ಪೆಟ್ರೋಲ್, ಡೀಸೆಲ್ ಆಯ್ತು.. ಈಗ ಖಾಸಗಿ ಬಸ್ ದರ ಏರಿಕೆ! – ಶೇ.20-30ರಷ್ಟು ಟಿಕೆಟ್ ದರ ಹೆಚ್ಚಳ!

ಪೆಟ್ರೋಲ್, ಡೀಸೆಲ್ ದರ ಹಾಗೂ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ ಬೆಲೆ ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ರಾಜ್ಯದ ಜನರಿಗೆ ಮತ್ತೊಂದು ಶಾಕಿಂಗ್ ಸುದ್ದಿಯಿದೆ. ಇದೀಗ ಖಾಸಗಿ ಬಸ್ ದರವೂ ಏರಿಕೆಯಾಗಿದೆ.
ಇನ್ನು ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಬಗ್ಗೆ ಇಂದು (ಮೇ 15) ಬೆಳಿಗ್ಗೆಯಷ್ಟೇ ತೈಲ ಕಂಪನಿಗಳು ಘೋಷಣೆ ಮಾಡಿದ್ದವು. ಪೆಟ್ರೋಲ್ ಹಾಗೂ ಡೀಸೆಲ್ ಎರಡೂ ಲೀಟರ್ಗೆ 3 ರೂಪಾಯಿಗೂ ಹೆಚ್ಚು ಏರಿಕೆ ಕಂಡಿತ್ತು. ಅದರ ಅನ್ವಯ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗೆ 3.27 ರೂಪಾಯಿ ಏರಿಕೆಯಾಗಿದ್ದು, ಡಿಸೇಲ್ ಬೆಲೆ ಲೀಟರ್ಗೆ 3.12 ರೂಪಾಯಿ ಹೆಚ್ಚಳವಾಗಿತ್ತು. ಆ ಬೆನ್ನಲ್ಲೇ ದೇಶಾದ್ಯಂತ ಸಿಎನ್ಜಿ ದರವನ್ನೂ ಪ್ರತಿ ಕೆಜಿಗೆ 2 ರೂಪಾಯಿ ಏರಿಕೆ ಮಾಡಿರುವ ಬಗ್ಗೆ ಘೋಷಣೆಯಾಗಿತ್ತು. ಇದೀಗ ಖಾಸಗಿ ಬಸ್ ದರವೂ ಏರಿಕೆಯಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಖಾಸಗಿ ಬಸ್ ಟಿಕೆಟ್ ದರ ಏರಿಕೆಗೆ ತೀರ್ಮಾನಿಸಲಾಗಿದೆ. ಶೇ.20-30ರಷ್ಟು ದರ ಏರಿಕೆಯಾಗಲಿದ್ದು, ಬೆಲೆ ಏರಿಕೆ ಅಬ್ಬರದ ಪರಿಣಾಮ ಈಗಾಗಲೇ ಸೋತು ಸುಣ್ಣವಾಗಿರುವ ಜನರಿಗೆ ಇದರಿಂದ ಮತ್ತಷ್ಟು ಹೊರೆಯಾಗಲಿದೆ.
ಬಸ್ ಒಂದಕ್ಕೆ ಪ್ರತಿದಿನ ಕನಿಷ್ಠ 150 ಲೀಟರ್ ಡಿಸೇಲ್ ಹಾಕಿಸುತ್ತೇವೆ. ಇಂಧನ ಬೆಲೆಯಲ್ಲಿ 3 ರೂ. ಹೆಚ್ಚಳವಾಗಿರುವ ಕಾರಣ 450 ರೂಪಾಯಿ ಹೆಚ್ಚುವರಿಯಾಗಿ ನಮಗೆ ಹೊರೆಯಾಗಲಿದೆ. ಹೀಗಾಗಿ ಟಿಕೆಟ್ಗಳ ದರ ಏರಿಸೋದು ನಮಗೂ ಅನಿವಾರ್ಯವಾಗಿದೆ. ಇದರ ಪರಿಣಾಮ ಪ್ರಯಾಣಿಕರ ಮೇಲೆ ಉಂಟಾಗಲಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ.

ನೋಡಿರಿ

