ಮುಂಬೈಗೆ ಬೂಮ್ರಾ ಬೂಸ್ಟ್ – ಪ್ಲೇ ಆಫ್ ಹಾದಿ ಬಿಟ್ಟ ಪಂಜಾಬ್
ಸತತ 5 ಸೋಲು.. ಶ್ರೇಯಸ್ ಎಡವಿದ್ದೆಲ್ಲಿ?

ಪಂಜಾಬ್ ಪಂಜಾಬ್ ಪಂಜಾಬ್.. ಸತತ 7 ಮ್ಯಾಚಲ್ಲಿ ಪಂಜಾಬ್ಗೆ ಸೋಲು ಅಂದ್ರೆ ಏನು ಅಂತಾನೇ ಗೊತ್ತಿರ್ಲಿಲ್ಲ. ಫಸ್ಟ್ ಆಫ್ನಲ್ಲೇ ಟ್ರೋಫಿ ವಿನ್ನರ್ಸ್ ಇವ್ರೇ ಅನ್ನೋ ಥರ ಕೆಲವ್ರು ಆಲ್ರೆಡಿ ಡಿಕ್ಲೇರ್ ಮಾಡಿದ್ರು. ಆಕಾಶ್ ಚೋಪ್ರಾ ಅಂತೂ ಪಂಜಾಬ್ಗೆ ಕಪ್ ಕೊಟ್ಟುಬಿಡಿ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಾಕಿದ್ರು. ಆದ್ರೆ ಸೆಕೆಂಡ್ ಆಫ್ಸ್ ನಲ್ಲಿ ಪಂಜಾಬ್ ಅದೇ ಸೋಲಿನ ಸುಳಿಯಲ್ಲಿ ಬಿದ್ದು ಒದ್ದಾಡ್ತಿದೆ. ಸತತ 5 ಪಂದ್ಯಗಳನ್ನ ಸೋತು ಸುಣ್ಣವಾಗಿದ್ದಾರೆ. ಈಗ ಟಾಫ್-4ಗಾದ್ರೂ ಬರ್ತಾರೋ ಇಲ್ವೋ ಅನ್ನುಸ್ತಿದೆ.
ಇದನ್ನೂ ಓದಿ : ಯಾವುದೋ ಒಂದು ದಿನ ಕೊನೆಗೊಳ್ಳಲೇಬೇಕು – ಭಾವುಕರಾದ ಕೊಹ್ಲಿ ನಿವೃತ್ತಿ ಸುಳಿವು ನೀಡಿದ್ರಾ?
ಧರ್ಮಶಾಲಾದಲ್ಲಿ ನಡೆದ ಮುಂಬೈ ವರ್ಸಸ್ ಪಂಜಾಬ್ ನಡುವಿನ ಮ್ಯಾಚ್ನಲ್ಲಿ ಮುಂಬೈ ಗೆದ್ದು ಬೀಗಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 8 ಕಳೆದುಕೊಂಡು 200 ರನ್ಗಳಿಸಿತು. ಪ್ರಭಸಿಮ್ರನ್ ಸಿಂಗ್ 32 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ಗಳ ಸಹಿತ 57 ರನ್ಗಳಿಸಿ ಟಾಪ್ ಸ್ಕೋರರ್ ಆದರೆ, ಅಜ್ಮತ್ವುಲ್ಲಾ ಒಮರ್ಝೈ 17 ಎಸೆತಗಳಲ್ಲಿ 38 ರನ್ಗಳಿಸಿ ತಂಡ 200ರ ಗಡಿ ದಾಟಲು ನೆರವಾದರು. 201 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಮುಂಬೈಗೆ ಒಳ್ಳೆ ಆರಂಭ ಏನೋ ಸಿಕ್ತು. ಆದ್ರೆ ರೋಹಿತ್ ಶರ್ಮಾ ಮತ್ತು ರುದರ್ಫೋರ್ಡ್ ಅವ್ರ ಸ್ಲೋ ಇನ್ನಿಂಗ್ಸ್ ತಂಡಕ್ಕೆ ಹೊರೆಯಾಯ್ತು. ಆದ್ರೆ ತಿಲಕ್ ವರ್ಮಾ ಮತ್ತು ವಿಲ್ ಜಾಕ್ಸ್ ಅವ್ರ ಅದ್ಭುತ ಆಟದಿಂದ ಲಾಸ್ಟ್ ಇನ್ನೊಂದು ಬಾಲ್ ಇದ್ದಾಗ ಗೆದ್ದು ಬೀಗಿದ್ರು. ತಿಲಕ್ ವರ್ಮಾ 33 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ಗಳ ಸಹಿತ ಅಜೇಯ 75 ರನ್ಗಳಿಸಿ ರೋಚಕ ಗೆಲುವಿಗೆ ಕಾರಣರಾದರು.
ಪಂಜಾಬ್ ಸೋಲಿಗೆ ಕಾರಣಗಳು!
ಮಿಡಲ್ ಆರ್ಡರ್ ನಲ್ಲಿ ಬಾರದ ರನ್ಸ್.. ಟೇಲ್ ಎಂಡರ್ಸ್ ಶೈನ್
ಪ್ರಭ್, ಒಮರ್ಜಾಯ್, ವಿನೋದ್, ಕ್ಸೇವಿಯರ್ ಆಟದಿಂದ 200 ರನ್ಸ್
201 ರನ್ಸ್ ಟಾರ್ಗೆಟ್ ನೀಡಿದ ಪಂಜಾಬ್ ಗೆ ಬೌಲಿಂಗ್ ವೀಕ್ ನೆಸ್
ಮಾರ್ಕೋ ಜಾನ್ಸೆನ್ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ದುಬಾರಿ
ಚೊಚ್ಚಲ ಐಪಿಎಲ್ ಕ್ಯಾಪ್ಟನ್ಸಿ ವಹಿಸಿದ್ದ ಬುಮ್ರಾ ಒಳ್ಳೆಯ ನಿರ್ಧಾರ
7 ಬೌಲರ್ ಗಳಿಗೆ ಬಾಲ್ ಕೊಟ್ಟು ರೊಟೇಷನ್.. ಶಾರ್ದೂಲ್ ಬಳಕೆ
ಚೇಸಿಂಗ್ ನಲ್ಲಿ ತಿಲಕ್ 75*(33) ಹಾಗೂ ವಿಲ್ ಜಾಕ್ಸ್ 25*(10) ರನ್ಸ್
ಚೇಸಿಂಗ್ನಲ್ಲಿ ಕಷ್ಟ ಅನ್ನಿಸುವಾಗ್ಲೇ ಮುಂಬೈಗೆ ತಿಲಕ್ ಹಾಗೂ ಜಾಕ್ಸ್ ನಿಂತು ಪಂದ್ಯವನ್ನ ಗೆಲ್ಲಿಸಿಕೊಟ್ರು. ಆದ್ರೆ ಪ್ಲೇ ಆಫ್ ಹಾದಿಯಲ್ಲಿ ಟಫ್ ಫೈಟರ್ ಆಗಿದ್ದ ಪಂಜಾಬ್ ಸತತ 5 ಮ್ಯಾಚ್ ಸೋತು ಈಗ ಪ್ಲೇ ಆಫ್ ಹಾದಿಯನ್ನ ಕಠಿಣ ಮಾಡಿಕೊಂಡಿದೆ. ಕ್ಯಾಪ್ಟನ್ಸಿಯಲ್ಲಿ ಬೆಸ್ಟ್ ಎನಿಸಿಕೊಳ್ತಿದ್ದ ಶ್ರೇಯಸ್ ಬೌಲಿಂಗ್ ಬಳಕೆಯಲ್ಲಿ ಸ್ವಲ್ಪ ಎಡವುತ್ತಿದ್ದಾರೆ. ಇದಕ್ಕೆ ದೊಡ್ಡ ದಂಡ ತೆರಬೇಕಾಗಿದೆ.

ನೋಡಿರಿ

