ಚೆನ್ನೈಗೆ ಮಾಡು ಇಲ್ಲವೇ ಮಡಿ ಪಂದ್ಯ – ಲಕ್ನೋ ವಿರುದ್ಧ ಆಡಲ್ಲ ಜೇಮೀ ಓವರ್ಟನ್

ಚೆನ್ನೈಗೆ ಮಾಡು ಇಲ್ಲವೇ ಮಡಿ ಪಂದ್ಯ – ಲಕ್ನೋ ವಿರುದ್ಧ ಆಡಲ್ಲ ಜೇಮೀ ಓವರ್ಟನ್

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಏಕನಾ ಕ್ರಿಕೆಟ್ ಮೈದಾನದಲ್ಲಿ ಕಾದಾಟ ನಡೆಸಲಿವೆ. ಲಕ್ನೋ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಚೆನ್ನೈ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಇದನ್ನೂ ಓದಿ:ಮುಂಬೈಗೆ ಬೂಮ್ರಾ ಬೂಸ್ಟ್ – ಪ್ಲೇ ಆಫ್ ಹಾದಿ ಬಿಟ್ಟ ಪಂಜಾಬ್

ಚೆನ್ನೇ ಸೂಪರ್ ಕಿಂಗ್ಸ್ ಆರಂಭದಲ್ಲಿ ಸತತ ಸೋಲು ಅನುಭವಿಸಿದರು, ನಂತರ ಗೆಲುವಿನ ಲಯಕ್ಕೆ ಬಂದಿದೆ. ಹಾಗಿದ್ದರೂ ಕೂಡಾ ರುತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ತಂಡಕ್ಕೆ ಇಂದು ಲಕ್ನೋ ವಿರುದ್ಧ ಮಾಡು ಇಲ್ಲವೇ ಮಡಿ ಸವಾಲು ಎದುರಾಗಿದೆ. ಒಂದು ವೇಳೆ ಈ ಪಂದ್ಯದಲ್ಲಿ ಸಿಎಸ್‍ಕೆ ಸೋತರೆ ಪ್ಲೇ ಆಫ್ ಕನಸು ನುಚ್ಚುನೂರಾಗುತ್ತದೆ. ಇತ್ತ 11 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳನ್ನು ಮಾತ್ರ ಗೆದ್ದಿದ್ದು, ಈಗಾಗಲೇ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿರುವ ಲಕ್ನೋ ತಂಡ ಇಂದು ಔಪಚಾರಿಕ ಪಂದ್ಯವನ್ನಾಡಲಿದೆ.

ಲಖನೌ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಅದ್ಭುತವಾಗಿ ಆಡುತ್ತಿರುವ ಜೇಮೀ ಓವರ್ಟನ್ ಗಾಯದ ಕಾರಣ ಇಂಗ್ಲೆಂಡ್‌ಗೆ ವಾಪಸ್ ಆಗಿದ್ದಾರೆ. ಕೆಳ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಜೊತೆಗೆ ವಿಕೆಟ್‌ಗಳನ್ನು ಪಡೆಯುವ ಮೂಲಕ ಓವರ್ಟನ್ CSK ಪರ ಬೆಸ್ಟ್ ಆಲ್‌ರೌಂಡರ್ ಆಗಿದ್ದರು.

ಜೇಮೀ ಓವರ್ಟನ್ ಗಾಯಗೊಂಡು ಹೊರಬಿದ್ದ ಬಳಿಕ, ಚೆನ್ನೈ ಸೂಪರ್ ಕಿಂಗ್ಸ್ ದಕ್ಷಿಣ ಆಫ್ರಿಕಾದ ಯುವ ಆಲ್‌ರೌಂಡರ್ ಡಯಾನ್ ಫಾರೆಸ್ಟರ್ ಅವರನ್ನು ₹75 ಲಕ್ಷಕ್ಕೆ ತಂಡಕ್ಕೆ ಸೇರಿಸಿಕೊಂಡಿದೆ. ಇದು ಫಾರೆಸ್ಟರ್ ಅವರ ಮೊದಲ ಐಪಿಎಲ್ ಸೀಸನ್ ಆಗಿದ್ದು, ಅವರು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 25 ವರ್ಷದ ಡಯಾನ್ ಫಾರೆಸ್ಟರ್, ಸಿಎಸ್‌ಕೆ ಪರ ಲಕ್ನೋ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಏಕಾನಾ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಈ ಪಿಚ್ ಬೌಲಿಂಗ್ ಸಹಕಾರಿ ಪಿಚ್ ಆಗಿದ್ದು, ಸಾಮಾನ್ಯವಾಗಿ ಸ್ಪಿನ್ನರ್ಸ್ ಹಾಗೂ ಸ್ಲೋ ಬೌಲರ್ಸ್ ಪ್ರಾಬಲ್ಯ ಸಾಧಿಸಬಹುದು. ಈ ಕ್ರೀಡಾಂಗಣದಲ್ಲಿ ದೊಡ್ಡ ಮೊತ್ತ ಕಲೆ ಹಾಕುವುದು ಕಷ್ಟ. ಎರಡನೇ ಇನಿಂಗ್ಸ್‍ನಲ್ಲಿ ಬ್ಯಾಟ್ ಮಾಡುವ ತಂಡಕ್ಕೆ ಸ್ವಲ್ಪ ಕಷ್ಟವಾಗಬಹುದು. ಹಾಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

 

Sulekha

Leave a Reply

Your email address will not be published. Required fields are marked *