RCBಗೆ ಟಿಕೆಟ್.. PBKS ಔಟ್? – ಬೆಂಗಳೂರೇ ಟಾರ್ಗೆಟ್ ಎಂದ ಶ್ರೇಯಸ್!
ಫೈನಲಿಸ್ಟ್ ಗಳ ಫೈಟ್ ಗೆಲ್ಲೋದ್ಯಾರು?

19ನೇ ಸೀಸನ್ ಐಪಿಎಲ್ ಸದ್ಯ ರಣರೋಚಕ ಘಟ್ಟದಲ್ಲಿದೆ. ಇನ್ನೇನು ಪ್ಲೇ ಆಫ್ಸ್ ಟಿಕೆಟ್ಸ್ ಫೈನಲ್ ಆಗೋ ಟೈಂ. ಟೇಬಲ್ ಟಾಪರ್ ಆಗಿ ಬೆಂಗಳೂರು ಟೀಂ ಮೆರೀತಿದ್ದು ಫ್ಯಾನ್ಸ್ ಅಂತೂ ಫುಲ್ ಖುಷಿಯಲ್ಲಿದ್ದಾರೆ. ಌಂಡ್ ಭಾನುವಾರದ ಪಂಜಾಬ್ ವಿರುದ್ಧದ ಮ್ಯಾಚ್ಗಾಗಿ ಕಾಯ್ತಿದ್ದಾರೆ. ಯಾಕಂದ್ರೆ ಇದೊಂದು ಗೆಲುವು ಸಾಕು ಬೆಂಗಳೂರು ಪ್ಲೇಆಫ್ಗೆ ಕ್ವಾಲಿಫೈ ಆಗೋಕೆ. ಆದ್ರೆ ಇದೇ ಮ್ಯಾಚ್ ಗೆದ್ದು ರೇಸ್ನಲ್ಲಿ ಉಳೀಬೇಕು ಅನ್ನೋದು ಪಂಜಾಬ್ ಪ್ಲ್ಯಾನ್.
ಇದನ್ನೂ ಓದಿ : ಮೇ 20ರಂದು ರಾಜ್ಯಾದ್ಯಂತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ! – ಬಸ್ ಓಡಾಟ ಇರುತ್ತಾ? ಇಲ್ವಾ?
ಪ್ರಸ್ತುತ ಸೀಸನ್ನಲ್ಲಿ 12 ಪಂದ್ಯಗಳನ್ನ ಆಡಿರೋ ಬೆಂಗಳೂರು ನಾಲ್ಕರಲ್ಲಿ ಸೋತು 8ರಲ್ಲಿ ಗೆದ್ದು ನೆಟ್ ರನ್ ರೇಟ್ ಹೆಲ್ದಿ ಆಗಿರೋದ್ರಿಂದ ನಂಬರ್ 1 ಸ್ಥಾನದಲ್ಲಿದೆ. ಅತ್ತ ಪಂಜಾಬ್ ಕಿಂಗ್ಸ್ 12 ಪಂದ್ಯಗಳನ್ನ ಆಡಿದ್ದು 6ರಲ್ಲಿ ಗೆದ್ದು ಒಂದು ಪಂದ್ಯ ರದ್ದಾಗಿ ಟೋಟಲ್ 13 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇಲ್ಲಿ ಒಂದಂತು ಕ್ಲಿಯರ್ ಇದೆ. ನೆಕ್ಸ್ಟ್ ಜರ್ನಿಯಲ್ಲಿ ಆರ್ಸಿಬಿ ಸೇಫ್ ಝೋನ್ನಲ್ಲಿದೆ ಹಾಗೇ ಪಂಜಾಬ್ ಡೇಂಜರ್ ಜೋನ್ನಲ್ಲಿದೆ ಅನ್ನೋದು. ಹೀಗಾಗಿ ಭಾನುವಾರದ ಪಂದ್ಯ ಇಬ್ಬರ ಪಾಲಿಗೂ ಮಸ್ಟ್ ವಿನ್ ಗೇಮ್ ಆಗುತ್ತೆ.
ಬೆಂಗಳೂರು ಗೆದ್ರೆ ಪ್ಲೇ ಆಫ್ಸ್.. ಪಂಜಾಬ್ ಗೆದ್ರೆ ಟಾಪ್-4 ರೇಸ್!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ಗೆಲುವುಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. +1.053 ರನ್ರೇಟ್ ಹೊಂದಿರುವುದು ತಂಡದ ಪ್ಲಸ್ ಪಾಯಿಂಟ್. ಅಷ್ಟೇ ಅಂಕ ಹೊಂದಿರುವ ಗುಜರಾತ್ ಟೈಟಾನ್ಸ್ ಎರಡನೇ ಸ್ಥಾನದಲ್ಲಿದ್ದರೆ, ಸನ್ರೈಸರ್ಸ್ ಹೈದರಾಬಾದ್ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಪಂಜಾಬ್ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಈ ಪಂದ್ಯವನ್ನ ಬೆಂಗಳೂರು ಗೆದ್ರೆ ಟೋಟಲ್ 18 ಅಂಕಗಳೊಂದಿಗೆ ಪ್ಲೇ ಆಫ್ಸ್ ರೇಸ್ನಲ್ಲಿ ಟಿಕೆಟ್ ಕನ್ಫರ್ಮ್ ಮಾಡಿಕೊಳ್ಳುತ್ತೆ. ಅತ್ತ ಪಂಜಾಬ್ ಗೆದ್ರೆ 15 ಅಂಕಗಳೊಂದಿಗೆ ರೇಸ್ನಲ್ಲಿ ಉಳಿಯುತ್ತೆ. ಕಳೆದ ಸೀಸನ್ನಲ್ಲಿ ಫೈನಲಿಸ್ಟ್ಗಳಾಗಿದ್ದ ಈ ಎರಡು ತಂಡಗಳು ಈ ಸೀಸಸ್ನಲ್ಲಿ ಹೇಗೆ ಪರ್ಫಾಮ್ ಮಾಡಿದ್ದಾರೆ. ಸ್ಟ್ರೆಂಥ್ ಌಂಡ್ ವೀಕ್ನೆಸ್ ಏನು ಅನ್ನೋದನ್ನ ನೋಡ್ತಾ ಹೋಗೋಣ. ಮೊದಲನೇದಾಗಿ ಬೆಂಗಳೂರು ತಂಡದ ಸ್ಟ್ರೆಂಥ್ ಌಂಡ್ ವೀಕ್ನೆಸ್ ಬಗ್ಗೆ ನೋಡೋಣ.
ಬೆಂಗಳೂರು ಪ್ಲಸ್ ಪಾಯಿಂಟ್ಸ್!
ಟೇಬಲ್ ಟಾಪರ್.. ನೆಟ್ ರನ್ ರೇಟ್ ಉತ್ತಮ.. ಪ್ರೆಶರ್ ಫ್ರೀ ಗೇಮ್
ಎರಡು ಪಂದ್ಯಗಳ ಪೈಕಿ ಒಂದು ಪಂದ್ಯ ಗೆದ್ದರೂ ಪ್ಲೇ ಆಫ್ಸ್ ಹಾದಿ ಸುಲಭ
ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಇಂಪ್ಯಾಕ್ಟ್ ಮಾಡಿರೋ ಆಟಗಾರರು
ಆರ್ ಸಿಬಿಯ ವೀಕ್ ನೆಸ್ ಅಂದ್ರೆ ಓಪನರ್ ಬೆಥೆಲ್ ಕಡೆಯಿಂದ ರನ್ಸ್ ಇಲ್ಲ
ಫಸ್ಟ್ ಬ್ಯಾಟಿಂಗ್ ಗೆ ಅವಕಾಶ ಸಿಕ್ಕರೆ ಡಿಫೆಂಡ್ ಕಷ್ಟ.. ಚೇಸಿಂಗ್ ನಲ್ಲಿ 1 ಸೋಲು
ಸೋ ಆರ್ಸಿಬಿಯಲ್ಲಿ ತುಂಬಾ ಟೆನ್ಷನ್ ಆಗೋ ಥರದ್ದೇನು ಇಲ್ಲ. ಬಟ್ ಓವರ್ ಕಾನ್ಫಿಡೆನ್ಸ್ ಬೇಡ ಅಷ್ಟೇ. ಲಾಸ್ಟ್ ಮ್ಯಾಚಲ್ಲಿ ಕೊಹ್ಲಿ ಶತಕ ಬಾರಿಸಿ ಕಂ ಬ್ಯಾಕ್ ಮಾಡಿದ್ದು ಪಾಸಿಟಿವ್ ಮೈಂಡ್ಸೆಟ್ ಇರುತ್ತೆ. ಹೀಗಾಗಿ ಬೆಂಗಳೂರೇ ಈ ಮ್ಯಾಚ್ ಗೆಲ್ಲುವಂಥ ಫೇವರೆಟ್ ಟೀಂ ಆಗಿ ಕಾಣ್ತಿದೆ. ಆದ್ರೆ ಪಂಜಾಬ್ ಪಾಳಯದಲ್ಲಿ ಮಾತ್ರ ಬೇರೆಯದ್ದೇ ರೀತಿ ಇದೆ. ರಿದಮ್ ಕಳ್ಕೊಂಡಿದ್ದಾರೆ. ಸೋಲಿನ ಸುಳಿಯಲ್ಲಿ ಇದ್ದಾರೆ.
ಪಂಜಾಬ್ ಗೆ ಏನಾಯ್ತು?
ಪಂಜಾಬ್ ಗೆ ಆರಂಭದಲ್ಲಿ ಸಿಕ್ಕ ಹಿಡಿತ ಎರಡನೇ ಹಂತದಲ್ಲಿ ಸಿಕ್ಕಿಲ್ಲ
ಸತತ 5 ಪಂದ್ಯಗಳನ್ನ ಸೋತಿರೋದ್ರಿಂದ ಒತ್ತಡ ಜಾಸ್ತಿಯಾಗುತ್ತಿದೆ
ಪಂಜಾಬ್ ನ ಸ್ಟ್ರೆಂಥ್ ಮತ್ತು ವೀಕ್ ನೆಸ್ ಎರಡೂ ಕೂಡ ಬ್ಯಾಟಿಂಗ್
200+ ರನ್ಸ್ ಕೊಟ್ಟಾಗಲೂ ಡಿಫೆಂಡ್ ಮಾಡಿಕೊಳ್ಳಲು ಬೌಲರ್ಸ್ ಫೇಲ್
ಬೌಲಿಂಗ್ ಸ್ಕ್ವಾಡ್ ಬಳಸಿಕೊಳ್ಳುವಲ್ಲಿ ಶ್ರೇಯಸ್ ಕೂಡ ಎಡವಟ್ಟು
ಪಂಜಾಬ್ ಆ ವಿನ್ನಿಂಗ್ ಟ್ರ್ಯಾಕ್ನ ಬಿಟ್ಟು ಈಗ ವಾಪಸ್ ಬರೋಕಾಗ್ದೇ ಒದ್ದಾಡ್ತಿದ್ದಾರೆ. ಡೆಲ್ಲಿ ವಿರುದ್ಧ 265 ರನ್ಗಳ ಟಾರ್ಗೆಟ್ ಚೇಸ್ ಮಾಡಿ ಗೆದ್ದಿದ್ದೇ ಗೆದ್ದಿದ್ದು. ಆಮೇಲೆ ಸತತ 5 ಪಂದ್ಯಗಳನ್ನ ಸೋತಿದ್ದಾರೆ. ರಾಜಸ್ಥಾನದಿಂದ ಸ್ಟಾರ್ಟ್ ಆದ ಸೋಲಿನ ಪರ್ವ ನೆಕ್ಸ್ಟ್ ಗುಜರಾತ್, ಹೈದ್ರಾಬಾದ್, ಡೆಲ್ಲಿ, ಮುಂಬೈ ವಿರುದ್ಧವೂ ಸೋಲುವಂತೆ ಮಾಡಿದೆ. ಈ 5 ಸೋಲುಗಳಿಂದ ಟಾಪ್-4 ಅವಕಾಶವನ್ನೇ ಮಿಸ್ ಮಾಡಿಕೊಳ್ತಾರಾ ಅನ್ನೋ ಸ್ಥಿತಿ ಉಂಟು ಮಾಡಿದೆ. ಯಾಕಂದ್ರೆ ಮುಂದಿನ ಎರಡಕ್ಕೆ ಎರಡೂ ಪಂದ್ಯಗಳನ್ನ ಗೆದ್ರೂ ಪ್ಳೇ ಆಫ್ ಟಿಕೆಟ್ ಸಿಗೋದು ಕಷ್ಟನೇ ಇದೆ. ಹೀಗಾಗಿ ಬೆಂಗಳೂರು ವಿರುದ್ಧ ಗೆದ್ರೆ ರೇಸ್ನಲ್ಲಿ ಇರ್ತಾರೆ. ಇಲ್ದಿದ್ರೆ ಈ ಸೀಸನ್ ಮರಿಬೇಕಾಗುತ್ತೆ. ಆದ್ರೆ ಶ್ರೇಯಸ್ ಅಯ್ಯರ್ ಮಾತ್ರ ಫುಲ್ ಕಾನ್ಫಿಡೆನ್ಸ್ನಲ್ಲಿ ಇದ್ದಾರೆ. ಬೆಂಗಳೂರು ಹಾಗೇ ಲಕ್ನೋ ವಿರುದ್ಧದ ಪಂದ್ಯಗಳನ್ನ ಗೆದ್ದು ಕಂ ಬ್ಯಾಕ್ ಮಾಡ್ತೀವಿ ಅಂದಿದ್ದಾರೆ. ಮುಂದಿನ ಪಂದ್ಯಗಳಿಗೆ ಫುಲ್ ಎಕ್ಸೈಟ್ ಆಗಿದ್ದು ಎರಡಕ್ಕೆ ಎರಡೂ ವಿಕ್ಟರಿ ನಮ್ದೇ ಅಂತಿದ್ದಾರೆ. ಆದ್ರೆ ಬೆಂಗಳೂರು ಅಷ್ಟು ಈಸಿಯಾಗಿ ಸೋಲೋದಂತೂ ಇಲ್ಲ. ಹೀಗಾಗಿ ಭಾನುವಾರ ಮಧ್ಯಾಹ್ನದ ಪಂದ್ಯ ಬಿಸಿಲಿನ ನಡುವೆ ಆಟಗಾರರ ಅಬ್ಬರದಿಂದಲೂ ಬಿಸಿ ಏರೋದ್ರಲ್ಲಿ ಡೌಟೇ ಇಲ್ಲ.

ನೋಡಿರಿ

