇದೀಗ ಆದಿ ಭಾಗ್ಯಳನ್ನ ಹನಿಮೂನ್‌ಗೆ ಕಳುಹಿದ್ದಾಳೆ. ಆದ್ರೆ ಇದ್ರ ಹಿಂದೆ ದೊಡ್ಡದಾಗೇ ಪ್ಲ್ಯಾನ್‌ ಮಾಡಿದ್ದಾಳೆ. ಒಂದ್ಕಡೆ ಭಾಗ್ಯ ವಿರುದ್ದ ಸೇಡು ತೀರಿಸಿಕೊಳ್ಳಲು ಪ್ಲ್ಯಾನ್‌ ಮಾಡಿದ್ರೆ ಮತ್ತೊಂದ್ಕಡೆ ಸ್ವಂತ ಅಣ್ಣನ ಹಣ ಆಸ್ತಿ ಹೊಡೆಯೋಕೆ ಮುಂದಾಗಿದ್ದಾಳೆ. ಆದಿ ಭಾಗ್ಯ ಮನೆ ಬಿಟ್ಟು ಹೋಗ್ತಿದ್ದಂತೆ ಕನ್ನಿಕಾ ಡಾಕ್ಯುಮೆಂಟ್ಸ್‌ ನ ಕದಿಯಲು ಪ್ಲ್ಯಾನ್‌ ಮುಂದಾಗಿದ್ದಾಳೆ. ಆದ್ರೀಗ ಗುಂಡಣ್ಣ ಅದನ್ನ ನೋಡಿ ಕಿರುಚಾಡಿದ್ದಾನೆ. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಇದನ್ನ ಯಾರಿಗಾದ್ರೂ ಹೇಳಿದ್ರೆ ನಿನ್ನ ಗ್ರಹಚಾರ ಬಿಡಿಸ್ತೀನಿ ಅಂದಿದ್ದಾಳೆ. ಆದ್ರೆ ತನ್ಮಯ್‌ ಇದನ್ನ ಭಾಗ್ಯಗೆ ಹೇಳಲು ಕಾಲ್‌ ಮಾಡಿದ್ದಾನೆ. ಇದೀಗ ಕನ್ನಿಕಾ ಮುಂದೇನು ಮಾಡ್ತಾಳೆ. ಆದಿ ಭಾಗ್ಯ ಜೊತೆ ತನ್ಮಯ್‌ಗೂ ಅಪಾಯ ತರ್ತಾಳಾ ಅನ್ನೋ ಪ್ರಶ್ನೆ ಎದುರಾಗಿದೆ.

ಇನ್ನೊಂದ್ಕಡೆ ಭಾಗ್ಯ ತನ್ನ ಅತ್ತೆ, ಮಾವನ ಮನೆಗೆ ಆಧಾರ ಸ್ತಂಭ ಆಗಿದ್ಲು. ಆದಿಯನ್ನ ಮದುವೆಯಾದ ಮೇಲೆ ಕುಸುಮಾ ಮನೆಯಲ್ಲಿ ಒಂದೊಂದಾಗೇ ಸಮಸ್ಯೆ ಶುರುವಾಗಿದೆ. ಭಾಗ್ಯ ಮಾವನ ಆರೋಗ್ಯ ಹಾಳಾಗಿದೆ. ಅವರಿಗೆ ಹಾರ್ಟ್‌ ಪ್ರಾಬ್ಲಂ ಶುರುವಾಗಿದೆ. ಡಾಕ್ಟರ್‌ ಇಮಿಡಿಯೆಟ್‌ ಸರ್ಜರಿ ಮಾಡ್ಲೇ ಬೇಕು ಅಂತ ಹೇಳಿದ್ದಾರೆ. ಆದ್ರೆ ಇದ್ಯಾವ ವಿಚಾರವೂ ಭಾಗ್ಯಗೆ ಗೊತ್ತಿಲ್ಲ. ಇತ್ತ ಕುಸುಮಾ ಕೂಡ ಇದನ್ನ ಭಾಗ್ಯಗೆ ಹೇಳಿಲ್ಲ. ಈ ಹೊತ್ತಲ್ಲೇ ಮನೆಹಾಳಿ ಶ್ರೇಷ್ಠಾ ಕುಸುಮಾ ಮನೆ ಸೇರಿಕೊಂಡಿದ್ದಾಳೆ. ನಾನು ನಿಮ್ಮ ಜೊತೆಯೇ ಇನ್ಮುಂದೆ ಇರ್ತೀನಿ. ನಿಮ್ಮ ವಂಶದ ಕುಡಿ ನನ್ನ ಹೊಟ್ಟೆಯಲ್ಲಿ ಬೆಳಿತಾ ಇದೆ. ನನಗೆ ನೀವೇ ದಿಕ್ಕು. ನಿಮ್ಮನ್ನ ಬಿಟ್ಟು ನನಗೆ ಬೇರೆ ಯಾರಿದ್ದಾರೆ ಎಂದು ಡೈಲಾಗ್‌ ಹೊಡೆದಿದ್ದಾಳೆ. ಆದ್ರೆ ಶ್ರೇಷ್ಠಾ ಡ್ರಾಮಾವನ್ನ ಕುಸುಮಾ ಯಾವುದೇ ಕಾರಣಕ್ಕೆ ನಂಬ್ತಿಲ್ಲ. ಆಕೆ ಏನೋ ದುರುದ್ದೇಶ ಇಟ್ಟುಕೊಂಡು ಈ ಮನೆಗೆ ಕಾಲಿಟ್ಟಿದ್ದಾಳೆ ಅನ್ನೋದು ಗೊತ್ತಾಗಿದೆ. ಶ್ರೇಷ್ಠಾ ಕೂಡ ಮನೆಯನ್ನ ತನ್ನ ಹೆಸರಿಗೆ ಬರೆಸಿ, ಬಳಿಕ ಅದನ್ನ ಸೇಲ್‌ ಮಾಡೋ ಪ್ಲ್ಯಾನ್‌ ಮಾಡಿದ್ದಾಳೆ. ಅದಕ್ಕೆ ಆ ಮನೆಗೆ ಸೇರಿಕೊಂಡಿರೋದು. ಇದೀಗ ಕುಸುಮಾ ಮುಂದೇನು ಮಾಡ್ತಾಳೆ. ಪ್ರಾಣಪಾಯದಲ್ಲಿರೋ ಗಂಡ ಹಾಗೇ ಮನೆಯನ್ನ  ಉಳಿಸಿಕೊಳ್ಳಲು ಮುಂದೇನು ಮಾಡ್ತಾಳೆ? ಭಾಗ್ಯ ಅತ್ತೆ ಮಾವನ ನೆರವಿಗೆ ಬರ್ತಾಳಾ? ಕನ್ನಿಕಾ ಕುತಂತ್ರದಿಂದ ಆದಿ ಭಾಗ್ಯ ಬಚಾವ್‌ ಆಗ್ತಾರಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಒಟ್ಟಿನಲ್ಲಿ ಸೀರಿಯಲ್‌ ಸಾಕಷ್ಟು ಟ್ವಿಸ್ಟ್‌ ಆಂಡ್‌ ಟರ್ನ್‌ನಿಂದ ಕೂಡಿರಲಿದೆ.

Shwetha M

Leave a Reply

Your email address will not be published. Required fields are marked *