ಶುಗರ್‌ ಇರುವವರು ಮಾವಿನ ಹಣ್ಣು ತಿನ್ನಬಹುದಾ? – ಎಷ್ಟು ಪ್ರಮಾಣದಲ್ಲಿ ಮಾವಿನ ಹಣ್ಣು ಸೇವಿಸಬೇಕು?

ಶುಗರ್‌ ಇರುವವರು ಮಾವಿನ ಹಣ್ಣು ತಿನ್ನಬಹುದಾ? – ಎಷ್ಟು ಪ್ರಮಾಣದಲ್ಲಿ ಮಾವಿನ ಹಣ್ಣು ಸೇವಿಸಬೇಕು?

ಬೇಸಿಗೆಕಾಲ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಎಲ್ಲೇ ನೋಡಿದರೂ ಮಾವಿನ ಹಣ್ಣುಗಳದ್ದೇ ಕಾರುಬಾರು ಹೆಚ್ಚಾಗಿರುತ್ತದೆ. ಬೇಸಿಗೆಯಲ್ಲಿ ಈ ಹಣ್ಣನ್ನು ಭಾರತದಲ್ಲಿ ಜನರು ಹೆಚ್ಚಾಗಿ ಸೇವಿಸುತ್ತಾರೆ. ಇದರ ರಸಭರಿತವಾದ ರುಚಿಯಿಂದಾಗಿ ಎಲ್ಲಾ ವಯಸ್ಸಿನವರು ಇಷ್ಟಪಟ್ಟು ತಿನ್ನುತ್ತಾರೆ. ಆದ್ರೆ ಶುಗರ್‌ ಇರುವವರು ಮಾವಿನ ಹಣ್ಣು ತಿನ್ನಬಹುದಾ ಅನ್ನೋ ಗೊಂದಲ ಅನೇಕರಲ್ಲಿದೆ.

ಇದನ್ನೂ ಓದಿ: ಡಯಾಬಿಟೀಸ್‌ ರೋಗಿಗಳು ಮೊಸರು ಸೇವಿಸಬಹುದಾ? – ಎಷ್ಟು ಪ್ರಮಾಣದಲ್ಲಿ ಸೇವಿಬೇಕು?

ಹಣ್ಣುಗಳ ರಾಜ ಮಾವಿನ ಹಣ್ಣುಗಳನ್ನು  ಅನೇಕರು ಇಷ್ಟಪಟ್ಟು ತಿಂತಾರೆ. ಆದ್ರೆ ಸಕ್ಕರೆ ಕಾಯಿಲೆ ಅಥವಾ ಮಧುಮೇಹಿಗಳು ಸಿಹಿತಿಂಡಿಗಳನ್ನು ತಿನ್ನುವಾಗ ತುಸು ಜಾಗ್ರತೆ ವಹಿಸಬೇಕು. ಏಕೆಂದರೆ ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ ಮತ್ತು ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಮಧುಮೇಹ ಇರುವವರು ಮಾವಿನ ಹಣ್ಣುಗಳನ್ನು ತಿನ್ನಬಹುದೇ ಅಥವಾ ಇಲ್ಲವೇ ಎಂಬ ಕುರಿತು ಅನೇಕ ಜನರಿಗೆ ಅನುಮಾನಗಳಿವೆ.

ಮಧುಮೇಹ ಇರುವವರು ಮಾವಿನ ಹಣ್ಣು ತಿನ್ನಬಹುದು. ಆದರೆ, ಇದಕ್ಕೆ ಕೆಲವು ನಿಯಮಗಳಿವೆ. ಅಂದರೆ ಮಧುಮೇಹ ರೋಗಿಗಳು ಮಾವಿನ ಹಣ್ಣು ತಿನ್ನುವಾಗ ಬಹಳ ಜಾಗರೂಕರಾಗಿರಬೇಕು. ಅವುಗಳನ್ನು ಸಣ್ಣ ಪ್ರಮಾಣದಲ್ಲಿ ಮತ್ತು ಸರಿಯಾದ ನಿಯಂತ್ರಣದೊಂದಿಗೆ ಮಾತ್ರ ಸೇವಿಸಬೇಕು. ಮಾವಿನಹಣ್ಣುಗಳು ಜೀವಸತ್ವಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದರೂ, ಅವು ನೈಸರ್ಗಿಕ ಸಕ್ಕರೆಯಲ್ಲೂ ಅಧಿಕವಾಗಿವೆ. ಇವುಗಳನ್ನು ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಮಟ್ಟ ಅಧಿಕವಾಗುವ ಸಾಧ್ಯತೆ ಇದೆ.

ಮಾವಿನ ಹಣ್ಣುಗಳನ್ನು ಅತಿಯಾಗಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಬಹುದು. ವಿಶೇಷವಾಗಿ ನೀವು ಒಂದೇ ಬಾರಿಗೆ ಹೆಚ್ಚು ಮಾಗಿದ ಮತ್ತು ಅತಿಯಾದ ಸಿಹಿ ಹಣ್ಣುಗಳನ್ನು ತಿನ್ನಬಾರದು. ಮಾವಿನ ಹಣ್ಣನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ನಾರಿನ ಅಂಶ ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ತ್ವರಿತವಾಗಿ ಹೆಚ್ಚಾಗುತ್ತದೆ. ಪ್ಯಾಕ್ ಮಾಡಿದ ಜ್ಯೂಸ್‌ಗಳನ್ನು ಕುಡಿಯುವುದರಿಂದ ಇವುಗಳಲ್ಲಿನ ಕೃತಕ ಸಕ್ಕರೆ ದೇಹದೊಳಗೆ ಸೇರಿಕೊಳ್ಳುತ್ತದೆ. ಮಾವಿನಿಂದ ಮಾಡಿದ ಸಿಹಿತಿಂಡಿಗಳನ್ನು ಸೇವಿಸಲೇಬಾರದು.‌ ಆದಷ್ಟು ಸಕ್ಕರೆ ಕಾಯಿಲೆ ಇರುವವರು ಇವುಗಳಿಂದ ದೂರ ಇದ್ರೆ ಉತ್ತಮ.

ಮಾವಿನ ತುಂಡುಗಳನ್ನು ಮಾತ್ರ ತಿನ್ನುವ ಬದಲು, ಅವುಗಳ ಜೊತೆಗೆ ಕೆಲವು ಬಾದಾಮಿ ಅಥವಾ ವಾಲ್ನಟ್ಗಳನ್ನು ಸೇರಿಸಿ ತಿನ್ನುವುದು ಉತ್ತಮ. ಇವು ರಕ್ತದಲ್ಲಿನ ಸಕ್ಕರೆಯ ತ್ವರಿತ ಏರಿಕೆಯನ್ನು ತಡೆಯುತ್ತವೆ. ಸಮತೋಲಿತ ಆಹಾರದೊಂದಿಗೆ, ಊಟದ ಭಾಗವಾಗಿ ಮಾವಿನಹಣ್ಣನ್ನು ಸಣ್ಣ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕ್ಕೆ ಇನ್ನಷ್ಟು ಒಳ್ಳೆಯದು ಆಗುತ್ತದೆ. ರಾತ್ರಿಯಲ್ಲಿ ಮಾವಿನಹಣ್ಣು ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ರಾತ್ರಿಯಲ್ಲಿ ಮಾವಿನಹಣ್ಣು ತಿನ್ನುವುದರಿಂಧ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.

ಮಾವು ತಿಂದ ನಂತರ ಒಮ್ಮೆ ನಿಮ್ಮ ಸಕ್ಕರೆ ಮಟ್ಟವನ್ನು ಪರೀಕ್ಷಿಸುವ ಮೂಲಕ ಹಣ್ಣು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವವರು, ಔಷಧಿ ತೆಗೆದುಕೊಳ್ಳುವವರು ಮತ್ತು ಸರಿಯಾದ ಆಹಾರವನ್ನು ಅನುಸರಿಸುವವರು ತಮ್ಮ ವೈದ್ಯರ ಸಲಹೆಯಂತೆ ಮಿತವಾಗಿ ಮಾವಿನಹಣ್ಣನ್ನು ಆನಂದಿಸಬಹುದು. ಮಧುಮೇಹ ಇರುವವರು ಮಾವಿನಹಣ್ಣನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಆದರೆ ಸರಿಯಾದ ಸಮಯದಲ್ಲಿ ಅದನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿದರೆ ಏನು ಆಗಲ್ಲ.

Shwetha M

Leave a Reply

Your email address will not be published. Required fields are marked *