12 ಮ್ಯಾಚ್.. 8 ತಂಡಗಳ ಫೈಟ್ – RCB & GT ಹಾದಿ ಕ್ಲಿಯರ್
ಪ್ಲೇ ಆಫ್ಸ್ ಗೆ DEPEND ಆಗಿದ್ಯಾರು?

19ನೇ ಸೀಸನ್ ಐಪಿಎಲ್ ಇನ್ನೇನು ಸ್ಟೇಜ್ನಲ್ಲಿದ್ದು ಲೀಗ್ ಹಂತ ಕಂಪ್ಲೀಟ್ ಆಗಲು ಕೇವಲ 12 ಪಂದ್ಯಗಳಷ್ಟೇ ಬಾಕಿ. ಚೆನ್ನೈ ಮತ್ತು ಲಕ್ನೋ ವಿರುದ್ಧದ ಪಂದ್ಯಕ್ಕೂ ಮುನ್ನ 58 ಪಂದ್ಯಗಳು ಕಂಪ್ಳೀಟ್ ಆಗಿವೆ. ಹೀಗಿದ್ರೂ ಟಾಪ್-4 ಟಿಕೆಟ್ಗಾಗಿ ರೇಸ್ ಮಾತ್ರ ನಿಂತಿಲ್ಲ. ಸ್ಟಿಲ್ 8 ತಂಡಗಳಿಗೆ ಚಾನ್ಸ್ ಇದೆ. ಕೆಲವರ ಹಾದಿ ಕ್ಲಿಯರ್ ಇದ್ರೆ ಇನ್ನೂ ಕೆಲವರು ಬೇರೆಯವ್ರ ಮೇಲೆ ಡಿಪೆಂಡ್ ಆಗ್ಬೇಕಿದೆ. ಌಂಡ್ ಮ್ಯಾಥಮೆಟಿಕಲಿ ಅವಕಾಶದ ಲೆಕ್ಕಾಚಾರದಲ್ಲಿದ್ದಾರೆ.
ಇದನ್ನೂ ಓದಿ : ಇನ್ಮುಂದೆ CBT ಮಾದರಿಯಲ್ಲಿ NEET ಪರೀಕ್ಷೆ! – ಜೂನ್ 21ಕ್ಕೆ ರೀ-ಎಕ್ಸಾಮ್!
ಐಪಿಎಲ್ನಲ್ಲಿ ರಿವೇಂಜ್ ಮ್ಯಾಚ್ಗಳ ಥ್ರಿಲ್ಲರ್ ಅಂದ್ರೆ ಇದೇ ನೋಡಿ. ಸೆಕೆಂಡ್ ಆಫ್ನಲ್ಲಿ ಒಂದು ತಂಡದ ಸೋಲು ಗೆಲುವು ಬೇರೆಯವ್ರ ಪ್ಲೇ ಆಫ್ಸ್ ಭವಿಷ್ಯವನ್ನ ನಿರ್ಧಾರ ಮಾಡಿಬಿಡುತ್ತೆ. ಅದ್ರಲ್ಲೂ ಈಗ ಮುಂಬೈ ವಿರುದ್ಧ ಪಂಜಾಬ್ ಸೋತ ಮೇಲಂತೂ 7 ತಂಡಗಳ ಕ್ವಾಲಿಫೈ ಆಸೆ ಜೀವಂತವಾಗಿದೆ. ಇದ್ರಲ್ಲಿ ಕೆಲವ್ರು ಇನ್ನೊಂದೇ ಹೆಜ್ಜೆ ಬಾಕಿ ಇದ್ರೆ ಇನ್ನೂ ಕೆಲವ್ರು ಪವಾಡ ನಡೀಲಿ ಅಂತಾ ಕಾಯ್ತಾ ಇದ್ದಾರೆ. ಯಾರ್ಯಾರು ಯಾವ ಪೊಸೀಷನ್ನಲ್ಲಿ ಇದ್ದಾರೆ? ಟಫ್ ಇರೋ ಟೀಮ್ಸ್ ಯಾವೆಲ್ಲಾ ಅನ್ನೋದನ್ನ ನೋಡ್ತಾ ಹೋಗೋಣ. ಮೊದಲನೇದಾಗಿ ಮೂರು ತಂಡಗಳ ದಾರಿ ಕ್ಲಿಯರ್ ಇರುವಂಥದ್ದು.
ನೇರವಾಗಿ ಟಾಪ್-4 ಟಿಕೆಟ್ ರೇಸ್!
ತಂಡ ಅಂಕ ಬೇಕಿರುವ ಗೆಲುವು
ಬೆಂಗಳೂರು 16 2 ಪಂದ್ಯಗಳಲ್ಲಿ 1 ಗೆಲುವು
ಗುಜರಾತ್ 16 2 ಪಂದ್ಯಗಳಲ್ಲಿ 1 ಗೆಲುವು
ಹೈದರಾಬಾದ್ 14 2 ಪಂದ್ಯಗಳಲ್ಲಿ 2 ಗೆಲುವು
ಚೆನ್ನೈ 12 3 ಪಂದ್ಯಗಳಲ್ಲಿ 3 ಗೆಲುವು
ರಾಜಸ್ಥಾನ 12 3 ಪಂದ್ಯಗಳಲ್ಲಿ 3 ಗೆಲುವು
ಇಲ್ಲಿ ಈ ಐದು ತಂಡಗಳು ತಮ್ಮದೇ ಗೆಲುವಿನ ಮೂಲಕ ಯಾರ ಮೇಲೆಯೂ ಡಿಪೆಂಡ್ ಆಗದೆ ಟಾಪ್-4 ಟಿಕೆಟ್ ಗಿಟ್ಟಿಸಿಕೊಳ್ಳೋ ಲಿಸ್ಟ್ನಲ್ಲಿ ಇರುವಂಥದ್ದು. ಅಂದ್ರೆ ಈ 5 ತಂಡಗಳಿಗೆ ತಾವು ಗೆದ್ರೆ ಸಾಕು ಬೇರೆಯವ್ರ ಸೋಲು ಗೆಲುವು ಮ್ಯಾಟ್ರ್ ಆಗಲ್ಲ. ಆದ್ರೆ ಇಲ್ಲಿ ಇನ್ನೊಂದು ಟ್ವಿಸ್ಟ್ ಇದೆ. ಹೌದು ಇವ್ರು ಗೆದ್ರೆ ನೇರವಾಗಿ ಟಾಪ್-4ನಲ್ಲಿ ಇರ್ತಾರೆ. ಅಟ್ ದಿ ಸೇಮ್ ಟಾಪ್ 4 ರೇಸ್ನಲ್ಲಿ ಇರೋವ್ರೇ ಒಬ್ಬರನ್ನೊರು ಫೇಸ್ ಮಾಡೋ ಪಂದ್ಯಗಳೂ ಇವೆ. ಆಗ ಗೆದ್ದವ್ರು ಮೇಲೆ ಹೋದ್ರೆ ಸೋತವ್ರು ಆಬಿಯಸ್ಲಿ ಕೆಳಗೆ ಬರ್ತಾರೆ. ಫಾರ್ ಎಕ್ಸಾಂಪಲ್ ನೆಕ್ಸ್ಟ್ ಬೆಂಗಳೂರು-ಹೈದ್ರಾಬಾದ್ ಮ್ಯಾಚ್ ಅಥವಾ ಗುಜರಾತ್-ಚೆನ್ನೈ ಪಂದ್ಯಗಳನ್ನೇ ತಗೊಳ್ಳಿ. ನಾಲ್ಕೂ ತಂಡಗಳೂ ಪ್ಳೇ ಆಫ್ಸ್ ರೇಸ್ನಲ್ಲೇ ಇದ್ದಾರೆ. ಆದ್ರೆ ಪಂದ್ಯಗಳು ಅಂತಾ ಬಂದಾಗ ಒಬ್ರು ಗೆಲ್ಲಲೇಬೇಕು ಒಬ್ರು ಸೋಲಲೇಬೇಕು. ಸೋ ಗೆದ್ದವ್ರಿಗೆ ಹಾದಿ ಕ್ಲಿಯರ್ ಆಗುವಂಥದ್ದು. ಸೋತವ್ರು ಕೆಳಗೆ ಬರುವಂಥದ್ದು ಆಗೇ ಆಗುತ್ತೆ.
ಬೇರೆಯವರ ಮೇಲೆ ಡಿಪೆಂಡ್ ಆಗುತ್ತಾ ಪಂಜಾಬ್?
ಟಾಪ್-4 ರೇಸ್ನಲ್ಲಿ ತಮ್ಮ ಗೆಲುವಿನ ಜೊತೆ ಬೇರೆಯವ್ರ ಸೋಲು ಗೆಲುವನ್ನೂ ಲೆಕ್ಕಾಚಾರ ಹಾಕುತ್ತಿರೋದು ಪಂಜಾಬ್ ಕಿಂಗ್ಸ್.. ಪಂಜಾಬ್ಗೆ ಸದ್ಯ 2 ಪಂದ್ಯಗಳು ಬಾಕಿ ಇವೆ. ಸದ್ಯ 13 ಅಂಕ ಇರೋದ್ರಿಂದ ಮುಂದಿನ 4 ಅಂಕ ಸೇರಿದ್ರೆ 17 ಅಂಕ ಆಗುತ್ತೆ. ಆದ್ರೆ 18 ಅಂಕಗಳ ರೇಸ್ನಲ್ಲಿ 5 ಟೀಂ ಇದ್ದು ಅವ್ರಲ್ಲಿ ಎರಡು ತಂಡಗಳು 16ಕ್ಕಿಂತ ಮೇಲೆ ಹೋಗದಿದ್ರೆ ಮಾತ್ರ ಪಂಜಾಬ್ಗೆ ಪ್ಲೇ ಆಫ್ಸ್ ಟಿಕೆಟ್ ಸಿಗುತ್ತೆ. ಹೀಗಾಗಿ ಪಂಜಾಬ್ ಬೇರೆ ತಂಡಗಳ ಸೋಲು ಗೆಲುವಿನ ಲೆಕ್ಕಾಚಾರ ಹಾಕುವ ಸ್ಥಿತಿಗೆ ಬಂದಿದೆ. ಮತ್ತೊಂದೆಡೆ ಕೆಕೆಆರ್ ಮತ್ತು ಡೆಲ್ಲಿ ತಂಡಗಳು. ಮ್ಯಾಥಮೆಟಿಕಲಿ ರೇಸ್ನಲ್ಲಿ ಇದ್ದೀವಿ ಅಂತಿರೋ ಕೆಕೆಆರ್ ಮುಂದಿನ ಮೂರೂ ಪಂದ್ಯಗಳನ್ನ ಗೆದ್ರೆ 15 ಅಂಕ ಆಗುತ್ತೆ. ಹಾಗೇ ಡೆಲ್ಲಿ ಮುಂದಿನ ಎರಡೂ ಪಂದ್ಯ ಗೆದ್ರೆ 14 ಅಂಕ ಆಗುತ್ತೆ. ಆಲ್ರೆಡಿ ಬೆಂಗಳೂರು ಮತ್ತು ಗುಜರಾತ್ 16 ಅಂಕ ಇರೋದ್ರಿಂದ 2 ಸೀಟ್ ಅಂತೂ ಕನ್ಫರ್ಮ್ ಆಗುತ್ವೆ. ಬಟ್ ಉಳಿದ ತಂಡಗಳು ಉಳಿದೆಲ್ಲಾ ಪಂದ್ಯಗಳನ್ನ ಸೋಲಲಿ ಅಂತಾ ಇವ್ರು ಕಾಯ್ಬೇಕು. ಕಾದ್ರೂ ಅದು ಸಾಧ್ಯವಾಗೋದು ಕಷ್ಟ. ಸೋ ಲಕ್ನೋ, ಮುಂಬೈನಂತೆಯೇ ಡೆಲ್ಲಿ ಮತ್ತು ಕೊಲ್ಕತ್ತಾ ಕೂಡ ನೆಕ್ಸ್ಟ್ ಸೀಸನ್ಗೆ ಫೋಕಸ್ ಮಾಡ್ಬೇಕಾಗುತ್ತೆ. ಒಟ್ನಲ್ಲಿ ಪ್ಲೇ ಆಫ್ಸ್ ರೇಸ್ ಸಿಕ್ಕಾಪಟ್ಟೆ ಎಕ್ಸೈಟಿಂಗ್ ಆಗಿದ್ದು ಮುಂದಿನ ಒಂದೊಂದು ಪಂದ್ಯಗಳೂ ಟಾಪ್ ನಲ್ಲಿರೋ ತಂಡಗಳ ಹಣೆಬರಹವನ್ನು ನಿರ್ಧಾರ ಮಾಡುತ್ತೆ.

ನೋಡಿರಿ

