ಬೋಲ್ಡ್‌ ಬ್ಯೂಟಿಗೆ ಪೊಲೀಸ್‌ ಕಾಟ! – ಕೆಟ್ಟ ಕಮೆಂಟ್‌ ಮಾಡಿದ ವ್ಯಕ್ತಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಚೈತ್ರಾ ಜೆ ಆಚಾರ್!

ಬೋಲ್ಡ್‌ ಬ್ಯೂಟಿಗೆ ಪೊಲೀಸ್‌ ಕಾಟ! – ಕೆಟ್ಟ ಕಮೆಂಟ್‌ ಮಾಡಿದ ವ್ಯಕ್ತಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಚೈತ್ರಾ ಜೆ ಆಚಾರ್!

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಚೈತ್ರಾ ಆಚಾರ್, ಆಗಾಗ್ಗೆ ತಮ್ಮ ಫೋಟೋಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಫ್ಯಾನ್ಸ್‌ ಗಮನ ಸೆಳೆಯುತ್ತಿರುತ್ತಾರೆ. ಸಾಕಷ್ಟು ಬೋಲ್ಡ್‌ ಫೋಟೋಗಳನ್ನ ಪೋಸ್ಟ್‌ ಮಾಡೋ ನಟಿಗೆ ಪಾಸಿಟಿವ್‌, ನೆಗೆಟಿವ್‌ ಕಮೆಂಟ್ಸ್‌ ಬರೋದು ಕಾಮನ್.‌ ಇದೀಗ ಚೈತ್ರಾ ಆಚಾರ್‌ ಶಾಕಿಂಗ್‌ ವಿಚಾರವೊಂದನ್ನ ರಿವೀಲ್‌ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಕಾಮೆಂಟ್ ಮಾಡಿ ಪೊಲೀಸ್ ಅಧಿಕಾರಿಯೊಬ್ಬರು ಕಿರುಕುಳ ನೀಡಿದ್ದಾರೆ. ಈ ವಿಷಯವನ್ನು ನಟಿ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಯಾವುದೋ ಒಂದು ದಿನ ಕೊನೆಗೊಳ್ಳಲೇಬೇಕು – ಭಾವುಕರಾದ ಕೊಹ್ಲಿ ನಿವೃತ್ತಿ ಸುಳಿವು ನೀಡಿದ್ರಾ?

ಖ್ಯಾತ ನಟಿ ಚೈತ್ರಾ ಜೆ. ಆಚಾರ್ ನಟನೆಯಷ್ಟೇ ನೇರ ನುಡಿ ಮತ್ತು ದಿಟ್ಟತನದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಚೈತ್ರಾ ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಕಾಮೆಂಟ್ ಮಾಡಿ ಪೊಲೀಸ್ ಅಧಿಕಾರಿಯೊಬ್ಬರು ಕಿರುಕುಳ ನೀಡುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಚೈತ್ರಾ ಬೋಲ್ಡ್ ಲುಕ್‌ನ ಫೋಟೋಗಳಿಗೆ ಮಹೇಶ್ ಹೊಸಮನಿ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಸಭ್ಯ ಕಾಮೆಂಟ್ ಮಾಡಿದ್ದಾರೆ. ಇದೀಗ ತಮ್ಮ ಫೋಟೋಗಳಿಗೆ ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಯೊಬ್ಬರು ಈ ರೀತಿಯ ಪದ ಬಳಕೆ ಮಾಡಿರುವುದಕ್ಕೆ ನಟಿ ಗರಂ ಆಗಿದ್ದಾರೆ. ಚೈತ್ರಾ ಆಚಾರ್ ಆ ವ್ಯಕ್ತಿಯ ಮೆಸೇಜ್‌ಗಳನ್ನು ಸ್ಕ್ರೀನ್‌ಶಾಟ್ ತೆಗೆದು ಬೆಂಗಳೂರು ಸಿಟಿ ಪೊಲೀಸ್ ಅವರನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಹೇಶ್ ಹೊಸಮನಿ ನಟಿಗೆ ಕ್ಷಮೆಯಾಚಿದ್ದಾರೆ. ಸಾರಿ ಮೇಡಂ, ತಪ್ಪಾಗಿದೆ. ನಿಮ್ಮ ಮೇಲಿನ ಕಾಳಜಿಯಿಂದಲೇ ಮೆಸೇಜ್ ಹಾಕಿದ್ದೆ. ದಯವಿಟ್ಟು ಪೋಸ್ಟ್ ತೆಗೆದುಹಾಕಿ. ಇದು ನನ್ನ ಕರಿಯರ್‌ಗೆ ಸಮಸ್ಯೆಯಾಗುತ್ತದೆ ಎಂದು ಅವರು ಮನವಿ ಮಾಡಿರುವ ಸ್ಕ್ರೀನ್‌ಶಾಟ್‌ನನ್ನೂ ನಟಿ ತಮ್ಮ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

Shwetha M