RCB ಕೆಣಕಿದ ಪಂಜಾಬ್ ಕಿಂಗ್ಸ್ಗೆ ಕರ್ಮ ರಿಟರ್ನ್ಸ್ – ನಾಯಕರ ಬದಲಾವಣೆ ವಿಚಾರದಲ್ಲಿ ಮುಂಬೈ ಇಂಡಿಯನ್ಸ್ ದಾಖಲೆ

ಆರ್ಸಿಬಿ ಕಿಂಗ್ ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಸುಳಿವು ನೀಡಿದ್ರಾ?, ಯಾಕೆಂದ್ರೆ, ಕೆಕೆಆರ್ ವಿರುದ್ಧ ಶತಕ ಸಿಡಿಸಿ ಆರ್ಸಿಬಿ ಗೆಲ್ಲಿಸಿದ ಬಳಿಕ ಕೊಹ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ನಾನು ಆಡುತ್ತಿರುವ ಈ ಆಟ ಯಾವುದೋ ಒಂದು ದಿನ ಖಂಡಿತ ಕೊನೆಗೊಳ್ಳುತ್ತದೆ. ಆದ್ದರಿಂದಲೇ ಮೈದಾನದಲ್ಲಿ ಇರೋ ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತೇನೆ. ನನ್ನ ಜೀವನ ಪೂರ್ತಿ ನಾನು ಮಾಡಿರೋದು ಇದೆ. ಕ್ರಿಕೆಟ್ ಅಂದರೆ ನನಗೆ ತುಂಬಾ ಇಷ್ಟ. ನನ್ನ ಸಂಪೂರ್ಣ ಶಕ್ತಿ ಹಾಗೂ ಆತ್ಮವನ್ನು ಇದರಲ್ಲಿಯೇ ಕೇಂದ್ರಿಕರಿಸುತ್ತೇನೆ ಎಂದು ಕೊಹ್ಲಿ ಭಾವುಕರಾಗಿ ಮಾತಾಡಿದ್ದಾರೆ.
ಇದನ್ನೂ ಓದಿ:ನಂ-1ನಲ್ಲಿದ್ರೂ ಸೇಫ್ ಇಲ್ಲ RCB – PBKS & SRH ಪಂದ್ಯಗಳೇ ಅಗ್ನಿಪರೀಕ್ಷೆ
ಕೆಕೆಆರ್ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದಾಗ ಕೊಹ್ಲಿ ಆಡಿರುವ ಮಾತು ಸ್ಟಂಪ್ಸ್ ಮೈಕ್ ಮೂಲಕ ಕೇಳಿದ್ದು ಸಖತ್ ವೈರಲ್ ಆಗಿದೆ. ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿ, ಕೆಕೆಆರ್ ತಂಡದ ಮನೀಶ್ ಪಾಂಡೆ ಜೊತೆ ಮಾತನಾಡಿದ್ದಾರೆ. ಮನೀಶ್ ಜೊತೆ ತಮಾಷೆ ಮಾಡುತ್ತಾ ನಾನು ಈಗ ಯಾವ ಶಾಟ್ ಬೇಕಾದರೂ ಹೊಡೆಯಲು ಪ್ರಯತ್ನಿಸುತ್ತೇನೆ. ನನಗೇನು ಈಗ ಟೀಂ ಇಂಡಿಯಾಗೆ ಆಡಬೇಕಿಲ್ಲ. ಹೀಗಾಗಿ ಯಾವ ಶಾಟ್ ಬೇಕಾದರು ಹೊಡೆಯಬಹುದು ಎಂದು ಹೇಳಿದ್ದಾರೆ. ಈ ಮೂಲಕ ಟೀಂ ಇಂಡಿಯಾಗೆ ಆಯ್ಕೆ ವಿಚಾರದಲ್ಲಿ ನನಗೆ ಒತ್ತಡವಿಲ್ಲ ಅನ್ನೋ ಸಂದೇಶ ರವಾನಿಸಿದ್ದಾರೆ.
ಮುಂಬೈ ಇಂಡಿಯನ್ಸ್ ಐಪಿಎಲ್ನ ಈ ಆವೃತ್ತಿಯಲ್ಲಿ ಏನ್ ಸಾಧನೆ ಮಾಡಿದ್ಯೋ ಬಿಟ್ಟಿದ್ಯೋ.. ಆದರೆ, ಒಂದೇ ಆವೃತ್ತಿಯಲ್ಲಿ ಮೂವರು ನಾಯಕರನ್ನು ಬದಲಿಸಿದ ಏಕೈಕ ತಂಡ ಎಂಬ ದಾಖಲೆ ತನ್ನ ಹೆಸರಿಗೆ ಬರೆಸಿಕೊಂಡಿದೆ. ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಈ ದಾಖಲೆ ಮಾಡಿದ ಮೊದಲ ತಂಡ ಮುಂಬೈ ಆಗಿದೆ. ಈ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕರಾಗಿದ್ದರು, ನಂತರ ಸೂರ್ಯ ನಾಯಕರಾದ್ರು. ಈಗ ಮೂರನೇ ನಾಯಕರಾಗಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನೆಡೆಸಿದ್ದಾರೆ.
ಚೆನ್ನೈ ಮತ್ತು ಲಕ್ನೋ ತಂಡಗಳ ನಡುವಿನ ಕಾದಾಟಕ್ಕೆ ಕೌಂಟ್ಡೌನ್ ಶುರುವಾಗಿದೆ. ಏಕನಾ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಚೆನ್ನೈ ತಂಡ ಆರಂಭದಲ್ಲಿ ಸತತ ಸೋಲನುಭವಿಸಿದರೂ, ನಂತರ ಗೆಲುವಿನ ಲಯಕ್ಕೆ ಮರಳಿದೆ. ಆದರೂ ಕೂಡಾ ಋತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ತಂಡಕ್ಕೆ ಲಕ್ನೋ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯ. ಒಂದು ವೇಳೆ ಈ ಪಂದ್ಯದಲ್ಲಿ ಸಿಎಸ್ಕೆ ಸೋತರೆ ಪ್ಲೇ ಆಫ್ ಕನಸು ನುಚ್ಚುನೂರಾಗಲಿದೆ.
ಐಪಿಎಲ್ನಲ್ಲಿ ಸತತ 6 ಪಂದ್ಯ ಗೆದ್ದು, ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡು ಬಂದಿದ್ದ ಪಂಜಾಬ್ ಫೈನಲ್ ಗೆ ಪ್ರವೇಶಿಸಬಹುದು ಅಂತಾನೇ ಹೇಳಲಾಗ್ತಿತ್ತು. ಇದೀಗ ಪಂಜಾಬ್ ಸತತ 5 ಪಂದ್ಯಗಳನ್ನು ಸೋತಿದೆ. ಮುಂದಿನ 2 ಪಂದ್ಯಗಳಲ್ಲಿ ಗೆಲ್ಲದಿದ್ದರೆ ಪ್ಲೇ ಆಫ್ ಕನಸು ಕೂಡ ಭಗ್ನವಾಗಲಿದೆ. ಪಂಜಾಬ್ ತನ್ನ ಮುಂದಿನ ಪಂದ್ಯವನ್ನ ಆರ್ಸಿಬಿ ವಿರುದ್ಧ ಭಾನುವಾರ ಆಡಲಿದೆ. ಒಂದು ವೇಳೆ ಆರ್ಸಿಬಿ ವಿರುದ್ಧ ಸೋತರೆ ಪಂಜಾಬ್ ಗಂಟು ಮೂಟೆ ಕಟ್ಟಬೇಕಾಗುತ್ತದೆ.
ಲಖನೌ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಅದ್ಭುತವಾಗಿ ಆಡುತ್ತಿರುವ ಜೇಮೀ ಓವರ್ಟನ್ ಗಾಯದ ಕಾರಣ ಇಂಗ್ಲೆಂಡ್ಗೆ ವಾಪಸ್ ಆಗಿದ್ದಾರೆ. ಕೆಳ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಜೊತೆಗೆ ವಿಕೆಟ್ಗಳನ್ನು ಪಡೆಯುವ ಮೂಲಕ ಓವರ್ಟನ್ CSK ಪರ ಬೆಸ್ಟ್ ಆಲ್ರೌಂಡರ್ ಆಗಿದ್ದರು.
ಜೇಮೀ ಓವರ್ಟನ್ ಗಾಯಗೊಂಡು ಹೊರಬಿದ್ದ ಬಳಿಕ, ಚೆನ್ನೈ ಸೂಪರ್ ಕಿಂಗ್ಸ್ ದಕ್ಷಿಣ ಆಫ್ರಿಕಾದ ಯುವ ಆಲ್ರೌಂಡರ್ ಡಯಾನ್ ಫಾರೆಸ್ಟರ್ ಅವರನ್ನು ₹75 ಲಕ್ಷಕ್ಕೆ ತಂಡಕ್ಕೆ ಸೇರಿಸಿಕೊಂಡಿದೆ. ಇದು ಫಾರೆಸ್ಟರ್ ಅವರ ಮೊದಲ ಐಪಿಎಲ್ ಸೀಸನ್ ಆಗಿದ್ದು, ಅವರು ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 25 ವರ್ಷದ ಡಯಾನ್ ಫಾರೆಸ್ಟರ್, ಸಿಎಸ್ಕೆ ಪರ ಲಕ್ನೋ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.
ಮೇ 13 ರಂದು ಕೆಕೆಆರ್ ವಿರುದ್ಧ ಬ್ಯಾಟಿಂಗ್ಗೆ ಬಂದ ದೇವದತ್ ಪಡಿಕ್ಕಲ್ಗೆ ಮೈದಾನದಲ್ಲಿ ಚಿನ್ನದ ಸರ ಸಿಕ್ಕಿತ್ತು. ಈ ಚೈನ್ ಬೆಥೆಲ್ ಅವರದ್ದು. ಕೆಕೆಆರ್ ವೇಗಿ ಕಾರ್ತಿಕ್ ತ್ಯಾಗಿ ಎಸೆದ ಬೌನ್ಸರ್ ಗೆ ಜೇಕಬ್ ಬೆಥೆಲ್ ಗೆ ಅವರ ಹೆಲ್ಮೆಟ್ಗೆ ಬಡಿದಿತ್ತು. ಆಗ ಬೆಥೆಲ್ ಕುತ್ತಿಗೆಯಲ್ಲಿದ್ದ ಚಿನ್ನದ ಸರ ತುಂಡಾಗಿ ಪಿಚ್ ಮೇಲೆ ಬಿದ್ದಿತ್ತು. ಔಟ್ ಆದ ಬೇಸರದಲ್ಲಿದ್ದ ಬೆಥೆಲ್, ಚೈನ್ ಗಮನಿಸಿರಲಿಲ್ಲ. ನಂತರ ಬ್ಯಾಟಿಂಗ್ ಗೆ ಬಂದ ಪಡಿಕ್ಕಲ್ ಗೆ ಪಿಚ್ ಮಧ್ಯೆ ಹೊಳೆಯುತ್ತಿದ್ದ ಚಿನ್ನದ ಸರ ಕಾಣಿಸಿದೆ. ತಕ್ಷಣವೇ ಅದನ್ನು ಕೈಗೆತ್ತಿಕೊಂಡ ಪಡಿಕ್ಕಲ್, ಅಂಪೈರ್ಗೆ ನೀಡಿದ್ರು.
ಐಪಿಎಲ್ ನಂತರ ಶ್ರೀಲಂಕಾದಲ್ಲಿ ನಡೆಯಲಿರುವ ಭಾರತ ಎ, ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ ಎ ತಂಡಗಳ ತ್ರಿಕೋನ ಏಕದಿನ ಸರಣಿಗೆ ಬಿಸಿಸಿಐ ಭಾರತ ಎ ತಂಡವನ್ನು ಪ್ರಕಟಿಸಿದೆ. ತಿಲಕ್ ವರ್ಮಾ ನಾಯಕರಾಗಿದ್ದು, ರಿಯಾನ್ ಪರಾಗ್ ಉಪನಾಯಕರಾಗಿದ್ದಾರೆ. ಐಪಿಎಲ್ ಹೀರೋ ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ ಸೇರಿದಂತೆ ಹಲವು ಯುವ ಆಟಗಾರರಿಗೆ ಈ ಸರಣಿಯಲ್ಲಿ ಚಾನ್ಸ್ ಸಿಕ್ಕದೆ.
ತ್ರಿಕೋನ ಏಕದಿನ ಸರಣಿ ಜೂನ್ 9 ರಂದು ಶುರುವಾಗಿ ಜೂನ್ 21ಕ್ಕೆ ಮುಗಿಯುತ್ತದೆ. ವಿಶೇಷವೆಂದರೆ, ಐಪಿಎಲ್ನಲ್ಲಿ ರನ್ ಮಳೆ ಹರಿಸುತ್ತಿರುವ, ಆಯುಷ್ ಬಡೋನಿ, ಪ್ರಭ್ಸಿಮ್ರಾನ್ ಸಿಂಗ್ ಕೂಡಾ ಏಕದಿನ ತ್ರಿಕೋನ ಸರಣಿಗೆ ಆಯ್ಕೆಯಾಗಿದ್ದಾರೆ. ಜೊತೆಗೆ ಯಶ್ ಠಾಕೂರ್, ಯುಧ್ವೀರ್ ಸಿಂಗ್, ಅನ್ಶುಲ್ ಕಾಂಬೋಜ್ ಮತ್ತು ಅರ್ಷದ್ ಖಾನ್ ಕೂಡಾ ಯುವ ಬೌಲರ್ಗಳಾಗಿ ಆಯ್ಕೆಯಾಗಿದ್ದಾರೆ.

ನೋಡಿರಿ

